ಈ ಹಿಂದಿನ ಅಂಕಣದಲ್ಲಿ ನಾವು ಮುಖ ಬೆಲೆಯ ಬಗ್ಗೆ ಅರಿತೆವು. ಇವತ್ತಿನ ಅಂಕಣದಲ್ಲಿ ನಾವು ಮುಂದುವರೆದು ಡಿವಿಡೆಂಡ್ ನ ಬಗ್ಗೆ ಅರಿಯೋಣ.
ಸರಳವಾಗಿ ಹೇಳಬೇಕೆಂದರೆ ಡಿವಿಡೆಂಡ್ ಅಂದರೆ ಶೇರ್ ದಾರರಿಗೆ ಹಣವನ್ನು ಹಂಚುವುದು. ಕಂಪನಿಯ board of directors ಡಿವಿಡೆಂಡ್ ನ ಸಂದಾಯದ ಬಗ್ಗೆ ನಿರ್ಧರಿಸುವರು ಹಾಗು ಇದನ್ನು ಶೇರ್ ದಾರರು ವಾರ್ಷಿಕ general body ಸಭೆಯಲ್ಲಿ ಒಮ್ಮತ ಸೂಚಿಸುವರು. ವರ್ಷಾವಧಿಯೊಳಗೆ ಘೋಷಿಸಿದ ಡಿವಿಡೆಂಡ್ ನ್ನು Interim ಡಿವಿಡೆಂಡ್ ಎಂದು ಕರೆಯುವರು. ಸಾಮಾನ್ಯವಾಗಿ ಡಿವಿಡೆಂಡ್ ಕಂಪನಿಯ ಈ ವರ್ಷದ ಮತ್ತು ಹಿಂದಿನ ಲಾಭವನ್ನು ಮೀರಿ ಇರುವಂತಿಲ್ಲ.
ಡಿವಿಡೆಂಡ್ ನ್ನು ಸಾಮಾನ್ಯವಾಗಿ ಸಂದಾಯ ಹೊಂದಿದ ಶೇರ್ ಗಳ ಪ್ರತಿಶತ ರೂಪದಲ್ಲಿ ಅಂದರೆ ಪ್ರತಿ ಶೇರ್ ಗೆ ಇಷ್ಟು ರುಪಾಯಿ ಎಂದು ಹೇಳುವರು. ಡಿವಿಡೆಂಡ್ ನ್ನು ಡಿವಿಡೆಂಡ್ ಪ್ರಮಾಣ ಪತ್ರದ ರೂಪದಲ್ಲಿ ಕೊಡುವರು, ಇದು ಒಂದು ವಿಶಿಷ್ಟವಾದ ಚೆಕ್ ಆಗಿದ್ದು ಕೇವಲ ಹಣದ ರೂಪದಲ್ಲಿ ಮಾತ್ರ ಲಭ್ಯವಾಗುವುದು.
ಇಲ್ಲಿರುವ ಮುಖ್ಯ ಅಂಶವೇನಂದರೆ, ಲಾಭದ ಮೇಲಿನ ವ್ಯವಹಾರಕ್ಕೆ ಸಿಗುವ ಆದಾಯವನ್ನು ಡಿವಿಡೆಂಡ್ ಎಂದು ಪರಿಗಣಿಸುವುದು ಸರಿಯಾಗದು; ಇದು ಕೇವಲ ಬಂಡವಾಳ ಹೂಡಿದ ಕ್ಯಾಪಿಟಲ್ ನ ಆದಾಯ. ಕಂಪನಿಯು ಡಿವಿಡೆಂಡ್ ನೀಡುವಾಗ ಹೊರಹೋಗುವ ಹಣದಿಂದ ಕಂಪನಿಯ ಚಟುವಟಿಕೆಗಳಿಗೆ ಧಕ್ಕೆಯಾಗಬಾರದಂತೆ ಗಮನಿಸಬೇಕು. ಅಲ್ಲದಿದ್ದಲ್ಲಿ ಸರ್ವನಾಶವಾಗಬಹುದು.
ಆಂಗ್ಲ ಅಂಕಣ:
http://somanagement.blogspot.com/2011/08/finance-and-management-20.html