ಆರ್ಥಿಕ ಬಾಧ್ಯತೆಗಳನ್ನು ಎರಡು ವಿಧವಾಗಿ ವಿಂಗಡಿಸಬಹುದು. ಸ್ಥಿರ–ಬಾಧ್ಯತೆಗಳು ಮತ್ತು ಚರ–ಬಾಧ್ಯತೆಗಳು. ಚರ ಬಾಧ್ಯತೆಗಳು ಕಂಪನಿಯು ಒಂದು ಆರ್ಥಿಕ ಅವಧಿಯೊಳಗೆ ತೀರಿಸಬೇಕಾದವುಗಳು. ಹೆಚ್ಚಾಗಿ ಪೂರೈಕೆದಾರರಿಗೆ ಸಂದ ಬೇಕಾದ ಬಾಕಿ ಹಣವು ಇದರಲ್ಲಿರುತ್ತದೆ. ಸ್ಥಿರ–ಬಾಧ್ಯತೆಗಳಲ್ಲಿ ದೀರ್ಘಾವಧಿಯ ಅಂದರೆ ಒಂದು ವರ್ಷಕ್ಕಿಂತ ಹೆಚ್ಚಿನ ಅವಧಿಯಲ್ಲಿ ತೀರಿಸಬೇಕಾದ ಬಾಧ್ಯತೆಗಳು ಇರುತ್ತವೆ. ಸಾಮಾನ್ಯವಾಗಿ ಬ್ಯಾಂಕ್ ಮತ್ತು ಬಾಂಡ್ ಹೊಂದಿದವರ ಸಾಲ ಗಳು ಇದರಲ್ಲಿ ಇರುವುದು.
ನಿರ್ವಹಿಸಬಹುದಾದ ಸಾಲಗಳಿರುವುದು ಒಳ್ಳೆಯ ಲಕ್ಷಣ, ಹಾಗೆಯೇ ಸಾಲಗಳು ಕಡಿಮೆಯಾಗುವುದು ಕಂಪನಿಯು ಉತ್ತಮ ಸ್ಥಿತಿಯೆಡೆಗೆ ಹೋಗುತ್ತಿರುವ ಲಕ್ಷಣ. ಆದರೆ ಸಾಲಗಳು ಹೆಚ್ಚಾಗುತ್ತಿರುವುದು ಬಂಡವಾಳದಾರರಿಗೆ ಯೋಚಿಸಲು ಒತ್ತಾಯಿಸುತ್ತದೆ. ಎಷ್ಟು ಬಾಕಿ ಸಾಲವಿರಬೇಕೆನ್ನುವುದು ಎಷ್ಟು ಆಸ್ತಿಯನ್ನು ಹೊಂದಿದೆ ಮತ್ತು ಹಣದ ಸಂವಹನದ ಮೇಲೆ ನಿರ್ಧರಿಸಬಹುದು.
ಕಂಪನಿಯ ಹಣದ ಸಂವಹನಕ್ಕೆ ಹೋಲಿಸಿದಲ್ಲಿ, ತುಂಬಾ ಸಾಲವಿರುವುದರ ಅರ್ಥ ಕಂಪನಿಯ ಹೆಚ್ಚಿನ ಆದಾಯವು ಕೇವಲ ಸಾಲದ ಬಡ್ಡಿ ಮತ್ತು ಅಸಲನ್ನ ತೀರಿಸುವುದರಲ್ಲಿ ಖರ್ಚಾಗುತ್ತಿದೆ ಎಂದು. ಕಂಪನಿಯ ಬಾಧ್ಯತೆಗಳನ್ನು ಸರಿಯಾಗಿ ನಿರ್ವಹಿಸದಿದ್ದರೆ ಕಂಪನಿಯ ದಿವಾಳಿಯಾಗಲು ಇದು ಕಾರಣವಾಗುವುದು.
ಆಂಗ್ಲ ಅಂಕಣ:
http://somanagement.blogspot.com/2011/07/finance-and-management-11.html
Leave a Reply
You must be logged in to post a comment.