ವ್ಯವಹಾರ ಪ್ರತಿಕೃತಿಯ ಬಗೆಗಿನ ನಮ್ಮ ವಿಚಾರ ವಿನಿಮಯಗಳಲ್ಲಿ ಇಂದು ನಾವು ಅತ್ಯಂತ ವೈಶಿಷ್ಟ್ಯವಾದ ಪ್ರತಿಕೃತಿಯ ಬಗ್ಗೆ ಅರಿಯೋಣ.
ಅನೇಕ ಜನರು ಸಾಮಾನ್ಯ ಜನರಿಗಿಂತ ವೈಶಿಷ್ಟ್ಯವಾಗಿ ಮತ್ತು ವಿಭಿನ್ನರಾಗಿ ಬದುಕಬೇಕೆಂಬ ಇಚ್ಛೆಯನ್ನು ಹೊಂದಿರುತ್ತಾರೆ.ಆ ಮೂಲಕ ತಮ್ಮ ಘನಗಾರಿಕೆಯನ್ನು ಮತ್ತು ತಮ್ಮ ಸ್ಥಾನಮಾನವನ್ನು ಪ್ರದರ್ಶಿಸುತ್ತಾರೆ. ಈ ಅಂಶವೇ ನಾವಿಂದು ಚರ್ಚಿಸುತ್ತಿರುವ ವ್ಯವಹಾರ ಪ್ರತಿಕೃತಿಯ ಮೂಲ ಆಧಾರ.
ನಮ್ಮಲ್ಲಿ ಹೆಚ್ಚಿನವರು “ಮರ್ಸಿಡೀಸ್” ಕಾರ್ ನ ಬಗ್ಗೆ ಕೇಳಿರುತ್ತೇವೆ. ಜಗತ್ತಿನ ಅತ್ಯಂತ ದುಬಾರಿಯಾದ ಕಾರಾಗಿದ್ದು ಕೇವಲ ಅತಿ ಶ್ರೀಮಂತ ವರ್ಗದವರಿಗೆ ಮಾತ್ರ ಖರೀದಿಸಲು ಸಾಧ್ಯವಾದುದಾಗಿದೆ. ಈ ಕಾರ್ ಗಳ ಯಾವ ವೈಶಿಷ್ಟ್ಯತೆ ಇವುಗಳನ್ನು ಇಷ್ಟು ದುಬಾರಿ ಗೊಳಿಸುತ್ತವೆ?
ಮರ್ಸಿಡೀಸ್ ಕಾರುಗಳಿಗೆ ವಿಮಾನಗಳಿಗೆ ಬಳಸುವ ಬಿಡಿಬಾಗಗಳನ್ನು ಬಳಸುತ್ತಾರೆ ಎಂದು ಪ್ರತೀತಿ ಇದೆ. ಇದರಿಂದ ಯಾವುದೇ ರೀತಿಯ ಸ್ಥೂಲವಾದ ಮಹತ್ತರ ಲಾಭವಿಲ್ಲದಿದ್ದರೂ, ಈ ಅಂಶವು ವೈಶಿಷ್ಟ್ಯವಾಗಿ ಬದುಕಬೇಕೆಂಬ ಜನರ ಮಾನಸಿಕತೆಯ ಮೇಲೆ ಪರಿಣಾಮ ಬೀರುತ್ತದೆ.ಈ ರೀತಿ ಇಂತಹ ಜನರ ಉನ್ನತ ಮಟ್ಟದ ಜೀವನ ಶೈಲಿಯಿರಬೇಕೆಂಬ ಮಹದಾಸೆಗಳು ಹೆಚ್ಚಿನ ಬೆಲೆಯ ವಸ್ತುಗಳನ್ನು ಖರಿದಿಸುವಂತೆ ಮಾಡುವುದು. ಹಾಗಾಗಿ ಕಂಪನಿಗಳು “ಹೆಚ್ಚಿನ” ಬೆಲೆಯನ್ನು ವಿಧಿಸುವದರ ಮೂಲಕ ಕೆಲವೇ ಗ್ರಾಹಕರಿಂದ ಉತ್ತಮ ಲಾಭ ಪಡೆಯುವರು.
ಆಂಗ್ಲ ಅಂಕಣ-
http://somanagement.blogspot.com/2011/04/business-model-premium-business.html
Leave a Reply
You must be logged in to post a comment.