Blog

  • Finance and Management – 21

    In the last blog, we read about dividends; in this blog, we would give an introduction to the concept of preference shares and list the type of preference shares. We would deal with a brief on each of the different types of preference shares in the next few blogs.
    In addition to the equity capital, companies are allowed to also gather preference capital. The holders of preference capital enjoy preference over equity holders in two matters
    1. Payment of periodic dividends
    2. Distribution of assets on liquidation of the company
    The preference share carries a fixed rate of dividend which is payable when the company has earned adequate profits and when the dividends are declared in the company’s annual general meeting. At the time of liquidation, assets of the company that remain after paying the creditors’ must be utilized to pay the preference shareholders and after this if some assets still remain, it would be distributed amongst the equity holders.
    There are number of varieties of preference shares, some of them are:
    1. Cumulative and Non-Cumulative Preference Shares
    2. Participating and non-participating preference shares
    3. Redeemable and non-redeemable preference shares
    4. Convertible and non-convertible preference shares
    Read in Kannada:

    http://somanagement.blogspot.com/2011/08/blog-post_173.html
  • Finance and Management – 20

    In the last blog, we learnt about par value. In today’s blog, we move ahead to learn about “Dividends”.
    Simply put, Dividend is a distribution of cash to shareholders. The board of directors of a company recommends payment of the dividends and then this is approved by the shareholders at the annual general body meeting. A dividend declared by the board during the year is called Interim Dividend. Ordinarily, the dividend cannot exceed the total of the current and past profits of the company.
    Dividends are generally expressed as percentage of the paid up share capital or so many rupees per share. Dividends are paid by means of dividend warrant, and this is a special cheque, it cannot be paid in kind.
    What is important to note is that, it wouldn’t be right to consider any return on business in excess to the profits as a dividend; it is merely return of the capital invested. The company should note that when it pays dividends, the cash outgo doesn’t affect the normal operations, else it would be catastrophic.
    Read in Kannada:

    http://somanagement.blogspot.com/2011/08/blog-post_3190.html
  • ಹಣಕಾಸು ವ್ಯವಸ್ಥೆ ಮತ್ತು ನಿರ್ವಹಣೆ – ೧೫

    ಹಿಂದಿನ ಅಂಕಣದಲ್ಲಿ ನಾವು ಶೀಘ್ರ ಅನುಪಾತದ ಬಗ್ಗೆ ನೋಡಿದೆವು. ಇಂದು ನಾವು ಇನ್ನ್ದೊಂದು ಆರ್ಥಿಕ ಸಂವಹನವನ್ನು ಅಲೆಯುವ ಅನುಪಾತವನ್ನು ಅರಿಯೋಣ. – ಹಣದ ಅನುಪಾತ

    ಹಣದ ಅನುಪಾತ = (ಹಣ + ಹಣಕ್ಕೆ ಸಮಾನವಾದುದು + ಯೋಜಿಸಿದ ಬಂಡವಾಳ)/ಚರ ಬಾಧ್ಯತೆ

    ಹಣದ ಅನುಪಾತವು ಹಿಂದಿನ ಅನುಪಾತಕ್ಕಿಂತ ಹೆಚ್ಚು ಸ್ಪಷ್ಟವಾಗಿ ತೀಕ್ಷ್ಣವಾದ ಅನುಪಾತ, ಏಕಂದರೆ ಇದು ನೇರ ಕಂಪನಿಯಲ್ಲಿರುವ ಹಣದ ಆಧಾರದ ಮೇಲೆ ನಿಂತಿದೆ. ಸರಕುಗಳ ಮೌಲ್ಯದ ಮೇಲು ಅಲ್ಲ, ಬರಲಿರುವ ಆದಾಯಗಳ ಮೇಲು ಅಲ್ಲ. ಹಣ ಕಂಪನಿಯ ಅತ್ಯಂತ ಸಂವಹನ ಶೀಲವಾದ ಆಸ್ತಿ ಹಾಗಾಗಿ ಅನುಪಾತವು ಇನ್ನು ನೇರವಾಗಿ ಕಂಪನಿಯ ಸದ್ಯ ಆರ್ಥಿಕ ಬಾಧ್ಯತೆಯನ್ನು ತೀರಿಸಲಿರುವ ಸಾಮರ್ಥ್ಯದ ಬಗ್ಗೆ ಹೇಳುವುದು.

    ಅರ್ಥದಲ್ಲಿ ಹಣದ ಅನುಪಾತವು : ಇರುವುದನ್ನು ಬಯಸಬೇಕೇ? ಇಲ್ಲ. ಹಣದ ಅನುಪಾತ : ಇದ್ದಲ್ಲಿ ಸದ್ಯದ ಆರ್ಥಿಕ ಬಾಧ್ಯತೆಗಳನ್ನು ಈಗಿನ ಹಣದ ಆಗರದ ಮೂಲಕ ತೀರಿಸುವುದು ಎಂದು, ಮತ್ತು ಹೀಗಿದ್ದಲ್ಲಿ ಇದನ್ನು ಖಂಡಿತವಾಗಿ ಕಂಪನಿಯ ಉತ್ತಮ ಪರಿಸ್ಥಿತಿಯೆಂದು ಹೇಳಲಾಗದು. ಹಣದ ಕೊರತೆಯನ್ನು ಕಂಪನಿಯು ತನ್ನ ಆಸ್ತಿಗಳನ್ನು ಲೆಕ್ಕ ಪತ್ರದಲ್ಲಿ ದೊಡ್ಡ ಮೊತ್ತದ ಹಣದ ತೋರಿಸಲುಸರಿಯಾಗಿ ಬಳಸಿಕೊಳ್ಳುತ್ತಿಲ್ಲ ಎಂದು ಅರ್ಥೈಸಬಹುದು. ಅಲ್ಲದಿದ್ದಲ್ಲಿ ಹಣವನ್ನು ಶೇರುದಾರರಿಗೆ ಹಿಂದುಗಿರುಸಬಹುದಿತ್ತು ಅಥವಾ ಇನ್ನು ಹೆಚ್ಚಿನ ಆದಾಯ ಗಳಿಸಲು ಬೇರೆಡೆ ವಿನಿಯೋಗಿಸಬಹುದಿತ್ತು.

    ಅನುಪಾತವು ಕಂಪನಿಯ ಆರ್ಥಿಕ ಸಂವಹನದ ಬಗ್ಗೆ ನೇರವಾಗಿ ಹೇಳಿದರೂ ಇದರ ಉಪಯೋಗವನ್ನು ಮಿತಿಯಾಗಿ ಮಾಡುವರು.

    ಆಂಗ್ಲ ಅಂಕಣ:
    http://somanagement.blogspot.com/2011/07/finance-and-management-15.html

  • ಹಣಕಾಸು ವ್ಯವಸ್ಥೆ ಮತ್ತು ನಿರ್ವಹಣೆ – ೧೪

    ಹಿಂದಿನ ಅಂಕಣದಲ್ಲಿ ಚರಅನುಪಾತದ ಬಗ್ಗೆ ನೋಡಿದೆವು. ಇಂದಿನ ಅಂಕಣದಲ್ಲಿ ನಾವುಶೀಘ್ರ ಅನುಪಾತಬಗ್ಗೆ ಅರಿಯೋಣ.

    ಶೀಘ್ರ ಅನುಪಾತ = (ಚರ ಆಸ್ತಿಸರಕುಗಳ ಮೌಲ್ಯ) / ಚರ ಬಾಧ್ಯತೆ

    ಇದನ್ನು ಆಮ್ಲ ಪರೀಕ್ಷೆಯ ಅನುಪಾತ ವೆಂದು ಕರೆಯುವರು.

    ಚರ ಅನುಪಾತದ ಬಗ್ಗೆ ವಿವರಿಸುವಾಗ ನಾವು ಪೂರ್ತಿಯ ಚರ ಆಸ್ತಿಯ ಮೌಲ್ಯವನ್ನು, ಸದ್ಯದ ಚರ ಬಾಧ್ಯತೆಯನ್ನು ತೀರಿಸಲು ಎಷ್ಟಿದೆ ಎಂದು ನೋಡಿದ್ದೆವು. ಇದು ಕಂಪನಿಯ ಕಡಿಮೆ ಅವಧಿಯ ಆರ್ಥಿಕ ಸಂವಹನದ ಬಗ್ಗೆ ಹೇಳುವುದು. ಆದರೆ ಮೇಲಿನ ರೀತಿಯಲ್ಲಿ ನಮಗೆ ಅರಿವಾಗುವುದು ಏನೆಂದರೆ ಸದ್ಯದ ಆರ್ಥಿಕ ಬಾಧ್ಯತೆಯನ್ನು ನೀಗಿಸಲು, ಮಾರಾಟದ ಚಕ್ರವು ಹೆಚ್ಚಿನ ಸಮಯ ಹೊಂದಿರುವ ಉದ್ಯಮಗಳಲ್ಲಿ ಮಾರಟಕ್ಕೆ ತಯಾರಾಗಿರುವ ಸರಕಿನಿಂದ ಹಣವನ್ನು ಬೇಗ ಪಡೆಯಲು ಸಾಧ್ಯವಿಲ್ಲ.

    ಹೀಗಿರುವಾಗ ಸರಕಿನ ಮೌಲ್ಯವನ್ನು ತೆಗೆದು ಹಾಕಿದಾಗ ಸಿಗುವ ಅನುಪಾತವು ಕಂಪನಿಯ ಕಡಿಮೆ ಅವಧಿಯ (ಸದ್ಯದ) ಆರ್ಥಿಕ ಸಂವಹನವನ್ನು ಅರಿಯಬಹುದು. ಹಾಗಾಗಿ ಶೀಘ್ರ ಅನುಪಾತ / ಆಮ್ಲ ಪರೀಕ್ಷೆಯ ಅನುಪಾತ ಕಂಪನಿಯ ಕಡಿಮೆ ಅವಧಿಯ ಆರ್ಥಿಕ ಸಂವಹನ ಹಾಗೆ ಕಂಪನಿಯ ಕಡಿಮೆ ಅವಧಿಯ (ಸದ್ಯದ) ಆರ್ಥಿಕ ಬಾಧ್ಯತೆಯನ್ನು ತೀರಿಸುವ ಸಾಮರ್ಥ್ಯವನ್ನು ತಿಳಿಸುವುದು.

  • ಹಣಕಾಸು ವ್ಯವಸ್ಥೆ ಮತ್ತು ನಿರ್ವಹಣೆ – ೧೩

    ಹಿಂದಿನ ಅಂಕಣದಲ್ಲಿ ನಾವು ಕಂಪನಿಯ ಆರ್ಥಿಕ ಸ್ಥಿತಿಯನ್ನು ಅರಿಯಲು ಅನುಪಾತಗಳ ಉಪಯೋಗದ ಮಹತ್ವದ ಬಗ್ಗೆ ಅರಿತೆವು. ಇಂದಿನಿಂದ ಮುಂದಿನ ಅಂಕಣಗಳಲ್ಲಿ ನಾವು ವಿವಿಧ ಹಣಕಾಸಿನ ಅನುಪಾತಗಳನ್ನು ತಿಳಿಯೋಣ. ಇಂದಿನ ಅಂಕಣದಲ್ಲಿ ನಾವು “ಚರ-ಅನುಪಾತದ” ಬಗ್ಗೆ ತಿಳಿಯೋಣ.

    ಚರಅನುಪಾತ = ಚರ ಆಸ್ತಿ / ಅನುಪಾತವನ್ನು

    ಅನುಪಾತವನ್ನು ನೋಡಿದರೆ ನಮಗೆ ಅರಿವಾಗುವುದೆನಂದರೆ ಸದ್ಯದಲ್ಲಿ ಎಷ್ಟು ಚರ ಆಸ್ತಿ ಯು ಈಗಿರುವ ಚರ ಬಾಧ್ಯತೆಯನ್ನು ತೀರಿಸಲು ಇದೆ ಎಂದು ಅರಿವಾಗುವುದು. ಇದು ಕಂಪನಿಯ ಸದ್ಯದ ಬಾಧ್ಯತೆಯನ್ನು (ಪೂರೈಕೆ ದಾರರ ಬಿಲ್ ಗಳು ಇತ್ಯಾದಿ) ಈಗಿರುವ ಆಸ್ತಿಗಳ (ಗ್ರಾಹಕರಿಂದ ಬರ ಬೇಕಾಗಿರುವ ಬಿಲ್ ಗಳು, ಹಣ) ಮೂಲಕ ತೀರಿಸಲು ಇರುವ ಸಾಮರ್ಥ್ಯದ ಬಗ್ಗೆ ಮಾಪನವನ್ನು ನೀಡುವುದು.

    ಕಂಪನಿಯ ಬಾಧ್ಯತೆಗಳನ್ನು ಕೂಡಲೇ ತೀರಿಸಿಬಿಡುವುದು ಕಂಪನಿಗೆ ಕೂಡ ಒಳ್ಳೆಯದು. ಹಾಗಾಗಿ ಈ ಅನುಪಾತದ ಬೆಲೆಯು ಒಂದಕ್ಕಿಂತ ಹೆಚ್ಚಿರಬೇಕು. ಹೀಗಿರಬೇಕಾದರೆ ಚರ ಆಸ್ತಿಯು ಚರ ಭಾದ್ಯತೆಗಿಂತ ಯಾವಾಗಲೂ ಹೆಚ್ಚಿರಬೇಕು.

    ಅದರ ಬದಲು ಈ ಅನುಪಾತದ ಬೆಲೆ ಒಂದಕ್ಕಿಂತ ಕಡಿಮೆ ಇದ್ದಲ್ಲಿ ಕಂಪನಿಯಲ್ಲಿ ಹಣದ ತೀವ್ರ ಕೊರತೆ ಎಂದು ಅರ್ಥ. ತಿರಿಸಬೇಕಾದ ಬಾಧ್ಯತೆಗಳು ಈಗಿರುವ ಹಣಕ್ಕಿಂತ ಹೆಚ್ಚಾಗಿರುತ್ತದೆ.

    ಆಂಗ್ಲ ಅಂಕಣ:
    http://somanagement.blogspot.com/2011/07/finance-and-management-13.html

  • ಹಣಕಾಸು ವ್ಯವಸ್ಥೆ ಮತ್ತು ನಿರ್ವಹಣೆ – ೧೨

    ಹಿಂದಿನ ಅಂಕಣಗಳಲ್ಲಿ ನಾವು ಒಬ್ಬ ಬಂಡವಾಳದಾರನು ಹೇಗೆ ಲೆಕ್ಕ ಪತ್ರವನ್ನು ನೋಡುವನು ಮತ್ತು ಹೇಗೆ ಕಂಪನಿಯ ಸ್ಥಿತಿಗತಿಗಳ ಬಗ್ಗೆ ಅರಿಯುವನು ಎಂಬುದನ್ನು ಅರಿತೆವು. ಇನ್ನು ಮುಂದಿನ ಅಂಕಣಗಳಲ್ಲಿ ನಾವು ಕೆಲವು ಅನುಪಾತ ಲೆಕ್ಕಾಚಾರಗಳಿಂದ ಲೆಕ್ಕ ಪತ್ರದ ಬಗ್ಗೆ ಹೇಗೆ ಅಧ್ಯಯನ ನಡೆಸುವರು ಎಂದು ಅರಿಯೋಣ. ಇಂದಿನ ಅಂಕಣದಲ್ಲಿ ಅನುಪಾತದ ಅಧ್ಯಯನದ ಅಗತ್ಯವನ್ನು ಕುರಿತು ಚರ್ಚಿಸೋಣ.

    ಇವುಗಳನ್ನುಅಕೌಂಟಿಂಗ್ ಅನುಪಾತ ಎಂದು ಕರೆಯುವರು. ಇವು ವಿವಿಧ ಲೆಕ್ಕ ಪತ್ರದ ವಿಭಾಗಗಳ ಬೆಲೆಗಳ ನಡುವಿನ ಸಂಬಂಧಗಳನ್ನು ತಿಳಿಸುವುದು. ಒಂದು ಲೆಕ್ಕ ಪತ್ರ ಕೊಟ್ಟಿದ್ದಲ್ಲಿ ಕಂಪನಿಯ ಬಗ್ಗೆ ಅದರಲ್ಲಿನ ಮೌಲ್ಯಗಳ ಮೂಲಕ ಮಾತ್ರ ಅರಿಯುವುದು ಸಮಂಜಸವೆನಿಸದು. ಒಂದು ವಿಭಾಗದ ಸಂಬಂಧ ಇನ್ನೊಂದು ವಿಭಾಗದೊಡನೆ ಹೇಗೆ ಇರುವದೆಂದು ಅನುಪಾತಗಳ ಮೂಲಕ ಅರಿತಾಗ ಇನ್ನು ಕೂಲಂಕುಷವಾದ ಅರಿವು ಸಿಗುವುದು.

    ಅನುಪಾತ ಅಧ್ಯಯನದ ಲಾಭಗಳು
    . ಕಂಪನಿಯ ವ್ಯವಸ್ಥಾಪಕರಿಗೆ ಕಂಪನಿಯ ಆದಾಯ ಗಳಿಸುವ ಸಾಮರ್ಥ್ಯವನ್ನು ಅರಿಯಲು ಸಹಕರಿಸುವುದು.
    . ಕಂಪನಿಯ ದಿವಾಳಿತನ ಹೊಂದದಿರುವಿಕೆಯನ್ನು ತಿಳಿಸುವುದು.
    . ಹಲವಾರು ವರ್ಷಗಳ ಅಧ್ಯಯನ ಮಾಡಲು ಸಹಕರಿಸುವುದು.
    . ಲೆಕ್ಕ ಪತ್ರದ ಮಾಹಿತಿಗಳನ್ನು ಸರಳಗೊಳಿಸುವುದು.
    . ಕಾರ್ಯ ನಿರ್ವಹಣೆಯ ಗುಣಮಟ್ಟದ ಅಳೆಯುವುದು.
    . ಭವಿಷ್ಯದ ಬಗ್ಗೆ ನಿರ್ಧರಿಸಲು ಸಹಕಾರಿಯಾಗುವುದು.

    ಹೀಗಿದ್ದರೂ ಇದರ ಕೆಲವೊಂದು ಮಿತಿಗಳಿವೆ.
    . ಲೆಕ್ಕ ಪತ್ರ ನಿರ್ವಹಣೆಯ ವೈವಿಧ್ಯತೆ ಯಿರುವ ಸಂದರ್ಭಗಳಲ್ಲಿ ಕಂಪನಿಗಳ ನಡುವೆ ಹೋಲಿಸಲು ಇವು ಸಹಕಾರಿಯಾಗದು.
    . ನಿಖರವಾದ ಅಂಕಿ ಅಂಶಗಳು ಗೊತ್ತಗುವವರೆಗೆ ಫಲಿತಾಂಶವನ್ನು ಅರ್ಥ ಮಾಡಿಕೊಳ್ಳುವುದು ಬಹಳ ಕಷ್ಟ.

    ಆಂಗ್ಲ ಅಂಕಣ:
    http://somanagement.blogspot.com/2011/07/finance-and-management-12.html

  • ಹಣಕಾಸು ವ್ಯವಸ್ಥೆ ಮತ್ತು ನಿರ್ವಹಣೆ – ೧೧

    ಹಿಂದಿನ ಅಂಕಣದಲ್ಲಿ ನಾವು ಕಂಪನಿಯ ಲೆಕ್ಕ ಪತ್ರದಲ್ಲಿ ಸ್ಥಿರಾಸ್ಥಿಗಳ ವಿಭಾಗದ ಬಗ್ಗೆ ಅರಿತೆವು. ಇಂದು ನಾವು ಆರ್ಥಿಕ ಬಾಧ್ಯತೆ (Liability) ಬಗ್ಗೆ ಅರಿಯೋಣ.

    ಆರ್ಥಿಕ ಬಾಧ್ಯತೆಗಳನ್ನು ಎರಡು ವಿಧವಾಗಿ ವಿಂಗಡಿಸಬಹುದು. ಸ್ಥಿರಬಾಧ್ಯತೆಗಳು ಮತ್ತು ಚರಬಾಧ್ಯತೆಗಳು. ಚರ ಬಾಧ್ಯತೆಗಳು ಕಂಪನಿಯು ಒಂದು ಆರ್ಥಿಕ ಅವಧಿಯೊಳಗೆ ತೀರಿಸಬೇಕಾದವುಗಳು. ಹೆಚ್ಚಾಗಿ ಪೂರೈಕೆದಾರರಿಗೆ ಸಂದ ಬೇಕಾದ ಬಾಕಿ ಹಣವು ಇದರಲ್ಲಿರುತ್ತದೆ. ಸ್ಥಿರಬಾಧ್ಯತೆಗಳಲ್ಲಿ ದೀರ್ಘಾವಧಿಯ ಅಂದರೆ ಒಂದು ವರ್ಷಕ್ಕಿಂತ ಹೆಚ್ಚಿನ ಅವಧಿಯಲ್ಲಿ ತೀರಿಸಬೇಕಾದ ಬಾಧ್ಯತೆಗಳು ಇರುತ್ತವೆ. ಸಾಮಾನ್ಯವಾಗಿ ಬ್ಯಾಂಕ್ ಮತ್ತು ಬಾಂಡ್ ಹೊಂದಿದವರ ಸಾಲ ಗಳು ಇದರಲ್ಲಿ ಇರುವುದು.

    ನಿರ್ವಹಿಸಬಹುದಾದ ಸಾಲಗಳಿರುವುದು ಒಳ್ಳೆಯ ಲಕ್ಷಣ, ಹಾಗೆಯೇ ಸಾಲಗಳು ಕಡಿಮೆಯಾಗುವುದು ಕಂಪನಿಯು ಉತ್ತಮ ಸ್ಥಿತಿಯೆಡೆಗೆ ಹೋಗುತ್ತಿರುವ ಲಕ್ಷಣ. ಆದರೆ ಸಾಲಗಳು ಹೆಚ್ಚಾಗುತ್ತಿರುವುದು ಬಂಡವಾಳದಾರರಿಗೆ ಯೋಚಿಸಲು ಒತ್ತಾಯಿಸುತ್ತದೆ. ಎಷ್ಟು ಬಾಕಿ ಸಾಲವಿರಬೇಕೆನ್ನುವುದು ಎಷ್ಟು ಆಸ್ತಿಯನ್ನು ಹೊಂದಿದೆ ಮತ್ತು ಹಣದ ಸಂವಹನದ ಮೇಲೆ ನಿರ್ಧರಿಸಬಹುದು.

    ಕಂಪನಿಯ ಹಣದ ಸಂವಹನಕ್ಕೆ ಹೋಲಿಸಿದಲ್ಲಿ, ತುಂಬಾ ಸಾಲವಿರುವುದರ ಅರ್ಥ ಕಂಪನಿಯ ಹೆಚ್ಚಿನ ಆದಾಯವು ಕೇವಲ ಸಾಲದ ಬಡ್ಡಿ ಮತ್ತು ಸಲನ್ನ ತೀರಿಸುವುದರಲ್ಲಿ ಖರ್ಚಾಗುತ್ತಿದೆ ಎಂದು. ಕಂಪನಿಯ ಬಾಧ್ಯತೆಗಳನ್ನು ಸರಿಯಾಗಿ ನಿರ್ವಹಿಸದಿದ್ದರೆ ಕಂಪನಿಯ ದಿವಾಳಿಯಾಗಲು ಇದು ಕಾರಣವಾಗುವುದು.

    ಆಂಗ್ಲ ಅಂಕಣ:
    http://somanagement.blogspot.com/2011/07/finance-and-management-11.html

  • ಹಣಕಾಸು ವ್ಯವಸ್ಥೆ ಮತ್ತು ನಿರ್ವಹಣೆ – ೧೦

    ಈ ಹಿಂದಿನ ಅಂಕಣದಲ್ಲಿ ನಾವು ಬರಬೇಕಾಗಿರುವ ಆದಾಯದ ಬಗೆ ಅರಿತೆವು. ಇಂದಿನ ಅಂಕಣದಲ್ಲಿ ನಾವು ಲೆಕ್ಕ ಪತ್ರದಲ್ಲಿರು ಸ್ಥಿರವಾದ ವಿಭಾಗಗಳ ಬಗ್ಗೆ ಅರಿಯೋಣ. ಅವೇ ಆಸ್ತಿ, ಫ್ಯಾಕ್ಟರಿ, ಕಟ್ಟಡ, ಯಂತ್ರಗಳು ಇತ್ಯಾದಿ.

    ಚಲಿಸದಿರುವ ಆಸ್ತಿಯ ಭಾಗದಲ್ಲಿ ಮುಖ್ಯವಾಗಿ ಬರುವುದೇ ಸ್ಥಿರಾಸ್ತಿ (Fixed Asset). ಒಂದು ಆರ್ಥಿಕ ಅವಧಿಯಲ್ಲಿ ಚಲಿಸಲು ಅಥವಾ ಬದಲಾಯಿಸಲು ಆಗದಿರುವ ಆಸ್ತಿಗಳನ್ನು ಸ್ಥಿರಾಸ್ತಿಗಳು ಎಂದು ಕರೆಯುವರು. ಇವುಗಳ ಮೇಲಿನ ಬಂಡವಾಳವು ನೇರವಾಗಿ ಕಂಪನಿಯ ಬಲವನ್ನು ಹೆಚ್ಚಿಸದಿದ್ದರೂ ಇವುಗಳ ಉಪಯೋಗದಿಂದ ಕಂಪನಿಯ ಚರಾಸ್ತಿಗಳು ಉತ್ಪತ್ತಿಯಾಗುವುವು. ಬಂಡವಾಳದಾರರು ಹೆಚ್ಚಾಗಿ ವಿಭಾಗದೆಡೆಗೆ ಹೆಚ್ಚಿನ ಗಮನ ಹರಿಸುವುದಿಲ್ಲ. ಕೆಲವೊಮ್ಮೆ ಭಾರಿ ಪ್ರಮಾಣದ ಬಂಡವಾಳವು ಹರಿದು ಬಂದಾಗ ಧೀರ್ಘಾವಧಿಯ ಲಾಭದ ಸಾಧ್ಯತೆಗೆ ಗಮನಿಸುವರು.

    ಕಂಪನಿಯ ಲೆಕ್ಕ ಪತ್ರದಲ್ಲಿ ನಂಬಿಕೆ ಕಳೆದು ಕೊಳ್ಳಲು ಒಂದು ಕಾರಣ ಸ್ಥಿರಾಸ್ತಿಯನ್ನು ನಿರ್ವಹಿಸುವ ಬಗೆ. ಸ್ಥಿರಾಸ್ತಿಗಳನ್ನು ಒಪ್ಪಬಹುದಾದ ಕಾಲಾವಧಿಯೊಳಗೆ ಮಾರಲು ಸಾಧ್ಯವಿಲ್ಲವಾದ್ದರಿಂದ ಮತ್ತು ಇವು ಲೆಕ್ಕ ಪತ್ರದಲ್ಲಿ ಅವುಗಳ ನೈಜ ಬೆಲೆಗೆ ಸಂಬಂಧವಿಲ್ಲದೆ ಇರುವ ಕಾರಣ, ಕಂಪನಿಗಳು ಉಬ್ಬಿಸಲು ಸಾಧ್ಯವಿದೆ. ಹೀಗಾಗಿ ಕಂಪನಿಯ ಲೆಕ್ಕ ಪತ್ರದ ಮೇಲೆ ಪ್ರಶ್ನಿಸುವಂತೆ ಬಂಡವಾಳದಾರನಿಗೆ ಮಾಡುವುದು.

    ಆಂಗ್ಲ ಅಂಕಣ:
    http://somanagement.blogspot.com/2011/07/finance-and-management-10.html

  • ಹಣಕಾಸು ವ್ಯವಸ್ಥೆ ಮತ್ತು ನಿರ್ವಹಣೆ – ೯

    ಈ ಹಿಂದಿನ ಅಂಕಣದಲ್ಲಿ ನಾವು ಸರಕಿನ ಮೌಲ್ಯವನ್ನು ಅರಿಯುವ ಬಗೆಯನ್ನು ಒಬ್ಬ ಬಂಡವಾಳದಾರನ ದೃಷ್ಟಿಯಿಂದ ನೋಡಿದೆವು. ಇಂದು ಆಗಮಿಸಬೇಕಾದ ಆದಾಯ ವು ಯಾವ ಅರ್ಥವನ್ನು ಬಂಡವಾಳದಾರನಿಗೆ ನೀಡುವುದು ಎಂದು ಅರಿಯೋಣ.

    ಆಗಮಿಸಬೇಕಾದ ಆದಾಯವೆಂದರೆ, ಹೆಸರೇ ಸೂಚಿಸುವಂತೆ ಬಾಕಿಯಿರುವ ಬಿಲ್ ಗಳು. ಕಂಪನಿಯು ಮಾರಾಟ ಮಾಡಿದ ಉತ್ಪನ್ನಗಳ ಬೆಲೆಯನ್ನು ಪಡೆಯದಿದ್ದರೆ ಅದು ಮೂರ್ಖತನವೇ ಸರಿ. ಕ್ರೆಡಿಟ್ ಕೊಡುವುದು ಇತ್ತೀಚಿನ ದಿನಗಳ ವ್ಯವಹಾರದ ಒಂದು ಭಾಗವೇ ಆಗಿದ್ದರೂ ತುಂಬ ಕ್ರೆಡಿಟ್ ಕೊಟ್ಟು ಹಣವನ್ನು ಪಡೆಯದೇ ಇರುವುದು ಕೂಡ ಸರಿಯಲ್ಲ. ಕಂಪನಿಯ ಆರ್ಥಿಕ ಗುಣಮಟ್ಟವನ್ನು ಅದು ಎಷ್ಟು ವೇಗವಾಗಿ ಬರಬೇಕಾಗಿರುವ ಆದಾಯಗಳನ್ನು ತೆಗೆದು ಕೊಳ್ಳುವರು ಎನ್ನುವುದರಿಂದ ಗೊತ್ತಾಗುವುದು. ಹಣ ತೆಗೆದುಕೊಳ್ಳುವ ಸಮಯವು ಹೆಚ್ಚಾಗುತ್ತಿದ್ದಲ್ಲಿ ಅದು ಶಾಶ್ವತ ಸಮಸ್ಯೆಯೆಡೆಗೆ ಕಂಪನಿಯು ಬೀಳುತ್ತಿದೆ ಎಂದರ್ಥ. ಗ್ರಾಹಕರಿಗೆ ಹೆಚ್ಚಿನ ಕ್ರೆಡಿಟ್ ಅವಧಿ ನೀಡುವುದು, ಮುಂದೆ ಅವರಿಂದ ಹಣ ಹಿಂದೆ ಬರದಿರುವ ಅಪಾಯವನ್ನೂ ತಂದೊಡ್ಡಬಹುದು. ಗ್ರಾಹಕನಿಗೆ ಹಣದ ಸಮಸ್ಯೆಯುಂಟಾಗಿ ಹಣವನ್ನು ಕೊಡಲು ಒಪ್ಪದಿರಬಹುದು. ಹಣ ತೆಗೆದುಕೊಳ್ಳುವ ಸಮಯವು ಕಂಪನಿಯ ಆಂತರಿಕ ವಹಿವಾಟಿನಲ್ಲೂ ಪ್ರಭಾವ ಬೀರಿ, ಕಂಪನಿಗೆ ನೌಕರರ ಸಂಬಳ, ಪೂರೈಕೆ ದಾರರಿಗೆ ಪಾವತಿ ಮಾಡಲು ಸಾಧ್ಯವಾಗದೆ ಅಗತ್ಯ ಬೇಕಾದ ಸರಕುಗಳನ್ನ ಖರೀದಿಸಲು ಸಾಧ್ಯವಾಗದೆ ಇರಬಹುದು.

    ಇಲ್ಲಿಯೂ ಕೂಡ ಹಣವು ತುಂಬಾ ಚಲನಾತ್ಮಕವಾಗಿದ್ದು ಕಂಪನಿಯ ಆರ್ಥಿಕತೆಯಲ್ಲಿ ಎಷ್ಟು ಪ್ರಭಾವ ಬೀರುವುದೆಂದು ಅರಿವಾಗುವುದು.

    ಆಂಗ್ಲ ಅಂಕಣ:
    http://somanagement.blogspot.com/2011/07/finance-and-management-9.html

    Trustworthiness:
    Vendor reliability:
    Privacy:
    Child safety:
  • Finance and Management – 19

    In the last blog, we discussed about the concepts of paid up capital and a few more. In

    this blog, we try to understand the meaning of Par Value.






    Par Value is also called the face value of the company’s stock. This represents

    the minimum amount that a shareholder must pay on each share. This is

    the legal minimum capital of the company. In case the company is

    declared insolvent and the shareholder has to pay to its debtors, then

    each shareholder can be compelled to pay the par value of the shares

    held by him/her
    .






    Companies are prohibited from returning any part of the minimum capital except by

    following a special procedure; this is done to protect the interest of

    the creditors of the company. If this was allowed, the shareholders

    could withdraw all the assets and leave behind nothing for the

    creditors!






    Read in Kannada:

    http://somanagement.blogspot.com/2011/08/blog-post_4471.html