ನಾವು ವ್ಯಾವಹಾರಿಕ ಯುಕ್ತಿಯ ಬಗ್ಗೆ ಸೂಕ್ಷ್ಮವಾಗಿ ಪರಿಶೀಲಿಸಿದಾಗ ಯುಕ್ತಿಗಳು ನಿರಂತರವಾಗಿ ಬದಲಾಗುತ್ತಿರುತ್ತವೆ ಎಂಬುದು ಅರಿವಾಗುತ್ತದೆ. ಈ ರೀತಿಯಾಗುವುದು ಇದರ ನ್ಯೂನ್ಯತೆಯೋ ಅಥವಾ ಸಾಮಾನ್ಯ ವಿಚಾರವೋ?
ಈ ಪ್ರಶ್ನೆಗೆ ಉತ್ತರ ಅಷ್ಟು ಸ್ಪಷ್ಟವಾಗಿ ಸಿಗದು. ನಾವು ಯುಕ್ತಿಯೊಂದು ಬದಲಾಗುವುದನ್ನು ಒಪ್ಪಿಕೊಳ್ಳುತ್ತೇವೆ. ಈ ಪ್ರಶ್ನೆಯನ್ನು ಇಂದಿನ ಅಂಕಣ ಮತ್ತು ಮುಂದಿನ ಅಂಕಣಗಳಲ್ಲಿ ಪರಿಹರಿಸುವ ಯತ್ನ ಮಾಡೋಣ.
ಈ ಒಂದು ಪ್ರಕ್ರಿಯನ್ನು ಅರಿಯಲು ನಮಗೆ ಕೆಲವೊಂದು ವ್ಯಾಖ್ಯಾನಗಳ ಅಗತ್ಯವಿದೆ.
ಉದ್ದೇಶಿಸಿದ ಯುಕ್ತಿ (Intended Strategy) : ಒಂದು ಕಂಪನಿಯು ಶುರುವಾಗುವಾಗ ಅದು ಅನುಸರಿಸಲು ರೂಪಿಸಿದ ವ್ಯಾವಹಾರಿಕ ಯುಕ್ತಿ.
ನಡೆಸಿದ ಯುಕ್ತಿ (Deliberate Strategy) : ಕಂಪನಿ ನಿಜವಾಗಲು ಅನುಸರಿಸಿದ ಯೋಚಿಸಿದ ಯುಕ್ತಿ
ಕಾರ್ಯಗತಗೊಂಡ ಯುಕ್ತಿ (Realized Strategy): ಕಂಪನಿಯನ್ನು ನಿಜವಾಗಿ ನಡೆಸಿಕೊಂಡು ಹೋಗುತ್ತಿರುವ ಯುಕ್ತಿ.
ಕಾರ್ಯಗತಗೊಳ್ಳದ ಯುಕ್ತಿ (Unrealized Strategy): ಕಂಪನಿಯನ್ನು ನಿಜವಾಗಿ ನಡೆಸದಿರುವ ಯೋಚಿಸಿದ ಯುಕ್ತಿ
ರೂಪಗೊಂಡ ಯುಕ್ತಿ (Emergent Strategy): ಸಮಯಕ್ಕೆ ತಕ್ಕಂತೆ ರೂಪಿಸುತ್ತಾ ಉಂಟಾದ ಯುಕ್ತಿ ಅಥವಾ ಅನುಸರಿಸುವಾಗ ಮೂಲಭೂತವಾಗಿ ಮಾರ್ಪಾಡು ಹೊಂದಿದ ಯುಕ್ತಿ.
ಇದನ್ನು ಹೆನ್ರಿ ಮಿಂಟ್ಸ್ ಬರ್ಗ್ ಎಂಬಾತನು ತನ್ನ “Strategy Formulation is an Adhocracy” ಎಂಬ ಪುಸ್ತಕದಲ್ಲಿ ಚಿತ್ರೀಕರಿಸಿದ್ದಾನೆ. ಇದನ್ನೇ ಸ್ವಲ್ಪ ಮಾರ್ಪಾಡು ಪಡೆಸಿ ಕೆಳಗೆ ನಾವು ನಿಮಗೆ ತೋರಿಸಿದ್ದೇವೆ.

Leave a Reply
You must be logged in to post a comment.