ಚಲಿಸದಿರುವ ಆಸ್ತಿಯ ಭಾಗದಲ್ಲಿ ಮುಖ್ಯವಾಗಿ ಬರುವುದೇ ಸ್ಥಿರಾಸ್ತಿ (Fixed Asset). ಒಂದು ಆರ್ಥಿಕ ಅವಧಿಯಲ್ಲಿ ಚಲಿಸಲು ಅಥವಾ ಬದಲಾಯಿಸಲು ಆಗದಿರುವ ಆಸ್ತಿಗಳನ್ನು ಸ್ಥಿರಾಸ್ತಿಗಳು ಎಂದು ಕರೆಯುವರು. ಇವುಗಳ ಮೇಲಿನ ಬಂಡವಾಳವು ನೇರವಾಗಿ ಕಂಪನಿಯ ಬಲವನ್ನು ಹೆಚ್ಚಿಸದಿದ್ದರೂ ಇವುಗಳ ಉಪಯೋಗದಿಂದ ಕಂಪನಿಯ ಚರಾಸ್ತಿಗಳು ಉತ್ಪತ್ತಿಯಾಗುವುವು. ಬಂಡವಾಳದಾರರು ಹೆಚ್ಚಾಗಿ ಈ ವಿಭಾಗದೆಡೆಗೆ ಹೆಚ್ಚಿನ ಗಮನ ಹರಿಸುವುದಿಲ್ಲ. ಕೆಲವೊಮ್ಮೆ ಭಾರಿ ಪ್ರಮಾಣದ ಬಂಡವಾಳವು ಹರಿದು ಬಂದಾಗ ಧೀರ್ಘಾವಧಿಯ ಲಾಭದ ಸಾಧ್ಯತೆಗೆ ಗಮನಿಸುವರು.
ಕಂಪನಿಯ ಲೆಕ್ಕ ಪತ್ರದಲ್ಲಿ ನಂಬಿಕೆ ಕಳೆದು ಕೊಳ್ಳಲು ಒಂದು ಕಾರಣ ಈ ಸ್ಥಿರಾಸ್ತಿಯನ್ನು ನಿರ್ವಹಿಸುವ ಬಗೆ. ಈ ಸ್ಥಿರಾಸ್ತಿಗಳನ್ನು ಒಪ್ಪಬಹುದಾದ ಕಾಲಾವಧಿಯೊಳಗೆ ಮಾರಲು ಸಾಧ್ಯವಿಲ್ಲವಾದ್ದರಿಂದ ಮತ್ತು ಇವು ಲೆಕ್ಕ ಪತ್ರದಲ್ಲಿ ಅವುಗಳ ನೈಜ ಬೆಲೆಗೆ ಸಂಬಂಧವಿಲ್ಲದೆ ಇರುವ ಕಾರಣ, ಕಂಪನಿಗಳು ಉಬ್ಬಿಸಲು ಸಾಧ್ಯವಿದೆ. ಹೀಗಾಗಿ ಕಂಪನಿಯ ಲೆಕ್ಕ ಪತ್ರದ ಮೇಲೆ ಪ್ರಶ್ನಿಸುವಂತೆ ಬಂಡವಾಳದಾರನಿಗೆ ಮಾಡುವುದು.
ಆಂಗ್ಲ ಅಂಕಣ:
http://somanagement.blogspot.com/2011/07/finance-and-management-10.html
Leave a Reply
You must be logged in to post a comment.