ಶೀಘ್ರ ಅನುಪಾತ = (ಚರ ಆಸ್ತಿ – ಸರಕುಗಳ ಮೌಲ್ಯ) / ಚರ ಬಾಧ್ಯತೆ
ಇದನ್ನು ಆಮ್ಲ ಪರೀಕ್ಷೆಯ ಅನುಪಾತ ವೆಂದು ಕರೆಯುವರು.
ಚರ ಅನುಪಾತದ ಬಗ್ಗೆ ವಿವರಿಸುವಾಗ ನಾವು ಪೂರ್ತಿಯ ಚರ ಆಸ್ತಿಯ ಮೌಲ್ಯವನ್ನು, ಸದ್ಯದ ಚರ ಬಾಧ್ಯತೆಯನ್ನು ತೀರಿಸಲು ಎಷ್ಟಿದೆ ಎಂದು ನೋಡಿದ್ದೆವು. ಇದು ಕಂಪನಿಯ ಕಡಿಮೆ ಅವಧಿಯ ಆರ್ಥಿಕ ಸಂವಹನದ ಬಗ್ಗೆ ಹೇಳುವುದು. ಆದರೆ ಈ ಮೇಲಿನ ರೀತಿಯಲ್ಲಿ ನಮಗೆ ಅರಿವಾಗುವುದು ಏನೆಂದರೆ ಸದ್ಯದ ಆರ್ಥಿಕ ಬಾಧ್ಯತೆಯನ್ನು ನೀಗಿಸಲು, ಮಾರಾಟದ ಚಕ್ರವು ಹೆಚ್ಚಿನ ಸಮಯ ಹೊಂದಿರುವ ಉದ್ಯಮಗಳಲ್ಲಿ ಮಾರಟಕ್ಕೆ ತಯಾರಾಗಿರುವ ಸರಕಿನಿಂದ ಹಣವನ್ನು ಬೇಗ ಪಡೆಯಲು ಸಾಧ್ಯವಿಲ್ಲ.
ಹೀಗಿರುವಾಗ ಸರಕಿನ ಮೌಲ್ಯವನ್ನು ತೆಗೆದು ಹಾಕಿದಾಗ ಸಿಗುವ ಅನುಪಾತವು ಕಂಪನಿಯ ಕಡಿಮೆ ಅವಧಿಯ (ಸದ್ಯದ) ಆರ್ಥಿಕ ಸಂವಹನವನ್ನು ಅರಿಯಬಹುದು. ಹಾಗಾಗಿ ಶೀಘ್ರ ಅನುಪಾತ / ಆಮ್ಲ ಪರೀಕ್ಷೆಯ ಅನುಪಾತ ಕಂಪನಿಯ ಕಡಿಮೆ ಅವಧಿಯ ಆರ್ಥಿಕ ಸಂವಹನ ಹಾಗೆ ಕಂಪನಿಯ ಕಡಿಮೆ ಅವಧಿಯ (ಸದ್ಯದ) ಆರ್ಥಿಕ ಬಾಧ್ಯತೆಯನ್ನು ತೀರಿಸುವ ಸಾಮರ್ಥ್ಯವನ್ನು ತಿಳಿಸುವುದು.
Leave a Reply
You must be logged in to post a comment.