ಇವತ್ತಿನ ಅಂಕಣದಲ್ಲಿ ಸ್ಪರ್ಧಾತ್ಮಕ ಲಾಭದ ಬಗ್ಗೆ ಅರಿಯೋಣ. ನಾವು ಈ ಹಿಂದಿನ ಅಂಕಣದಲ್ಲಿ ಇದರ ಬಗ್ಗೆ ಒಂದು ದೃಷ್ಟಿ ಕೋನದಿಂದ ಅರಿತೆವು. ಇಂದು ಬೇರೆಯ ರೀತಿಯಲ್ಲಿ ಇದರ ಬಗೆ ವಿಶ್ಲೇಷಿಸೋಣ.
ಒಂದು ಕಂಪನಿಯು ಸ್ಪರ್ಧಾತ್ಮಕ ಲಾಭವನ್ನು ಆಧಾರ ಉದ್ಯಮ ಅಥವಾ ಮಾರುಕಟ್ಟೆಯಲ್ಲಿ ಕಾರ್ಯ ನಿರ್ವಹಿಸುವುದು ಆರ್ಥಿಕ ಮೌಲ್ಯವನ್ನು ನೀಡುವುದು ಮತ್ತು ಕೆಲವೇ ಕೆಲವು ಇತರ ಕಂಪನಿಗಳು ಈ ರೀತಿ ಕಾರ್ಯ ನಿರ್ವಹಿಸುತ್ತಿರುವಾಗ ಪಡೆಯುವುದು. ಉದ್ಯಮ ಅಥವಾ ಮಾರುಕಟ್ಟೆಯ ಆರ್ಥಿಕತೆಯ ಹಾದಿಯನ್ನು ಅನುಸರಿಸುವುದರೊಂದಿಗೆ ಕೆಲವೇ ಕೆಲವು ಇತರ ಕಂಪನಿಗಳು ಮಾತ್ರ ಈ ವಿಧಾನವನ್ನು ಅಳವಡಿಸಲು ಶಕ್ಯರಾಗುವುದು ಒಂದು ವ್ಯಾವಹಾರಿಕ ಯುಕ್ತಿಗೆ ಸ್ಪರ್ಧಾತ್ಮಕ ಲಾಭವನ್ನು ತಂದುಕೊಡುತ್ತದೆ.
ಒಂದು ವಿಚಾರವನ್ನು ಕಂಪನಿಗಳು ಅರಿಯಬೇಕೆಂದರೆ, ಕಂಪನಿಯು ತನ್ನ ಕಾರ್ಯವನ್ನು ಆರಂಭಿಸುವಾಗ ಅವುಗಳು ಕೇವಲ ಪರೀಕ್ಷಿಸದ ಮತ್ತು ಹೊಸತಾದ ಕಾರ್ಯ ವಿಧಾನಗಳಿಂದಲೇ ಯಶಸ್ವಿಯಾಗಿ ಸ್ಪರ್ಧೆಯಲ್ಲಿ ತೊಡಗಬೇಕಾಗುತ್ತದೆ. ಅವುಗಳನ್ನು ಮುಂದೆ ಯಶಸ್ವಿಯಾಗಿ ಅಳವಡಿಸಿಕೊಳ್ಳುವುದರಿಂದಲೇ ಕಂಪನಿಗಳು ಯಶಸ್ಸನ್ನು ಪಡೆಯುತ್ತವೆ.
Leave a Reply
You must be logged in to post a comment.