ಹಿಂದಿನ ಅಂಕಣದಲ್ಲಿ ನಾವು ಕಂಪನಿಯ ಆರ್ಥಿಕ ಸ್ಥಿತಿಯನ್ನು ಅರಿಯಲು ಅನುಪಾತಗಳ ಉಪಯೋಗದ ಮಹತ್ವದ ಬಗ್ಗೆ ಅರಿತೆವು. ಇಂದಿನಿಂದ ಮುಂದಿನ ಅಂಕಣಗಳಲ್ಲಿ ನಾವು ವಿವಿಧ ಹಣಕಾಸಿನ ಅನುಪಾತಗಳನ್ನು ತಿಳಿಯೋಣ. ಇಂದಿನ ಅಂಕಣದಲ್ಲಿ ನಾವು “ಚರ-ಅನುಪಾತದ” ಬಗ್ಗೆ ತಿಳಿಯೋಣ.
ಚರ–ಅನುಪಾತ = ಚರ ಆಸ್ತಿ / ಅನುಪಾತವನ್ನು
ಈ ಅನುಪಾತವನ್ನು ನೋಡಿದರೆ ನಮಗೆ ಅರಿವಾಗುವುದೆನಂದರೆ ಸದ್ಯದಲ್ಲಿ ಎಷ್ಟು ಚರ ಆಸ್ತಿ ಯು ಈಗಿರುವ ಚರ ಬಾಧ್ಯತೆಯನ್ನು ತೀರಿಸಲು ಇದೆ ಎಂದು ಅರಿವಾಗುವುದು. ಇದು ಕಂಪನಿಯ ಸದ್ಯದ ಬಾಧ್ಯತೆಯನ್ನು (ಪೂರೈಕೆ ದಾರರ ಬಿಲ್ ಗಳು ಇತ್ಯಾದಿ) ಈಗಿರುವ ಆಸ್ತಿಗಳ (ಗ್ರಾಹಕರಿಂದ ಬರ ಬೇಕಾಗಿರುವ ಬಿಲ್ ಗಳು, ಹಣ) ಮೂಲಕ ತೀರಿಸಲು ಇರುವ ಸಾಮರ್ಥ್ಯದ ಬಗ್ಗೆ ಮಾಪನವನ್ನು ನೀಡುವುದು.
ಕಂಪನಿಯ ಬಾಧ್ಯತೆಗಳನ್ನು ಕೂಡಲೇ ತೀರಿಸಿಬಿಡುವುದು ಕಂಪನಿಗೆ ಕೂಡ ಒಳ್ಳೆಯದು. ಹಾಗಾಗಿ ಈ ಅನುಪಾತದ ಬೆಲೆಯು ಒಂದಕ್ಕಿಂತ ಹೆಚ್ಚಿರಬೇಕು. ಹೀಗಿರಬೇಕಾದರೆ ಚರ ಆಸ್ತಿಯು ಚರ ಭಾದ್ಯತೆಗಿಂತ ಯಾವಾಗಲೂ ಹೆಚ್ಚಿರಬೇಕು.
ಅದರ ಬದಲು ಈ ಅನುಪಾತದ ಬೆಲೆ ಒಂದಕ್ಕಿಂತ ಕಡಿಮೆ ಇದ್ದಲ್ಲಿ ಕಂಪನಿಯಲ್ಲಿ ಹಣದ ತೀವ್ರ ಕೊರತೆ ಎಂದು ಅರ್ಥ. ತಿರಿಸಬೇಕಾದ ಬಾಧ್ಯತೆಗಳು ಈಗಿರುವ ಹಣಕ್ಕಿಂತ ಹೆಚ್ಚಾಗಿರುತ್ತದೆ.
ಆಂಗ್ಲ ಅಂಕಣ:
http://somanagement.blogspot.com/2011/07/finance-and-management-13.html
Leave a Reply
You must be logged in to post a comment.