Blog
-
ಕಾರ್ಯ ತಂತ್ರ
ಈ ಹಿಂದ ಅಂಕಣಗಳಲ್ಲಿ ನಾವು ವ್ಯವಹಾರದ ಅತ್ಯಂತ ಮುಖ್ಯ ಭಾಗವಾದ ವ್ಯವಹಾರ ಪ್ರತಿಕೃತಿಗಳ ಬಗ್ಗೆ ಅರಿತೆವು. ವ್ಯವಹಾರ ಪ್ರತಿಕೃತಿ ಯು ವ್ಯವಹಾರಕ್ಕೆ ಮೂಲ ಅಡಿಪಾಯವನ್ನು ಅಥವಾ ಆದಾಯದ ಮಾರ್ಗವನ್ನು ರೂಪಿಸಿ ವ್ಯವಹಾರ ಮುನ್ನಡೆಯುವಂತೆ ಮಾಡಿದರೂ, ವ್ಯವಹಾರದ ಯಶಸ್ಸನ್ನು ಅದು ಖಚಿತಗೊಳಿಸಲಾಗದು.ವ್ಯವಹಾರದ ಜಗತ್ತು ಬಹುಮುಖವಾದ ವಿವಿಧ ವಿಚಾರಗಳಿಂದ ಅನಿಶ್ಚಿತೆಗಳಿಂದ ಕೂಡಿದೆ, ಅವು ಆಂತರಿಕವಾಗಿ ಮಾನವ ಸಂಪನ್ಮೂಲ, ಕಾರ್ಯವಿಧಾನ ಗಳಿಂದಾಗಿರಬಹುದು ಅಥವಾ ಬಾಹ್ಯವಾಗಿ ಸರ್ಕಾರದ ಕಾನೂನುಗಳಿಂದ ಕೂಡ ಆಗಿರಬಹುದು. ಇವೆಲ್ಲವೂ ವ್ಯವಹಾರಕ್ಕೆ ಅತ್ಯಂತ ಅನಿಶ್ಚಿತತೆಯನ್ನು ಸೃಷ್ಟಿಸಿ ಒಂದು ಯಶಸ್ವಿಯಾಗಿ ನಡೆಯುತ್ತಿರುವ ವ್ಯವಹಾರವು ಈ ಬಗೆಯ ಬದಲಾವಣೆಗಳಿಗೆ ಹೊಂದಿಕೊಳ್ಳದಿದ್ದಲ್ಲಿ ಬುಡ ಮೇಲು ಗೊಳಿಸಿ ಸಂಪೂರ್ಣವಾಗಿ ನಶಿಸಲು ಕಾರಣವಾಗುವುವು. ಹೆಚ್ಚಿನ ಸಂದರ್ಭಗಳಲ್ಲಿ ಈ ಬದಲಾವಣೆಗಳು ಕಂಪನಿಗಳ ವ್ಯವಹಾರದ ದಿಕ್ಕನ್ನೇ ಬದಲಾಯಿಸುವಷ್ಟು ಪ್ರಭಾವಯುತವಾಗಿರುತ್ತದೆ.ಇದಕ್ಕಾಗಿಯೇ ಶಕ್ತಿಯುತ ಕಾರ್ಯತಂತ್ರ ಪ್ರಾಮುಖ್ಯತೆಯನ್ನು ಪಡೆಯುತ್ತದೆ. ಇನ್ನು ಮುಂದಿನ ದಿನಗಳಲ್ಲಿ ನಾವು ಅನೇಕ ಪ್ರಕಾರದ ಕಾರ್ಯ ತಂತ್ರಗಳ ಬಗ್ಗೆ ಮತ್ತು ಅವುಗಳು ವ್ಯವಹಾರದ ರಥವನ್ನು ಬದಲಾವಣೆಗಳಿಗೆ ತಕ್ಕಂತೆ ಹೇಗೆ ಸಮರ್ಥವಾಗಿ ನಡೆಸಿದವು ಎನ್ನುವುದರ ಬಗ್ಗೆ ಅರಿಯೋಣ. ಇವೆಲ್ಲವುದರ ಹಿಂದಿನ ಚಿಂತನ ಪಥವನ್ನು ಅರಿತು ಕಾರ್ಯ ತಂತ್ರ ರೂಪಿಸುವದನ್ನು ರೂಢಿಸಿಕೊಳ್ಳುವುದು ಉತ್ತಮ ವ್ಯವಹಾರದ ಆರಂಭದ ಲಕ್ಷಣ. -
Strategy – 2
In the earlier blog on strategy we mentioned the effect of the external challenges on the business’s survival. In today’s blog we briefly define the term strategy.Strategy simply means ” competing successfully”. While the origin of strategy could be traced back to war time, it’s utility extends beyond war to business in a major way.
Start up device mechanisms to survive the challenges that the business heavy weights throw at them. Similarly the heavy weights manage to effectively defend or expand their territory.
Every successful business is a lesson of strategy. We would at different points relate to some of the caselets that we are working on to make this blog more effective.
-
Strategy
Over the past few posts we have discussed a very important component of Business – The Business Model. While a business model gives the basic structure or revenue generating mechanism and ensures that a business is operational, it doesn’t always guarantee the success of the business.
The world of business is filled with uncertainty on multiple aspects, be it internal like operation, human or external legal, governmental. All these create a highly uncertain future and leave successful businesses with almost nothing if they are not able to handle the changes in their business. Most of the time the changes are so powerful, that companies might need to change the direction of their business and act in a completely different way.
This is where the concept of strategy gains emphasis. Over the next few weeks, we would look at various businesses which have been able to handle the change in their business environment and been able to steer their business ship into the direction of their choice better than other. Understanding the nuances of the thought process and trying to adapt by building on these strategy would be a good starting point to look out.
-
Business model – The Journey this Far
Over the past few weeks we have been updating this blog on various types of business models.
1. Advertisement – Link
2. Services – Link
3. Brick and click – Link
4. Servitization of Product – Link
5. Industrialization of Service – Link
6. Bait and hook – Link
7. Subscription – Link
8. Exclusivity – Link
9. Auction – Link
10. Low cost – Link
11. Loyalty – Link
12. Aggregation of Demand – Link
13. Collection of Service – Link
14. Monopoly – Link
15. Networks – Link
16. Online Content – Link
17. Premium Business – Link
18. Value Added Reseller – LinkAs stated in our first blog on business management, these models are abstractions remove a lot of details that really make the differences between businesses.
A study of business models should enable one to understand the challenges about the business at a macro level. We have subtly put these in each of these blogs.
-
ವ್ಯವಹಾರ ಪ್ರತಿಕೃತಿ – ಸೇವಾ ಮಾದರಿ
ಸಾಮಾನ್ಯವಾಗಿ ವ್ಯವಹಾರವನ್ನು ಎರಡು ವಿಧವಾಗಿ ವಿಂಗಡಿಸಬಹುದು. ಉತ್ಪನ್ನಗಳು ಮತ್ತು ಉತ್ಪನ್ನಗಳಿಗೆ ನೀಡುವ ಸೇವೆಗಳು. ಇಂದು ಭಾರತದ ಐ. ಟಿ. ಕಂಪನಿಗಳು ಎರಡನೇ ರೀತಿಯ ವ್ಯವಹಾರದಲ್ಲಿ ತಮ್ಮ ಮೇಲ್ಪಂಕ್ತಿಯನ್ನು ಸಾಧಿಸಿರುವರು.
ಈ ಕಂಪನಿಗಳು ಉತ್ಪನ್ನಗಳಿಗೆ ಬೇಕಾದ ಸಹಾಯಕಗಳನ್ನು ಬೇರೆ ಕಂಪನಿಗಳಿಂದ ನೀಡುವುದು. ಈ ಸೇವೆಯು ಮಾರಾಟದ ನಂತರದ ಬೆಂಬಲ ಮತ್ತು ಸಹಾಯ ನೀಡುವುದಲ್ಲದೆ ಕಂಪನಿಗಳಿಗೆ ಉತ್ಪನ್ನಗಳ ತಯಾರಿಕೆಯಲ್ಲಿಯೂ ಹೊರ ಗುತ್ತಿಗೆಯ ಮೂಲಕ ಅಥವಾ ಭಾಷಾ ಅನುವಾದಕರ ಮೂಲಕ ಸಹಾಯ ಮತ್ತು ಬೆಂಬಲವನ್ನು ನೀಡುತ್ತವೆ.
ಈ ರೀತಿಯ ಸೇವೆಗಳು ಮುಖ್ಯವಾದ ಆದಾಯ ನೀಡುವ ಮಾರ್ಗಗಳು, ಆದ್ದರಿಂದ ಹಲವಾರು ಕಂಪನಿಗಳಿಗೆ ಇದು ವ್ಯವಹಾರ ಪ್ರತಿಕೃತಿಯಾಗಿದೆ.
ಆಂಗ್ಲ ಅಂಕಣ:
http://somanagement.blogspot.com/2011/05/business-model-servicing.html -
Business model – Servicing
Generally business can be categorized into two – product manufacturing and product related services. In fact the so famous IT sector in India is dominated by the second type of companies.These companies provide some relevant utility to products from other companies. These services might across the spectrum from extending customer support after sale to even assisting the companies even before their product is released, Through some outsourced development or language translation etc.These services are major ways of revenue stream and hence business model of many companies.Read in Kannada: -
ವ್ಯವಹಾರ ಪ್ರತಿಕೃತಿ – ಜಾಹಿರಾತು ಮತ್ತು ಪ್ರಚಾರ
ಹಿಂದೆ ತಿಳಿಸಿದಂತೆ ವ್ಯವಹಾರ ಪ್ರತಿಕೃತಿ ಎನ್ನುವುದು ಕೇವಲ ಒಂದು ಉದ್ಯಮವು ಹೇಗೆ ಹಣ ಸಂಪಾದನೆ ಮಾಡುವುದೆನ್ನುವುದಾಗಿದೆ. ಜಾಹೀರಾತು ಮತ್ತು ಪ್ರಚಾರಗಳು ಮಾರ್ಕೆಟಿಂಗ್ ನ ಒಂದು ಭಾಗವಾಗಿದ್ದರೂ ಅದನ್ನೇ ಒಂದು ವ್ಯವಹಾರ ಪ್ರತಿಕೃತಿಯಾಗಿ ಪ್ರತ್ಯೇಕಿಸುವುದೂ ಕೂಡ ಸರಿಯೇ ಆಗಿದೆ.ಒಂದು ಜಾಹಿರಾತಿಗೆ ಜಾಗದ ಅವಶ್ಯಕತೆ ಇದೆ, ಅದು ಭೌತಿಕವಾಗಿರಬಹುದು, ಅಂತರ್ಜಾಲದಲ್ಲಿನ ತಾತ್ವಿಕ ತಾಣಗಳಾಗಿರಬಹುದು. ಈ ರೀತಿಯ ಜಾಹಿರಾತಿಗೆ ಮೀಸಲಾದ ತಾಣಗಳನ್ನು ಹೊಂದಿರುವ ವ್ಯವಹಾರಗಳು ಪ್ರತ್ಯೇಕವಾಗಿ ಕೆಲವೊಂದು ವೀಕ್ಷಕರಿಗೆ ಮಾತ್ರ ನೀಡುವ ತಾಣಗಳನ್ನು ದುಬಾರಿ ಬೆಲೆಯಲ್ಲಿಯೂ ವ್ಯವಹಾರ ನಡೆಸುವರು.ಇಂದು ಹಲವಾರು ಕಂಪನಿಗಳು ಈ ರೀತಿಯ ಜಾಹಿರಾತಿನ ತಾಣಗಳನ್ನು ನೀಡುವುದರ ಮೂಲಕ ತಮ್ಮ ವ್ಯವಹಾರವನ್ನು ನಡೆಸುತ್ತಿವೆ. ಅಂತರ್ಜಾಲದ ಪ್ರಸಿದ್ಧ ಗೂಗಲ್ ಕಂಪನಿಯು ಈ ವ್ಯವಹಾರದಲ್ಲಿ ಎಲ್ಲವುಗಳಿಗಿಂತ ಮೇಲೆ ನಿಂತಿದೆ. ಗೂಗಲ್ ತನ್ನ ಹೆಚ್ಚಿನ ಎಲ್ಲ ಉತ್ಪನ್ನಗಳನ್ನು ಉಚಿತವಾಗಿ ನೀಡುವುದರ ಹಿಂದಿನ ಉದ್ದೇಶ, ಆ ಉತ್ಪನ್ನಗಳಲ್ಲಿ ಜಾಹಿರಾತುಗಳನ್ನು ಪ್ರದರ್ಶಿಸುವುದು ಮತ್ತು ಉತ್ಪನ್ನಗಳನ್ನು ಉಪಯೋಗಿಸುವ ಜನರ ಅಂಕಿ ಅಂಶಗಳನ್ನು ಅರಿಯುವುದು. ಇವುಗಳು ಗೂಗಲ್ ಗೆ ಅತಿ ಹೆಚ್ಚಿನ ಆದಾಯವನ್ನು ಗಳಿಸಿಕೊಡುತ್ತವೆ. ಇತರ ಸಾಮಾಜಿಕ ತಾಣಗಳೂ ಕೂಡ ಈ ರೀತಿಯ ಮಾದರಿಯನ್ನೇ ನೆಚ್ಚಿಕೊಂಡು ಆದಾಯವನ್ನು ಗಳಿಸುವಲ್ಲಿ ಯಶಸ್ವಿಯಾಗಿದೆ.ಈ ಜಾಹಿರಾತಿನ ಮೂಲಕ ಪ್ರಚಾರದ ಬಗ್ಗೆ ಹೆಚ್ಚು ಹೇಳುವ ಅಗತ್ಯವಿಲ್ಲ. ಇವು ತುಂಬಾ ಹಿಂದಿನಿಂದಲೂ ನಡೆದು ಬಂದಿದೆ ಆದ್ದರಿಂದ ಇವುಗಳದ್ದೇ ಆದ ಇತಿಹಾಸ ಇವುಗಳಿಗೆ ಆಧಾರವಾಗಿದೆ.ಆಂಗ್ಲ ಅಂಕಣ: -
Business Model – Advertising
As discussed earlier, a business model is simply how a company makes money! Advertising though is a component of marketing, it is worth putting if up as a business model separately. An add requires a space, whether real or virtual to be displayed. The real estate dedicated to marketing would fetch a higher premium if the real estate targets a specific audience instead of having a scattered audience.There are companies which have made a fortune by creating or making available this real estate. Google towers overs others in this race. Google is able to provide all the applications it provides for free since, it able to subsidize these applications with the ad revenue these new apps create, using these apps also reveals a lot about the user statistics and hence earns a higher revenue for google. Social networks too rely heavily on their insights to be able to use their real estate for revenue.One needn’t tell a lot about the real ad-space since this is a well established business and has a history to support it.Read in Kannada: -
ವ್ಯವಹಾರ ಪ್ರತಿಕೃತಿ – ಚಂದಾದಾರಿಕೆ
ಈ ಮಾದರಿಯು ಪತ್ರಿಕೆಗಳ ಮತ್ತು ಪ್ರಕಾಶನಗಳ ಉದ್ಯಮದಲ್ಲಿ ಬಹಳ ಚಾಲ್ತಿಯಲ್ಲಿರುವಂತದು. ಇದನ್ನೇ ಕೊಂಚ ಬದಲಾಯಿಸಿಕೊಂಡು ಇತರ ಉದ್ಯಮಗಳಲ್ಲೂ ಅಳವಡಿಸಬಹುದು.ನಾವು ಸಾಮಾನ್ಯವಾಗಿ ವಿವಿಧ ರೀತಿಯ ಪತ್ರಿಕೆಗಳಿಗೆ ಚಂದಾದಾರರಾಗಿರುತ್ತೇವೆ. ಚಂದಾದಾರಿಕೆ ಎಂದರೆ ಏನು?ಇದರರ್ಥ ನಾನು ಪತ್ರಿಕೆಯಲ್ಲಿ ಬರುವುದನ್ನು ತುಂಬಾ ಇಷ್ಟಪಟ್ಟಿದ್ದು, ಅದನ್ನು ಕೊಂಡುಕೊಳ್ಳಲು ಮುಂಗಡ ಹಣಕೊಡಲು (ಮಾಸಿಕ/ವಾರ್ಷಿಕ) ನಾನು ಹಿಂಜರಿಯುವುದಿಲ್ಲವೆಂದು. ಜೊತೆಗೆ ಪತ್ರಿಕೆಯವರಿಗೆ ತಮ್ಮ ಪತ್ರಿಕೆಯು ಕೇವಲ ಚಂದಾದಾರನಿಂದಷ್ಟೇ ಅಲ್ಲದೆ ಅವರ ಕುಟುಂಬ, ಸ್ನೇಹಿತರಿಂದ ಕೂಡ ಓದಲ್ಪಡುವುದೆಂಬ ಖಾತ್ರಿ ಇರುತ್ತದೆ. ಈ ಚಂದಾದಾರಿಕೆ ಮಾದರಿಯು ಎರಡು ಅಂಶಗಳನ್ನು ಒಳಗೊಂಡಿದೆ – ಪ್ರಾಮಾಣಿಕತೆ ಮತ್ತು ಪ್ರೋತ್ಸಾಹ.ಈ ಮಾದರಿಯಲ್ಲಿ ಮುಖ್ಯವಾಗಿ ಗಮನಿಸ ಬೇಕಾದ ಅಂಶ ಓದುಗರಿಗೆ ಸಮರ್ಪಕವಾದ ವಿಚಾರಗಳನ್ನು ಪತ್ರಿಕೆಗಳಲ್ಲಿ ಇರುವಂತೆ ಮಾಡುವುದು. ಹಾಗಿಲ್ಲದಿದ್ದಲ್ಲಿ ಓದುಗರು ಚಂದಾದಾರಿಕೆಯನ್ನು ರದ್ದು ಮಾಡುವರು. ಈ ರೀತಿಯ ಉದ್ಯಮಗಳ ಆರ್ಥಿಕತೆ ಅವುಗಳು ಪತ್ರಿಕೆಗಳಿಗೆ ನಿಗದಿ ಪಡಿಸುವ ಬೆಲೆಗಳಿಂದ ವಿವರಿಸಬಹುದು, ಇನ್ನು ಕೆಲವು ಉದ್ಯಮಗಳು ಜಾಹೀರಾತುಗಳ ಮೂಲಕ ಸಂಪಾದನೆ ಮಾಡುವರು.ಈ ಮಾದರಿಯು ಉದ್ಯಮಗಳಿಗೆ ಶಿಕ್ಷಣ ಮತ್ತು ತರಬೇತಿಯನ್ನು ನೀಡಲೂ ಕೂಡ ಬಳಸಲಾಗುತ್ತಿದೆ. ಒಟ್ಟಾಗಿ ಈ ವ್ಯವಹಾರ ಪ್ರತಿಕೃತಿಯು ಉತ್ತಮ ಗುಣಮಟ್ಟದ ವಿಷಯಗಳನ್ನು ಗ್ರಾಹಕರು ತೆಗೆದುಕೊಳ್ಳುವುದರಲ್ಲಿ ನಿಂತಿದೆ.ಆಂಗ್ಲ ಅಂಕಣ:
http://somanagement.blogspot.com/2011/05/business-model-subscription.html