Category: finance ಹಣಕಾಸು
-
ಹಣಕಾಸು ವ್ಯವಸ್ಥೆ ಮತ್ತು ನಿರ್ವಹಣೆ – ೩೮
ಈ ಹಿಂದಿನ ಸಂದೇಶದಲ್ಲಿ ಹೇಳಿದಂತೆ ನಾವು ಈ cost accounting ವಿಚಾರಗಳನ್ನು ಮುಂದುವರಿಸುವೆವು. ಆದರೆ ಇದರೊಂದಿಗೆ ಸಂಸ್ಥೆ ಮತ್ತು ಅದರೊಳಗಿನ ವ್ಯವಸ್ಥೆಯ ನಿರ್ವಹಣೆ ಕಾರ್ಯ ಶೈಲಿ ಇತ್ಯಾದಿಗಳನ್ನು ಅರಿಯುವ ಅಗತ್ಯವಿದೆ. ಇದರಿಂದ cost accounting ನ್ನು ಉಪಯುಕ್ತತೆ ಅರಿವಾಗುವುದು. ಇಂದಿನ ಅಂಕಣದಲ್ಲಿ ನಾವು cost accounting. ನ ಅಗತ್ಯತೆಯ ಬಗ್ಗೆ ತಿಳಿಯೋಣ.ನಾವು ಹಿಂದೆಯೇ ಹೇಳಿದಂತೆ ಮ್ಯಾನೇಜ್ಮೆಂಟ್ ಅನ್ನುವುದು ಕೊನೆಗೆ ಎಲ್ಲದಾಗಿ ನಿರ್ಧಾರ ಮಾಡುವ ಕಲೆ.ಎಲ್ಲ ರೀತಿಯ ಮ್ಯಾನೇಜ್ಮೆಂಟ್ ನ ಮುಖ್ಯತೆ ಗಳೆಲ್ಲವೂ ಒಬ್ಬ ಮ್ಯಾನೇಜರ್ ನ ಗೊಂದಲಗಳನ್ನು ಕಡಿಮೆ ಮಾಡಿ ನಿರ್ಧಾರ ಮಾಡಲು ಸಹಾಯ ಮಾಡುತ್ತದೆ. ನಾವು ಮೊದಲಿಗೆ ಸಾಮಾನ್ಯ ಅಕೌಂಟಿಂಗ್ ನ್ನು ಮ್ಯಾನೇಜರ್ ನ ಸಹಾಯ ಸಾಧನವೆಂದು ಪರಿಗಣಿಸಿ ಅದರಿಂದ ಹೇಗೆ ಉಪಯೋಗವಯಿತೆಂದು ನೋಡಿದೆವು. ಇಂದು ನಾವು ಇನ್ನು ಸೂಕ್ತವಾದ ವ್ಯವಸ್ಥಾಪಕ ಸಾಧನವಾದ cost accounting ನ ಕಡೆಗೆ ಮುನ್ನಡೆಯುತ್ತಿದ್ದೇವೆ. ಇದು ಮ್ಯಾನೇಜರ್ ಗಳಿಗೆ ಒದಗಿಸುವ ಸಹಾಯದ ಕಾರಣದಿಂದ ಇದನ್ನು ಸಾಮಾನ್ಯವಾಗಿ managerial accounting ಎಂದೂ ಕರೆಯುವರು. ಇವೆರಡರ ನಡುವೆ ವ್ಯತ್ಯಾಸಗಳಿದ್ದರೂ ಎಲ್ಲ ರೀತಿಯ ಬಳಕೆಗೆ ಇವೆರಡನ್ನೂ ಒಂದೇ ಎಂದು ಪರಿಗಣಿಸಬಹುದು.ಕಂಪನಿಯ ಖರ್ಚಿನ ಬಗೆಗಿನ ಮಾಹಿತಿ ಮ್ಯಾನೇಜರ್ ಗಳಿಗೆ ಅತ್ಯಂತ ಮುಖ್ಯವಾದ ಮಾಹಿತಿ. ಮ್ಯಾನೇಜರ್ ಗಳು ತಮ್ಮ ಕಂಪನಿಯ ಬಗ್ಗೆ ನಿರ್ಧಾರಗಳನ್ನು ತೆಗೆದುಕೊಳ್ಳುವರೆ ಹೊರತು ಇತರ ಕಂಪನಿಗಳ ಬಗ್ಗೆ ಅಲ್ಲ, ಹೀಗಾಗಿ ಇತರ ಕಂಪನಿಗಳ ಬಗೆಗಿನ ಮಾಹಿತಿಯ ಅಗತ್ಯವಿರದು. ಈ ಆಸಕ್ತಿಗೆ ಮೂಲಭೂತ ಕಾರಣ, ಕಂಪನಿಯ ಖರ್ಚು, ಕಂಪನಿಯ ಗ್ರಾಹಕರಿಗೆ ಏನನ್ನು ಯಾವ ಬೆಲೆಯಲ್ಲಿ ಕೊಡುವಿರಿ ಎಂಬುದನ್ನು ನಿರ್ಧರಿಸುತ್ತದೆ, ಮತ್ತೆ ಇದು ಕಂಪನಿಯ ಲಾಭವನ್ನು ಕೂಡ ನಿರ್ಧರಿಸುತ್ತದೆ.ಇದೆ ಚರ್ಚೆಯನ್ನು ಇನ್ನು ಮುಂದಿನ ಅಂಕಣಗಳಲ್ಲಿ ಮುಂದುವರಿಸೋಣ. ಆ ಮೂಲಕ ಚೆನ್ನಾಗಿ ಅರಿಯುವ ಯತ್ನ ಮಾಡೋಣ.ಆಂಗ್ಲ ಅಂಕಣ:http://somanagement.blogspot.com/2011/09/as-mentioned-in-last-message-we-would.html -
ಹಣಕಾಸು ವ್ಯವಸ್ಥೆ ಮತ್ತು ನಿರ್ವಹಣೆ – ೩೭
ಈ ಹಿಂದಿನ ಅಂಕಣದಲ್ಲಿ ನಾವು CFS. ನ್ನು ಅರ್ಥಮಾಡಿಕೊಳ್ಳಲು ಆರಂಭಿಸಿದೆವು. ಇಂದಿನ ಅಂಕಣದಲ್ಲಿ ಕೂಡ ಅದನ್ನೇ ಮುಂದುವರಿಸೋಣ.ಹಣದ ಹರಿವಿಕೆ ಕಾರ್ಯ ನಿರ್ವಹಣೆ, ಹೂಡಿಕೆ, ಆರ್ಥಿಕ ಇವು ಮೂರು ವಿಧವಾಗಿ ವಿಂಗಡಿಸಬಹುದೆಂದು ಅರಿತೆವು. ಇವುಗಳ ಪ್ರಮಾಣವು ಎಷ್ಟಿದೆ ಅನ್ನುವುದರಿಂದ ಕಂಪನಿಯು ಹೇಗೆ ನಡೆಯುತ್ತಿದೆ ಎಂಬುದು ಗೊತ್ತಾಗುವುದು. ಕಂಪನಿಯ ಕಾರ್ಯ ನಿರ್ವಹಣೆಯಿಂದಲೇ ದೊಡ್ಡ ಪ್ರಮಾಣದ ಹಣದ ಹರಿವು ಇದ್ದರೆ, ಕಂಪನಿಯ ಕೆಲಸ ಕಾರ್ಯಗಳು ಕಂಪನಿಗೆ ಸೂಕ್ತವಾದ ಹಣದ ಆದಾಯವನ್ನು ನೀಡುತ್ತಿದೆ ಮತ್ತು ಕಂಪನಿಗೆ ಅಗತ್ಯವಾದ ಹೊಸ ವಸ್ತುಗಳ ದಾಸ್ತಾನುಗಳನ್ನೂ ಹೊಂದಲು ಇದರಿಂದ ಸಾಧ್ಯವಿದೆ ಎಂದು. ಒಬ್ಬ ಹೂಡಿಕೆದಾರನು ಕಂಪನಿಯ ಹಣದ ಒಳ ಹರಿವು ಕಂಪನಿಯ ಮೇಲಿನ ಸಾಲ ಅಥವಾ ಬಾಕಿ ಸಂದಾಯಗಳನ್ನು ತೀರಿಸಲು ಆಗುವಷ್ಟು ಇರಬೇಕೆಂದು ಬಯಸುವನು.ಇದರಲ್ಲಿ ಇನ್ನೊಂದು ಸೂಕ್ಷ್ಮವನ್ನು ಅರಿಯಬೇಕೆನೆಂದರೆ, ಕೊನೆಯಲ್ಲಿ ಸಿಗುವ ಹಣದ ಹರಿವಿಕೆ ಹೆಚ್ಹಾಗಿ ಒಳ್ಳೆಯದಾಗಿ ಇರುವುದಿಲ್ಲ. ಇದು ಋಣಾತ್ಮಕ ವಾಗಿ ಕೂಡ ಇರಬಹುದು.ಆದರೆ ಋಣಾತ್ಮಕ ವಾದ ಹಣದ ಹರಿವಿಕೆಯನ್ನು ಒಳ್ಳೆಯ ಲಕ್ಷಣವಲ್ಲ ಎಂದು ಕೇವಲ ಸಂಖ್ಯೆ ನೋಡಿ ಹೇಳಲಾಗದು. ಕಂಪನಿಯ ವಿಸ್ತರಿಸುವ ಯೋಜನೆಯಿಂದ ಕೂಡ ಋಣಾತ್ಮಕ ಹಣದ ಹರಿವು ಆಗಿರಬಹುದು, ಇದನ್ನು ಸರಿಯಾಗಿ ಗಮನಿಸಬೇಕು. ಅದು ಹಾಗಾಗಿದ್ದಲ್ಲಿ ಇದು ಕಂಪನಿಗೆ ಒಳಿತಾಗಿಯೇ ಇರುವುದು, ಏಕೆಂದರೆ ಹಣದ ಹರಿವು ಆಗಿರುವ ಕಾರಣ. ಹಾಗಾಗಿ ಹೂಡಿಕೆದಾರನು ಮೊದಲು ಹಣದ ಹರಿವಿಕೆ ಹೇಳಿಕೆಯನ್ನು ಕೂಲಂಕುಶವಾಗಿ ಗಮನಿಸುವ ಮೊದಲು ಯಾವುದೇ ನಿರ್ಧಾರಕ್ಕೆ ಬರಬಾರದು.ಆಂಗ್ಲ ಅಂಕಣ:
http://somanagement.blogspot.com/2011/08/finance-and-management-37.html -
ಹಣಕಾಸು ವ್ಯವಸ್ಥೆ ಮತ್ತು ನಿರ್ವಹಣೆ – ೩೬
ಈ ಹಿಂದಿನ ಅಂಕಣದಲ್ಲಿ EBITDA. ಬಗ್ಗೆ ನೋಡಿದೆವು. ಇಂದಿನ ಅಂಕಣದಲ್ಲಿ ನಾವು ಹಣದ ಹರಿಯುವಿಕೆಯ ಹೇಳಿಕೆಯ (cash flow statements) ಬಗ್ಗೆ ಅರಿಯೋಣ.PnL account or Balance ಶೀಟ್ ಗಳು ಕಂಪನಿಯ ಒಳಗೆ ಕಾರ್ಯ ನಿರ್ವಹಿಸುವ ಹಣದ ಬಗ್ಗೆ ಸರಿಯಾಗಿ ಹೇಳಲು ಅಸಮರ್ಥವಾಗುವುದು. ಇದನ್ನು ಅರಿಯಲು ಇರುವ ಉತ್ತಮ ಸಾಧನವೇ “Cash Flow Statement” (CFS). CFS, ಬ್ಯಾಲೆನ್ಸ್ ಶೀಟ್ ನಲ್ಲಿನ ಅಕೌಂಟ್ ನ ಬದಲಾವಣೆಗಳು ಮತ್ತು ಆದಾಯದ ಅಕೌಂಟ್ ನ ಬದಲಾವಣೆಗಳಿಂದ ಹಣ ಅಥವಾ ಹಣಕ್ಕೆ ಸಮನಾಂತರವಾದವುಗಳಿಗೆ ಆಗುವ ಪರಿಣಾಮ, ಮತ್ತು ಇದು ವಿಶ್ಲೇಷಣೆಯನ್ನು ಮೂರು ಭಾಗಗಳಾಗಿ ವಿಭಜಿಸುವುದು. ಕಾರ್ಯ ನಿರ್ವಹಣೆ, ಹೂಡಿಕೆ, ಆರ್ಥಿಕ (operating, investing, and financing ) ವೆಂದು. ಇದು ಕಂಪನಿಯ liquidity ನ್ನು ಹೇಳುವುದು.ಹಣದ ಹರಿವಿಕೆಯನ್ನು ತಿಳಿಯಲು ಈ ೩ ವಿಚಾರಗಳಿಂದ ಬರುವ ಹಣವನ್ನು ತಿಳಿದರೆ ಸಿಗುವುದು.೧. ಕಾರ್ಯ ನಿರ್ವಹಣೆ operating೨. ಹೂಡಿಕೆ investing,೩. ಆರ್ಥಿಕ financing೧. ಕಾರ್ಯ ನಿರ್ವಹಣೆ operating: ಸಾಮಾನ್ಯವಾಗಿ ಕಂಪನಿಯ ಹಣ, accounts receivable, depreciation, inventory and accounts payable ಗಳಲ್ಲಿ ಮಾಡಿದ ಬದಲಾವಣೆಗಳು ಇಲ್ಲಿ ಪ್ರತಿಫಲಿತವಾಗುವುದು.೨. ಹೂಡಿಕೆ investing: ಕಂಪನಿಯ ಆಸ್ತಿ ಅಥವಾ ಹಣದ ಒಡನೆ ಸಂಬಂಧವಿರುವ ಹೂಡಿಕೆ, ಯಂತ್ರೋಪಕರಣಗಳು ಗಳಲ್ಲಿನ ಬದಲಾವಣೆ.೩. ಆರ್ಥಿಕ financing : ಕಂಪನಿಯ ಸಾಲಗಳು, ಇತರ ಬಾಕಿ ಸಂದಾಯಗಳು, ಡಿವಿಡೆಂಡ್ ಗಳಲ್ಲಿನ ಬದಲಾವಣೆ.ಆಂಗ್ಲ ಅಂಕಣ:http://somanagement.blogspot.com/2011/08/finance-and-management-36.html -
ಹಣಕಾಸು ವ್ಯವಸ್ಥೆ ಮತ್ತು ನಿರ್ವಹಣೆ – ೩೫
ಈ ಹಿಂದಿನ ಅಂಕಣದಲ್ಲಿ ನಾವು PnL ನ ಎಲ್ಲ ಶೀರ್ಷಿಕೆಗಳ ಬಗ್ಗೆ ಅರಿಯುವುದನ್ನು ಮುಗಿಸಿದೆವು. ಇಂದು ನಾವು ಐ. ಟಿ. ಉದ್ಯಮದಲ್ಲಿ ಲಾಭಾಂಶದ ಬಗ್ಗೆ ಹೆಚ್ಚಾಗಿ ಉಪಯೋಗಿಸುವ ಪ್ರಸಿದ್ಧ EBITDA ಬಗ್ಗೆ ತಿಳಿಯೋಣ.ಹಿಂದಿನ ಅಂಕಣದಿಂದ ನಮಗೆ EBIT ಎಂದರೆ ತೆರಿಗೆ ಮತ್ತು ಬಡ್ಡಿಯ ಮೊದಲಿನ ಆದಾಯ “Earnings before Interest and Taxes”; ಎಂದು ಗೊತ್ತಿದೆ. EBITDAನ ವಿವರಣೆ ಕೂಡ ಇದೇ ರೀತಿಯದ್ದಾಗಿರುತ್ತದೆ, ಇದರೊಂದಿಗೆ depreciation and amortization ಸೇರಿಸೋಣ. ಇದು ಲಾಭಾಂಶವನ್ನು ಅಳೆಯಲು ತುಂಬಾ ಅನುಕೂಲಕರವಾದ ಸಾಧನವೆಂದು ಉದ್ಯಮಗಳ ಜಗತ್ತಿನಲ್ಲಿ ಪ್ರಚಲಿತವಾಗಿದೆ. EBITDA ನ್ನು ಪಡೆಯಲು ನಿವ್ವಳ ಲಾಭವನ್ನು ತೆಗೆದು ಕೊಂಡು ಅದಕ್ಕೆ ಬಡ್ಡಿ ಮತ್ತು ತೆರಿಗೆ, depreciation and amortization ಗಳನ್ನು ಪುನಃ ಸೇರಿಸಬೇಕು.ಆದರೆ EBITDA ನ ಪರ ಮತ್ತು ವಿರೋಧವಾದ ಎರಡೂ ಚರ್ಚೆಗಳಿವೆ.ವಿರೋಧವಾದ ಅಂಶಗಳು ಹೀಗಿವೆ:೧. ಆದಾಯ , ತೆರಿಗೆ,depreciation and amortization ಇವೆಲ್ಲವನ್ನೂ ತೆಗೆದು ಕೊಳ್ಳುವುದರಿಂದ ಲಾಭವಿಲ್ಲದ ಕಂಪನಿಯು ಕೂಡ ಆರ್ಥಿಕವಾಗಿ ಉತ್ತಮವಾಗಿದೆ ಎಂದು ಭಾಸವಾಗುವುದು.೨. ಇದನ್ನು ಸುಲಭವಾಗಿ ಬದಲಾಯಿಸಬಹುದು. ವಂಚಿಸುವ ರೀತಿಯ ಅಕೌಂಟ್ ಅಭ್ಯಾಸಗಳನ್ನು ಇಟ್ಟುಕೊಳ್ಳುವುದರಿಂದ ಕಂಪನಿಗಳನ್ನು ಬಹಳ ಉತ್ತಮವಾಗಿ ಬಿಂಬಿಸಬಹುದು.ಆದರೆ ಇದರ ಪರ ಇರುವ ಅಂಶಗಳು:೧. ಇದನ್ನು ಉಪಯೋಗಿಸಿ ಸರಳವಾದ ಹತ್ತಿರದ ದಾರಿಯಿಂದ ಹಣದ ಹರಿವಿಕೆಯನ್ನು ಅಳೆಯಬಹುದು, ಇದರಿಂದ ಧೀರ್ಘ ಕಾಲೀನ ಸಾಲಗಳನ್ನು ತೀರಿಸಲು ಉಪಯೋಗಿಸಬಹುದು.೨. ಇದನ್ನು ಕಂಪನಿಗಳ ನಡುವಣ ಹೋಲಿಕೆಗೆ ಉಪಯೋಗಿಸಬಹುದು ಹಾಗು ಉದ್ಯಮದ ದರ್ಜೆಗೆ ಸಮವಾಗಿರುವುದನ್ನು ಹೋಲಿಸಬಹುದು.೩. ಇದರಲ್ಲಿ ಹೆಚ್ಚಿನ ಅಗತ್ಯವಿಲ್ಲದ ಅಂಶಗಳನ್ನು ತೆಗೆಯುವುದರಿಂದ,ಇದು ನಿಜವಾದ ಒಳಗಿನ ಲಾಭದ ಬಗ್ಗೆ ಹೇಳುವುದು. ಹಾಗಾಗಿ ಸಮಾನ ರೀತಿಯ ಹೋಲಿಕೆಗೆ ಸಾಧ್ಯವಾಗುವುದು.೨ ತುಂಬಾ ಆಸಕ್ತಿದಾಯಕ ವಿಚಾರಗಳನ್ನು ಇದರಿಂದ ಪಡೆಯಬಹುದು.Measure of Debt’s payback period = Debt/EBITDAInterest coverage ratio = EBITDA /Interest Expenseಆಂಗ್ಲ ಅಂಕಣ:http://somanagement.blogspot.com/2011/08/finance-and-management-35.html -
ಹಣಕಾಸು ವ್ಯವಸ್ಥೆ ಮತ್ತು ನಿರ್ವಹಣೆ – ೩೪
ಈ ಹಿಂದಿನ ಅಂಕಣದಲ್ಲಿ ನಾವು PnL ನ ಮುಖ್ಯ ಶೀರ್ಷಿಕೆಗಳ ಬಗ್ಗೆ ಅರಿಯಲು ಆರಂಭಿಸಿದೆವು. ಇಂದಿನ ಅಂಕಣದಲ್ಲಿ ಅದನ್ನೇ ಮುಂದುವರಿಸೋಣ.ನ ಬಗ್ಗೆ ಚರ್ಚೆಯನ್ನು ಮುಂದುವರಿಸುತ್ತಾ ಹೇಗೆ ಈ ಆದಾಯವು ಕಂಪನಿಯ ಕಾರ್ಯಗಳಿಂದ ಉಂಟಾಗುವುದು ಎಂದು ಅರಿಯೋಣ. ಆದರೆ ಕಂಪನಿಯು ಬ್ಯಾಂಕ್ ಗಳಲ್ಲಿ ಇಟ್ಟ ಹಣದಿಂದ ಕೂಡ ಬಡ್ಡಿಯ ರೂಪದಲ್ಲಿ ಆದಾಯ ಸಿಗುವುದು. ಇದನ್ನು ಕೂಡ ಪರಿಗಣಿಸಬೇಕು. ಇದನ್ನು “Other Incomes” ನ ಶೀರ್ಷಿಕೆಯಲ್ಲಿ ತೋರಿಸುವರು. ಇದರ ಜೊತೆಗೆ ಯಾವುದಾದರು ಆಸ್ತಿಯನ್ನು ಒಮ್ಮೆ ಮಾರಿದರೆ ಅದನ್ನು ಬೇರೆಡೆ ತೋರಿಸುವುದಿಲ್ಲ. ಹಾಗಾಗಿ ಅದನ್ನು “Extraordinary Income” ಶೀರ್ಷಿಕೆಯ ಅಡಿಯಲ್ಲಿ ತೋರಿಸುವರು.ಈಗ ನಾವು ಕಂಪನಿಯ ಎಲ್ಲ ರೀತಿಯ ಆದಯಗಳನ್ನು ಒಟ್ಟುಗೂಡಿಸಿದೆವು. ಇದನ್ನು ಒಟ್ಟಾಗಿ “Earnings before Interest and Taxes” ಎಂದು ಕರೆಯುವರು. ಇದನ್ನೇ ಚಿಕ್ಕದಾಗಿ “EBIT” ಹೀಗೆ ಉಪಯೋಗಿಸುವರು. ಈ ಹೆಸರು ಬರಲು ಕಾರಣವು ಕೂಡ ಸರಳವಾಗಿ ಅರಿವಾಗುವುದು. ಏಕೆಂದರೆ ನಾವು ಕಂಪನಿಯು ತೆರ ಬೇಕಾದ ತೆರಿಗೆ ಮತ್ತು ಬಡ್ಡಿಯನ್ನು ಇನ್ನು ಪರಿಗಣಿಸಿಲ್ಲ.ಕಂಪನಿಯು ಸಾಲವಾಗಿ ಪಡೆದ ಹಣದ ಬಡ್ಡಿಯನ್ನು ಆದಾಯದಿಂದ ಕಳೆಯಬೇಕು. ಹೀಗೆ ಕಳೆದು ಸಿಗುವುದಕ್ಕೆ Net profit before tax – NPBT ಎಂದು ಕರೆಯುವರು. ಕೊನೆಯಲ್ಲಿ ತೆರಿಗೆಯನ್ನು ಕಳೆದ ಮೇಲೆ ಉಳಿಯುವ ಲಾಭವನ್ನು ನಿವ್ವಳ ಲಾಭ Net profit after tax – NPAT ಎಂದು ಕರೆಯುವೆವು.ಈ ಉಳಿದ ಲಾಭದ ಹಣದಲ್ಲಿ ಸ್ವಲ್ಪ ಭಾಗವನ್ನು ಡಿವಿಡೆಂಡ್ ಗಳನ್ನು ನೀಡಲು ಉಪಯೋಗಿಸುವರು. ಆದರೆ ಇದು ಶೇರ್ ದಾರರ ವಾರ್ಷಿಕ ಸಭೆಯಲ್ಲಿ ನಿರ್ಧಾರ ವಾಗಿರಬೇಕು, ಇದಲ್ಲದಿದ್ದರೆ ಇದನ್ನು Retained Earnings ನ ಶೀರ್ಷಿಕೆಯಲ್ಲಿ ಇಡುವರು.ಆಂಗ್ಲ ಅಂಕಣ:http://somanagement.blogspot.com/2011/08/finance-and-management-34.html -
ಹಣಕಾಸು ವ್ಯವಸ್ಥೆ ಮತ್ತು ನಿರ್ವಹಣೆ – ೩೩
ಈ ಹಿಂದಿನ ಅಂಕಣದಲ್ಲಿ ನಾವು ಕಂಪನಿಗಳು ಏಕೆ ತೆರಿಗೆ ಕಟ್ಟಬೇಕು ಎಂಬುದನ್ನ ಅರಿತೆವು. ಇಂದಿನ ಅಂಕಣದಲ್ಲಿ ನಾವು ಮತ್ತೆ ಈ P & L ಹೇಳಿಕೆಯನ್ನು ಕೂಲಂಕುಶವಾಗಿ ಅರಿಯೋಣ ಹಾಗು ಇದನ್ನು ಹೇಗೆ ತಯಾರು ಮಾಡುವರು ಎಂದು ಕೂಡ ತಿಳಿಯೋಣ.ಸರಳವಾಗಿ ವಿವರಿಸುವುದಾದರೆ ಲಾಭವೆನ್ನುವುದು ಮಾರಾಟದ ಬೆಲೆ – ಖರ್ಚಾದ ವೆಚ್ಚ. ಯಾವುದೇ ಕಂಪನಿಗೆ ತನ್ನ ಉತ್ಪನ್ನ ಅಥವಾ ಸೇವೆಯನ್ನು ಮಾರುವುದರಿಂದ ಆದಾಯವು ಸಿಗುವುದು. ಇದನ್ನು Sales ಎಂದು ಒಟ್ಟಾಗಿ ತೋರಿಸುವರು. ಆದರೆ ಈ ಉತ್ಪನ್ನ ಅಥವಾ ಸೇವೆಯನ್ನು ಕೊಡಲು/ ಮಾರಲು ಕಂಪನಿಯು ಖರ್ಚು ಮಾಡಬೇಕಾಗುತ್ತದೆ. ಈ ಹಣವನ್ನು Cost of Goods Sold (COGS) ಎಂದು ಕರೆಯುವರು. ಹಾಗಾಗಿ P & L ನ್ನು ಹೀಗೆ ಬರಿಯಬಹುದು.ಲಾಭ (Profit) = Sales – COGSಈ ಹಂತದಲ್ಲಿ ನಾವು ಹಿಂದೆ ಕಲಿತ ಕೆಲವು ವಿಚಾರಗಳಾದ depreciation, amortization , ತೆರಿಗೆ ಗಳನ್ನು ಪರಿಗಣಿಸಿಲ್ಲ. ಹಾಗಾಗಿ ಈ ಮೇಲೆ ಪಡೆದ ಲಾಭವನ್ನು ನಿವ್ವಳ ಲಾಭ ಎಂದು ಕರೆಯಲಾಗದು, ಇದನ್ನು “Gross Profit” ಎಂದು ಕರೆಯುವರು.ಕಂಪನಿಗಳು ತಮ್ಮದೇ ಆದ ಸಂಶೋಧನೆ ಮತ್ತು ಅಭಿವೃದ್ಧಿ ಯ R&D ಘಟಕವನ್ನು ಹೊಂದಿರುತ್ತದೆ. ಇಲ್ಲಿನ ಚಟುವಟಿಕೆ ಗಳು ಒಂದು ವರ್ಷದಲ್ಲೇ ಮುಗಿಯದು, ಹಾಗಾಗಿ ಪ್ರತಿವರ್ಷ ಇದರ ಮೇಲೆ ಖರ್ಚು ಆಗುತ್ತಿರುತ್ತದೆ. ಇದನ್ನು “General Operating Expenses (R&D)” ಮುಖ್ಯಾಂಶದ ಅಡಿಯಲ್ಲಿ ತೋರಿಸುವರು. ಇದರೊಟ್ಟಿಗೆ ಪೇಟೆಂಟ್ ಮತ್ತು ಸ್ಥಿರಾಸ್ತಿಗಳಿಗೆ ಪ್ರತಿ ವರ್ಷ ಹಣವನ್ನು ಪಾವತಿಸಬೇಕಾಗುತ್ತದೆ. ಇದನ್ನೂ ಕೂಡ ಲಾಭದಿಂದ ಕಳೆಯಬೇಕು. ಇವನ್ನೆಲ್ಲ ಕಳೆದ ಮೇಲೆ ಇನ್ನೊಂದು ಉಳಿದ ಭಾಗವಿರುತ್ತದೆ. ಅದನ್ನು “Operating Income” ಎನ್ನುವರು. ಕಂಪನಿಯ ಕೈ ಯಲ್ಲಿ ಏನು ಕೊನೆಗೆ ಸಿಗುವುದು ಎನ್ನುವುದನ್ನು ಪಡೆಯಲು ಈ “Operating Income” ದನ್ನು ಕೂಡ ಪರಿಗಣಿಸ ಬೇಕು.ಇನ್ನು ಉಳಿದ ಬಗ್ಗೆ ಇಂದು ಹೇಳಿ ಹೆಚ್ಚಿನ ಹೊರೆಯನ್ನು ಮನಕ್ಕೆ ನೀಡದಿರೋಣ. ಈ ಬಗ್ಗೆ ಮುಂದಿನ ಅಂಕಣದಲ್ಲಿ ಮುಂದುವರಿಸೋಣ.ಆಂಗ್ಲ ಅಂಕಣ:http://somanagement.blogspot.com/2011/08/finance-and-management-33.html -
ಹಣಕಾಸು ವ್ಯವಸ್ಥೆ ಮತ್ತು ನಿರ್ವಹಣೆ – ೩೨
ಈ ಹಿಂದಿನ ಅಂಕಣದಲ್ಲಿ ನಾವು ಬಗ್ಗೆ ಅರಿತೆವು. ಇಂದಿನ ಅಂಕಣದಲ್ಲಿ ನಾವು ಕಂಪನಿಗಳ ಮೇಲೆ ತೆರಿಗೆಯನ್ನು ವಿಧಿಸುವುದರ ಕಾರಣಗಳನ್ನು ತಿಳಿಯೋಣ.ಪ್ರತಿ ಕಂಪನಿಯು ಒಂದು ದೇಶ ಅಥವಾ ರಾಜ್ಯದ ಆಡಳಿತದೊಳಗೆ ಕಾರ್ಯನಿರ್ವಹಿಸುತ್ತದೆ. ಸರ್ಕಾರವು ರೂಪಿಸಿದ ಕಾನೂನು ಮತ್ತು ಯೋಜನೆಗಳ ಫಲವಾಗಿ ಉಂಟಾದ ಸಮಾಜದ ಲಾಭವನ್ನು ಪಡೆದು ಕಂಪನಿಗಳು ನಡೆಸಲು ಸಾಧ್ಯವಾಗುವುದು. ಸರ್ಕಾರವು ಅತ್ಯಂತ ದೊಡ್ಡ ಸಮೂಹ ಸಂಸ್ಥೆಯಾಗಿದ್ದು ಹೆಚ್ಚಿನ ಮಟ್ಟದ ಅಪಾಯನ್ನು ತೆಗೆದುಕೊಂಡು ಜನರನ್ನು ಕಾರ್ಯಗತಗೊಳಿಸಲು ಯತ್ನಿಸುತ್ತದೆ. ಇದನ್ನು ಅದು ಕಾನೂನುಗಳ ಮೂಲಕ ನಿರ್ಭಂಧಿಸಿ ಮಾಡುವುದು. ನ್ಯಾಯಾಂಗವು ಜನತೆಗೆ ನ್ಯಾಯ ದೊರಕಿಸಿ ಸಮಾನತೆಯನ್ನು ಕಾಪಾಡಿ ದೇಶದ ಅಭಿವೃದ್ಧಿಗೆ ಬಹು ಮೂಲ್ಯ ಕೊಡುಗೆ ನೀಡುವುದು. ಮುಂದಿನ ಹಂತದಲ್ಲಿ ನಾವು ವ್ಯವಹಾರಗಳಿಗೆ ಪರಿಣಾಮ ಬೀರಿದ ಹಲವು ಕಾನೂನುಗಳ ಬಗ್ಗೆ ನೋಡೋಣ.ಈ ಎಲ್ಲ ಚಟುವಟಿಗೆಗಳಿಗೆ ಮತ್ತು ಇನ್ನು ಹೆಚ್ಚಿನದ್ದಕ್ಕೆ ಸರ್ಕಾರವು ಕಂಪನಿಗಳಿಂದ ಮತ್ತು ನಾಗರೀಕರಿಂದ ತೆರಿಗೆಗಳನ್ನು ವಸೂಲಿ ಮಾಡುತ್ತದೆ. ಕಂಪನಿಯ ಪ್ರಾಫಿಟ್ & ಲಾಸ್ ಅಕೌಂಟ್ ಕಂಪನಿಯ ಮೇಲೆ ವಿಧಿಸಿದ ತೆರಿಗೆಯನ್ನು ಹೇಳುವುದು.ಈ ರೀತಿ ಸಂಗ್ರಹ ಮಾಡಿದ ತೆರಿಗೆಗಳನ್ನು ಸರ್ಕಾರವು ಪುನಃ ಇದೆ ವ್ಯವಸ್ಥೆಯಲ್ಲಿ ತೊಡಗಿಸಿ ಇನ್ನು ಹೆಚ್ಚಿನ ಉನ್ನತಿಗೆ ಅನುವು ಮಾಡಿಕೊಡುವುದು.ಅಂಗ್ಲ ಅಂಕಣ:http://somanagement.blogspot.com/2011/08/finance-and-management-32.html -
ಹಣಕಾಸು ವ್ಯವಸ್ಥೆ ಮತ್ತು ನಿರ್ವಹಣೆ – ೩೧
ಈ ಹಿಂದಿನ ಅಂಕಣದಲ್ಲಿ ನಾವು Depreciation ಬಗ್ಗೆ ಅರಿತೆವು. ಇಂದಿನ ಅಂಕಣದಲ್ಲಿ ನಾವು Amortization ಬಗ್ಗೆ ತಿಳಿಯೋಣ.ನಾವು Depreciation ಬಗ್ಗೆ ವಿವರಿಸುವಾಗ ಭೌತಿಕವಾದ ಆಸ್ತಿಯ ಉದಾಹರಣೆಯನ್ನು ನೀಡಿದೆವು. ನಂತರ ಇದು ಎಲ್ಲ ರೀತಿಯ ಅಂದರೆ ಭೌತಿಕವಲ್ಲದ ಆಸ್ತಿಗೆ ಕೂಡ ಅನ್ವಯವಾಗುವುದು ಎಂದು ಅರಿತೆವು. ಈ Depreciation ನ್ನು ಭೌತಿಕವಲ್ಲದ ಆಸ್ತಿಗಳಾದ ಟ್ರೇಡ್ ಮಾರ್ಕ್, ಪೇಟೆಂಟ್, ಕಾಪಿ ರೈಟ್ ಇತ್ಯಾದಿ ಕಂಪನಿಯ ಸ್ವಂತದ್ದವುಗಳಿಗೆ ಅನ್ವಯಿಸಿದಾಗ ಅದನ್ನ Amortization ಎಂದು ಕರೆಯುವರು.ಇದನ್ನು ಉದಾಹರಣೆಯ ಜೊತೆಗೆ ಸರಿಯಾಗಿ ಅರ್ಥ ಮಾಡಿಕೊಳ್ಳೋಣ. ABC Pvt. Ltd. ಕಂಪನಿಯು ಒಂದು ಕ್ಯಾಲಿಬ್ರೇಶನ್ ಯಂತ್ರವನ್ನು ೩,೦೦,೦೦೦/- ಗೆ ಖರೀದಿಸಿತೆಂದು ಕೊಳ್ಳೋಣ. ಆ ಯಂತ್ರಕ್ಕೆ ೧೫ ವರ್ಷಗಳ ಪೇಟೆಂಟ್ ನ ರಕ್ಷಣೆ ಇದೆ ಎಂದು ಭಾವಿಸೋಣ. ಇದರರ್ಥ ಪ್ರತಿ ವರ್ಷ ೨೦,೦೦೦/- ನ್ನುAmortization ನ ಖರ್ಚು ಎಂದು ದಾಖಲಿಸುವರು.ಈ ಹಣ ಸಂದಾಯವನ್ನು ಸಾಮಾನ್ಯವಾಗಿ ಹಲವು ಕಂತುಗಳಲ್ಲಿ ಮಾಡುವರು ಮತ್ತು ಇದನ್ನು amortization schedule ಎಂದೆನ್ನುವರು.ಆಂಗ್ಲ ಅಂಕಣ:http://somanagement.blogspot.com/2011/08/finance-and-management-31.html -
ಹಣಕಾಸು ವ್ಯವಸ್ಥೆ ಮತ್ತು ನಿರ್ವಹಣೆ – ೩೦
ಈ ಹಿಂದಿನ ಅಂಕಣದಲ್ಲಿ ನಾವು ಬ್ಯಾಲೆನ್ಸ್ ಶೀಟ್ ಮತ್ತು ಪ್ರಾಫಿಟ್ & ಲಾಸ್ ಗಳ ನಡುವಿನ ಸಂಬಂಧಗಳ ಬಗ್ಗೆ ಚರ್ಚಿಸಿದೆವು. ಇಂದಿನ ಅಂಕಣದಲ್ಲಿ ಪ್ರಾಫಿಟ್ & ಲಾಸ್ ನಲ್ಲಿನ ವಿವಿಧ ವಿಭಾಗಗಳತ್ತ ಗಮನ ಹರಿಸೋಣ. ಇವತ್ತು ನಾವು Depreciation ನ ಬಗ್ಗೆ ಅರಿಯೋಣ.ನಾವೊಂದು ವಸ್ತುವನ್ನು ಖರೀದಿಸಿದಾಗ (ಕಂಪ್ಯೂಟರ್ ಟೇಬಲ್) ಈ ಕೆಳಗಿನ ಸಮೀಕರಣವು ಸ್ವಾಭಾವಿಕವಾಗಿ ಅನ್ವಯವಾಗುತ್ತದೆ.ವಸ್ತುವಿನ ಬೆಲೆ = ತೆತ್ತ ಹಣ.ಈಗ ನಾವಿದನ್ನು ಬ್ಯಾಲೆನ್ಸ್ ಶೀಟ್ ನಲ್ಲಿ ಹಾಕಿದಾಗ, ಅಸ್ಸೆಟ್ ನ ಕೆಳಗೆ ಕಂಪ್ಯೂಟರ್ ಟೇಬಲ್ ನ ಬೆಲೆ ಜೋಡಿಸಲ್ಪದುತ್ತದೆ, ಹಾಗೆ ಲಯಬಿಲಿಟಿ ಕಡೆಯಿಂದ ಕ್ಯಾಶ್ ನಲ್ಲಿ ಅಷ್ಟೇ ಮೊತ್ತವು ಕಡಿಮೆಯಾಗುತ್ತದೆ. ಇದು ಇಂದು ನಾವು ಖರೀದಿಸಿದಾಗ ಹೀಗೆ ಇರುವುದು. ಆದರೆ ಒಂದು ವರ್ಷದ ನಂತರ ಚಿತ್ರಣವು ಹೇಗೆ ಇರುವುದು? ಇದೊಂದು ತೀರ ಸೂಕ್ಷ್ಮವಾದ ಪ್ರಶ್ನೆ, ಯಾಕೆಂದರೆ ಅಷ್ಟರೊಳಗೆ ಟೇಬಲ್ ನ ಅವಸ್ಥೆ ಏನು ಬೇಕಾದರೂ ಆಗಿರಬಹುದು. (ಕೇವಲ ಟೇಬಲ್ ನ ಬಗ್ಗೆ ಮಾತ್ರ ಯೋಚಿಸೋಣ, ಅದಕ್ಕೆ ನೀಡಿದ ಹಣವು ಟೇಬಲ್ ಆಗಿ ಬದಲಾಗಿದೆಯಾದ್ದರಿಂದ ಹಣದ ಬಗ್ಗೆ ಯೋಚಿಸುವುದು ಬೇಡ)ಈ ವರ್ಷದಲ್ಲಿ ಆ ಟೇಬಲ್ ನ ಕಾಲು ಮುರಿದು ಹೋಗಿರಬಹುದು, ಅದನ್ನು ಗುಜರಿಗೆ ಎಸೆದಿರಬಹುದು, ಅದನ್ನು ಮಾರಿರಬಹುದು, ಇಲ್ಲವೇ ಅದು ಇನ್ನು ಆಫೀಸ್ ನಲ್ಲಿ ಉಪಯೋಗಿಸಲ್ಪಡುತ್ತಿರಬಹುದು. ಇದ್ಯಾವುದೇ ಆಗಿದ್ದರು ಕಂಪ್ಯೂಟರ್ ಟೇಬಲ್ ನ ಬೆಲೆಯು ಅದನ್ನು ಖರೀದಿಸಿದ ಬೆಲೆಯಂತು ಆಗಿರಲಾರದು. ಅದು ಅದಕ್ಕಿಂದ ಕಡಿಮೆಯಾಗಿರುತ್ತದೆ. ವರ್ಷಗಳು ಕಳೆದಂತೆ ಅದರ ಮರು ಮಾರಾಟದ ಬೆಲೆ ಕಡಿಮೆಯಾಗುತ್ತ ಹೋಗುವುದು. ಇದನ್ನು ಅಕೌಂಟ್ ನ ಜಗತ್ತಿನಲ್ಲಿಯೂ ಪರಿಗಣಿಸುವರು, ಈ ಪ್ರಕ್ರಿಯೆಯನ್ನು Depriciation ಎಂದು ಕರೆಯುವರು.ಹಾಗಾಗಿ depreciation ನನ್ನು ಭೌತಿಕ ಆಸ್ತಿಯ (tanglible asset) ಬೆಲೆಯನ್ನು ಅದರ ಉಪಯುಕ್ತತೆಯ ಸಮಯದವರೆಗೆ ನೀಡುವ ಪ್ರಕ್ರಿಯೆ ಎಂದು ವ್ಯಾಖ್ಯಾನಿಸಬಹುದು. ವ್ಯವಹಾರ ಜಗತ್ತಿನಲ್ಲಿ ಎಲ್ಲ ಚರಾಸ್ತಿಗಳನ್ನು ತೆರಿಗೆ ಮತ್ತು ಅಕೌಂಟ್ ನ ಉಪಯೋಗಕ್ಕೆ Depreciation ಮಾಡುವರು.ಆಂಗ್ಲ ಅಂಕಣ:http://somanagement.blogspot.com/2011/08/finance-and-management-30.html -
ಹಣಕಾಸು ವ್ಯವಸ್ಥೆ ಮತ್ತು ನಿರ್ವಹಣೆ – ೨೯
ಈ ಹಿಂದಿನ ಅಂಕಣದಲ್ಲಿ appropiation ಬಗ್ಗೆ ಚರ್ಚಿಸಿದೆವು. ನಾವು ಬ್ಯಾಲೆನ್ಸ್ ಶೀಟ್ ನಲ್ಲಿನ ವಿಭಾಗ ಗಳ ಬಗ್ಗೆ ಆಳವಾಗಿ ನೋಡಿದೆವು. ಈಗ ಬ್ಯಾಲೆನ್ಸ್ ಶೀಟ್ ಮತ್ತು ಪ್ರಾಫಿಟ್ & ಲಾಸ್ ನ ನಡುವಿನ ಸಂಬಂಧವನ್ನು ಅರಿಯಲು ಸರಿಯಾದ ಸಮಯವೆಂದು ಅದರ ಬಗ್ಗೆ ಶುರು ಮಾಡೋಣ.ಪ್ರಾಫಿಟ್ & ಲಾಸ್ ಬಗ್ಗೆ ಅರಿಯಲು ಹೆಚ್ಚಿನ ವಿವರಣೆಯ ಅಗತ್ಯವಿಲ್ಲವೆಂದು ನಮ್ಮ ಅಂಬೋಣ. ನಾವು ಈಗ ನೇರವಾಗಿ ಬ್ಯಾಲೆನ್ಸ್ ಶೀಟ್ ಮತ್ತು ಪ್ರಾಫಿಟ್ & ಲಾಸ್ ನ ನಡುವಿನ ವ್ಯತ್ಯಾಸದ ಬಗ್ಗೆ ಚರ್ಚಿಸಲು ಶುರು ಮಾಡೋಣ.
ಬ್ಯಾಲೆನ್ಸ್ ಶೀಟ್ ಕಂಪನಿಯ ಆಗಿನ ಒಳಗಿನ ಚಿತ್ರಣ ವನ್ನು ನೀಡುತ್ತದೆ. ಇವತ್ತು ಬ್ಯಾಲೆನ್ಸ್ ಶೀಟ್ ನಲ್ಲಿರುವುದು ನಾಳೆ ಇರಬೇಕೆಂದಿಲ್ಲ. ಹೀಗಿರುವುದರಿಂದ ಕಂಪನಿಯ ಒಂದು ಕಾಲಾವಧಿಯ ಕಾರ್ಯ ಕ್ಷಮತೆಯ ಬಗ್ಗೆ ಇದರಿಂದ ತಿಳಿಯಲು ಬಹಳ ಕಷ್ಟವಾಗುವುದು. P n L ಅಕೌಂಟ್ ಇದನ್ನು ನಿಖರವಾಗಿ ಹೇಳುವುದು. ಇದು ಕಂಪನಿಯ ಒಂದು ಕಾಲಾವಧಿಯ ಕಾರ್ಯ ಕ್ಷಮತೆಯ ಬಗ್ಗೆ ಹೇಳುವುದು. ಪ್ರಾಫಿಟ್ & ಲಾಸ್ ಅಕೌಂಟ್ ಕಂಪನಿಯ ಮಾರಾಟ ಮತ್ತಿನ್ನಿತರ ಆದಾಯಗಳು ನೇರ ವಾದ ಖರ್ಚುಗಳು (Direct Cost), ಮೇಲು ವೆಚ್ಚ (Overheads), ಬಡ್ಡಿಗಳು, ಆರ್ಥಿಕ ವೆಚ್ಚಗಳು (Finance Costs), ಕೊಡಬೇಕಾದ ಹಣ (Payables) , ತೆರಿಗೆಗಳು (Taxes). ಪ್ರಾಫಿಟ್ & ಲಾಸ್ ಅಕೌಂಟ್ ನ ಒಟ್ಟು ಮೊತ್ತವು ಹೇಳಿಕೆಯ ಅವಧಿಯಲ್ಲಿನ ಉಳಿದ ಪ್ರಾಫಿಟ್ ಅಥವಾ ಲಾಸ್ ಆಗಿರುವುದು.
ಪ್ರಾಫಿಟ್ & ಲಾಸ್ ಹೇಳಿಕೆಯ ಒಂದು ಪ್ರತಿಯನ್ನು ಇಲ್ಲಿ ನೋಡಬಹುದು.
ಇದರೊಂದಿಗೆ ಇನ್ನೊಂದು ಮುಖ್ಯ ವಿಚಾರವೆಂದರೆ ಬ್ಯಾಲೆನ್ಸ್ ಶೀಟ್ ಮತ್ತು ಪ್ರಾಫಿಟ್ & ಲಾಸ್ ಒಂದಕ್ಕೊಂದು ಹತ್ತಿರದ ಸಂಬಂಧವನ್ನು ಹೊಂದಿದೆ. ಬ್ಯಾಲೆನ್ಸ್ ಶೀಟ್ ಮತ್ತು ಪ್ರಾಫಿಟ್ & ಲಾಸ್ ಗಳು ಬಹಳ ಉಪಯುಕ್ತವಾದ ಹೇಳಿಕೆಗಳು, ಆದರೆ ಇವು ಪ್ರತ್ಯೇಕವಾಗಿ ಕೇವಲ ಕಂಪನಿಯ ಅರ್ಧ ಚಿತ್ರಣ ಮಾತ್ರ ಕೊಡಬಲ್ಲದು. ಕಂಪನಿಯ ಪೂರ್ತಿ ಚಿತ್ರಣ ಮತ್ತು ಕಾರ್ಯ ಕ್ಷಮತೆಯ ಬಗ್ಗೆ ತಿಳಿಯಲು ಇವೆರಡನ್ನೂ ಒಟ್ಟಾಗಿ ನೋಡಬೇಕು.
ಆಂಗ್ಲ ಅಂಕಣ:
http://somanagement.blogspot.com/2011/08/finance-and-management-29.html