ಹಿಂದೆ ವ್ಯವಹಾರ ಪ್ರತಿಕೃತಿಯ ಅಂಕಣದಲ್ಲಿ – ವ್ಯವಹಾರಿಕ ಕೂಟದ ಬಗ್ಗೆ ತಿಳಿದುಕೊಳ್ಳುತ್ತಾ ವ್ಯವಹಾರಿಕ ಚರ್ಚೆ/ಸಂಧಾನಗಳಲ್ಲಿ ತೋರಿಸಬಹುದಾದ ಬಲದ ಬಗ್ಗೆ ಹೇಳಿದ್ದೆವು. ಇಂದಿನ ಅಂಕಣದಲ್ಲಿ ಏಕಸ್ವಾಮ್ಯದ ಬಗ್ಗೆ ತಿಳಿದುಕೊಳ್ಳೋಣ. ಆದರೆ ಈ ಲೇಖನದಲ್ಲಿ ಕೇವಲ ವ್ಯವಹಾರ ಪ್ರತಿಕೃತಿಯ ಬಗ್ಗೆ ಚರ್ಚಿಸುತ್ತೇವೆ, ಇದರ ಮತ್ತೊಂದು ಮಾರುಕಟ್ಟೆಯ ಮುಖವನ್ನು ಇನ್ನೊಂದು ಅಂಕಣದಲ್ಲಿ ತಿಳಿದುಕೊಳ್ಳೋಣ.
ವ್ಯವಹಾರದಲ್ಲಿ ಏಕಸ್ವಾಮ್ಯತವ ಪಡೆದುಕೊಳ್ಳಲು ಪ್ರತೀಯೊಂದು ಕಂಪನಿಯು ಆಶಿಸುತ್ತಲೇ ಇರುತ್ತದೆ. ಇದು ಏಕೆ?
ಯಾವುದೇ ಕಂಪನಿಯು ತನ್ನ ಉತ್ಪನ್ನಗಳಿಗೆ ಜನರ ಬೇಡಿಕೆಯು ಸದಾಕಾಲ ಇರಬೇಕೆಂದು ಶ್ರಮಿಸುತ್ತಿರುತ್ತದೆ, ಅವರು ಮಾಡಿದ ಉತ್ಪನ್ನಗಳಿಗೆ ಸರಿಯಾದ ಬೆಲೆಯೂ ಸಿಗಬೇಕೆಂದು ಹೆಚ್ಚಿನ ಶ್ರಮಕ್ಕೆ ಸಿದ್ದವಿರುತ್ತದೆ. ಒಂದುವೇಳೆ ಇಂತಹ ಸಂದರ್ಭದಲ್ಲಿ ಯಾವುದೇ ಪ್ರತಿಸ್ಪರ್ಧಿಯು ಇಲ್ಲದಿದ್ದರೆ, ನಮ್ಮ ಉತ್ಪನ್ನವಿಲ್ಲದೇ ಗ್ರಾಹಕರಿಗೆ ಸಮಾಧಾನ ಸಿಗದಿದ್ದಲ್ಲಿ ನಮ್ಮ ಉತ್ಪನ್ನಕ್ಕೆ ಎಷ್ಟುಬೇಕಾದರೂ ಬೆಲೆಯನ್ನು ಏರಿಸಬಹುದಲ್ಲವೇ? ನಮ್ಮ ಕಂಪನಿಗೆ ಇದು ಸ್ವರ್ಗ ಲಭಿಸಿದಂತಾಗುವುದು ನಿಜವೇ ಸರಿ.
ಇಷ್ಟೊಂದು ಮಾರುಕಟ್ಟೆಯ ಮೇಲೆ ಅಧಿಕಾರ ಇದ್ದಲ್ಲಿ ಅದರ ದುರುಪಯೋಗವೂ ಸಾಧ್ಯ. ಇದಕ್ಕಾಗಿಯೇ ಸರಕಾರಗಳು ಇಂತಹ ಕಂಪನಿಗಳನ್ನು ನಿಯಂತ್ರಿಸಲು ಯತ್ನಿಸುತ್ತಿರುತ್ತವೆ.
Leave a Reply
You must be logged in to post a comment.