ನಾವು ನಮ್ಮ ವ್ಯಾವಹಾರಿಕ ಯುಕ್ತಿಗಳ ಬಗೆಗಿನ ಚರ್ಚೆಯನ್ನು ಅವುಗಳನ್ನು ಯಶಸ್ವಿಯಾಗಿ ಸ್ಪರ್ಧಿಸಲಿರುವುವು ಎಂದು ವ್ಯಾಖ್ಯಾನಿಸಿದೆವು. ಹಿಂದಿನ ಅಂಕಣದಲ್ಲಿ ನಾವು ಸ್ಪರ್ಧಾತ್ಮಕ ಯಶಸ್ಸು ಮತ್ತು ಸ್ಪರ್ಧಾತ್ಮಕ ಸಮಾನತೆಗಳ ಬಗ್ಗೆ ಕೂಡ ಅರಿತೆವು. ಈ ಎರಡು ಪದಗಳು ವ್ಯಾವಹಾರಿಕ ಯುಕ್ತಿಗಳನ್ನು ಹೋಲಿಸಲು ಅನುಕೂಲ ಮಾಡುವ ಮಾಪದಂಡಗಳು. ಇವತ್ತಿನ ಅಂಕಣದಲ್ಲಿ ಈ ಹೋಲಿಕೆಯ ಬಗ್ಗೆ ಅರಿಯೋಣ.
ವ್ಯಾವಹಾರಿಕ ಯುಕ್ತಿಯ ಅನೇಕ ಹೋಲಿಕೆಗಳ ವಿಧಾನಗಳಲ್ಲಿ ಒಂದು ಉದ್ಯಮದ ಸ್ಪರ್ಧಿಸುವ ವಿಧಾನವು ಹೇಗೆ ಮಾರುಕಟ್ಟೆಯ ಅಥವಾ ಉದ್ಯಮಗಳ ಸ್ಪರ್ಧಾತ್ಮಕತೆಯಲ್ಲಿ ತನ್ನ ಪ್ರಭಾವವನ್ನು ಬೀರಿದೆ ಎಂಬುದು. ಸಾಮಾನ್ಯವಾಗಿ ಸ್ಪರ್ಧಿಸುವ ವಿಧಾನವು ಮೂರರಲ್ಲಿ ಒಂದು ಪರಿಣಾಮವನ್ನು ನೀಡುತ್ತದೆ.
೧. ಅತ್ಯಂತ ಯಶಸ್ವಿಯಾಗಿ ಸ್ಪರ್ಧಿಸುವುದು.
೨. ಯಶಸ್ವಿಯಾಗಿ ಸ್ಪರ್ಧಿಸುವುದು.
೩. ಯಾವುದೇ ಯಶಸ್ಸಿಲ್ಲದೆ ಸ್ಪರ್ಧಿಸುವುದು.
ಕಂಪನಿಯ ಸ್ಪರ್ಧಾತ್ಮಕ ವಿಧಾನವು ಮಾರುಕಟ್ಟೆ ಅಥವಾ ಉದ್ಯಮದಲ್ಲಿ ಒಂದು ಸ್ಪರ್ಧಾತ್ಮಕ ಲಾಭವನ್ನು ನೀಡುವುದು, ಸ್ಪರ್ಧಾತ್ಮಕ ವಿಧಾನ ಕೇವಲ ಸ್ಪರ್ಧಾತ್ಮಕ ಸಮಾನತೆಯನ್ನು ನೀಡುವದಕ್ಕಿಂತ ಮಿಗಿಲಾದುದು. ಅದೇ ರೀತಿ ಕಂಪನಿಗಳ ಸ್ಪರ್ಧಾತ್ಮಕ ವಿಧಾನವು ಸ್ಪರ್ಧಾತ್ಮಕ ಸಮಾನತೆಯನ್ನು ಕಲ್ಪಿಸಿಕೊಡುವುದು, ಕಂಪನಿಗಳ ಸ್ಪರ್ಧಾತ್ಮಕ ವಿಧಾನಗಳು ಸ್ಪರ್ಧಾತ್ಮಕವಾಗಿ ಹಿನ್ನಡೆಯನ್ನು ಅನುಭವಿಸುವುದಕ್ಕಿಂತ ಲಾಭದಾಯಕವಾದುದು.
Leave a Reply
You must be logged in to post a comment.