Blog
-
ಮಾನವ ಸಂಪನ್ಮೂಲ: “ಇಗೊ” ಅಹಂಕಾರ
ಮಾನವ ಸಂಪನ್ಮೂಲದ ಈ ಹಿಂದಿನ ಅಂಕಣದಲ್ಲಿ, ಅದರ ಮಹತ್ವ ಮತ್ತು ಕಂಪನಿಗಳು ಅದನ್ನು ತಮ್ಮ ಬ್ರಹ್ಮಾಸ್ತ್ರವನ್ನಾಗಿ ಉಪಯೋಗಿಸಬಹುದೆಂದು ತಿಳಿದುಕೊಂಡೆವು. ಮನೋವಿಜ್ಞಾನವು ಮಾನವ ಸಂಪನ್ಮೂಲದ ಬಹು ಮುಖ್ಯ ಆಧಾರ ಸ್ತಂಭಗಳಲ್ಲಿ ಒಂದು. ನಾನು ಎನ್ನುವುದನ್ನು ಮಾನವ ಸಂಪನ್ಮೂಲ, “ಇಗೊ”ಎನ್ನುವುದನ್ನು ಪದವನ್ನು ಸರ್ ಸಿಗ್ಮಂಡ್ ಫ್ರೊಯ್ಡ್ ಮೊಟ್ಟಮೋದಲ ಬಾರಿಗೆ ಪ್ರಸ್ತಾಪಿಸಿದರು. ಮನೋವಿಜ್ಞಾನದ ಈ ಅರ್ಥವನ್ನು ಬೇರೆ ಅಂಕಣದಲ್ಲಿ ತಿಳಿದುಕೊಳ್ಳೋಣ.ಈ ಅಂಕಣಕ್ಕೆ ಬೇಕಾದ “ಇಗೊ” (ಅಹಂಕಾರ) ಅರ್ಥವು – ನಮ್ಮ ಬಗ್ಗೆ ನಾವೇ ಸೃಷ್ಟಿಸಿಕೊಂಡಿರುವ ಕಲ್ಪನಾತ್ಮಕ ಪ್ರತಿಬಿಂಬ. ನಮ್ಮ ಸಾಧನೆಗಳಿಂದ ಈ ಬಿಂಬವು ಹೆಚ್ಚು ಗಾಢವಾಗುತ್ತದೆ. ಈ ಪ್ರಕ್ರಿಯೆಯು ಮುಂದುವರೆದಂತೆ, ಮಾನವನಾದವನು ತನ್ನದೇಯಾದ ಕಲ್ಪನಾತ್ಮಕ ವಲಯವನ್ನು ಬೆಳೆಸತೊಡಗುತ್ತಾನೆ; ಕಾಲಕ್ರಮೇಣ ಈ ವಲಯವು ನನ್ನದೇ, ಆರಲ್ಲಿ ನಾನೇ ಸಾರ್ವಭೌಮನೆಂದುಕೊಳ್ಳುತ್ತನೆ. ಆತನು ತನ್ನದೇಯಾದ ಲೋಕದಲ್ಲಿರುತ್ತನೆ, ಅವನು ಕೆಲವೇ ಸ್ನೆಹಿತರ, ಸಂಬಂಧಿಗಳೊಡನೆ ಸಂಪರ್ಕವನ್ನು ಸೀಮಿತಗೊಳಿಸುತ್ತಾನೆ. ಆತನಲ್ಲಿದ್ದ ವಿಶಾಲ ಮನೋಭಾವವು ಸಂಕುಚಿತವಾಗತೊಡಗುತ್ತದೆ. ಈ ಪರಿವರ್ತನೆಯೇ ಕಂಪನಿಗಳಲ್ಲಿ ಕಾಣುವ ಹಲವಾರು ಕಿತ್ತಾಟಕ್ಕೆ ಕಾರಣವಾಗಿದೆ.ಮಾನವರ ಸರ್ವೆಸಾಮನ್ಯವಾದ ಈ “ಇಗೊ”ವನ್ನು ಸರಿಯಾಗಿ ಅರ್ಥೈಸಿಕೊಂಡಲ್ಲಿ, ಮಾನವ ಸಂಪನ್ಮೂಲವನ್ನು ಕಂಪನಿಯ ಏಳಿಕೆಗೆ ಪ್ರೊತ್ಸಹಿಸುವುದು ಸುಲಭವಾಗುತ್ತದೆ. -
HRM – Understanding “I”
In the earlier blog on HRM, we understood the relevance and briefly touched on how it could be used at securing a competitive advantage for the company. One of the foundation stones of HRM is the area of Psychology. In this science of the mind, we have a concept of Ego. Ego as a concept is psychology was introduced by Sir Sigmund Freud. We would keep dealing with the theory he proposed for a later date.
Ego, in its Latin origins, means “I”. Simply, it is the image we have about our-self – this image is built by our notions about our self & our achievements. This in many ways forms the beginning of all HR issues and hence attracts a lot of interest from the Managerial community. All humans work with a commitment to realizing their dream – how ever big or small; and to realize this (s) he would create her/his own path towards achieving it. In this journey one achieves a phenomenal number of achievements minor or major and begins associating with his personal image.
Over a period of time, the individual moves in the reverse, begins assigning too much weight to past successes and creates a small imaginary sphere around oneself to protect the territory that is so personal. Entry for anyone into this territory is based on the proximity of the individual to the person. People begin clashing with other people when they try to protect this boundary. This is one of the major issues that the HR department faces while dealing with people and their aspirations.
Understanding this “I” that people possess is a great secret for effective management of the human capital.
Read in Kannada: http://somanagement.blogspot.com/2011/03/blog-post_9081.html
-
ವ್ಯವಹಾರ ಪ್ರತಿಕೃತಿ – ಫ್ರೀಮಿಯಂ
ವ್ಯವಹಾರ ಪ್ರತಿಕೃತಿಯ ಚರ್ಚೆಯಲ್ಲಿ “ಡೈರೆಕ್ಟ್ ಸೇಲ್ಸ್” ನಿಂದ ಮುಂದುವರೆದು, ಇಂದು ಫ್ರೀಮಿಯಂ ಪ್ರತಿಕೃತಿಯ ಬಗ್ಗೆ ಚರ್ಚೆ ಮಾಡೋಣ. ಸಾಫ್ಟ್ ವೆರ್ ಜಗತ್ತಿನಲ್ಲಿ ಅತ್ಯಂತ ಪ್ರಚಲಿತ ಪ್ರತಿಕೃತಿ ಇದು.ಹೆಸರೇ ಸೂಚಿಸುವಂತೆ, ಫ್ರೀಮಿಯಂ – “ಫ್ರೀ” ಮತ್ತು “ಪ್ರಿಮಿಯಂ” ಎನ್ನುವ ಪದಗಳ ಜೋಡಣೆ ಇಂದ ಬಂದಿದೆ. ಇದರಂತೆ, ನಿಮ್ಮ ಮಾರಾಟದ ವಸ್ತುವಿನ ಒಂದು ಭಾಗವನ್ನು ಫ್ರೀಯಾಗಿ ನೀಡಿ, ಇನ್ನುಳಿದ ಭಾಗಕ್ಕೆ ಖರೀದಿಯ ಮೂಲಕ ವ್ಯವಹಾರಗಳು ತಮ್ಮ ಶ್ರಮಕ್ಕೆ ಅನುಗುಣವಾಗಿ ಆದಾಯವನ್ನು ಪಡೆಯುತ್ತರೆ.ಇಂದಿನ ಗಣಕಯಂತ್ರ ಯುಗದಲ್ಲಿ ಸರ್ವೇಸಾಮಾನ್ಯವಾಗಿ ಕೇಳಿಬರುವ “ಆಂಟಿ-ವೈರಸ್” ಅನ್ನು ಇದೇ ಪ್ರತಿಕೃತಿಯ ಮೂಲಕ ಮಾರುವುದನ್ನು ಕಾಣುತ್ತೇವೆ. ಇದರಂತೆ, ಆಂಟಿ-ವೈರಸ್ ಕಂಪನಿಗಳು – ಕೆಲವು ಸಂದರ್ಭಗಳಲ್ಲಿ ೪೫ ದಿನಗಳ ಉಚಿತ ಉಪಯೋಗಕ್ಕೆಂದು ಕೊಟ್ಟು ನಂತರ ಉಪಯೋಗಿಸ ಬೇಕೆಂದರೆ ಖರಿದಿಸಿ ಉಪಯೋಗಿಸುವಂತೆ ನೋಡಿಕೊಳ್ಳುತ್ತಾರೆ. ಇನ್ನೊಂದು ವಿಧಾನದಲ್ಲಿ, ಕೆಲವೇ “ಫೀಚರ್ಸ್”(ಗುಣ-ಲಕ್ಷಣ) ಗಳನ್ನು ಉಚಿತವಾಗಿ ನೀಡಿ, ಪೂರ್ತಿಯಾದ ಗುಣ-ಲಕ್ಷಣಗಳ ಪ್ರಯೋಗ ಮಾಡಬೇಕಾದಲ್ಲಿ ಖರೀದಿಸ ಬೇಕಾಗುತ್ತದೆ.ಈ ಪ್ರತಿಕೃತಿಯ ಮೂಲಕ, ಸಂಭಾವಿ ಗಿರಾಕಿಗಳು ತಾವು ಖರೀದಿಸಲೆಂದು ಆಲೋಚಿಸುತ್ತಿರುವ ವಸ್ತುವು ಭರವಸೆಗೆ ಯೋಗ್ಯವಿರುವುದೋ ಇಲ್ಲವೋ, ಅದರ ಗುಣಮಟ್ಟವನ್ನು ಪರೀಕ್ಷಿಸಿ ಮತ್ತೆ ಖರೀದಿಸ ಬಹುದು. ಖರೀದಿಸಲೆಂದಿರುವ ವಸ್ತುವಿನ ಮಾರಾಟಗಾರಿಕೆಯಲ್ಲೂ ಈ ಪ್ರತಿಕೃತಿಯು ಬಹು ಸಹಾಯಕಾರಿಯಾಗಿದೆ. ಗಾಹಕರ ಅನುಭವದಿಂದ ಅವರಲ್ಲಿ ಬೆಳೆಯುವ ನಂಬಿಕೆಯೇ ಈ ವ್ಯವಹಾರ ಪ್ರತಿಕೃತಿಯ ಸಫಲತೆಯ ರಹಸ್ಯ. -
Business Model – Freemium Model
Continuing in our discussion on business models, Direct Sales being the last one; today we deal with one of the most common model we see in the software world – It is what we called Freemium.
The term “freemium” is a collation of two words – free and premium. This name beautifully summarizes what this model is all about. Simply it is says make something free and as the customer asks for more features and modifications charge a premium for it.
One of the glaring examples for this is the anti-virus software that we find today. Most anti-virus are offered for free for a specified period of time say 45 days, and on completion the user would need to purchase it. Another variant of the freemium is to give a basic version of the software with limited essential features, and the additional features would be enabled on paying for the license.
This business model would work best when you are trying give the prospective customer a chance a feel of your product. This is a showcase to the customer and sometime also helps not just get the sale but in early phases of release can be used for reviewing the features etc. In some cases this also shows the confidence the developing company has in its product!
Use this technique to win your customer’s appreciation based on your product’s strength.
Read in Kannada: http://somanagement.blogspot.com/2011/03/blog-post_09.html
-
ಬೇಡಿಕೆ ಮತ್ತು ಪೂರೈಕೆ ಚರ್ಚೆ – ೪
ಮುಂಚಿನ ಅಂಕಣದಿಂದ ಮುಂದುವರೆದು, ಇಂದಿನ ಅಂಕಣದಲ್ಲಿ ಇನ್ನೊಂದು ನಿಯಮವನ್ನು ತಿಳಿದುಕೊಳ್ಳೋಣ. ಹಿಂದಿನ ಉದಾಹರಣೆಯಂತೆಯೇ ಇಲ್ಲಿಯೂ ನಿಂಬೆಹಣ್ಣನ್ನು ಬಳಸಿಕೊಳ್ಳೊಣ.ನಿಂಬೇಹಣ್ಣಿನ ವರ್ತಕನು, ಕಳೆದಬಾರಿಯ ದುಬಾರಿ ಆದಾಯವನ್ನು ಗಮನಿಸಿ; ಈ ಬಾರಿಯು ಅಂತೆಯೆ ಆದಾಯದಲ್ಲಿ ಹೆಚ್ಚಳ ಸಿಗಬಹುದೆಂದು, ಹೆಚ್ಚಿನ ಪ್ರಮಾಣದಲ್ಲಿ ನಿಂಬೆಹಣ್ಣನ್ನು ಮಾರುಕಟ್ಟೆಗೆ ತಂದನು. ಇಡೀ ದಿನ ವ್ಯಾಪಾರಕ್ಕೆಂದು ಕೂತರೂ, ಯಾವುದೇ ವ್ಯಾಪಾರವೂ ಕುದುರಲಿಲ್ಲ. ವರ್ತಕನು ತಂದಿರುವ ನಿಂಬೆಹಣ್ಣನ್ನು ಹಿಂದಕ್ಕೆ ಒಯ್ಯುವ ಬದಲಾಗಿ ಅಂದೇ ಮಾರುವ ನಿಶ್ಚಯ ಮಾಡಿ, ನಿಂಬೆಹಣ್ಣಿನ ಬೆಲೆಯನ್ನು ₨೩.೦೦ ಇಳಿಸಿ ₨೧.೫೦ ಎಂದು ಮಾಡಿದನು. ಇದನ್ನು ಕಂಡು ಅಧಿಕ ಬೆಲೆಯಿಂದಾಗಿ ಹಿಂಜರಿತಿದ್ದ ಗ್ರಾಹಕರು ನಿಂಬೇಹಣ್ಣನ್ನು ಖರೀದಿಸಲು ಪ್ರಾರಂಭಿಸಿದರು.ಈ ಮೇಲ್ಕಂಡ ಸ್ಥಿತಿಯನ್ನು ಕೂಲಂಕುಷವಾಗಿ ಗಮನಿಸಿದಾಗ; ಬೇಡಿಕೆ ಮತ್ತು ಪೂರೈಕೆಯ ಮಹತ್ವದ ಇನ್ನೊಂದು ನಿಯಮ ಹೊರಬರುತ್ತದೆ – ಪೂರೈಕೆಯು ಒಂದೇಮಟ್ಟದಲ್ಲಿದ್ದು, ಬೇಡಿಕೆಯು ಕಮ್ಮಿಯಾದಲ್ಲಿ, ಸಮಾನಂತರ ಬೆಲೆಯು ಇಳಿಮುಖ ವಾಗಿರುತ್ತದೆ. -
Supply and Demand Series – 4
Continuing form the point where we left in the earlier discussion on Demand and Supply, we will tweak with the scenario to create the following situation. We would again deal with the lemon vendor.
Let take the following situation: the last time the vendor visited the market, he had a lot people asking for lemons, so with that in mind he gets along with him a greater quantity of lemons than the previous time. As he set up the stall and set the board Rs 3 per lemon, and began waiting for customers to buy his lemons, he found that there was less number of customers turning up. He waited the whole day, and post lunch, he began giving a rebate, put up a board which read Rs 1.5/- per lemon. The number of consumer no increased!
Let’s have a look at what actually happened. The lemon vendor went took the earlier experience and got along with him a large but fixed quantity of lemons. He probably pitched the price point based on his earlier experience at Rs 3/- per lemon. But as the day progressed, not many lemons moved; we any way had to get at least some sales else he would need to take the stock back home. With this in mind he decides to reduce the price and see if the number of people who would purchase the lemons increases. This thought gets him to reduce the price and there by increase sale. Since the sale and the price were lower this time, the vendor would try to reduce the quantity he would get for selling also at that price.
Read in Kannada: http://somanagement.blogspot.com/2011/03/blog-post_4535.html
-
ಮುಖಂಡತ್ವ ಮತ್ತು ವ್ಯವಸ್ಥಾಪನೆ
ಸಾಂಪ್ರದಾಯಿಕವಾಗಿ, ಮುಖಂಡತ್ವ ಮತ್ತು ವ್ಯವಸ್ಥಾಪಕನನ್ನು ಈ ಎರಡು ಪದಗಳ ಅಂತರವನ್ನು- ಪ್ರೇರಣೆಯ ವಿಧಿ
- ಆಡಳಿತ ಆಯಕಟ್ಟು
ಗಳಿಂದ ವಿವರಿಸಲಾಗುತ್ತದೆ.ಇದರಂತೆ, ಸಾಮಾನ್ಯವಾಗಿ ನೇತಾರನಾದವನು ಜನಪರವಾಗಿದ್ದರೆ, ವ್ಯವಸ್ಥಾಪಕನು ಕಾರ್ಯಪರವಾದ ನಿರ್ಧಾರಗಳನ್ನು ತೆಗೆದುಕೊಳ್ಳುವರು. ಆದರೆ ಇಂದಿನ ಜ್ಞಾನದ ಜಗತ್ತಿನಲ್ಲಿ, ಮುಖಂಡತ್ವ ಮತ್ತು ವ್ಯವಸ್ಥಾಪಕವು ತಮ್ಮ ತಮ್ಮ ಪರಿಮಿತಿಗಳಿಂದ ಹೊರಗೆ ಹೋಗಿ ಸಕ್ರಿಯವಾಗಿ ಒಂದರೊಳಗೆ ಇನ್ನೊಂದು ಲೀನವಾಗುತ್ತಿದೆ. ನಾಯಕರು ತಮ್ಮ ಕಾರ್ಯ ಕ್ಷಮತೆಯನ್ನು ಹೆಚ್ಚಿಸಲು ವ್ಯವಸ್ಥಾಪಕ ಸಿದ್ದಾಂತಗಳನ್ನು ಅಳವಡಿಸಿಕೊಳ್ಳಬೇಕಾಗುತ್ತದೆ, ಅಂತೆಯೇ, ವ್ಯವಸ್ಥಾಪಕರೂ ಸಹ ತಮ್ಮ ಸಹೋದ್ಯೋಗಿಗಳಿಂದ ಕಾರ್ಯಸಾಧಿಸಲು ತಮ್ಮದೇ ಆದ ನಾಯಕತ್ವದ ಶೈಲಿಯನ್ನು ಅಳವಡಿಸಿಕೊಳ್ಳಬೇಕಾಗುತ್ತದೆ.ನಾಯಕತ್ವದ ಶೈಲಿಯು ನಾಯಕನಿಂದ ನಾಯಕನಿಗೆ ವಿಭಿನ್ನವಾಗಿರುತ್ತದೆ, ಇದರಂತೆಯೇ ವ್ಯವಸ್ಥಾಪಕನೂ ತನ್ನದೆಯಾದ ಶೈಲಿಯನ್ನು ಅಳವಡಿಸಿ, ತನ್ನ ಅಧೀನರಾಗಿರುವ ನೌಕರರನ್ನು ಹುರಿದುಂಬಿಸಿ, ಸ್ವಯಂಪ್ರೇರಣೆಯಿಂದ ಕಾರ್ಯವನ್ನು ಸಾಧಿಸುವಂತೆ ಸ್ಪೂರ್ತಿಯನ್ನು ತುಂಬಬೇಕು.ಈ ರೀತಿಯಲ್ಲಿ ಸ್ವಯಂಪ್ರೆರಿತ ನೌಕರರು ಸಾಧಿಸುವ ಕಾರ್ಯ, ಅಧಿಕಾರದಿಂದ ವ್ಯವಸ್ಥಾಪಕನು ಹೇಳಿದ ಕಾರ್ಯಕ್ಕಿಂತಲೂ ಹಿರಿದಾಗಿರುವುದು ಖಚಿತ.ಇಂದಿನ ಕಂಪನಿಗಳಲ್ಲಿ ಕಾರ್ಮಿಕರ ಸವಕಳಿಗೆ ಅವರನ್ನು ನೋಡಿಕೊಳ್ಳುತ್ತಿರುವ ವ್ಯವಸ್ಥಾಪಕರು ಅಥವಾ “ಟೀಮ್ ಲೀಡ್ಸ್” ಬಹು ಮುಖ್ಯ ಕಾರಣವಾಗಿರುತ್ತಾರೆ. ಕಾರ್ಮಿಕರನ್ನು ಸರಿಯಾಗಿ ಅರ್ಥಮಾಡಿಕೊಂಡು, ಅವರನ್ನು ಹುರಿದುಂಬಿಸಿ ಕಾರ್ಯ ಸಿದ್ಧಿಯತ್ತ ಪ್ರೇರಿಸುವುದು ಈ ಜ್ಞಾನಾಧಾರಿತ ಜಗತ್ತಿನಲ್ಲಿ ಅತೀ ಮುಖ್ಯ. -
Leadership and Management
Traditional thought on Leadership and Management distinguishes the two aspects:- Motivational style
- Formal structure
The general belief is that Leaders lead people while managers manage tasks. In the knowledge society that we operate out of today, Leadership and Management have by passed their boundaries and are very close terms with a great dynamism. Today, Leaders need to have management skills to handle resources for the purpose, and Managers need to adapt their own style of leadership to effectively encourage and charge their team members to the particular objective.Leadership styles vary with the leader; one might have varied focus in their leadership style – people or process, transactional or transformational, democratic or dictatorial etc. Mangers, whose scope of operation was initially limited to marshaling the available resources and keep things afloat can no longer be said to be the need of the day; managers need to understand their team well, the strength and weakness of the members etc.Motivated team members achieve more than, just incentive lead mechanism of task completion. The manager today needs to align the interest of the team members and get them to volunteer for the purpose of the group. A manager who fails to motivate and drive the interest of the team members would not just be a failure in his role but also be detrimental to the company’s prospects.It is a well acknowledged fact that a major cause of attrition in today’s industry is the immediate boss. The team member would always look up to his/her immediate boss for suggestions, or encouragement in a work scenario and when that is missing it leads not just to dissatisfaction but also to failure of the team structure. Companies today need to ensure that the first level managers understand their task pretty clearly and encourage them to lead and not just limit themselves to manage their resources.Read in Kannada: http://somanagement.blogspot.com/2011/03/blog-post_07.html -
ಮಾನವ ಸಂಪನ್ಮೂಲ ಪರಬಂಧನೆ
ಈ ಹಿಂದೆ ಕಂಡಂತೆ ಬೇಡಿಕೆಯನ್ನು ಪೂರೈಸಲು ವ್ಯವಹಾರದ ಪ್ರತಿಕೃತಿಯನ್ನು ನಿರ್ಮಿಸಿ ಅದಕ್ಕೆ ಬೇಕಾದ ವ್ಯವಹಾರಾಂಗಗಳನ್ನು ಸೇರಿಸಿದಾಗ ವ್ಯವಹಾರದ ಕಾರ್ಯ ಪ್ರಾರಂಭವಾಗುತ್ತದೆ. ಈ ವ್ಯವಹಾರಾಂಗಗಳಲ್ಲಿ ಮಾನವ ಸಂಪನ್ಮೂಲದ ಪ್ರಬಂಧನೆ ಅತೀ ಮುಖ್ಯ. ವ್ಯವಹಾರಕ್ಕೆ ಬೇಕಾಗುವ ಉಳಿದ ಸಂಪನ್ಮೂಲಗಳನ್ನು ವ್ಯವಹಾರದ ಸ್ಪರ್ಧಿಗಳು ಕೊಂಡುಕೊಳ್ಳಬಹುದು, ಆದರೆ ಒಂದು ಕಂಪನಿಯಲ್ಲಿರುವ ಕಾರ್ಮಿಕರು ಮಾತ್ರ ಆ ಕಂಪನಿಯ ಶ್ರೆಷ್ಠತೆಯನ್ನು ಸಿದ್ಧಿಸುವಲ್ಲಿ ಸಮರ್ಥರು.ಮಾನವ ಸಂಪನ್ಮೂಲ ಪ್ರಬಂಧನೆಯೆಂದರೆ, ಕಂಪನಿಯನ್ನು ನಡೆಸುವಲ್ಲಿ ಸಹಕಾರಿಯಾಗಿರುವ ಕಾರ್ಮಿಕರನ್ನು ಪ್ರಭಾವಶಾಲಿಯಾದ ರೀತಿಯಲ್ಲಿ ವ್ಯವಸ್ಥಿತವಾಗಿ ವ್ಯವಹಾರದ ಗುರಿಯೆಡೆಗೆ ಸಾಗಿಸುವುದು. ಪ್ರತಿ ಕಂಪನಿಯು ತನ್ನ ಕಾರ್ಮಿಕರಲ್ಲಿ ಇರುವ ಗುಣ ಕೌಶಲ್ಯಗಳನ್ನು ಉಪಯೋಗಿಸಿ, ಅದನ್ನು ತನ್ನ ಸ್ಪರ್ಧಾತ್ಮಕ ಮುನ್ನಡೆಗೆ ಉಪಯೊಗಿಸಬೇಕಾದಲ್ಲಿ, ಮಾನವ ಸಂಪನ್ಮೂಲ ಪ್ರಬಂಧನೆ ಬಹು ಮುಖ್ಯವಾಗುತ್ತದೆ. ಕಂಪನಿಯು ಈ ವಿಭಿನ್ನತೆಯನ್ನು ಮತ್ತು ಹಲವು ರೀತಿಯಲ್ಲಿ ತೋರಿಸ ಬಹುದು, ಕೇವಲ ಕಾರ್ಯಾಲಯದ ಒಳಗಡೆ ಮಾತ್ರವಲ್ಲ; ಅನಾನುಭವಿಗಳನ್ನು ಹುಡುಕುವಾಗವಾಗಲಿ, ಅಥವಾ ಕಾರ್ಯಾಲಯದ ನಿಯಮದಲ್ಲಾಗಲಿ, ಒಂದೇ ರೀತಿಯಲ್ಲಿ ತನ್ನ ಮಾನವ ಸಂಪನ್ಮೂಲ ಪ್ರಬಂಧನೆಯನ್ನು ತೋರಿಸಬೇಕಾಗುತ್ತದೆ.ಇಂದಿನ ವಿಡಂಬನೆಯೆಂದರೆ, ಈ ಅತಿ ಮುಖ್ಯವಾದ ವ್ಯವಹಾರಾಂಗಕ್ಕೆ ಉಳಿದ ವ್ಯವಹಾರಾಂಗಗಳಷ್ಟು ಪ್ರಾಮುಖ್ಯತೆ ದೊರಕುತಿಲ್ಲ. ಮಾನವ ಸಂಪನ್ಮೂಲ ಪ್ರಬಂಧನೆಯನ್ನು ಸರಿಯಾಗಿ ಮಾದರಿಯನ್ನಾಗಿ ನಿರ್ಮಿಸಿದ್ದಲ್ಲಿ ಅದರಷ್ಟು ಪರಿಣಾಮಕಾರಿಯಾದ ಸ್ಪರ್ಧಾತ್ಮಕ ವ್ಯವಹಾರಂಗ ಮತ್ತೊಂದಿಲ್ಲ. ಮಾನವ ಸಂಪನ್ಮೂಲ ಪ್ರಬಂಧನೆಯ ಬಗ್ಗೆ ಮುಂಬರುವ ಅಂಕಣದಲ್ಲಿ ಇನ್ನೂ ಆಳವಾಗಿ ತಿಳಿದುಕೊಳ್ಳೋಣ. -
Human Resource Management
To bridge the gap of demand and suplly a business model is created and supported with various business functions. Of these business functions, human resource management function plays a very cricital impact on the business success. While most other resources in a business can be imitated, it is the human talent in a company that really differentiates the companies both in terms of their success this far and the potential of growth in the future.Human Resource Management Refers to the effective management of Human Talent who individually and collectively contribute towards achieving the Business’s Objectives. This function is an important one for any company and the way it is managed is probably the best reflection of the uniqueness of the company – it could be called the DNA in many ways. This uniqueness of the company and its emphasis on people can be reflected in every intereaction with the employee or the prospective employee – be it in recruitments, interivews, or work place environment etc.HRM department has to be designed very uniquely, but it is this function that in recent times has found neglect and also lost the faith of the employees. There is definitely a need to improve this function majorly. We will get into understanding this in a series of blogs that would follow this introductory blog.