ಈ ಹಿಂದ ಅಂಕಣದಲ್ಲಿ ನಾವು ಕಾರ್ಯ ದಕ್ಷತೆ ಮತ್ತು ಯುಕ್ತಿಯ ನಡುವಿನ ವ್ಯತ್ಯಾಸವನ್ನು ಅರಿತೆವು. ಕಾರ್ಯ ದಕ್ಷತೆಯನ್ನು ನಾವು ಕಂಪನಿಗಳು ಸ್ಪರ್ಧಾತ್ಮಕ ಲಾಭವನ್ನು ಹೊಂದಲು ಅನುಸರಿಸುವರು ಎಂದು ಅರಿಯಬೇಕು. ಆದರೆ ಎಲ್ಲ ಕಂಪನಿಗಳು ಇದೆ ಮಾರ್ಗವನ್ನು ಅನುಸರಿಸಿ ಕಾರ್ಯ ದಕ್ಷತೆಯನ್ನು ತರಲು ಪ್ರಯತ್ನಿಸುವಾಗ ಸ್ಪರ್ಧಾತ್ಮಕ ಲಾಭವು ಯಾರಿಗೂ ಸಿಗದೇ ಸಮತ್ವ ಸೃಷ್ಟಿಯಾಗುವುದು.
ಈ ಚರ್ಚೆಯಿಂದ ತಿಳಿಯುವುದೇನಂದರೆ ಯಾವುದೇ ಸ್ಪರ್ಧಾತ್ಮಕ ಲಾಭವನ್ನು ಎರಡು ರೀತಿಯಲ್ಲಿ ವಿಂಗಡಿಸಬಹುದು. ಕೆಲವು ಶಾಶ್ವತವಾಗಿ ದೀರ್ಘಕಾಲ ಸಿಗುವಂತದು ಇನ್ನು ಕೆಲವು ತಾತ್ಕಾಲಿಕ ಲಾಭವನ್ನು ನೀಡುವಂತಹುಗಳು.
ಇನ್ನು ಮುಂದಿನ ಅಂಕಣಗಳಲ್ಲಿ ನಾವು ಕೆಲವು ಸರಳ ಮಾದರಿ ಕತೆಗಳನ್ನು ತೆಗೆದು ಕೊಂದು ಸ್ಪರ್ಧಾತ್ಮಕ ಲಾಭದ ಬಗ್ಗೆ ಇನ್ನಷ್ಟು ಅರಿಯುವ ಯತ್ನ ಮಾಡೋಣ.
ಪೂರ್ಣವಾಗಿ ವ್ಯಾವಹಾರಿಕ ಯುಕ್ತಿಯ ಬಗ್ಗೆ ಅರಿಯಲು ನಾವು ಕೆಲವು ಯುಕ್ತಿಗಳ ಬಗ್ಗೆ ಪದೇ ಪದೇ ಹೇಳುತ್ತೇವೆ ಮತ್ತು ಅವುಗಳ ಬಗ್ಗೆ ಚರ್ಚಿಸುತ್ತಲೇ ಇರುತ್ತೇವೆ. ಹೀಗಾಗಿ ಓದುಗರ ತಾಳ್ಮೆಯ ಕೃಪೆ ನಮ್ಮ ಮೇಲೆ ಇರಬೇಕೆಂದು ಬಯಸುವೆವು!
Leave a Reply
You must be logged in to post a comment.