೨೦ ವರ್ಷಗಳ ಹಿಂದೆ ನಡೆದ ಆರ್ಥಿಕ ಬಿಕ್ಕಟ್ಟಿನ ಪರಿಣಾಮವಾಗಿ ಸರ್ಕಾರವು ಮುಕ್ತ ಮಾರುಕಟ್ಟೆಯ ನೀತಿಯನ್ನು ಅನುಸರಿಸಲು ಪ್ರಾರಂಭಿಸಿದರು. ಇದರಿಂದ ಮುಂಚೆ ಸರ್ಕಾರವೇ ಕಾರ್ಖಾನೆಗಳನ್ನು ಮುಂತಾದವುಗಳನ್ನು ನಿರ್ಮಿಸಿ ಅದರ ಸುತ್ತಲೂ ಕಾರ್ಮಿಕರಿಗೆ ಮನೆಗಳು, ಶಾಲೆಗಳು ಮುಂತಾದವುಗಳನ್ನು ನಿರ್ಮಿಸಿ ತನ್ನದೇಯಾದ ಒಂದು ಸಾಮಾಜಿಕ ವ್ಯವಸ್ಥೆಯನ್ನು ನಿರ್ಮಿಸಿದ್ದರು.
ನನ್ನ ಅನುಭವದಂತೆ, ಮುಕ್ತ ಆರ್ಥಿಕತೆ ಹೆಚ್ಚಿದಂತೆ ಈ ಕಾರ್ಖಾನೆಗಳು ತಮ್ಮ ಸ್ವಾಭಾವಿಕ ಸಾವಿನೆಡೆಗೆ ಹೊಗುತ್ತಿದ್ದಂತೆ ಇದರ ಸುತ್ತಲು ಬೆಳೆದಿದ್ದ ಸಾಮಾಜಿಕ ಪದ್ಧತಿ ಮತ್ತು ಸಮಾಜ ಕಾಣೆಯಾಗ ತೊಡಗಿತು. ಭಾರತಕ್ಕೆ ಬರುತ್ತಿದ್ದ ಬಹು ರಾಷ್ಟ್ರಿಯ ಕಂಪನಿಗಳು, ಸರಕಾರದ ಕಂಪನಿಗಳು ನಡೆಸುತ್ತಿದ್ದ ಸಾಮಜಿಕ ಜವಾಬ್ದಾರಿಯನ್ನು ಪರಿಗಣಿಸದೆ, ಹೆಚ್ಚಾಗಿ ಆದಾಯವನ್ನೆ ಗಳಿಸುವುದನ್ನು ನೋಡಿದರು.
ಬಹುರಾಷ್ಟ್ರಿಯ ಕಂಪನಿಗಳು ತಮ್ಮ ಸಾಮಾಜಿಕ ಜವಾಬ್ದಾರಿಯನ್ನು ಕೇವಲ ಸಿ.ಎಸ್.ಆರ್ ಗೆ ಮೀಸಲಿಟ್ಟಿರುವುದನ್ನು ನೊಡಿದ್ದೇವೆ. ಇಂತಹ ಸಿ.ಎಸ್.ಆರ್ ಕಾರ್ಯಗಳು ಸಹ ಸಾಮಾಜಿಕ ಜವಾಬ್ದಾರಿಗಳಿಗಿಂತ ಹೆಚ್ಚಾಗಿ ಕಂಪನಿಗಳು ತಮ್ಮ “ಮಾರ್ಕೆಟಿಂ”ಗೆ ಉಪಯೋಗಿಸುತ್ತಿದ್ದರೆ.
ವ್ಯವಹಾರಗಳು ಸಮಾಜದ ಬೆಂಬಲವಿಲ್ಲದೆ ನಡೆಯುವುದು ಅಸಾಧ್ಯ, ಹೀಗಿದ್ದಲ್ಲಿ, ಅವುಗಳ ಸಮಾಜದ ಪ್ರತಿ ತಮ್ಮ ಹೊಣೆಯನ್ನು ಹೆಚ್ಚು ಧೃಢತೆಯಿಂದ ನಡೆಸಬೇಕು.
ಇಂತಹ ವಿಚಾರಗಳ ಚರ್ಚೆ ಬಹು ಮುಖ್ಯವಾದುದು – ನಮ್ಮ ಚರ್ಚೆ ವೇದಿಕೆಯಲ್ಲಿ ಇದರ ಮೇಲೊಂದು ಚರ್ಚೆಯನ್ನು ಆರಂಭಿಸುವೆವು. ಭಾಗವಹಿಸಬೇಕಾಗಿ ವಿನಂತಿ.
Leave a Reply
You must be logged in to post a comment.