ಚಾಲ್ತಿಯ ಆಸ್ತಿ ಮತ್ತು ಚಾಲ್ತಿಯ ಬಾಧ್ಯತೆ ಗಳ ಬಗ್ಗೆ ಚರ್ಚಿಸಿದೆವು.ಇಂದು ಲೆಕ್ಕ ಪತ್ರದ ಇತರ ವಿಭಾಗಗಳ ಬಗ್ಗೆ ನೋಡೋಣ.

ಚಾಲ್ತಿಯ ಆಸ್ತಿ ಮತ್ತು ಚಾಲ್ತಿಯ ಬಾಧ್ಯತೆ ಗಳ ಬಗ್ಗೆ ಚರ್ಚಿಸಿದೆವು.ಇಂದು ಲೆಕ್ಕ ಪತ್ರದ ಇತರ ವಿಭಾಗಗಳ ಬಗ್ಗೆ ನೋಡೋಣ.

ಹಿಂದಿನ ಅಂಕಣದಲ್ಲಿ ನಾವು ವಿವಿಧ ಹಣಕಾಸಿನ ಹೇಳಿಕೆಗಳು ಕಂಪನಿಯ ಬಗ್ಗೆ ಅರಿಯಲು ಮತ್ತು ವಿಶ್ಲೇಷಿಸಲು ಯಾವ ರೀತಿಯಲ್ಲಿ ಮಾಡುವುದು ಎನ್ನುವುದನ್ನು ತಿಳಿದೆವು. ಇಂದು ನಾವು ಪ್ರತಿಯೊಂದು ಹೇಳಿಕೆಯ ಬಗ್ಗೆ ಅರಿಯೋಣ. ಮೊದಲು ಶುರು ಲೆಕ್ಕ ಪತ್ರ (Balance Sheet) ನ ಬಗ್ಗೆ ನೋಡೋಣ.
ಹೆಸರೇ ಸೂಚಿಸುವಂತೆ ಇದು ಸಮಾನತೆ (Balance) ನ್ನು ಹೇಳುತ್ತದೆ. ಗಣಿತದ ಮೂಲಭೂತ ತತ್ವವಾದ ಒಂದು ಸಮೀಕರಣದ ಎಡಭಾಗವು ಬಲಭಾಗದೊಂದಿಗೆ ಸಮ ಹೊಂದುವುದು ಅನ್ನುವುದರ ಮೇಲೆ ಈ ಹೇಳಿಕೆಯು ಆಗುವುದು. ಯಾವುದರ ಸಮಾನತೆ ಬಗ್ಗೆ ಲೆಕ್ಕ ಪತ್ರ ಹೇಳುವುದು ಮತ್ತು ಅದರ ಸಮೀಕರಣ ಏನು?
ಇದರ ಅರ್ಥವೇನೆಂದರೆ ಕಂಪನಿಯ ಆಸ್ತಿ ಅಥವಾ ಕಂಪನಿಯನ್ನು ನಡೆಸಲು ಬೇಕಾದ ದ್ರವ್ಯಗಳು ಕಂಪನಿಯ ಮಾಲಿಕರ ಹೂಡಿಕೆ ಮತ್ತು ಕಂಪನಿಯ ಆರ್ಥಿಕ ಸಾಲಗಳೆರಡು ಒಟ್ಟು ಸೇರಿ ಸಮದೂಗಿಸುವುದು. ಈ ಕೆಳಗಿನ ಚಿತ್ರದಲ್ಲಿ ಇನ್ನು ಸ್ಪಷ್ಟವಾಗಿ ಅರ್ಥೈಸಬಹುದು.

ಈ ಹಿಂದಿನ ಕೆಲವು ಚರ್ಚೆಗಳಲ್ಲಿ ನಾವು ಕಾರ್ಯ ನಿರ್ವಹಣೆಯ ವಿಚಾರವಾಗಿ ಚೆನ್ನಾಗಿ ಅರಿತೆವು. ಆದರೆ ಕೆಲವು ಅಳೆಯುವ ವಿಧಾನಗಳು ಕಂಪನಿಯ ಲೆಕ್ಕಾಚಾರದ (Corporate Finance) ಮತ್ತು ಅವುಗಳ ನಿರ್ವಹಣೆಯನ್ನು ಅರ್ಥಮಾಡಿ ಕೊಂಡರೇನೆ ಅರಿವಾಗಲು ಸಾಧ್ಯ. ಹಾಗಾಗಿ ನಾವು ಮತ್ತೆ ನಮ್ಮ ಸಾಮಾನ್ಯ ದಾರಿಯಿಂದ ಭಿನ್ನವಾಗಿ ಯುಕ್ತಿಯ ಬಗೆಯ ಚರ್ಚೆಯನ್ನು ಸ್ವಲ್ಪ ಸಮಯದ ನಂತರ ಮುಂದುವರಿಸೋಣ.
ಇನ್ನು ಮುಂದೆ ನಾವು ಕಂಪನಿಯ ಲೆಕ್ಕಾಚಾರದ (Corporate Finance) ಬಗ್ಗೆ ಸ್ವಲ್ಪ ಅರಿಯೋಣ.
ಈ ಹಿಂದಿನ ಅಂಕಣದಲ್ಲಿ ನಾವು ಬಗ್ಗೆ ಚರ್ಚೆಯನ್ನು ಆರಂಭ ಮಾಡಿದೆವು. ಇವತ್ತಿನ ಅಂಕಣದಲ್ಲಿ ಚೌಕಟ್ಟಿನ ಬಗ್ಗೆ ಇನ್ನು ವಿಶದವಾಗಿ ಅರಿಯೋಣ.
ಪ್ರತಿಯೊಂದು ಸಂಸ್ಥೆಯು ನ್ಯೂನ್ಯತೆಗಳನ್ನು ಹೊಂದಿರುತ್ತದೆ, ಅದೇ ರೀತಿ ಅವುಗಳಲ್ಲಿ ಕೆಲವು ಸಾಮರ್ಥ್ಯಗಳೂ ಅಡಗಿರುತ್ತವೆ. ಯಾವುದೇ ಒಂದು ಸಿದ್ಧಾಂತವು ಒಂದು ಕಂಪನಿಗೆ ಸ್ಪರ್ಧಾತ್ಮಕ ಮುನ್ನಡೆ ಅಥವಾ ಲಾಭವನ್ನು ನೀಡಬೇಕಾದರೆ ಅದು ಕಂಪನಿಯ SWOT ನ ನಾಲ್ಕು ಅಂಗಗಳನ್ನು ಅವಲೋಕಿಸಿ ವಿಶ್ಲೇಷಿಸಬೇಕು. ಈ ರೀತಿಯ ಸಿದ್ಧಾಂತವು ಕಂಪನಿಯನ್ನು ಶಕ್ತಿ ಸಾಮರ್ಥ್ಯದಿಂದ ಬೆಳೆಸಿ, ಸಿಗುವ ಅವಕಾಶಗಳನ್ನು ಕಂಪನಿಯ ಲಾಭಕ್ಕೆ ಬಳಸಿಕೊಂಡು, ಕಂಪನಿಗೆ ಬರುವ ಆತಂಕಗಳನ್ನು ಶಮನಗೊಳಿಸುವುದು. ಜೊತೆಗೆ ಕಂಪನಿಯ ಕುಂದು ಕೊರತೆಗಳಿಂದ ದೂರವಾಗುವಂತೆ ಮಾಡುವುದು ಇಲ್ಲವೇ ಪೂರ್ತಿಯಾಗಿ ನಿವಾರಿಸುವುದು.
SWOT ನ ಚೌಕಟ್ಟು ಯುಕ್ತಿಯ ಸಿದ್ಧಾಂತದ ೪ ಮುಖಗಳಿಂದ ನೋಡುವ ಪ್ರಾಮುಖ್ಯತೆಯನ್ನೇನೋ ಹೇಳುವುದು, ಆದರೆ ಆ ನಾಲ್ಕು ಅಂಶಗಳನ್ನು ಗುರುತಿಸುವ ಬಗ್ಗೆ ಯಾವುದೇ ಮಾರ್ಗದರ್ಶನ ನೀಡದು. ಇದು ವ್ಯವಸ್ಥಾಪರಿಗೆ ಇದರ ಮೂಲಕ ನಿರ್ಧಾರ ತೆಗೆದುಕೊಳ್ಳಲು ಪೂರ್ತಿಯಾಗಿ ಸಾಧ್ಯವಾಗದು.SWOT ಚೌಕಟ್ಟು ಒಂದು ವ್ಯಾವಹಾರಿಕ ಯುಕ್ತಿಯನ್ನು ಅನುಸರಿಸುತ್ತಿರುವಾಗ ಯಾವ ಪ್ರಶ್ನೆಗಳನ್ನು ಉತ್ತರಿಸಿಕೊಳ್ಳಬೇಕು ಎನ್ನುವುದರ ಬಗ್ಗೆ ಹೇಳುವುದು. ಸರಿಯಾದ ಪ್ರಶ್ನೆಯನ್ನು ಕೇಳಿ ಆ ಮೂಲಕ ಸರಿಯಾದ ಅಗಾಧ ಜ್ಞಾನವನ್ನು ಪಡೆಯುವುದು ಯಾವುದೇ ಕ್ಷೇತ್ರದಲ್ಲಿ ಸಂಪೂರ್ಣ ಹಿಡಿತ ಸಾಧಿಸಲು ಸಹಕಾರಿ. ಇದು ಬಹಳ ತ್ರಾಸದಯಕವೂ ಹೌದು.
ನಿಮ್ಮ ಸಿದ್ಧಾಂತಗಳಿಗೆ SWOT ಕೇವಲ ಒಂದು ಪ್ರಗತಿ ಹೊಂದುತ್ತಿರುವ ಚೌಕಟ್ಟು ಆಗಿದೆ, ಇದು ಒಂದು ಮೊದಲೇ ತಯಾರಾದ ಪರಿಹಾರವನ್ನು ನೀಡದು. ಕಂಪನಿಯು ತನ್ನ ವ್ಯಾವಹಾರಿಕ ಯುಕ್ತಿಯನ್ನು ಅಭಿವೃದ್ಧಿ ಪಡಿಸಿಕೊಳ್ಳಬೇಕು,SWOT ಅದರ ವಿಶ್ಲೇಷಣೆ ಮಾಡಿ ಪರಿಣಾಮಕಾರಿಯಗಿರುವಂತೆ ಮಾಡುವುದು.
ಕೆಳಗೆ ಒಂದು ಚಿತ್ರದಲ್ಲಿ ಇದನ್ನು ಹೀಗೆ ಹೇಳಬಹುದು.

ನಾವು ವ್ಯಾವಹಾರಿಕ ಯುಕ್ತಿಯ ಬಗ್ಗೆ ಸೂಕ್ಷ್ಮವಾಗಿ ಪರಿಶೀಲಿಸಿದಾಗ ಯುಕ್ತಿಗಳು ನಿರಂತರವಾಗಿ ಬದಲಾಗುತ್ತಿರುತ್ತವೆ ಎಂಬುದು ಅರಿವಾಗುತ್ತದೆ. ಈ ರೀತಿಯಾಗುವುದು ಇದರ ನ್ಯೂನ್ಯತೆಯೋ ಅಥವಾ ಸಾಮಾನ್ಯ ವಿಚಾರವೋ?
ಈ ಪ್ರಶ್ನೆಗೆ ಉತ್ತರ ಅಷ್ಟು ಸ್ಪಷ್ಟವಾಗಿ ಸಿಗದು. ನಾವು ಯುಕ್ತಿಯೊಂದು ಬದಲಾಗುವುದನ್ನು ಒಪ್ಪಿಕೊಳ್ಳುತ್ತೇವೆ. ಈ ಪ್ರಶ್ನೆಯನ್ನು ಇಂದಿನ ಅಂಕಣ ಮತ್ತು ಮುಂದಿನ ಅಂಕಣಗಳಲ್ಲಿ ಪರಿಹರಿಸುವ ಯತ್ನ ಮಾಡೋಣ.
ಈ ಒಂದು ಪ್ರಕ್ರಿಯನ್ನು ಅರಿಯಲು ನಮಗೆ ಕೆಲವೊಂದು ವ್ಯಾಖ್ಯಾನಗಳ ಅಗತ್ಯವಿದೆ.
ಉದ್ದೇಶಿಸಿದ ಯುಕ್ತಿ (Intended Strategy) : ಒಂದು ಕಂಪನಿಯು ಶುರುವಾಗುವಾಗ ಅದು ಅನುಸರಿಸಲು ರೂಪಿಸಿದ ವ್ಯಾವಹಾರಿಕ ಯುಕ್ತಿ.
ನಡೆಸಿದ ಯುಕ್ತಿ (Deliberate Strategy) : ಕಂಪನಿ ನಿಜವಾಗಲು ಅನುಸರಿಸಿದ ಯೋಚಿಸಿದ ಯುಕ್ತಿ
