- Communication
- Coordination
- Control
Blog
-
Organization Theory – 16
In the earlier blog, we discussed to see if there is an interrelation amongst the various dimensions of differentiation. In today’s blog, we would look at the implications of complexity for an organization.As the complexity of an organization increases – there is an increasing need for effective communication, co-ordination and control. Let’s take an example and attempt understanding this – our very famous IBM.IBM has office all over the globe. Let us assume that they are working for a client in the United States of America and the development of the specific problem is being done in India. The sales team in the US would take the initial steam into getting the deal; this is then that the business analysts begin detailing the development cycle in association with the technical analyst. Given the cost factors, the technical analyst would stay in India. The technical analyst and project manager would details the technology road map of the project towards completion. The project manager then initiates the team leads under him to get the project implemented through the developer. Developers again are busy with development and too much time would be needed for the testing and quality aspects hence the product would be generally tested by the quality team.In all this, we see that there is an increasing complexity and along with that comes the issues of communication. It is important to ensure that every aspect of the project is communicated well and only then will the full team have the momentum. Given the large number of people working on this – ensuring that the resources are available at the right time is critical also come along is the aspect that the business has to be well controlled and not slip away.Simply put – we could definitely say: The higher the complexity, greater attention needs to be paid to these 3 aspectsRead in Kannada: -
ಸಾಂಸ್ಥಿಕ ಸಿದ್ಧಾಂತ -೩
ಈ ಹಿಂದಿನ ಅಂಕಣದಲ್ಲಿ ನಾವು ಸಂಸ್ಥೆಯ ಮಹತ್ವವನ್ನು ಅರಿತೆವು. ಇಂದಿನ ಅಂಕಣದಿಂದ ನಾವು ಸಂಸ್ಥೆಯನ್ನು ಅಧ್ಯಯನ ಮಾಡಲು ಒಂದು ದೃಷ್ಟಿಕೋನವನ್ನು ಅರಿಯುವ ಯುತ್ನ ಮಾಡೋಣ. ನಾವು ಸಂಸ್ಥೆಯನ್ನು ಒಂದು “ವ್ಯವಸ್ಥೆ” ಎಂದು ಅರಿಯಲು ಯತ್ನಿಸೋಣ.ನಾವು ಒಂದು ವ್ಯವಸ್ಥೆಯನ್ನು ಪರಿಸರದಿಂದ ತೆಗೆದುಕೊಂಡು ಮಾರ್ಪಾಡುಗೊಳಿಸಿ ಹೊರಗಿನ ಪರಿಸರಕ್ಕೆ ಕೊಡುವ ಪರಸ್ಪರ ವ್ಯವಹಾರ ನಡೆಸುತ್ತಿರುವ ಒಂದು ಗುಂಪು ಎಂದು ವ್ಯಾಖ್ಯಾನಿಸಬಹುದು. ಇದರೊಂದಿಗೆ ಇನ್ನೊಂದು ಸ್ಪಷ್ಟವಾಗುವುದೆನಂದರೆ ಈ ವ್ಯವಸ್ಥೆಯೊಳಗೆ ಕೂಡ ಚಿಕ್ಕ ಚಿಕ್ಕ ವ್ಯವಸ್ಥೆಗಳಿರುತ್ತದೆ. ಅವೇ ಉತ್ಪಾದನೆ ಘಟಕ (Production), ನಿರ್ವಹಣ ಘಟಕ (Maintenance) ಇತ್ಯಾದಿ. ಈ ಚಿಕ್ಕ ಚಿಕ್ಕ ವ್ಯವಸ್ಥೆಗಳು ನಾವು ಬಹಳ ಹಿಂದೆ ಈ ಅಂಕಣದಲ್ಲಿ ಹೇಳಿದ ವ್ಯವಹಾರಂಗಗಳು ಗಳೊಂದಿಗೆ ಸಂಬಂಧಿತವಾಗಿದೆ.ನಾವು ಕೇವಲ ಒಂದು ಸಂಸ್ಥೆಯನ್ನ್ನು ತೆಗೆದುಕೊಂಡು ಅದನ್ನು ಹೊರ ಜಗತ್ತಿನಿಂದ ಬೇರ್ಪಡಿಸಿ ಹೊರ ಜಗತ್ತಿಗೆ ಕಾಣಿಸದಂತೆ ಇಟ್ಟು ಸಂಪೂರ್ಣ ಪ್ರತ್ಯೇಕಿಸಿದಲ್ಲಿ ಅದು ಸ್ವಂತವಾಗಿ ಕಾರ್ಯ ನಿರ್ವಹಿಸುತ್ತದೆ. ಈ ರೀತಿಯಲ್ಲಿ ಅರಿತುಕೊಳ್ಳುವ ವಿಧಾನಕ್ಕೆ ಸಂಸ್ಥೆಯ ಮುಚ್ಚಿದ ವ್ಯವಸ್ಥೆಯ ಅರಿವಿನ ವಿಧಾನ ಎನ್ನುವರು. ಈ ರೀತಿಯ ಸಂಸ್ಥೆ ಕೇವಲ ಕಾಲ್ಪನಿಕ ಮಾತ್ರ ಹಾಗಾಗಿ ಹೊರಗಿನ ಪರಿಸರದೊಡನೆ ಸಂಪರ್ಕ ಮತ್ತು ಸಂಬಂಧಗಳನ್ನು ಸಂಸ್ಥೆಗೆ ಸೇರಿಸಲೇಬೇಕಾಗುತ್ತದೆ. ಈ ರೀತಿಯ ಅಧ್ಯಯನವೇ ತೆರೆದ ವ್ಯವಸ್ಥೆಯ ಅಧ್ಯಯನ.ಒಂದು ಸಂಸ್ಥೆಯು ಹೊರಗಿನ ಜಗತ್ತಿನೊಡನೆ ವ್ಯವಹರಿಸಬೇಕು ಹಾಗು ಹೊರಗಿನ ಬದಲಾವಣೆಗಳಿಗೆ ತಕ್ಕಂತೆ ಬದಲಾಯಿಸಿಕೊಳ್ಳಬೇಕು. ಹೀಗಾಗಿ ತೆರೆದ ವ್ಯವಸ್ಥೆಯೆಯ ಅಧ್ಯಯನ ಬಹಳ ಸಂಕೀರ್ಣವಾದುದು ಆದರೆ ಒಳಗಿನ ಆಂತರಿಕ ಚಿಕ್ಕ ಚಿಕ್ಕ ಸಂಸ್ಥೆಗಳ ಅಧ್ಯಯನವೇ ಒಟ್ಟಾಗಿ ತೆರೆದ ವ್ಯವಸ್ಥೆಯ ಅಧ್ಯಯನವಾಗುವುದು.ಈ ಮುಂದಿನ ಅಂಕಣದಲ್ಲಿ ಈ ಅಂಕಣದ ನಿಜ ಚಿತ್ರಣವನ್ನು ನೋಡಿ ಸಮರ್ಪಕವಾಗಿ ಅರಿಯೋಣ.ಆಂಗ್ಲ ಅಂಕಣ:http://somanagement.blogspot.com/2011/09/organization-theory-3.html -
ಸಾಂಸ್ಥಿಕ ಸಿದ್ಧಾಂತ – ೨
ಈ ಹಿಂದಿನ ಅಂಕಣದಲ್ಲಿ ನಾವು ಸಂಸ್ಥೆಯ ಕೆಲವು ವಿಶೇಷ ಗುಣಗಳ ಬಗ್ಗೆ ಕಲಿತೆವು. ಇಂದಿನ ಅಂಕಣದಲ್ಲಿ ಅದನ್ನೇ ಮುಂದುವರಿಸಿ ಸಂಸ್ಥೆಯ ಬಗ್ಗೆ ಇನ್ನು ಅಧಿಕ ಅರಿವನ್ನು ಪಡೆಯೋಣ.ಇಂದು ನಾವು ಕಾಣುವ ಮತ್ತು ಅರಿತಿರುವ ಸಂಸ್ಥೆ ಎನ್ನುವು ವಿಚಾರವು ಹಿಂದೆ ಕೈಗಾರಿಕೀಕರಣದ ಮತ್ತು ಆ ನಂತರದ ಬೆಳವಣಿಗೆಯಿಂದ ಉಂಟಾದುದು. ಹೀಗಾಗಿ ಇದು ಮಾನವನ ಇತಿಹಾಸಕ್ಕೆ ಹೋಲಿಸಿದಲ್ಲಿ ತೀರ ಹಳತೇನು ಅಲ್ಲ. ಈ ರೀತಿಯ ಸಂಸ್ಥೆಯ ಸ್ವರೂಪ ಉಂಟಾಗುವ ಮೊದಲು ಹಲವಾರು ಪ್ರಭಾವಶಾಲಿಯಾದ ಕಾನೂನುಗಳು ರೀತಿ – ನಿಯಮಾವಳಿಗಳು ಜನರ ಹಿತ ದೃಷ್ಟಿಯಿಂದ ರೂಪಿತವಾಗಿದ್ದವು. ಸಂಸ್ಥೆಯ ವಿವಿಧ ಪ್ರಕಾರಗಳು ವಿವಿಧ ಅಗತ್ಯತೆಗಳನ್ನು ಪೂರೈಸಲು ತಮಗೆ ತಾವೇ ಬದಲಾಗಿವೆ.ಇಂದಿನ ದಿನಗಳಲ್ಲಿ ಸಂಸ್ಥೆಯೆನ್ನುವುದು ಕೆಳಗಿನ ಉದ್ದೇಶಗಳಿಂದ ಅಸ್ತಿತ್ವದಲ್ಲಿದೆ.೧. ಸಂಪನ್ಮೂಲಗಳನ್ನು ಒಟ್ಟುಗೂಡಿಸಿ ಉದ್ದೇಶಿಸಿದ ಗುರಿ ಮತ್ತು ಫಲಿತಾಂಶ ಪಡೆಯಲು೨. ಸೇವೆ ಮತ್ತು ಉತ್ಪನ್ನಗಳನ್ನು ಸಮರ್ಪಕವಾಗಿ ಮತ್ತು ಪರಿಣಾಮಕಾರಿಯಾಗಿ ಉತ್ಪಾದಿಸಲು.೩. ಹೊಸತನಕ್ಕೆ ಸೃಷ್ಟಿಗೆ ಅನುಕೂಲ ಮಾಡುವುದು.೪. ಆಧುನಿಕ ಉತ್ಪಾದನೆಯ ಮತ್ತು ಮಾಹಿತಿ ತಂತ್ರಜ್ಞಾನ ಉಪಯೋಗಿಸಲು.೫. ಬದಲಾವಣೆಯ ಪರಿಸರಕ್ಕೆ ತಕ್ಕಂತೆ ಹೊಂದಿಕೊಳ್ಳಲು ಮತ್ತು ಶಿಫಾರಸು ಮಾಡಲು.೬. ಮಾಲಿಕರಿಗೆ, ಗ್ರಾಹಕರಿಗೆ ಮತ್ತು ಉದ್ಯೋಗಿಗಳಿಗೆ ತಕ್ಕ ಮೌಲ್ಯಗಳನ್ನು ನೀಡಲು.೭. ಸದಾ ಎದುರಾಗುವ ಸವಾಲು ಗಳಾದ ವಿವಿಧತೆ, ಮೌಲ್ಯಗಳು, ಸ್ಪೂರ್ತಿ, ಸಾಮರಸ್ಯ ಇತ್ಯಾದಿಗಳನ್ನೂ ಉದ್ಯೋಗಿಗಳಲ್ಲಿ ಹೊಂದಲು.ಮ್ಯಾನೇಜರ್ ಆದವರಿಗೆ ಇದು ತುಂಬಾ ಮಹತ್ವವಾದ ಮಾಹಿತಿ. ಒಂದು ಸಂಸ್ಥೆಯು ನಮ್ಮ ಜೀವನವನ್ನು ರೂಪಿಸುತ್ತದೆ, ಸರಿಯಾದ ಜ್ಞಾನ ಹೊಂದಿರುವ ಮ್ಯಾನೇಜರ್ ಒಂದು ಸಂಸ್ಥೆಯನ್ನು ಉತ್ತಮವಾಗಿ ನಡೆಸಬಲ್ಲ.ಆಂಗ್ಲ ಅಂಕಣ:http://somanagement.blogspot.com/2011/09/organization-theory-2.html -
Organization Theory – 15
In the earlier 3 blogs, we looked at the various dimensions of complexity – The last one completed Spatial Differentiation. Having explained these varieties, it is definitely an interesting and would have occurred in our mind that these might be interrelated; the question now is – can we predict them?A look around us, and we would definitely realize that there are a different varieties of organizations. We have a small tea shop, we have food chains like McDonald, we have government and its various services etc. All these are at different sizes and different levels of complexity. It would be hard to generalize the relation amongst different dimensions of complexity.In organization like the Indian government administration machinery – we have high complexity on every dimension – horizontal, vertical and spatial. And in the case of the small “kaka tea shop” run by kaka himself, there is absolutely no complexity of any type. Excepting for these 2 extreme cases; it would be very hard to generalize a rule about the inter-relation amongst the various dimensions – hence these 3 dimensions do not come as a package.In an academic set up like the engineering college – There would be very little vertical differentiation, but the horizontal differentiation would be very high; and almost no spatial differentiation. The opposite case could be seen in an army – very high vertical differentiation with very little horizontal differentiation.Read in Kannada: -
ಸಾಂಸ್ಥಿಕ ಸಿದ್ಧಾಂತ – ೧
ಈ ಹಿಂದಿನ ಅಂಕಣದಲ್ಲಿ ನಾವು ನ ಉದ್ದೇಶಗಳ ಬಗ್ಗೆ ಕಲಿತೆವು ಜೊತೆಗೆ ಇದು ನಿರ್ಧಾರಗಳನ್ನು ತೆಗೆದುಕೊಳ್ಳಲು ವಹಿಸುವ ಪಾತ್ರದ ಬಗ್ಗೆ ಕೂಡ ನೋಡಿದೆವು. ಇಂದಿನ ಅಂಕಣದಿಂದ ನಾವು ನಮ್ಮ ಈ ದಾರಿಯನ್ನು ಬಿಟ್ಟು ಮುಂದೆ ಸಾಂಸ್ಥಿಕ ಸಿದ್ಧಾಂತ (Organization Theory) ಬಗ್ಗೆ ಚರ್ಚಾ ಸರಣಿಯನ್ನು ಶುರು ಮಾಡೋಣ. ಇದರಿಂದ ಮುಂದಿನ ಆರ್ಥಿಕತೆ (Finance) ಸೇರಿದಂತೆ ಇತರ ವಿವಿಧ ವಿಚಾರಗಳ ಚರ್ಚೆಯನ್ನು ಮಾಡಲು ಅನುಕೂಲವಾಗುತ್ತದೆ.ಸಾಂಸ್ಥಿಕ ಸಿದ್ಧಾಂತಗಳ ಬಗ್ಗೆ ಮುಂದುವರಿಯುವ ಮುಂಚೆ ಮೊದಲು ನಾವು “ಸಂಸ್ಥೆ” ಎನ್ನುವುದರ ವ್ಯಾಖ್ಯಾನ ಮಾಡಿಕೊಂಡು ಅರಿತು ಮುಂದುವರಿಸೋಣ. ಇಂದಿನ ಅಂಕಣದಲ್ಲಿ ಈ ಬಗ್ಗೆಯೇ ತಿಳಿಯೋಣ.ಪ್ರತಿ ದಿನ ನಾವು ಬೇರೆ ಬೇರೆ ರೀತಿಯ ಸಂಸ್ಥೆಗಳನ್ನು ನಾವು ಕೇಳುತ್ತೇವೆ, ಅವು ಶಾಲೆಗಳು, ಆಸ್ಪತ್ರೆಗಳು, ಇನ್ಫೋಸಿಸ್ ಇತ್ಯಾದಿ. ಇವೆಲ್ಲವೂ ಕೆಲವು ಅಂಶಗಳನ್ನು ಸಾಮಾನ್ಯವಾಗಿ ಹೊಂದಿದೆ. ಅವುಗಳು೧. ಸಾಮಾಜಿಕವಾದ ಒಂದು ಘಟಕ೨. ಗುರಿಯ ಕಡೆಗೆ ನಡೆಯುವುದು.೩. ಒಂದು ಕ್ರಮ ಬದ್ಧ ಮತ್ತು ಸಮನ್ವಯ ಹೊಂದಿರುವ ಚಟುವಟಿಕೆಗಳಿಂದ ರೂಪಿಥವಗಿರುವುದು.೪. ಹೊರಗಿನ ಪರಿಸರದೊಂದಿಗೆ ಸಂಬಂಧವನ್ನು ಹೊಂದಿರುವುದು.ಸಾಮಾನ್ಯವಾಗಿ ಎಲ್ಲ ಸಂಸ್ಥೆಗಳು ತಮ್ಮದೇ ಅದೇ ನೀತಿ ನಿಯಮಾವಳಿಗಳನ್ನು ಹೊಂದಿರುವುದು. ಈ ಮೂಲಕ ತಮ್ಮ ಕಾರ್ಯ ಕ್ಷೇತ್ರವನ್ನು ಹಿರಿದು ಮಾಡಿಕೊಂಡು ಅಭಿವೃದ್ಧಿ ಹೊಂದುವುದು. ಹೀಗಿದ್ದರೂ ಅದರಲ್ಲಿರುವ ವ್ಯಕ್ತಿಗಳೇ ಒಂದು ಸಂಸ್ಥೆಯನ್ನು ನಿಜವಾಗಿ ನಡೆಸುವವರು. ಅವರ ನಡುವಿನ ವ್ಯವಹಾರ, ಸಂಬಂಧಗಳು, ಚಟುವಟಿಕೆಗಳು ಇತ್ಯಾದಿ ಎಲ್ಲ ಸೇರಿ ಒಂದು ಗುರಿಯೆಡೆಗೆ ಸಾಗಿ ಪಡೆಯಲು ಸಾಧ್ಯವಾಗುವುದು. ಈ ಕುರಿತಾಗಿಯೇ ಸಾಂಸ್ಥಿಕ ಸಿದ್ಧಾಂತವು ಇರುವುದು.ಇನ್ನು ಮುಂದಿನ ಅಂಕಣಗಳಲ್ಲಿ ಈ ಬಗ್ಗೆಯೇ ನೋಡೋಣ.ಆಂಗ್ಲ ಅಂಕಣ:http://somanagement.blogspot.com/2011/09/organization-theory-1.html -
ಹಣಕಾಸು ವ್ಯವಸ್ಥೆ ಮತ್ತು ನಿರ್ವಹಣೆ – ೩೯
ಈ ಹಿಂದಿನ ಅಂಕಣದಲ್ಲಿ ನಾವು cost accounting ಬಗ್ಗೆ ಚರ್ಚಿಸಲು ಆರಂಭಿಸಿದೆವು. ಜೊತೆಗೆ ನಾವು ಯಾವುದೇ ಮುಖ್ಯವಾದ ಮತ್ತು ಸಂಕೀರ್ಣವಾದ ವಿಷಯದ ಚರ್ಚಾ ಸರಣಿಯಲ್ಲಿ, ಕೆಲವೊಮ್ಮೆ ಮಾರ್ಗವನ್ನು ಬಿಟ್ಟು ಆ ವಿಷಯಕ್ಕೆ ಪೂರಕವಾದ ಇತರ ವಿಷಯಗಳನ್ನು ಅರಿತು ಮುಂದುವರಿಯುವೆವು ಏನು ತಿಳಿಸಿದ್ದೆವು. ಇಂದಿನ ಅಂಕಣದ್ದಲ್ಲಿ cost accounting ನ ಉದ್ದೇಶ ಏನು ಎಂಬುದನ್ನು ಅರಿಯುವ ಯತ್ನ ಮಾಡೋಣ.ಈ ಅಂತರ್ಜಾಲದ ಮೂಲದನ್ವಯ ಒಂದು ವ್ಯವಹಾರ ಸಂಸ್ಥೆಯ Cost accounting ಎಂದರೆ general or financial accounting ನ ಒಂದು ಹಿರಿದು ಮಾಡಿದ ಭಾಗ. ಇದು ಮೂಲಕ ಕಂಪನಿಯ ಮ್ಯಾನೇಜ್ಮೆಂಟ್ ಗೆ ಪ್ರಾಮಾಣಿಕವಾಗಿ ಪ್ರತಿ ಉತ್ಪತ್ತಿ ಅಥವಾ ಕೊಡುವ ಸೇವೆಯ ಉತ್ಪಾದನೆಯ ವೆಚ್ಚ ಅಥವಾ ಮಾರಾಟದ ಒಟ್ಟು ವೆಚ್ಚದ ಬಗ್ಗೆ ಮಾಹಿತಿಯನ್ನು ನಿಖರವಾಗಿ ಕೊಡುವುದು.ಹೀಗಾಗಿ ಈ ಕೆಳಗಿನವುಗಳು Cost accounting ನ ಪ್ರಮುಖ ಉದ್ದೇಶಗಳು
೧. ಮಾರಾಟದ ಬೆಲೆಯನ್ನು ನಿರ್ಧರಿಸುವುದು.
೨. ಖರ್ಚನ್ನು ಹಿಡಿತದಲ್ಲಿಡಲು.
೩. ನಿರ್ಧಾರ ತೆಗೆದು ಕೊಳ್ಳಲು ಅಗತ್ಯವಾದ ಮಾಹಿತಿಗಳನ್ನು ನೀಡಲು.
೪. ಖರ್ಚಿಗೆ ತಕ್ಕಂತಹ ಲಾಭವನ್ನು ಖಚಿತಗೊಳಿಸಲು.
೫. ಆರ್ಥಿಕ ಮತ್ತಿತರ ಹೇಳಿಕೆಗಳನ್ನು ತಯಾರು ಮಾಡಲು ಸಹಕಾರವಾಗುವುದು.ನಾವು ನಮ್ಮ ಮೊದಲನೇ ಅಂಕಣದಲ್ಲಿ ಹೇಳಿದಂತೆ ಮ್ಯಾನೇಜ್ಮೆಂಟ್ ಅನ್ನುವುದು ನಿರ್ಧಾರ ತೆಗೆದುಕೊಳ್ಳುವದರ ಮೇಲೆಯೇ ತುಂಬಾ ಅವಲಂಬಿತವಾಗಿರುವುದರಿಂದ ಈ ಕೆಳಗೆ ನಾವು Cost accounting ನಿಂದ ಮ್ಯಾನೇಜ್ಮೆಂಟ್ ಗೆ ಯಾವ ರೀತಿಯಲ್ಲಿ ನಿರ್ಧಾರ ತೆಗೆದುಕೊಳ್ಳಲು ಸಹಕಾರ ವಾಗುವುದು ಎಂಬುದಿದೆ.
೧. ಖರ್ಚು- ಗಾತ್ರ – ಲಾಭ ಇವುಗಳ ನಡುವಿನ ಸಂಬಂಧಗಳನ್ನು ನಿರ್ಧರಿಸಲು
೨. ಉತ್ಪಾದಿಸು ಅಥವಾ ಖರೀದಿಸು ಎನ್ನುವುದರ ನಿರ್ಧಾರ.
೩. ನಷ್ಟದ ಸಮಯದಲ್ಲಿ ಮುಚ್ಚಬೇಕೋ ಅಥವಾ ಮುಂದುವರಿಸಬೇಕೋ ಎನ್ನುವದನ್ನು ನಿರ್ಧರಿಸಲು.
೪. ಈಗಿರುವ ಯಂತ್ರೋಪಕರಣಗಳನ್ನು ಉತ್ಪಾದನೆಗೆ ಮುಂದುವರಿಸುವುದೋ ಅಥವಾ ಇನ್ನು ಅಧುನಿಕ ಮತ್ತು ಲಾಭದಾಯಕ ಯಂತ್ರಗಳಿಂದ ಅವುಗಳನ್ನು ಬದಲಾಯಿಸುವ ನಿರ್ಧಾರ.ಆಂಗ್ಲ ಅಂಕಣ:
http://somanagement.blogspot.com/2011/09/finance-and-management-39.html -
ಹಣಕಾಸು ವ್ಯವಸ್ಥೆ ಮತ್ತು ನಿರ್ವಹಣೆ – ೩೮
ಈ ಹಿಂದಿನ ಸಂದೇಶದಲ್ಲಿ ಹೇಳಿದಂತೆ ನಾವು ಈ cost accounting ವಿಚಾರಗಳನ್ನು ಮುಂದುವರಿಸುವೆವು. ಆದರೆ ಇದರೊಂದಿಗೆ ಸಂಸ್ಥೆ ಮತ್ತು ಅದರೊಳಗಿನ ವ್ಯವಸ್ಥೆಯ ನಿರ್ವಹಣೆ ಕಾರ್ಯ ಶೈಲಿ ಇತ್ಯಾದಿಗಳನ್ನು ಅರಿಯುವ ಅಗತ್ಯವಿದೆ. ಇದರಿಂದ cost accounting ನ್ನು ಉಪಯುಕ್ತತೆ ಅರಿವಾಗುವುದು. ಇಂದಿನ ಅಂಕಣದಲ್ಲಿ ನಾವು cost accounting. ನ ಅಗತ್ಯತೆಯ ಬಗ್ಗೆ ತಿಳಿಯೋಣ.ನಾವು ಹಿಂದೆಯೇ ಹೇಳಿದಂತೆ ಮ್ಯಾನೇಜ್ಮೆಂಟ್ ಅನ್ನುವುದು ಕೊನೆಗೆ ಎಲ್ಲದಾಗಿ ನಿರ್ಧಾರ ಮಾಡುವ ಕಲೆ.ಎಲ್ಲ ರೀತಿಯ ಮ್ಯಾನೇಜ್ಮೆಂಟ್ ನ ಮುಖ್ಯತೆ ಗಳೆಲ್ಲವೂ ಒಬ್ಬ ಮ್ಯಾನೇಜರ್ ನ ಗೊಂದಲಗಳನ್ನು ಕಡಿಮೆ ಮಾಡಿ ನಿರ್ಧಾರ ಮಾಡಲು ಸಹಾಯ ಮಾಡುತ್ತದೆ. ನಾವು ಮೊದಲಿಗೆ ಸಾಮಾನ್ಯ ಅಕೌಂಟಿಂಗ್ ನ್ನು ಮ್ಯಾನೇಜರ್ ನ ಸಹಾಯ ಸಾಧನವೆಂದು ಪರಿಗಣಿಸಿ ಅದರಿಂದ ಹೇಗೆ ಉಪಯೋಗವಯಿತೆಂದು ನೋಡಿದೆವು. ಇಂದು ನಾವು ಇನ್ನು ಸೂಕ್ತವಾದ ವ್ಯವಸ್ಥಾಪಕ ಸಾಧನವಾದ cost accounting ನ ಕಡೆಗೆ ಮುನ್ನಡೆಯುತ್ತಿದ್ದೇವೆ. ಇದು ಮ್ಯಾನೇಜರ್ ಗಳಿಗೆ ಒದಗಿಸುವ ಸಹಾಯದ ಕಾರಣದಿಂದ ಇದನ್ನು ಸಾಮಾನ್ಯವಾಗಿ managerial accounting ಎಂದೂ ಕರೆಯುವರು. ಇವೆರಡರ ನಡುವೆ ವ್ಯತ್ಯಾಸಗಳಿದ್ದರೂ ಎಲ್ಲ ರೀತಿಯ ಬಳಕೆಗೆ ಇವೆರಡನ್ನೂ ಒಂದೇ ಎಂದು ಪರಿಗಣಿಸಬಹುದು.ಕಂಪನಿಯ ಖರ್ಚಿನ ಬಗೆಗಿನ ಮಾಹಿತಿ ಮ್ಯಾನೇಜರ್ ಗಳಿಗೆ ಅತ್ಯಂತ ಮುಖ್ಯವಾದ ಮಾಹಿತಿ. ಮ್ಯಾನೇಜರ್ ಗಳು ತಮ್ಮ ಕಂಪನಿಯ ಬಗ್ಗೆ ನಿರ್ಧಾರಗಳನ್ನು ತೆಗೆದುಕೊಳ್ಳುವರೆ ಹೊರತು ಇತರ ಕಂಪನಿಗಳ ಬಗ್ಗೆ ಅಲ್ಲ, ಹೀಗಾಗಿ ಇತರ ಕಂಪನಿಗಳ ಬಗೆಗಿನ ಮಾಹಿತಿಯ ಅಗತ್ಯವಿರದು. ಈ ಆಸಕ್ತಿಗೆ ಮೂಲಭೂತ ಕಾರಣ, ಕಂಪನಿಯ ಖರ್ಚು, ಕಂಪನಿಯ ಗ್ರಾಹಕರಿಗೆ ಏನನ್ನು ಯಾವ ಬೆಲೆಯಲ್ಲಿ ಕೊಡುವಿರಿ ಎಂಬುದನ್ನು ನಿರ್ಧರಿಸುತ್ತದೆ, ಮತ್ತೆ ಇದು ಕಂಪನಿಯ ಲಾಭವನ್ನು ಕೂಡ ನಿರ್ಧರಿಸುತ್ತದೆ.ಇದೆ ಚರ್ಚೆಯನ್ನು ಇನ್ನು ಮುಂದಿನ ಅಂಕಣಗಳಲ್ಲಿ ಮುಂದುವರಿಸೋಣ. ಆ ಮೂಲಕ ಚೆನ್ನಾಗಿ ಅರಿಯುವ ಯತ್ನ ಮಾಡೋಣ.ಆಂಗ್ಲ ಅಂಕಣ:http://somanagement.blogspot.com/2011/09/as-mentioned-in-last-message-we-would.html -
ಹಣಕಾಸು ವ್ಯವಸ್ಥೆ ಮತ್ತು ನಿರ್ವಹಣೆ – ೩೭
ಈ ಹಿಂದಿನ ಅಂಕಣದಲ್ಲಿ ನಾವು CFS. ನ್ನು ಅರ್ಥಮಾಡಿಕೊಳ್ಳಲು ಆರಂಭಿಸಿದೆವು. ಇಂದಿನ ಅಂಕಣದಲ್ಲಿ ಕೂಡ ಅದನ್ನೇ ಮುಂದುವರಿಸೋಣ.ಹಣದ ಹರಿವಿಕೆ ಕಾರ್ಯ ನಿರ್ವಹಣೆ, ಹೂಡಿಕೆ, ಆರ್ಥಿಕ ಇವು ಮೂರು ವಿಧವಾಗಿ ವಿಂಗಡಿಸಬಹುದೆಂದು ಅರಿತೆವು. ಇವುಗಳ ಪ್ರಮಾಣವು ಎಷ್ಟಿದೆ ಅನ್ನುವುದರಿಂದ ಕಂಪನಿಯು ಹೇಗೆ ನಡೆಯುತ್ತಿದೆ ಎಂಬುದು ಗೊತ್ತಾಗುವುದು. ಕಂಪನಿಯ ಕಾರ್ಯ ನಿರ್ವಹಣೆಯಿಂದಲೇ ದೊಡ್ಡ ಪ್ರಮಾಣದ ಹಣದ ಹರಿವು ಇದ್ದರೆ, ಕಂಪನಿಯ ಕೆಲಸ ಕಾರ್ಯಗಳು ಕಂಪನಿಗೆ ಸೂಕ್ತವಾದ ಹಣದ ಆದಾಯವನ್ನು ನೀಡುತ್ತಿದೆ ಮತ್ತು ಕಂಪನಿಗೆ ಅಗತ್ಯವಾದ ಹೊಸ ವಸ್ತುಗಳ ದಾಸ್ತಾನುಗಳನ್ನೂ ಹೊಂದಲು ಇದರಿಂದ ಸಾಧ್ಯವಿದೆ ಎಂದು. ಒಬ್ಬ ಹೂಡಿಕೆದಾರನು ಕಂಪನಿಯ ಹಣದ ಒಳ ಹರಿವು ಕಂಪನಿಯ ಮೇಲಿನ ಸಾಲ ಅಥವಾ ಬಾಕಿ ಸಂದಾಯಗಳನ್ನು ತೀರಿಸಲು ಆಗುವಷ್ಟು ಇರಬೇಕೆಂದು ಬಯಸುವನು.ಇದರಲ್ಲಿ ಇನ್ನೊಂದು ಸೂಕ್ಷ್ಮವನ್ನು ಅರಿಯಬೇಕೆನೆಂದರೆ, ಕೊನೆಯಲ್ಲಿ ಸಿಗುವ ಹಣದ ಹರಿವಿಕೆ ಹೆಚ್ಹಾಗಿ ಒಳ್ಳೆಯದಾಗಿ ಇರುವುದಿಲ್ಲ. ಇದು ಋಣಾತ್ಮಕ ವಾಗಿ ಕೂಡ ಇರಬಹುದು.ಆದರೆ ಋಣಾತ್ಮಕ ವಾದ ಹಣದ ಹರಿವಿಕೆಯನ್ನು ಒಳ್ಳೆಯ ಲಕ್ಷಣವಲ್ಲ ಎಂದು ಕೇವಲ ಸಂಖ್ಯೆ ನೋಡಿ ಹೇಳಲಾಗದು. ಕಂಪನಿಯ ವಿಸ್ತರಿಸುವ ಯೋಜನೆಯಿಂದ ಕೂಡ ಋಣಾತ್ಮಕ ಹಣದ ಹರಿವು ಆಗಿರಬಹುದು, ಇದನ್ನು ಸರಿಯಾಗಿ ಗಮನಿಸಬೇಕು. ಅದು ಹಾಗಾಗಿದ್ದಲ್ಲಿ ಇದು ಕಂಪನಿಗೆ ಒಳಿತಾಗಿಯೇ ಇರುವುದು, ಏಕೆಂದರೆ ಹಣದ ಹರಿವು ಆಗಿರುವ ಕಾರಣ. ಹಾಗಾಗಿ ಹೂಡಿಕೆದಾರನು ಮೊದಲು ಹಣದ ಹರಿವಿಕೆ ಹೇಳಿಕೆಯನ್ನು ಕೂಲಂಕುಶವಾಗಿ ಗಮನಿಸುವ ಮೊದಲು ಯಾವುದೇ ನಿರ್ಧಾರಕ್ಕೆ ಬರಬಾರದು.ಆಂಗ್ಲ ಅಂಕಣ:
http://somanagement.blogspot.com/2011/08/finance-and-management-37.html -
ಹಣಕಾಸು ವ್ಯವಸ್ಥೆ ಮತ್ತು ನಿರ್ವಹಣೆ – ೩೬
ಈ ಹಿಂದಿನ ಅಂಕಣದಲ್ಲಿ EBITDA. ಬಗ್ಗೆ ನೋಡಿದೆವು. ಇಂದಿನ ಅಂಕಣದಲ್ಲಿ ನಾವು ಹಣದ ಹರಿಯುವಿಕೆಯ ಹೇಳಿಕೆಯ (cash flow statements) ಬಗ್ಗೆ ಅರಿಯೋಣ.PnL account or Balance ಶೀಟ್ ಗಳು ಕಂಪನಿಯ ಒಳಗೆ ಕಾರ್ಯ ನಿರ್ವಹಿಸುವ ಹಣದ ಬಗ್ಗೆ ಸರಿಯಾಗಿ ಹೇಳಲು ಅಸಮರ್ಥವಾಗುವುದು. ಇದನ್ನು ಅರಿಯಲು ಇರುವ ಉತ್ತಮ ಸಾಧನವೇ “Cash Flow Statement” (CFS). CFS, ಬ್ಯಾಲೆನ್ಸ್ ಶೀಟ್ ನಲ್ಲಿನ ಅಕೌಂಟ್ ನ ಬದಲಾವಣೆಗಳು ಮತ್ತು ಆದಾಯದ ಅಕೌಂಟ್ ನ ಬದಲಾವಣೆಗಳಿಂದ ಹಣ ಅಥವಾ ಹಣಕ್ಕೆ ಸಮನಾಂತರವಾದವುಗಳಿಗೆ ಆಗುವ ಪರಿಣಾಮ, ಮತ್ತು ಇದು ವಿಶ್ಲೇಷಣೆಯನ್ನು ಮೂರು ಭಾಗಗಳಾಗಿ ವಿಭಜಿಸುವುದು. ಕಾರ್ಯ ನಿರ್ವಹಣೆ, ಹೂಡಿಕೆ, ಆರ್ಥಿಕ (operating, investing, and financing ) ವೆಂದು. ಇದು ಕಂಪನಿಯ liquidity ನ್ನು ಹೇಳುವುದು.ಹಣದ ಹರಿವಿಕೆಯನ್ನು ತಿಳಿಯಲು ಈ ೩ ವಿಚಾರಗಳಿಂದ ಬರುವ ಹಣವನ್ನು ತಿಳಿದರೆ ಸಿಗುವುದು.೧. ಕಾರ್ಯ ನಿರ್ವಹಣೆ operating೨. ಹೂಡಿಕೆ investing,೩. ಆರ್ಥಿಕ financing೧. ಕಾರ್ಯ ನಿರ್ವಹಣೆ operating: ಸಾಮಾನ್ಯವಾಗಿ ಕಂಪನಿಯ ಹಣ, accounts receivable, depreciation, inventory and accounts payable ಗಳಲ್ಲಿ ಮಾಡಿದ ಬದಲಾವಣೆಗಳು ಇಲ್ಲಿ ಪ್ರತಿಫಲಿತವಾಗುವುದು.೨. ಹೂಡಿಕೆ investing: ಕಂಪನಿಯ ಆಸ್ತಿ ಅಥವಾ ಹಣದ ಒಡನೆ ಸಂಬಂಧವಿರುವ ಹೂಡಿಕೆ, ಯಂತ್ರೋಪಕರಣಗಳು ಗಳಲ್ಲಿನ ಬದಲಾವಣೆ.೩. ಆರ್ಥಿಕ financing : ಕಂಪನಿಯ ಸಾಲಗಳು, ಇತರ ಬಾಕಿ ಸಂದಾಯಗಳು, ಡಿವಿಡೆಂಡ್ ಗಳಲ್ಲಿನ ಬದಲಾವಣೆ.ಆಂಗ್ಲ ಅಂಕಣ:http://somanagement.blogspot.com/2011/08/finance-and-management-36.html -
ಹಣಕಾಸು ವ್ಯವಸ್ಥೆ ಮತ್ತು ನಿರ್ವಹಣೆ – ೩೫
ಈ ಹಿಂದಿನ ಅಂಕಣದಲ್ಲಿ ನಾವು PnL ನ ಎಲ್ಲ ಶೀರ್ಷಿಕೆಗಳ ಬಗ್ಗೆ ಅರಿಯುವುದನ್ನು ಮುಗಿಸಿದೆವು. ಇಂದು ನಾವು ಐ. ಟಿ. ಉದ್ಯಮದಲ್ಲಿ ಲಾಭಾಂಶದ ಬಗ್ಗೆ ಹೆಚ್ಚಾಗಿ ಉಪಯೋಗಿಸುವ ಪ್ರಸಿದ್ಧ EBITDA ಬಗ್ಗೆ ತಿಳಿಯೋಣ.ಹಿಂದಿನ ಅಂಕಣದಿಂದ ನಮಗೆ EBIT ಎಂದರೆ ತೆರಿಗೆ ಮತ್ತು ಬಡ್ಡಿಯ ಮೊದಲಿನ ಆದಾಯ “Earnings before Interest and Taxes”; ಎಂದು ಗೊತ್ತಿದೆ. EBITDAನ ವಿವರಣೆ ಕೂಡ ಇದೇ ರೀತಿಯದ್ದಾಗಿರುತ್ತದೆ, ಇದರೊಂದಿಗೆ depreciation and amortization ಸೇರಿಸೋಣ. ಇದು ಲಾಭಾಂಶವನ್ನು ಅಳೆಯಲು ತುಂಬಾ ಅನುಕೂಲಕರವಾದ ಸಾಧನವೆಂದು ಉದ್ಯಮಗಳ ಜಗತ್ತಿನಲ್ಲಿ ಪ್ರಚಲಿತವಾಗಿದೆ. EBITDA ನ್ನು ಪಡೆಯಲು ನಿವ್ವಳ ಲಾಭವನ್ನು ತೆಗೆದು ಕೊಂಡು ಅದಕ್ಕೆ ಬಡ್ಡಿ ಮತ್ತು ತೆರಿಗೆ, depreciation and amortization ಗಳನ್ನು ಪುನಃ ಸೇರಿಸಬೇಕು.ಆದರೆ EBITDA ನ ಪರ ಮತ್ತು ವಿರೋಧವಾದ ಎರಡೂ ಚರ್ಚೆಗಳಿವೆ.ವಿರೋಧವಾದ ಅಂಶಗಳು ಹೀಗಿವೆ:೧. ಆದಾಯ , ತೆರಿಗೆ,depreciation and amortization ಇವೆಲ್ಲವನ್ನೂ ತೆಗೆದು ಕೊಳ್ಳುವುದರಿಂದ ಲಾಭವಿಲ್ಲದ ಕಂಪನಿಯು ಕೂಡ ಆರ್ಥಿಕವಾಗಿ ಉತ್ತಮವಾಗಿದೆ ಎಂದು ಭಾಸವಾಗುವುದು.೨. ಇದನ್ನು ಸುಲಭವಾಗಿ ಬದಲಾಯಿಸಬಹುದು. ವಂಚಿಸುವ ರೀತಿಯ ಅಕೌಂಟ್ ಅಭ್ಯಾಸಗಳನ್ನು ಇಟ್ಟುಕೊಳ್ಳುವುದರಿಂದ ಕಂಪನಿಗಳನ್ನು ಬಹಳ ಉತ್ತಮವಾಗಿ ಬಿಂಬಿಸಬಹುದು.ಆದರೆ ಇದರ ಪರ ಇರುವ ಅಂಶಗಳು:೧. ಇದನ್ನು ಉಪಯೋಗಿಸಿ ಸರಳವಾದ ಹತ್ತಿರದ ದಾರಿಯಿಂದ ಹಣದ ಹರಿವಿಕೆಯನ್ನು ಅಳೆಯಬಹುದು, ಇದರಿಂದ ಧೀರ್ಘ ಕಾಲೀನ ಸಾಲಗಳನ್ನು ತೀರಿಸಲು ಉಪಯೋಗಿಸಬಹುದು.೨. ಇದನ್ನು ಕಂಪನಿಗಳ ನಡುವಣ ಹೋಲಿಕೆಗೆ ಉಪಯೋಗಿಸಬಹುದು ಹಾಗು ಉದ್ಯಮದ ದರ್ಜೆಗೆ ಸಮವಾಗಿರುವುದನ್ನು ಹೋಲಿಸಬಹುದು.೩. ಇದರಲ್ಲಿ ಹೆಚ್ಚಿನ ಅಗತ್ಯವಿಲ್ಲದ ಅಂಶಗಳನ್ನು ತೆಗೆಯುವುದರಿಂದ,ಇದು ನಿಜವಾದ ಒಳಗಿನ ಲಾಭದ ಬಗ್ಗೆ ಹೇಳುವುದು. ಹಾಗಾಗಿ ಸಮಾನ ರೀತಿಯ ಹೋಲಿಕೆಗೆ ಸಾಧ್ಯವಾಗುವುದು.೨ ತುಂಬಾ ಆಸಕ್ತಿದಾಯಕ ವಿಚಾರಗಳನ್ನು ಇದರಿಂದ ಪಡೆಯಬಹುದು.Measure of Debt’s payback period = Debt/EBITDAInterest coverage ratio = EBITDA /Interest Expenseಆಂಗ್ಲ ಅಂಕಣ:http://somanagement.blogspot.com/2011/08/finance-and-management-35.html