Blog

  • Demand and Supply Discussion – 2

    In the earlier blog on Supply and Demand, we noted the relation between price that he buyer intends to pay and the quantity available at that price. Now we take the next leap and see what happens when the buyer and supplier meets – that is, how the market price of a good gets fixed.
    Consider the following situation, I go to the market intending buy some lemons. The last time I went to the market the price of each lemon was Rs 2 each and since I was carrying Rs 10/- I expected to have 5 lemons by the time I return. When I get to the only vendor who was selling lemons on that day, I realize he had put up Rs 4 per lemon. At this rate I would probably get only 2 lemons (given half a lemon is not sold). Given my earlier price peg, I wasn’t willing to pay Rs 4, so I begin negotiating with the vendor and finally we settle at Rs 3/- per lemon and had 3 lemons at Rs 10/-.
    This price that both agreed for is the equilibrium price. I began with an expectation that at Rs 10/- I would get 5 lemons, while the vendor wanted to keep it to just 2 lemons for Rs 10/-. I reduced my expectation was happy when I got 3 lemons (and a rupee to take back home) for Rs 10/- and the Vendor didn’t mind giving away 3 instead of 2 lemons. So we “both struck the deal” and agreed at Rs 3/- per lemon. This price, which we both agreed on, is the equilibrium price that is essential for a business transaction to take place between us.
    In the next section, we shall look in detail both the consumer (me) and the vendor made the choice – giving us more clarity of why the price got fixed at this equilibrium price.
    Read in Kannada: http://somanagement.blogspot.com/2011/02/blog-post_21.html
  • ಮಾಹಿತಿ ವೈದೃಶ್ಯ

    ಇತ್ತೀಚಿಗೆ, ನನ್ನ ಸ್ನೇಹಿತನೊಂದಿಗೆ ಒಂದು “ಸೆಕೆಂಡ್ ಹ್ಯಾಂಡ್ ಕಾರ್” ವಿಚಾರಿಸಲು ಹೊರಡುವ ಮುನ್ನ ಒಬ್ಬರನ್ನು ವಿಚಾರಿಸಿದಾಗ ಅವರು, “ಮಾರುತಿ ಟ್ರು ವ್ಯಾಲ್ಯು” ಗೆ ಹೋಗಿ ಅಂತ ಸಲಹೆ ನೀಡಿದರು. ಯಾಕಿರಬಹುದೆಂದು ಯೋಚನೆ ಮಾಡಿದಾಗ ಈ ಕೆಳಗಿನ ತಿಳುವಳಿಕೆ ಮೂಡಿದ್ದು.

    ೧೯೭೦ ಯಲ್ಲಿ ಜೋರ್ಜ್ ಅಕ್ರೆಲೋಫ್ ಎನ್ನುವ ಅರ್ಥಶಾಸ್ತ್ರಜ್ಞ, ಒಂದು ಸಿದ್ಧಾಂತವನ್ನು ನಮ್ಮ ಮುಂದಿರಿಸಿದ, ಈ ಸಿದ್ಧಾಂತವು ಅವನಿಗೆ ಪ್ರಖ್ಯಾತ ನೊಬೆಲ್ ಪ್ರಶಸ್ತಿ ೨೦೦೧ ರಲ್ಲಿ ದೊರಕಿಸಿತು.ಈ ಸಿದ್ಧಾಂತವನ್ನು ನಾವು ನಮ್ಮ ದೈನಂದಿನ ಜೀವನದಲ್ಲಿ, ಮತ್ತು ವ್ಯವಹಾರದಲ್ಲಿ ಕಾಣಬಹುದು.

    ಈ ಮೇಲ್ಕಂಡ ಸನ್ನಿವೇಶವನ್ನು ಮೆಲುಕು ಹಾಕುತ್ತಿದ್ದ ನನಗೆ ಅರ್ಥವಾದದ್ದು ಹೀಗೆ – ಸೆಕೆಂಡ್ ಹ್ಯಾಂಡ್ ಕಾರ್ ಮಾರಲು ಇಚ್ಛಿಸುವ ಜನರು ಹಲವಾರು ಇರುತ್ತಾರೆ, ವ್ಯವಹಾರಕ್ಕೆಂದು ಬರುವ ಕಾರುಗಳೆಲ್ಲವು ಚೆನ್ನಾಗಿರುತ್ತವೆ ಅಂತೇನಿಲ್ಲ, ಕೆಲವು ಉತ್ತಮವಾಗಿದ್ದರೆ ಇನ್ನು ಕೆಲವು ಕಳಪೆ ಮಟ್ಟದಾಗಿರುತ್ತವೆ. ಒಟ್ಟಿಗೆ ಸಾವಿರಾರು ಕಾರುಗಳಿದ್ದಲ್ಲಿ ಇವೆರಡನ್ನೂ ಹೇಗೆ ವಿಂಗಡಿಸಬಹುದು? ಕಾರುಗಳ ಬಗ್ಗೆ ಹೆಚ್ಚು ಮಾಹಿತಿ ಇಲ್ಲದಿದ್ದಲ್ಲಿ, ಕಳಪೆ ಕಾರುಗಳಿರಬಹುದೆಂದು ನಾವು ಹೆಚ್ಚು ಬೆಲೆ ನೀಡಲು ತಯಾರಿರುವುದಿಲ್ಲ, ಹಾಗಾಗಿ ಒಳ್ಳೆಯ ಕಾರುಗಳು ಮಾರುಕಟ್ಟೆಗೆ ಬರುವುದಿಲ್ಲ. ಇದರಿಂದ ನಮ್ಮ ಭರವಸೆ ಕುಗ್ಗುತ್ತಲೇ ಇರುತ್ತದೆ.

    ಇಂತಹ ಸಂದರ್ಭದಲ್ಲಿ ಒಳ್ಳೆಯ ಕಾರುಗಳನ್ನು ಗುರುತಿಸಲು ಹೆಚ್ಚು ಮಾಹಿತಿ ನೀಡ ಬೇಕಾಗುತ್ತದೆ. ಈ ಮಾಹಿತಿಯನ್ನು “ಮಾರುತಿ ಟ್ರು ವ್ಯಾಲ್ಯು” ಎನ್ನುವ ನಾಮ ಪತಾಕೆಯಿಂದ ತಿಳಿಯಬಹುದು.ಇದನ್ನು “ಸಿಗ್ನಲ್” ಎಂದು ತಿಳಿಯಬಹುದು. ಇದು, ಈ ಸಮಸ್ಯೆಗೆ ಸ್ವಲ್ಪ ಮಟ್ಟಿಗೆ ಪರಿಹಾರ ನೀಡಬಹುದು.

    ಮಾಹಿತಿ ವೈದೃಶ್ಯದ ಅತ್ಯಂತ ಹೆಚ್ಚಿನ ಪರಿಣಾಮವನ್ನು ವಿಮೆಯ ಕ್ಷೇತ್ರದಲ್ಲಿ ಕಾಣಬಹುದು, ಆದರೆ ಈ ಸಮಸ್ಯೆ ಎಲ್ಲ ವ್ಯವಹಾರಗಳಲ್ಲೂ ನೋಡಬಹುದು – ತಂಪು ಪಾನೀಯದಿಂದ ಹಿಡಿದು ಕೆಲಸಕ್ಕೆ ನಡೆಯುವ ಸಂದರ್ಶನದಲ್ಲೂ ನೋಡಬಹುದು. ನಿರ್ಧರ ತೆಗೆದುಕೊಳ್ಳುವಲ್ಲಿ ಪ್ರಬಂಧಕರು ಖಡ್ಡಾಯವಾಗಿ ಇದನ್ನು ಗಮನದಲ್ಲಿಟ್ಟುಕೊಳ್ಳಬೇಕು.

  • Information Asymmetry and Decision making

    Recently, I accompanied my friend who was scouting for a second hand car. Our research in the friends circle revealed that they had burnt their hands getting a deal fixed by a mechanic, they suggested we get to a Maruthi True Value in case we were looking for any Maruthi car.
    Looking back at this experience, I could associate it with the problem of Information asymmetry – today business relies very heavily on bridging this information gap. In-fact, this was theoretically identified for the first time by George Akerlof in 1970 and went on to get him the Nobel price in 2001.
    Imagine a situation when I have a lot of cars to choose from, and I have little information about the car which I buy from the mechanic. There is every incentive for the mechanic and the owner of the car to conspire and give me a shoddy car!. How do I hedge against this, I decide to give a very low price for the car. Now this act of mine give a blow to the owner of a good car who intends to sell his good car. He too get a low price for the good car. The problem gets extremely challenging since there are so many bad cars and the good cars can’t be found easily.
    To solve this deadlock and give a better return on the good car, there has to be a way to signal that the car is good – otherwise I have no incentive to pay more. This is where “Maruthi True Value” came in and gave this signal to the potential buyer like my friend that this car is certified by Maruthi itself.
    This situation probably has the largest effect on the insurance industry, than others, but this problem is present in almost every business – be it soft drink manufacturer or even at an interview table. The decision making becomes a major issue due to the information asymmetry that we find so prevalent in the environment.
  • ಈವರೆಗಿನ ಪಯಣ

    ನಮಸ್ಕಾರ,

    ವ್ಯವಸ್ಥಾ ಪ್ರಬಂಧದ (Management) ಈ ಅಂಕಣಗಳ ಶ್ರೇಣಿಯಲ್ಲಿ ಮುಂದುವರೆಯುವ ಮುನ್ನ, ಒಂದು ಹಿನ್ನೋಟ ಅಗತ್ಯವೆನಿಸಿತು ಹಾಗಾಗಿ ಈ ವಿಶೇಷ ಅಂಕಣವನ್ನು ಇಲ್ಲಿ ಸೇರಿಸಿದ್ದೇನೆ. ನಾವು ಕಲಿತದ್ದನ್ನು ಪುನರಾವರ್ತಿಸಿ ಯಥಾದೃಶ್ಯ ರೂಪಣ ನೀಡುವುದೇ ಇದರ ಉದ್ದೇಶ.

    ಇಲ್ಲಿಯವರೆಗೆ, ವ್ಯವಸ್ಥಾ ಪ್ರಬಂಧವನ್ನು ಜಟಿಲ ನಿರ್ಧಾರಗಳನ್ನು ತೆಗುದುಕೊಳ್ಳುವ ಕಾರ್ಯ ಎಂದು ತಿಳಿದು, ಮುನ್ನಡೆಯುತ್ತ ವ್ಯವಹಾರ ಪ್ರತಿಕೃತಿಯು ಹೇಗೆ ಬೇಡಿಕೆ ಮತ್ತು ಪೂರೈಕೆಯ ಅಂತರವನ್ನು ಜೋಡಿಸುವುದೆಂದು ಅರಿತುಕೊಂಡೆವು. ವ್ಯವಹಾರ ಪ್ರತಿಕೃತಿಯ ಸಫಲತೆಯಲ್ಲಿ ವ್ಯವಹರಾಂಗಗಳು ಬಹು ಮುಖ್ಯಪಾತ್ರ ವಹಿಸುತ್ತವೆ, ಇದರಂತೆಯೇ ಉತ್ಪನ್ನಾಂಶಗಳು ಮತ್ತು ಅವುಗಳ ರೂಪರೇಶೆಗಳ ಸರಿಯಾದ ತಿಳುವಳಿಕೆ, ನಿರ್ಧಾರ ತೆಗೆದುಕೊಳ್ಳುವ ಕಾರ್ಯದಲ್ಲಿ ತುಂಬಾ ಸಹಾಯಕವಾಗುವುದು.

    ನೀವು ಗಮನಿಸಿರಬಹುದು, ಈ ಅಂಕಣಗಳಲ್ಲಿ ನಾನು ಪಠ್ಯಕ್ರಮದಲ್ಲಿರುವಂತೆ ಪ್ರತಿ ವಿಷಯವನ್ನು ಒಂದೊಂದಾಗಿ ತಿಳಿಸದೆ, ಆ ವಿಷಯದ ಉಪಯೋಗ ಮತ್ತು ಅದನ್ನು ಉಪಯೋಗಿಸಿ ನಿರ್ಧಾರ ಮಾಡುವುದರ ಉದ್ದೇಶದಿಂದ ಈ ವ್ಯತ್ಯಾಸವನ್ನು ಅಳವಡಿಸಿದ್ದೇನೆ. ಮುಂಬರುವ ದಿನಗಳಲ್ಲಿ ಒಂದೊಂದಾಗಿ ವ್ಯವಸ್ಥಾ ಪ್ರಬಂಧದ ಸೊಗಸನ್ನು ಬಿಚ್ಚಿಡುವ ಪ್ರಯತ್ನದಲ್ಲಿ ನಿರತನಾಗುವೇ.

    ನಿಮ್ಮ ಪತ್ರಗಳು ಮತ್ತು ಇತರೆ ಸಂಪರ್ಕದಿಂದ ನನಗೆ ಪ್ರೋತ್ಸಹಿಸಿರೋದನ್ನು ನೋಡಿ ನನ್ನ ಹುಮ್ಮಸ್ಸು, ಉತ್ಸಾಹ ಇಮ್ಮಡಿಯಾಗಿದೆ. ಧನ್ಯವಾದಗಳು. ಮುಂದಿನ ವಾರ ಸಿಗೋಣ. – ಸಚ್ಚಿ


  • The journey this far

    Before I continue discussing on other aspects of Management in this blog, taking cue from my interaction with students that frequently revision of the concepts and providing the larger perspective is a must and, hence retrospective blog.

    Having defined management as a complicated decision making process, we went on to see how a business model is the critical success ingredient when one tries to match the demand and supply gap. Every Business function plays a very critical role in the success of a business model, a thorough understanding of the primary elements of the factors of production is key in the decision making attempt by managers.

    I haven’t yet dealt with some topics that many MBA students begin their study with – a basic course on economics, statistics, accountancy etc. I have found that many students of management specialize too quickly in a particular area, but forget to get the general picture of the working which is essential for a good decision making. We would definitely explore these components of management, but I would approach it from a management application – decision making perspective than just a tutorial perspective.

    My interactions with most of you have encouraged me to keep these blogs applications focused. Thank you all for getting back to me on the blog posts. Looking forward to share more what I have learnt. Lets meet next week – Sachi

    Read in Kannada:http://somanagement.blogspot.com/2011/02/blog-post_16.html

  • ವ್ಯವಹಾರ ಪ್ರತಿಕೃತಿ – ಚರ್ಚೆ ಭಾಗ ೧

    ಯಾವುದಾದರು ವಾಣಿಜ್ಯ ಅವಕಾಶವನ್ನು ಗುರುತಿಸಿಕೊಂಡಾಗ, ನನ್ನ ಮನಸಿನ್ನಲ್ಲಿ ಬರುವ ಎರಡು ಯೋಚನೆಗಳು – ಇದನ್ನು ನಾನು ಹೇಗೆ ವಾಣಿಜ್ಯ ವ್ಯವಹಾರವನ್ನಾಗಿ ಪರಿವರ್ತಿಸಬಹುದು ಮತ್ತು ಆ ಬೇಡಿಕೆಗೆ ಅನುಗುಣವಾಗಿ ಪೂರೈಕೆಯನ್ನು ಹೇಗೆ ಮಾಡುವುದು. ಈ ಎರಡು ಪ್ರಶ್ನೆಗಳ ಉತ್ತರವೇ ವ್ಯವಹಾರದ ಪ್ರತಿಕೃತಿ (Business Model), ಇದರಿಂದ ಸಂಪಾದನೆ ಆಗುವ ಹಣಕಾಸು ಸಾರ್ಥಕತೆಯ ಪ್ರತೀಕ.
    ಇಂತಹ ಪ್ರಮುಖವಾದ ಅಂಶದ ಮೇಲೆ, ಪ್ರತಿ ವ್ಯವಹಾರಿ ಮತ್ತು ವರ್ತಕನು ಗಮನಹರಿಸಲೇ ಬೇಕು, ಆದರೆ ಯಾವುದೇ ಒಂದು ವ್ಯವಹಾರ ಪ್ರತಿಕೃತಿ ಆ ವ್ಯವಹಾರದ ಯಶಸ್ಸಿನ ಭರವಸೆ ನೀಡಲು ಅಸಮರ್ಥವಾಗಿರುತ್ತದೆ. ಒಂದು ವ್ಯವಹಾರಕ್ಕೆ ಯಶಸ್ಸು ಕಾಣಿಸಿದ ಪ್ರತಿಕೃತಿ ಇನ್ನೊಂದಕ್ಕೆ ಯಶಸ್ಸು ನಿಶ್ಚಯಿಸಿರುವುದಿಲ್ಲ , ಪ್ರತಿಯೊಂದು ವ್ಯವಹಾರವು ತನ್ನದೇ ಆದ ಪ್ರತಿಕೃತಿಯನ್ನು ಕಂಡುಹಿಡಿಯತಕ್ಕದ್ದು. ಇದಕ್ಕೆ ಅನುಗುಣವಾಗಿ ವ್ಯವಹಾರದಲ್ಲಿ ಪಾಲ್ಗೊಳ್ಳುವ ಎಲ್ಲರ ಒಳನೋಟ ತುಂಬಾ ಪ್ರಮುಖವಾಗಿರುತ್ತದೆ.
    ವ್ಯವಹಾರ ಪ್ರತಿಕೃತಿ ಸರ್ವೇಸಾಮಾನ್ಯವಾಗಿ, ಹೊಸತನದ ಚಿಲುಮೆಯಾಗಿರುತ್ತದೆ. ವ್ಯವಹಾರ ಪ್ರತಿಕೃತಿ ಮತ್ತು ಅದರೊಂದಿಗೆ ಬರುವ ಹೊಸತನದ ಆಧಾರ – ವ್ಯವಹಾರಾಂಗಗಳು, ಅರ್ಥಶಾಸ್ತ್ರ, ಆರ್ಥಿಕತೆ ಮುಂತಾದವುಗಳು. ಒಂದು ಸಾಧಾರಣವಾದ ಆವಿಷ್ಕಾರಕ್ಕೆ ಪೂರಕವಾಗಿ ಒಳ್ಳೆಯ ವ್ಯವಹಾರ ಪ್ರತಿಕೃತಿ ದೊರೆತಲ್ಲಿ, ಅದು ಅತ್ಯಾದ್ಭುತವಾದ ಆವಿಷ್ಕಾರಕ್ಕೆ ದೊರೆತ ಸಾಧಾರಣ ವ್ಯವಹಾರ ಪ್ರತಿಕೃತಿಗಿಂತಲೂ ಹೆಚ್ಚು ಪರಿಣಾಮಕಾರಿಯಾಗಿರುವುದನ್ನು ಕಂಡಿದ್ದೇವೆ. ಯಾವುದೇ ವ್ಯವಹಾರ ಪ್ರತಿಕೃತಿಯ ಯಶಸ್ಸು ಎರಡು ಮುಖ್ಯ ಪ್ರಶ್ನೆಗಳ ಮೇಲೆ ನಿಂತಿದೆ
    – ವ್ಯವಹಾರ ಹೇಗೆ ತನ್ನ ಆದಾಯ ಪಡೆಯುವುದು?
    – ಆ ಆದಾಯ ಎಷ್ಟು ಬೇಗ ದೊರಕುವುದು?
    ಸೂಕ್ತವಾದ ವ್ಯವಹಾರ ಪ್ರತಿಕೃತಿಯನ್ನು ಕಂಡುಕೊಳ್ಳುವುದು, ಈ ಸ್ಪರ್ಧಾತ್ಮಕ ವಾಣಿಜ್ಯ ಕ್ಷೇತ್ರದಲ್ಲಿ ಅತೀ ಮುಖ್ಯವಾದುದು. ಮುಂಬರುವ ಅಂಕಣಗಳಲ್ಲಿ ಇಂತಹ ಹಲವು ವ್ಯವಹಾರ ಪ್ರತಿಕೃತಿಯ ಬಗ್ಗೆ ತಿಳಿಯುವ ಪ್ರಯತ್ನಮಾಡೋಣ.

  • Business Models – A Discussion Series

    On identifying an opportunity – which is essentially a gap between the demand and supply, or an innovation to enhance the way this gap is catered to – I am partially ready for business. The first thing that I look out for is “how do I make money”, the next is “how do I deliver what I promised”. This in essence is – “Business Model”, and the “Cashflow” details through it is the secret of business success.
    A Business Model is the most important decision about which companies have to be clear. There is no single business model that ensures success to all its adopters, each company needs to design its own. Some models are more successful than the other, but there is no guarantee that it would work for me. It is the connection between various domain expertise which is the bed rock of any business model innovation. However, the actual measure of a successful business model is two fold
    • how would the business model generate revenue for the company?
    • how quickly would it allow the companies to generate revenue?
    A business model acquires itself from a multitude of streams like economics, entrepreneurship, finance, marketing, operations, strategy etc. Infact, the significance of a good business model becomes clear when we notice that, an average innovation with a great business model is more successful than a great innovation with an average business model.
    Finding the apt business model is the key to survive in this very competitive market. We would explore some of the generally used business models in the forth coming blogs.
    Read more about the Bait and Hook Business Model.
  • ವಿನಿಮಯದ ಚರ್ಚೆ- ಬೇಡಿಕೆ ಮತ್ತು ಪೂರೈಕೆ

    ಏನನ್ನಾದರೂ ಖರೀದಿಸಲೆಂದು ಮಾರುಕಟ್ಟೆಗೆ ಹೋಗುವಾಗ ಆ ವಸ್ತುವಿನ ಗುಣಗಳ ಬಗ್ಗೆ ತಿಳಿದು ಅದಕ್ಕೆ ತಕ್ಕಂತೆ ಮಾನಸಿಕವಾಗಿ ಒಂದು ಮೊತ್ತವನ್ನು ನೀಡಲು ನಿರ್ಧರಿಸಿರುತ್ತೇವೆ (ಸದ್ಯಕ್ಕೆ “ಬ್ರ್ಯಾಂಡ್” ಮುಂತಾದವುಗಳ ಬಗ್ಗೆ ಯೋಚಿಸುವುದು ಬೇಡ). ಮಾರುಕಟ್ಟೆಗೆ ಹೋದಾಗ ‘ಅ‘ ವಸ್ತು ಸಿಕ್ಕ ನಂತರ, ಮತ್ತು ಅದೇ ಗುಣಗಳುಳ್ಳ ಇನ್ನೊಂದು ವಸ್ತು ‘ ಸಿಕ್ಕಿದ ನಂತರ ಅಲ್ಲೇ ಇರುವ ಮಾರಟಗರನಿಗೆ “ಇವುಗಳ ಬೆಲೆ ಎಷ್ಟು?” ಎಂದು ಕೇಳಿದಾಗ ‘ಅ’ಗೆ ರೂ.೧೫, ‘‘ಗೆ ರೂ.೧೦ ಎಂದು ಹೇಳಿದಾಗ ನಿಶ್ಚಯವಾಗಿ ‘ಬ’ ವನ್ನು ಕೊಂಡುಕೊಳ್ಳುತ್ತೇವೆ. ಇದನ್ನೇ “ಲಾ ಆಫ್ ಡಿಮಂಡ್” ಅಥವಾ “ಬೇಡಿಕೆಯ ನಿಯಮ” ಎಂದು ಕರೆಯುತ್ತೇವೆ. ಇದರಂತೆ ಎಲ್ಲವೂ ಸಮಾನವಾಗಿದ್ದಲ್ಲಿ, ನಾವು ವಸ್ತುವನ್ನು ಕೊಂಡುಕೊಳ್ಳುವ ನಿರ್ಧಾರ ಆ ವಸ್ತುವಿನ ಬೆಲೆಯ ಮೇಲೆ ಆಧಾರಿತವಾಗಿದೆ; ಬೆಲೆ ಹೆಚ್ಚಿದ್ದಲ್ಲಿ ಆ ವಸ್ತುವಿನ ಬೇಡಿಕೆ ಕಡಿಮೆ ಆಗುತ್ತದೆ, ಬೆಲೆ ಕಡಿಮೆ ಇದ್ದಲ್ಲಿ ಅದರ ಬೇಡಿಕೆ ಹೆಚ್ಚುತ್ತದೆ. ಇದನ್ನು ಕೆಳಕಂಡ “ಡಿಮಾಂಡ್ ಗ್ರ್ಯಾಪ್ಹ್” ನಲ್ಲಿ ತೋರಿಸಿದ್ದಾರೆ.

    ಸದ್ಯಕ್ಕೆ ನಾನೊಬ್ಬ ತರಕಾರಿ ವರ್ತಕನೆಂದು ಕೊಳ್ಳೋಣ, ನನ್ನ ಹತ್ತಿರ, ಸಾಕಷ್ಟು ಭೂಮಿ ಇದ್ದು, ಅದರಲ್ಲಿ ಬೆಳೆಸಿದ ಬೂದುಕುಂಬಳಕಾಯಿಯನ್ನು ತಲಾ ರೂ. ೨೦ಕ್ಕೆ ಮಾರುತ್ತಿರುವಾಗ ಯಾರೋ ಇನ್ನೊಬ್ಬ ವರ್ತಕನು ಬಂದು ನನಗೆ ನಿನ್ನಲ್ಲಿರುವ ಎಲ್ಲಾ ಕುಂಬಳಕಾಯಿಗಳನ್ನೂ ನೀಡು, ಪ್ರತಿಯೊಂದಕ್ಕು ರೂ. ೨೫ ಕೊಡುತ್ತೇನೆ, ಎಂದಾಗ ನಾನು ಒಪ್ಪಿ ಕೊಳ್ಳುತ್ತೇನೆ – ನನಗೆ ಲಾಭ ಹೆಚ್ಚಾಗುತಿದ್ದಲ್ಲಿ ನಾನ್ಯಾಕೆ ಬಿಡಲಿ? ಅಂತೆಯೇ ಈ ಸ್ಥಿತಿಯನ್ನು ಗಮನದಲ್ಲಿ ಇಟ್ಟುಕೊಂಡು “ಲಾ ಆಫ್ ಸಪ್ಲೈ” (ಪೂರೈಕೆಯ ನಿಯಮ) ನಿರ್ಮಿಸಿದ್ದಾರೆ. ಇದನ್ನೇ ನಾವು “ಸಪ್ಲೈ ಗ್ರ್ಯಾಪ್ಹ್” ನಲ್ಲಿ ತೋರಿಸಿದ್ದೇವೆ.

    ಇವೆಲ್ಲದರ ಪ್ರಾಮುಖ್ಯತೆ ನಾವು ಕೈಗೊಳ್ಳುವ ನಿರ್ಧಾರಗಳಲ್ಲಿ ಅತೀ ಮುಖ್ಯವಾಗಿರುತ್ತವೆ. ಇನ್ನು ಮುಂಬರುವ ಅಂಕಣಗಳಲ್ಲಿ ಸಮೀಪವಾಗಿ ಅರ್ಥೈಸಿಕೊಳ್ಳುವ ಪ್ರಯತ್ನ ಮಾಡುವೆವು.

    ಇದರ ಆಂಗ್ಲ ಅನುವಾದ ಅಂಕಣ: http://somanagement.blogspot.com/2011/02/modeling-supply-and-demand-discussion.html

  • Modeling Supply and Demand – A discussion series

    When I generally go to shop, I search for a particular item ‘A’ and have a mentally fixed price I intend to pay (assume we don’t have a price tag here). Then I find another item ‘B’ with all the features of ‘A’ (exclude brand and similar intangibles for the moment); given my expectation both these would have to be of the same price. I then ask their price to the sales person there – he say ‘A’ cost ₨ 25/- and ‘B’ costs ₨20/-. Now I would definitely opt for the item ‘B’. This mentality is pretty common amongst people and is summarised by the Law of Demand – “if all other factors remain equal, the higher the price of a good, the less people will demand that good.” i.e – the higher the price, the lower the quantity demanded. We represent this with the Demand Curve.
    Now assume, I am a vegetable vendor who has his own farm which has innumerable cucumbers. I take some cucumbers to the market and try selling it at ₨10/- each. One of my customers comes to me and asks if I am interested in partnering with him – and he says he would provide ₨15/- per cucumber for as many as I give. I have an incentive to tie up with him since I would be getting a higher price than the earlier price I used to get. This is pretty common – the more some one is ready to pay for something, the more we produce to cater to it. This is summarized by the Law of Supply. This is generally represented by the Supply Curve.
    We shall explore more about these in the coming blogs. The idea of these blogs is to understand the decision making process better.
  • ಉತ್ಪಾದನಾಂಶ

    ಉತ್ಪಾದನೆಗೆ ಬೇಕಾಗುವ ಪದಾರ್ಥಗಳು ಮತ್ತು ಸೇವೆಗಳನ್ನೆಲ್ಲ ಉತ್ಪಾದನಾಂಶವೆಂದು ಕರೆಯುತ್ತೇವೆ. ಇಂತಹ ಉತ್ಪಾದನಾಂಶಗಳಲ್ಲಿ ಪ್ರಾಥಮಿಕವದವುಗಳು – ನೆಲ, ಮಾನವ ಶ್ರಮ, ಮತ್ತು ಬಂಡವಾಳ ಆಧಾರಿತ ಸರುಕು ಸಾಮಗ್ರಿಗಳು ಮತ್ತು ಯಂತ್ರಗಳು.
    ನೆಲವೆಂದರೆ ಕೇವಲ ಭೂಮಿಮಾತ್ರವಲ್ಲ, ಅದರಲ್ಲಿ ಬರುವ ನೈಸರ್ಗಿಕ ಸಂಪನ್ಮೂಲಗಳು ಸೇರಿರುತ್ತವೆ – ಇದಕ್ಕೆ ಪ್ರತಿಯಾಗಿ ನಾವು ಸರಿಯಾದ ಗುತ್ತಿಗೆ ನೀಡಬೇಕಾಗುತ್ತದೆ, ಅಂತೆಯೇ ಮಾನವ ಶ್ರಮಕ್ಕೆ ಸಂಬಳ ಮತ್ತು ಬಂಡವಾಳಕ್ಕೆ ಬಡ್ಡಿಯನ್ನು ನೀಡಬೇಕಾಗುತ್ತದೆ. ಯಾವುದೇ ವ್ಯವಹಾರದ ಆಧಾರವಾಗಿರುವ ಇವುಗಳು, ಕೇವಲ ಪೂರಕವಾಗಿದ್ದು, ತಾವೇ, ಯಾವುದೇ ಕಾರಣಕ್ಕೂ ಪರಿವರ್ತನೆ ಹೊಂದುವುದಿಲ್ಲ – ಆದ್ದರಿಂದಲೇ ಇವುಗಳನ್ನು ಪ್ರಾಥಮಿಕ ಉತ್ಪಾದನಾಂಶ ಎನ್ನುತ್ತೇವೆ.
    ಇವುಗಳಲ್ಲಿ ನೆಲದ ಉಪಯೋಗ ಸ್ಥೂಲವಗಿರುತ್ತದೆ , ಆದರೆ ಮಾನವ ಶ್ರಮ ಮತ್ತು ಬಂಡವಾಳ ಸಕ್ರಿಯವಾಗಿರುತ್ತದೆ, ಮಾನವರನ್ನು ಮತ್ತು ಯಂತ್ರಗಳು ಮುಂತಾದವನ್ನು ಒಂದು ಸ್ಥಳದಿಂದ ಇನ್ನೊಂದೆಡೆಗೆ ಸಾಗಿಸ ಬಹುದು ಆದರೆ ನೆಲಕ್ಕೆ ಇಂತಹ ಸವಲತ್ತಿಲ್ಲ, ಆದ್ದರಿಂದಲೇ ಇದನ್ನು ಸ್ಥೂಲವೆಂದು ಪರಿಗಣಿಸುತ್ತೇವೆ.
    ಇಂತಹ ಉತ್ಪಾದನಾಂಶಗಳನ್ನು ಕುರಿತ ಪ್ರಮುಖ ದ್ವಂದ್ವವೊಂದಿದೆ – ಶ್ರಮ ಮತ್ತು ಬಂಡವಾಳ ಒಂದನ್ನು ಇನ್ನೊಂದಾಗಿ ಬದಲಾಯಿಸಬಹುದು – ಹೀಗಿರುವಾಗ, ದಕ್ಷವಾದ ನಿರ್ಧಾರ ತೆಗೆದುಕೊಂಡು, ಮುನ್ನಡೆಸಬೇಕಾಗುತ್ತದೆ. ಇದನ್ನು ಅಳತೆಮಾಡುವುದಕ್ಕೆ ಪ್ರಮಾಣಳತೆ ಪ್ರತಿ ಕಾರ್ಮಿಕರ ಮೇಲೆ ಹೂಡುವ ಬಂಡವಾಳ. – ಇದರಂತೆ ಮಾನವ ಶ್ರಮ ಮತ್ತು ಬಂಡವಾಳ ಸರಿಯಾದ ಪ್ರಮಾಣದಲ್ಲಿರತಕ್ಕದ್ದು.

    ಇದರಲ್ಲಿ ವ್ಯತ್ಯಾಸ ಕಂಡಲ್ಲಿ ವ್ಯವಹಾರದ ಸಾಮರ್ಥ್ಯ ಏರುಪೇರಾಗುವ ಸಾದ್ಯತೆ ಹೆಚ್ಚು. ಅಂತೆಯೇ ಸರಿಯಾದ ನಿರ್ಧಾರತೆಗೆದುಕೊಳ್ಳುವುದು ಅತ್ಯಂತ ಮುಖ್ಯವಾದುದು. ಇಂತಹ ನಿರ್ಧಾರವು ಯಾವುದೇ ಒಂದು ಉತ್ಪಾದನಾಂಶಕ್ಕೆ ಸೀಮಿತಗೊಳಿಸದೆ, ಸರಕಾರ, ವಾಣಿಜ್ಯ, ಪರಿಸರ, ಮುಂತಾದವನ್ನು ಲೆಕ್ಕಿಸಿ ನಿರ್ಧರಿಸಬೇಕು.
    ಇಂದಿನ ಆಂಗ್ಲ ಅಂಕಣ:http://somanagement.blogspot.com/2011/02/factors-of-production.html