Author: Sachi

  • Finance and Management – 6

    In the earlier blog, we put up a rough structure to the various components in a balance sheet, but we haven’t explained the various headings. While it is pretty logical to understand these from common parlance, explaining them here would add to the context.
    • Cash – the cash is the revenue that is earned by the company
    • Receivables – are outstanding (uncollected bills) amount to be collected from the customers
    • Inventory – these are finished goods that have not yet been sold
    • Fixed Assets – includes the investment of money into plant and machinery
    • Account Payable – the payment to be done to suppliers etc
    • Notes Payable – some of the promissory notes (like cheques etc) that are to be paid up
    • Long Term Debt – Long term loan that might have been taken from banks, and have been invested in the business
    • Owner’s Equity – this includes the initial capital generated by the promoters, (share holder also later on)
    Read in Kannada:
    http://somanagement.blogspot.com/2011/07/blog-post_3720.html
  • ಹಣಕಾಸು ವ್ಯವಸ್ಥೆ ಮತ್ತು ನಿರ್ವಹಣೆ – ೩

    ಹಿಂದಿನ ಅಂಕಣದಲ್ಲಿ ನಾವು ವಿವಿಧ ಹಣಕಾಸಿನ ಹೇಳಿಕೆಗಳು ಕಂಪನಿಯ ಬಗ್ಗೆ ಅರಿಯಲು ಮತ್ತು ವಿಶ್ಲೇಷಿಸಲು ಯಾವ ರೀತಿಯಲ್ಲಿ ಮಾಡುವುದು ಎನ್ನುವುದನ್ನು ತಿಳಿದೆವು. ಇಂದು ನಾವು ಪ್ರತಿಯೊಂದು ಹೇಳಿಕೆಯ ಬಗ್ಗೆ ಅರಿಯೋಣ. ಮೊದಲು ಶುರು ಲೆಕ್ಕ ಪತ್ರ (Balance Sheet) ನ ಬಗ್ಗೆ ನೋಡೋಣ.

    ಹೆಸರೇ ಸೂಚಿಸುವಂತೆ ಇದು ಸಮಾನತೆ (Balance) ನ್ನು ಹೇಳುತ್ತದೆ. ಗಣಿತದ ಮೂಲಭೂತ ತತ್ವವಾದ ಒಂದು ಸಮೀಕರಣದ ಎಡಭಾಗವು ಬಲಭಾಗದೊಂದಿಗೆ ಸಮ ಹೊಂದುವುದು ಅನ್ನುವುದರ ಮೇಲೆ ಈ ಹೇಳಿಕೆಯು ಆಗುವುದು. ಯಾವುದರ ಸಮಾನತೆ ಬಗ್ಗೆ ಲೆಕ್ಕ ಪತ್ರ ಹೇಳುವುದು ಮತ್ತು ಅದರ ಸಮೀಕರಣ ಏನು?

    ಯಾವುದೇ ವ್ಯವಹಾರದಲ್ಲಿ ಹೂಡಿದ ಬಂಡವಾಳವು ಉದ್ಯಮಕ್ಕೆ ಒಂದು ಆಸ್ತಿಯನ್ನು ಕೊಳ್ಳಲು ಉಪಯೋಗಿಸುವರು. ಹಾಗಾಗಿ
    ವ್ಯವಹಾರಕ್ಕೆ ಹೂಡಿದ ಬಂಡವಾಳ = ವ್ಯವಹಾರಕ್ಕೆ ಲಭಿಸಿದ ಆಸ್ತಿಗಳು
    ವ್ಯವಹಾರಕ್ಕೆ ಬಂಡವಾಳವು ಮಾಲಿಕರಿಂದ ಬರುವುದು ಮತ್ತು ಸಾಲದ ಮೂಲಕ ಲಭಿಸುವುದು.
    ಇವೆಲ್ಲ ಒಟ್ಟು ಸೇರಿ ಸಮೀಕರಣ
    ವ್ಯವಹಾರದ ಆಸ್ತಿ (Asset) = ಮಾಲಿಕರ ಹೂಡಿಕೆ (Owner’s Equity) + ಆರ್ಥಿಕ ಬಾಧ್ಯತೆ. (Liability)

    ಇದರ ಅರ್ಥವೇನೆಂದರೆ ಕಂಪನಿಯ ಆಸ್ತಿ ಅಥವಾ ಕಂಪನಿಯನ್ನು ನಡೆಸಲು ಬೇಕಾದ ದ್ರವ್ಯಗಳು ಕಂಪನಿಯ ಮಾಲಿಕರ ಹೂಡಿಕೆ ಮತ್ತು ಕಂಪನಿಯ ಆರ್ಥಿಕ ಸಾಲಗಳೆರಡು ಒಟ್ಟು ಸೇರಿ ಸಮದೂಗಿಸುವುದು. ಈ ಕೆಳಗಿನ ಚಿತ್ರದಲ್ಲಿ ಇನ್ನು ಸ್ಪಷ್ಟವಾಗಿ ಅರ್ಥೈಸಬಹುದು.

    ಆಂಗ್ಲದ ಅಂಕಣ
    http://somanagement.blogspot.com/2011/06/finance-management-3.html
  • ಹಣಕಾಸು ವ್ಯವಸ್ಥೆ ಮತ್ತು ನಿರ್ವಹಣೆ – ೨

    ಈ ಹಿಂದಿನ ಅಂಕಣದಲ್ಲಿ ಸೂಚಿಸಿದಂತೆ ೩ ಹಣಕಾಸಿನ ಹೇಳಿಕೆಗಳು ಕಂಪನಿಯ ಸ್ವರೂಪದ ಬಗ್ಗೆ ಮಾಹಿತಿಯನ್ನು ನೀಡಬಲ್ಲವು. ಇಲ್ಲಿ ನಾವು ಸೂಕ್ಷ್ಮವಾಗಿ ಇವುಗಳಿಂದ ಯಾವ ರೀತಿಯ ವಿಶ್ಲೇಷಣೆ ಮಾಡಬಹುದೆಂಬುದರ ಬಗ್ಗೆ ತಿಳಿಯೋಣ.

    ಲೆಕ್ಕ ಪತ್ರ (Balance Sheet):
    ಒಬ್ಬ ನೋಡುಗನಿಗೆ (ಬಂಡವಾಳದಾರ ಅಥವಾ ಭಾವೀ ಬಂಡವಾಳದಾರ) ಈ ಕೆಳಗಿನ ೩ ಮುಖ್ಯ ಮಾಹಿತಿ ನೀಡುವುದು.
    ೧. ಕಂಪನಿಯಲ್ಲಿ ಎಷ್ಟು ಸಂಪತ್ತಿದೆ?
    ೨. ಕಂಪನಿಗೆ ಎಷ್ಟು ಋಣವಿದೆ?
    ೩. ಕಂಪನಿಯ ಶೇರುದಾರರಿಗೆ ಎಷ್ಟು ಹಣ ಉಳಿಯುವುದು?

    ಹಣದ ಹರಿಯುವಿಕೆಯ ಹೇಳಿಕೆ:
    ಹಣವು ಎಲ್ಲೆಲ್ಲಿ ಖರ್ಚಾಗಿದೆ ಎನ್ನುವುದರ ಬಗ್ಗೆ ಮಾಹಿತಿಯನ್ನು ನೋಡುಗನಿಗೆ ನೀಡುವುದು.

    ಆದಾಯದ ಹೇಳಿಕೆ:
    ಇದನ್ನು ಲಾಭ ಮತ್ತು ನಷ್ಟದ ಹೇಳಿಕೆ ಎಂದೂ ಕೂಡ ಕರೆಯುವರು. ಹಾಗಾಗಿ ಇದು ಕಂಪನಿಯ ಲಾಭ ಹೊಂದುವದರ ಬಗೆಗೆ ಹೇಳುವುದು. ಕಂಪನಿ ಎಷ್ಟು ಆದಾಯ ಗಳಿಸಿತು ಅಥವಾ ನಷ್ಟ ಮಾಡಿಕೊಂದಿತೆನ್ನುವುದರ ಬಗ್ಗೆ ಹೇಳುವುದು.

    ಈ ಹಣಕಾಸಿನ ಹೇಳಿಕೆಗಳ ಮೂಲಕ ಕಂಪನಿಯಲ್ಲಿ ಬಂಡವಾಳ ತೊಡಗಿಸುವ ಅಥವಾ ಬೇರೆ ಏನಾದರು ಮಾಡುವ ನಿರ್ಧಾರವನ್ನು ಒಬ್ಬ ಬಂಡವಾಳದಾರ ಮಾಡಬಹುದು. ಒಬ್ಬ ವ್ಯವಸ್ಥಾಪಕನಿಗೆ ಈ ಕಂಪನಿಯ ಕಾರ್ಯ ನಿರ್ವಹಣೆಯ ವಿಶ್ಲೇಷಣೆಯು ಕಂಪನಿಯ ಸ್ಥಿತಿಗತಿಗಳ ಬಗ್ಗೆ ಅರಿವು ಮೂಡಿಸುವುದು, ಶೇರು ಹೂಡಿಕೆದಾರರ ಅಭಿಪ್ರಾಯವನ್ನು ಅರ್ಥಮಾಡಿಸುವುದು ಜೊತೆಗೆ ಚಾಲಕಗಳನ್ನು ಹುಡುಕಿಸುವುದು ಮತ್ತು ಆ ಮೂಲಕ ಲಾಭಾಂಶ ಹೆಚ್ಚಿಸಲು ಅವುಗಳೊಂದಿಗೆ ಕಾರ್ಯ ನಿರ್ವಹಿಸಲು ತೊಡಗಿಸುವುದು.

  • ಹಣಕಾಸು ವ್ಯವಸ್ಥೆ ಮತ್ತು ನಿರ್ವಹಣೆ – ೧

    ಸಾಮಾನ್ಯವಾಗಿ ಒಂದು ಉದ್ಯಮ ಸ್ಥಾಪಿಸಲು ಬಹಳ ಮುಖ್ಯವಾಗಿ ಎರಡು ಅಂಶಗಳನ್ನು ಪ್ರತಿಯೊಬ್ಬರೂ ಯೋಚಿಸುವರು. ಒಂದು ಎಷ್ಟು ಆರ್ಥಿಕ ಬಂಡವಾಳದ ಅಗತ್ಯವಿದೆ, ನಂತರ ತೊಡಗಿಸಿದ ಬಂಡವಾಳದಿಂದ ಎಷ್ಟು ಸಮಯದಲ್ಲಿ ಇದಕ್ಕನುಗುಣವಾಗಿ ಉತ್ತಮ ಗಳಿಕೆಯನ್ನು ಪಡೆಯಬಹುದು ಎಂಬುದು. ಈ ಎರಡೂ ಅಂಶಗಳು ದುಡ್ಡಿನೋಡಗಿನ ವ್ಯವಹಾರವಾದ್ದರಿಂದ ಹಣಕಾಸು ವ್ಯವಸ್ಥೆ ಮತ್ತು ನಿರ್ವಹಣೆಯ ಒಳಗೆ ಬರುತ್ತವೆ.

    ಕಂಪನಿಯ ಹಣಕಾಸು ವ್ಯವಸ್ಥೆಯ ಲೆಕ್ಕಪತ್ರಗಳು ಕಂಪನಿಯ ಕಾರ್ಯ ನಿರ್ವಹಣೆಯನ್ನು ಬಿಂಬಿಸುತ್ತವೆ. (ಈ ಬಗ್ಗೆ ಮುಂದೆ ಚರ್ಚಿಸೋಣ) ಜೊತೆಗೆ ಕಂಪನಿಯ ಸ್ಥಿತಿಗತಿಗಳ ಬಗ್ಗೆ ಆಳವಾದ ಮತ್ತು ಅಗತ್ಯವಾದ ಮಾಹಿತಿಗಳನ್ನು ಹೊರ ನೀಡುತ್ತವೆ. ಇದರ ವಿಶ್ಲೇಷಣೆಗೆ ೩ ಮೂಲಭೂತ ವಸ್ತುಗಳ ಅಗತ್ಯವಿದೆ.

    ೧. ಲೆಕ್ಕ ಪತ್ರ (Balance Sheet)
    ೨. ಆದಾಯ ವಿವರಣಾ ಹೇಳಿಕೆ (Income Statement)
    ೩. ಹಣ ಹರಿಯುವಿಕೆಯ ವಿವರಣಾ ಹೇಳಿಕೆ (Cash Flow Statement)

    ಮುಂದಿನ ಅಂಕಣಗಳಲ್ಲಿ ಇವುಗಳ ಬಗ್ಗೆ ಸ್ವಲ್ಪ ಅರಿಯೋಣ. ನಂತರ ಇವಗಳನ್ನು ಉಪಯೋಗಿಸಿ ಹೇಗೆ ವಿಶ್ಲೇಷಣೆ ಮಾಡುವುದು ಎನ್ನುವುದರ ಬಗ್ಗೆ ಮುಂದುವರಿದು ಕೊನೆಗೆ ವಿಸ್ತಾರವಾದ ಉದ್ಯಮಗಳ ಹಣಕಾಸು ವ್ಯವಸ್ಥೆಯ ಬಗ್ಗೆ ಅರಿಯೋಣ.

  • Finance and Management – 5

    In the earlier blog we looked at the current assets and current liabilities, we now take another look at the other components in the Balance sheet.
    In the last blog we also got to know the reason why these are called – current (assets or liability), so one could safely assume that the ones that do not fall into this category would generally be of a longer time frame in nature. What would these be?
    If we look at the assets side of the Balance sheet, we realize that the ones that do not get converted in a year’s cycle should generally – of the nature of buildings, furniture, machinery etc. These are called the Fixed Assets.
    On the liability side, the ones which of long term nature could further be looked at as two components – A debt which is long term (would take a long time to clear off) or could be the equity that is put in by the owner. Thus we would generally have two sub-components – Long term Liabilities and Owner’s Equity.
    We could represent the balance sheet in the following manner.
    Read in Kannada:
  • Finance and Management – 4

    Current Assets and Current Liabilities
    Continuing our discussion from the earlier blog on Balance sheet, in today’s blog we have a look at two sections – Current Liabilities and Current assets.
    A look at the balance sheet and we generally see items under the title Current Assets and Current Liabilities. Why are these called current? A look at the nature of the sub-items would give us an understanding of the same.
    Current Assets generally have items like – Cash, Accounts Receivable, and Inventory etc. Current Liabilities has items like Accounts payable, Notes Payable.
    All these items get converted from one form to another or change hands within one business cycle (may be an accounting year) or shorter. Hence they are termed current – meaning have to be processed in the current business year.
    Read in Kannada:
  • ಸಂದೇಶ

    ಈ ಹಿಂದಿನ ಕೆಲವು ಚರ್ಚೆಗಳಲ್ಲಿ ನಾವು ಕಾರ್ಯ ನಿರ್ವಹಣೆಯ ವಿಚಾರವಾಗಿ ಚೆನ್ನಾಗಿ ಅರಿತೆವು. ಆದರೆ ಕೆಲವು ಅಳೆಯುವ ವಿಧಾನಗಳು ಕಂಪನಿಯ ಲೆಕ್ಕಾಚಾರದ (Corporate Finance) ಮತ್ತು ಅವುಗಳ ನಿರ್ವಹಣೆಯನ್ನು ಅರ್ಥಮಾಡಿ ಕೊಂಡರೇನೆ ಅರಿವಾಗಲು ಸಾಧ್ಯ. ಹಾಗಾಗಿ ನಾವು ಮತ್ತೆ ನಮ್ಮ ಸಾಮಾನ್ಯ ದಾರಿಯಿಂದ ಭಿನ್ನವಾಗಿ ಯುಕ್ತಿಯ ಬಗೆಯ ಚರ್ಚೆಯನ್ನು ಸ್ವಲ್ಪ ಸಮಯದ ನಂತರ ಮುಂದುವರಿಸೋಣ.

    ಇನ್ನು ಮುಂದೆ ನಾವು ಕಂಪನಿಯ ಲೆಕ್ಕಾಚಾರದ (Corporate Finance) ಬಗ್ಗೆ ಸ್ವಲ್ಪ ಅರಿಯೋಣ.

  • ವ್ಯಾವಹಾರಿಕ ಯುಕ್ತಿ – ೨೩

    ಕಾರ್ಯ ನಿರ್ವಹಣೆಯ ಅಳೆಯುವ

    ಬಗೆಗಿನ ಚರ್ಚೆಯನ್ನು ಮುಂದುವರಿಸುತ್ತಾ ಇವತ್ತಿನ ಅಂಕಣದಲ್ಲಿ “ಅಳಿಯದೆ ಉಳಿಯುವುದರ” ಮೂಲಕ ಕಾರ್ಯ ನಿರ್ವಹಣೆಯನ್ನು ಅಳೆಯುವುದರ ಬಗ್ಗೆ ಚರ್ಚಿಸೋಣ.

    ನಾವು ಕಾರ್ಯ ನಿರ್ವಹಣೆಯನ್ನು ಆರ್ಥಿಕ ಲಾಭದ ಅಳೆಯುವ ಕುರಿತು ಚರ್ಚಿಸುವಾಗ ಕಂಪನಿಯೊಂದು ಇತರ ಕಂಪನಿಗಳಿಗಿಂತ ಸ್ವಲ್ಪ ಹೆಚ್ಚಿನ ಸಮಯ ಉಳಿಯುವುದರ ಅರ್ಥ ಅದು ಸಾಮಾನ್ಯ ಕಾರ್ಯ ನಿರ್ವಹಣೆಯನ್ನಾದರೂ ಹೊಂದಿದೆ ಎಂದು ಅರ್ಥೈಸಬಹುದು. ಯಾವ ಕಂಪನಿ ಸಾಮಾನ್ಯ ನಿರ್ವಹಣೆಗಿಂತ ಕೆಳ ಮಟ್ಟದ ಕಾರ್ಯ ನಿರ್ವಹಣೆಯಿರುವ ಕಂಪನಿಗಳು ಹೆಚ್ಚಿನ ಸಮಯ ಉಳಿಯಲು ಸಾಧ್ಯವಾಗದು (ಸರ್ಕಾರದ ನೆರವು ಇರದ ಹೊರತು). ಹಾಗಾಗಿ ಅಳಿಯದೆ ಉಳಿಯುವುದು ಕಾರ್ಯ ನಿರ್ವಹಣೆಯ ಒಂದು ಅಳೆಯುವ ಸಾಧನವೆಂದು ಪರಿಗಣಿಸಬಹುದು.
    ಈ ವಿಧಾನದ ಒಂದು ಹಿರಿಮೆಯೆಂದರೆ ಇದನ್ನು ಸುಲಭವಾಗಿ ಬಳಸಬಹುದು. ತುಂಬಾ ವಿಸ್ತಾರವಾದ ಕಂಪನಿಯ ಆರ್ಥಿಕತೆಯ ಬಗೆಗಿನ ಮಾಹಿತಿಯನ್ನು ಕಲೆಹಾಕುವ ಗೋಜಿಲ್ಲ. ಕಂಪನಿಯ ಮುನ್ನಡೆಯೇ ಅರಿಯಲು ಸಾಕು.
    ಆದರೆ ಈ ವಿಧಾನದ ಕೊರತೆ ಎಂದರೆ
    ೧. ಒಂದು ಕಂಪನಿಯು ಅಸ್ಥಿತ್ವದಲ್ಲಿ ಇಲ್ಲ ಎನ್ನುವುದನ್ನು ನಿರ್ಧರಿಸುವುದು ಬಹಳ ತ್ರಾಸದಯಕವಾದುದು.
    ೨. ಕಂಪನಿಯ ನಿರ್ನಾಮಕ್ಕೆ ಬಹಳ ಸಮಯವನ್ನು ತೆಗೆದುಕೊಳ್ಳಬಹುದು.
    ೩. ಈ ಮಾರ್ಗವು ಕಂಪನಿಯ ಆಂತರಿಕ ಸಾಮಾನ್ಯ ಕಾರ್ಯ ನಿರ್ವಹಣೆಯ ಬಗೆಗೆ ಯಾವ ಸೂಚನೆಯನ್ನು ನೀಡದು.
  • ವ್ಯಾವಹಾರಿಕ ಯುಕ್ತಿ – ೨೨

    ಈ ಹಿಂದಿನ ಅಂಕಣದಲ್ಲಿ

    ನಾವು ಆರ್ಥಿಕ ಲಾಭದ ಮೂಲಕ ಕಾರ್ಯ ನಿರ್ವಹಣೆಯ ಬಗೆಗಿನ ಕುರಿತು ಚರ್ಚಿಸುವ ಕೊನೆಯಲ್ಲಿ ಆ ವಿಧಾನದ ಮೂಲಕ ಅಳೆಯುವುದು ಬಹಳ ಕಷ್ಟಕರವಾದುದು ಮತ್ತು ಸ್ಥೀಮಿತವಾದುದು ಎಂದು ಅರಿತೆವು. ಇವತ್ತಿನ ಅಂಕಣದಲ್ಲಿ ಇತರ ಹಲವು ಕಾರ್ಯ ನಿರ್ವಹಣೆಯನ್ನು ಅಲೆಯುವ ವಿಧಾನಗಳ ಬಗ್ಗೆ ಅರಿಯೋಣ.

    ೧. ಅಳಿಯದೆ ಉಳಿದಿರುವುದರ ಮೂಲಕ ಕಾರ್ಯ ನಿರ್ವಹಣೆಯನ್ನು ಅಳೆಯುವುದು.
    ೨. ಪಾಲುದಾರರ ರೀತಿಯಲ್ಲಿ ಕಾರ್ಯ ನಿರ್ವಹಣೆಯನ್ನು ಅಳೆಯುವುದು.

    ೩. ಸರಳ ಲೆಕ್ಕಾಚಾರದ (accounting) ಮೂಲಕ ಅಳೆಯುವುದು.
    ೪. ಹೊಂದಾಣಿಕೆಯ ಲೆಕ್ಕಾಚಾರದ ಮೂಲಕ ಅಳೆಯುವುದು.
    ೫. ಸಾಂಧರ್ಭಿಕ ರೀತಿಯ ಅಧ್ಯಯನದಿಂದ ಕಾರ್ಯ ನಿರ್ವಹಣೆ ಅಳೆಯುವುದು.
    ೬. ಶಾರ್ಪೆಯ ವಿಧಾನ
    ೭. ಟ್ರಯ್ನೋರ್ ನ ಅಂಕಿ ಅಂಶ

    ಇವುಗಳು ಹಲವರು ಸ್ಥೀಮಿತಗಳಿಗೆ ಪರಿಹಾರ ಸೂಚಿಸಿದರೂ ಅವುಗಳಲ್ಲಿಯೇ ಕೆಲವು ಸ್ಥೀಮಿತಗಳಿವೆ. ಸಾಂದರ್ಭಿಕವಾಗಿ ಮುಂದೆ ಈ ಬಗ್ಗೆ ನಾವು ಚರ್ಚಿಸೋಣ. ಈಗ ಆರಂಭಿಸಲು ಮೊದಲ ಎರಡು ವಿಧಾನಗಳ ಬಗ್ಗೆ ಚರ್ಚಿಸೋಣ. ಒಮ್ಮೆ ಲೆಕ್ಕಾಚಾರದ (Accounting) ಬಗ್ಗೆ ನಾವು ಅರಿತ ಮೇಲೆ ಮುಂದಿನದವುಗಳನ್ನು ಅರಿಯೋಣ.

  • ವ್ಯಾವಹಾರಿಕ ಯುಕ್ತಿ – ೨೧

    ಈ ಹಿಂದಿನ ಅಂಕಣದಲ್ಲಿ ನಾವು ಉದಾಹರಣೆಯೊಂದಿಗೆ ಬಂಡವಾಳವನ್ನು ಹೇಗೆ ಮತ್ತು ಎಲ್ಲಿ ಮತ್ತು ಯಾವ ಉದ್ಯಮದಲ್ಲಿ ವಿನಿಯೋಗಿಸಬೇಕೆಂಬುದರ ಬಗ್ಗೆ ನಿಮಗೆ ವಿವರಿಸಿದೆವು. ಇವತ್ತಿನ ಅಂಕಣದಲ್ಲಿ ಕಾರ್ಯ ಕ್ಷಮತೆಯನ್ನು ಇನ್ನೂ ಬೇರೆ ಅಂಶಗಳ ಮೂಲಕ ಹೋಲಿಸುವ ಪ್ರಯತ್ನ ಮಾಡೋಣ. ಇವುಗಳು ಸಾಮಾನ್ಯವಾಗಿ ಅರ್ಥ ಶಾಸ್ತ್ರದ ಪದಗಳು ಹಾಗಾಗಿ ಇದನ್ನ ಸವಿಸ್ತಾರವಾಗಿ ಮೊದಲು ಅರಿಯುವ.
    ನೀರೀಕ್ಷಿತ ಆದಾಯ ಮತ್ತು ನಿಜವಾಗಿ ಲಭಿಸಿದ ಆದಾಯದ ನಡುವಿನ ಸಂಬಂಧಗಳನ್ನು ೩ ರೀತಿಯ ವರ್ಗೀಕರಣ ಮಾಡಬಹುದು.
    ಸಾಮಾನ್ಯ ಕಾರ್ಯ ನಿರ್ವಹಣೆ:- ಕಂಪನಿಯ ಸಂಪನ್ಮೂಲದ ಮಾಲೀಕ ನೀರಿಕ್ಷಿಸುವ ಆದಾಯ, ಕಂಪನಿಯು ನಿರ್ವಹಿಸುವುದರ ಮೂಲಕ ನೀಡುವ ಆದಾಯವು ಸಮವಾಗಿದ್ದಲ್ಲಿ ಅದನ್ನು ಸಾಮಾನ್ಯ ಕಾರ್ಯ ನಿರ್ವಹಣೆ ಎನ್ನುವರು.
    ಕೆಳ- ಸಾಮಾನ್ಯ ಕಾರ್ಯ ನಿರ್ವಹಣೆ:- ಕಂಪನಿಯ ಸಂಪನ್ಮೂಲದ ಮಾಲೀಕ ನೀರಿಕ್ಷಿಸುವ ಆದಾಯ, ಕಂಪನಿಯು ನಿರ್ವಹಿಸುವುದರ ಮೂಲಕ ನೀಡುವ ಆದಾಯವು ಕಡಿಮೆಯಾಗಿದ್ದಲ್ಲಿ ಅದನ್ನು ಕೆಳ-ಸಾಮಾನ್ಯ ಕಾರ್ಯ ನಿರ್ವಹಣೆ ಎನ್ನುವರು.
    ಮೇಲು- ಸಾಮಾನ್ಯ ಕಾರ್ಯ ನಿರ್ವಹಣೆ:- ಕಂಪನಿಯ ಸಂಪನ್ಮೂಲದ ಮಾಲೀಕ ನೀರಿಕ್ಷಿಸುವ ಆದಾಯ, ಕಂಪನಿಯು ನಿರ್ವಹಿಸುವುದರ ಮೂಲಕ ನೀಡುವ ಆದಾಯವು ಹೆಚ್ಚಾಗಿದ್ದಲ್ಲಿ ಅದನ್ನು ಮೇಲು-ಸಾಮಾನ್ಯ ಕಾರ್ಯ ನಿರ್ವಹಣೆ ಎನ್ನುವರು.
    ನೀರಿಕ್ಷಿಸುವ ಆದಾಯ ಮತ್ತು ನೈಜ ಆದಾಯದ ನಡುವಿನ ಧನಾತ್ಮಕ ಅಂತರವನ್ನು ಆರ್ಥಿಕ ಲಾಭ ಅಥವಾ ಆರ್ಥಿಕ ಕಂದಾಯ ಎಂದು ಕರೆಯುವರು.
    ಸಾಮಾನ್ಯವಾಗಿ ಮೇಲು- ಸಾಮಾನ್ಯ ಕಾರ್ಯ ನಿರ್ವಹಿಸುವ ಕಂಪನಿಗಳು ಮಾರುಕಟ್ಟೆಯಲ್ಲಿ ಅಥವಾ ಉದ್ಯಮದಲ್ಲಿ ಸ್ಪರ್ಧಾತ್ಮಕ ಲಾಭವನ್ನು ಅನುಭವಿಸುವರು. ಕೇವಲ ಸಾಮಾನ್ಯ ಕಾರ್ಯ ನಿರ್ವಹಿಸುವ ಕಂಪನಿಗಳು ಸ್ಪರ್ಧಾತ್ಮಕ ಸಮಾನತೆಯನ್ನು ಪಡೆಯುವುದು, ಇನ್ನು ಕೆಳ- ಸಾಮಾನ್ಯ ಕಾರ್ಯ ನಿರ್ವಹಿಸುವ ಕಂಪನಿಗಳು ಸ್ಪರ್ಧಾತ್ಮಕ ನಷ್ಟವನ್ನು ಅನುಭವಿಸುವುದು.
    ಈ ರೀತಿಯ ಆರ್ಥಿಕ ಲಾಭದ ಮೂಲಕ ಕಾರ್ಯ ನಿರ್ವಹಣೆಯನ್ನು ಅಲಿಯುವುದರಲ್ಲಿ ಇರುವ ಮುಖ್ಯ ಕಷ್ಟವೆಂದರೆ ಆರ್ಥಿಕ ಲಾಭವನ್ನು ಅಳೆಯುವುದು!!
    Trustworthiness:
    Vendor reliability:
    Privacy:
    Child safety: