Blog

  • Strategy – 8

    We have looked at a couple of small real life case-lets to be able to understand how companies have their strategies and goals implemented. This use of case studies is a very common way of learning about strategy.
    When academicians and researchers study about organizations they generally begin finding a best practice to filter out the essentials of the situation at hand. These methods of analysis is generally encapsulated in a particular “framework”.
    In the study of strategy, frameworks help one get the mental pegs, with which we can begin the analysis and have a look at the reasons for the success or failure of ventures.
    In some of our upcoming blogs, we will also look at the various frameworks which we have studied and think are the most relevant for the study of strategy. We think these frameworks would remain with you very handy in your analysis. So keep a watch at this section.
  • ವ್ಯವಹಾರಿಕ ಯುಕ್ತಿ – ೭

    ವ್ಯವಹಾರಿಕ ಯುಕ್ತಿಯಾ ಬಗೆಗಿನ ಚರ್ಚೆಯನ್ನು ಮುಂದುವರಿಸುತ್ತಾ ಇಂದು ನಾವು ಒಂದು ಹೊಸ ವಿಷಯನ್ನು ಅರಿಯೋಣ. ಅದೇ “ಸ್ಪರ್ಧಾತ್ಮಕ ಲಾಭಗಳು”

    ಈ ಹಿಂದ ಅಂಕಣದಲ್ಲಿ ನಾವು ಕಾರ್ಯ ದಕ್ಷತೆ ಮತ್ತು ಯುಕ್ತಿಯ ನಡುವಿನ ವ್ಯತ್ಯಾಸವನ್ನು ಅರಿತೆವು. ಕಾರ್ಯ ದಕ್ಷತೆಯನ್ನು ನಾವು ಕಂಪನಿಗಳು ಸ್ಪರ್ಧಾತ್ಮಕ ಲಾಭವನ್ನು ಹೊಂದಲು ಅನುಸರಿಸುವರು ಎಂದು ಅರಿಯಬೇಕು. ಆದರೆ ಎಲ್ಲ ಕಂಪನಿಗಳು ಇದೆ ಮಾರ್ಗವನ್ನು ಅನುಸರಿಸಿ ಕಾರ್ಯ ದಕ್ಷತೆಯನ್ನು ತರಲು ಪ್ರಯತ್ನಿಸುವಾಗ ಸ್ಪರ್ಧಾತ್ಮಕ ಲಾಭವು ಯಾರಿಗೂ ಸಿಗದೇ ಸಮತ್ವ ಸೃಷ್ಟಿಯಾಗುವುದು.

    ಈ ಚರ್ಚೆಯಿಂದ ತಿಳಿಯುವುದೇನಂದರೆ ಯಾವುದೇ ಸ್ಪರ್ಧಾತ್ಮಕ ಲಾಭವನ್ನು ಎರಡು ರೀತಿಯಲ್ಲಿ ವಿಂಗಡಿಸಬಹುದು. ಕೆಲವು ಶಾಶ್ವತವಾಗಿ ದೀರ್ಘಕಾಲ ಸಿಗುವಂತದು ಇನ್ನು ಕೆಲವು ತಾತ್ಕಾಲಿಕ ಲಾಭವನ್ನು ನೀಡುವಂತಹುಗಳು.

    ಇನ್ನು ಮುಂದಿನ ಅಂಕಣಗಳಲ್ಲಿ ನಾವು ಕೆಲವು ಸರಳ ಮಾದರಿ ಕತೆಗಳನ್ನು ತೆಗೆದು ಕೊಂದು ಸ್ಪರ್ಧಾತ್ಮಕ ಲಾಭದ ಬಗ್ಗೆ ಇನ್ನಷ್ಟು ಅರಿಯುವ ಯತ್ನ ಮಾಡೋಣ.

    ಪೂರ್ಣವಾಗಿ ವ್ಯಾವಹಾರಿಕ ಯುಕ್ತಿಯ ಬಗ್ಗೆ ಅರಿಯಲು ನಾವು ಕೆಲವು ಯುಕ್ತಿಗಳ ಬಗ್ಗೆ ಪದೇ ಪದೇ ಹೇಳುತ್ತೇವೆ ಮತ್ತು ಅವುಗಳ ಬಗ್ಗೆ ಚರ್ಚಿಸುತ್ತಲೇ ಇರುತ್ತೇವೆ. ಹೀಗಾಗಿ ಓದುಗರ ತಾಳ್ಮೆಯ ಕೃಪೆ ನಮ್ಮ ಮೇಲೆ ಇರಬೇಕೆಂದು ಬಯಸುವೆವು!

  • ವ್ಯಾವಹಾರಿಕ ಯುಕ್ತಿ – ೬

    ಹಿಂದಿನ ಅಂಕಣದ ಕಾರ್ಯ ದಕ್ಷತೆಯ ಮತ್ತು ಯುಕ್ತಿಯ ನಡುವಿನ ಸಂಬಂಧಗಳ ಬಗೆಗಿನ ಚರ್ಚೆಯನ್ನು ಮುಂದುವರಿಸುತ್ತಾ ಇಂದು ನಾವೊಂದು ಕಾಲ್ಪನಿಕ ಮಾದರಿ ಕತೆಯನ್ನು ಶುರು ಮಾಡೋಣ.

    ಹರಿ ಒಬ್ಬ ರಸ್ತೆ ಬದಿಯ ತಿನಿಸುಗಳ ವ್ಯಾಪಾರಿ. ಅವನ ದಿನದ ದುಡಿಮೆ ಉತ್ತಮವಾದ ಋತುಗಳಲ್ಲಿ ೯೦೦೦/- ವರೆಗೆ ಇರುತ್ತದೆ. ಅವನ ಅಂಗಡಿಯು ಹತ್ತಿರದ ಕಛೇರಿಗಳಲ್ಲಿ ತುಂಬಾ ಮೆಚ್ಚಿಗೆ ಪಡೆದು ಪ್ರಚಾರ ಹೊಂದಿದೆ. ೫ ನಿಮಿಷದೊಳಗೆ ಕೇಳಿದ ತಿನಿಸನ್ನು ತಯಾರಿಸಿ ನೀಡುವುದು ಅವನಿಗೆ ಸಿಕ್ಕ ಮೆಚ್ಚುಗೆಯ ಹಿಂದಿನ ರಹಸ್ಯ. ತನ್ನ ಗ್ರಾಹಕರನ್ನು ಹೆಚ್ಚು ಕಾಯಿಸದಿರುವುದರಿಂದ ಗ್ರಾಹಕರು ಇವನ ರುಚಿಕರವಾದ ತಯಾರಿಕೆಯ ವೇಗಕ್ಕೆ ಮಾರು ಹೋಗಿರುವರು.

    ಅವನಿಗಿರುವ ಹಲವಾರು ವರ್ಷದ ಅನುಭವದ ಕಾರಣದಿಂದ ಒಂದೇ ಸಮಯದಲ್ಲಿ ಹಲವಾರು ಕೆಲಸಗಳನ್ನು ಒಟ್ಟಿಗೆ ಮಾಡುವುದು ಸಾಧ್ಯವಾಗಿದೆ. ಒಂದೇ ಹೊತ್ತಿಗೆ ೫ ವಿವಿಧ ರೀತಿಯ ತಿನಿಸುಗಳ ಪ್ಲೇಟ್ ಗಳನ್ನು ಯಾವುದನ್ನೂ ಹೆಚ್ಚು ಕಡಿಮೆ ಮಿಶ್ರ ಮಾಡದೇ ತಯಾರಿಸುವ ಕಲೆ ಅವನಲ್ಲಿದೆ. ಅವನ ಈ ಕೌಶಲ್ಯದ ಕಾರಣದಿಂದಲೇ ರುಚಿಕರವಾದ ತಿನಿಸನ್ನು ಒಂದೇ ವೇಳೆಗೆ ೫ ಜನರಿಗೆ ತಯಾರಿಸಲು ಸಾಧ್ಯವಾಗಿದೆ.

    ಈ ಒಂದು ಕಾಲ್ಪನಿಕ ಕತೆಯಲ್ಲಿ ಈಗ ನಾವು ಆತನ ಸಮ ಕಲೀನವಾಗಿ ಹಲವು ತಿನಿಸುಗಳನ್ನು ಒಟ್ಟಿಗೆ ಮಾಡುವುದನ್ನು ಒಂದು ವ್ಯಾವಹಾರಿಕ ಯುಕ್ತಿ ಎಂದು ಕರೆಯಲಾಗುವುದೇ? ನಿಜಕ್ಕೂ ಅಲ್ಲ. ವ್ಯಾವಹಾರಿಕ ಯುಕ್ತಿಯೆನ್ನುವುದು ಮಾಲಿಕನು ತನ್ನ ವ್ಯವಹಾರವನ್ನು ಎಲ್ಲಿಗೆ ಕೊಂಡೊಯ್ಯ ಬೇಕೆಂದಿದ್ದಾನೆ ಎನ್ನುವದರ ಬಗೆಗಾಗಿದೆ. ಆತ ಮುಂದೆ ತನ್ನದೇ ಆದ ತಿನಿಸುಗಳ ಹೆಚ್ಚಿನ ಅಂಗಡಿ ಗಳನ್ನು ತೆರೆಯಬೇಕೆಂದಿರುವೆನೆ? ದೇಶದ ದೊಡ್ಡ ಪಂಚ ತಾರ ಮಾದರಿಯ ತಿನಿಸುಗಳ ಹೋಟೆಲ್ ಹೊಂದಬೇಕೆಂದಿರುವನೆ? ಒಮ್ಮೆ ಅವನು ತನ್ನ ಗುರಿಯನ್ನು ನಿರ್ಧರಿಸಿದ ಮೇಲೆ ಅದನ್ನು ಪಡೆಯಲು ಸೂಕ್ತವಾದ ಸಂಪನ್ಮೂಲಗಳನ್ನು ಕೂಡಿಸಿಕೊಂಡು ಹೊಸ ಸಂಪನ್ಮೂಲಗಳನ್ನು ಸೇರಿಸಿ ಕೊಂಡು ಉತ್ತಮ ಕಾರ್ಯ ಕ್ಷಮತೆಯೊಂದಿಗೆ ಕೆಲಸ ನಿರ್ವಹಿಸಿ ಗುರಿ ಸಾಧಿಸುವನು.

    ಕಾರ್ಯ ದಕ್ಷತೆಯು ಒಬ್ಬ ಉದ್ಯಮಿಯ ಆಶೋತ್ತರಗಳನ್ನು ವೈಭವಿಕರಿಸುವುದು ಅಷ್ಟೇ.

  • Strategy 7

    Furthering our discussion on strategy, we today look at a concept called “competitive advantage”.

    In the earlier blog we looked at the difference between operational efficiency and strategy. Operational efficiency is something we could call a competitive advantage for the company thar introduces it. However when there are many companies that begin imitating the leader in it’s operational processes and catches up with it; the competitive advantage is lost and begins to become a point if parity.

    It is clear in the earlier discussion that any competitive advantage could be classified into two categories, those which are permanent and those that fall in the category of temporary advantages.

    In the next few blogs (not necessarily in sequential order) we would take simple hypothetical scenario and improve our understanding of the concept of competitive advantage.

    To completely have an engaging understanding of strategy we would at various points repeat or return and discuss about some strategy concepts, we request your patience in such situations.
  • Strategy 6

    Continuing from the earlier discussion on operational efficiency and it’s relation with the company’s strategy; we begin with a hypothetical case at our hand here.
    Hari is a road side chat vendor. His daily revenue during the peak seasons could be as much as Rs 9000/-. His shop is pretty famous amongst the office goers as he delivers the ordered chat in just 5 minutes flat. He doesn’t really keep his customers waiting, they just love the speed of his catering and the taste that he embeds in all he cooks.
    His years of experience has enabled him realize the beauty of parallel processing. At a single point he can prepare as many as 5 different plates simultaneously without mixing the ingredients of the chats. His knack of preparing so many numbers enables him prepare and cater to 5 people in the same time span.
    Now that we have this hypothetical case with us, our next question is can we call his ability to parallel process as a strategy? Really not!
    Strategy is about where the vendor wants to take his business. Does he want to create a chain of chat shops or does he want to have the nation’s largest five star chain. Once he has fixed up no the larger goal to be achieved; he would work at attaining the necessary resources, create a running business and keep adding to the resources and move from strength to strength.
    The operational excellence is only a means to the glory that the business man aspires for.
  • ವ್ಯಾವಹಾರಿಕ ಯುಕ್ತಿ – ೫

    ಒಂದು ಪ್ರಮುಖವಾದ ಗೊಂದಲ ಹೆಚ್ಚಿನ ಆರಂಭಿಕವಾಗಿ ವ್ಯಾವಹಾರಿಕ ಯುಕ್ತಿಯನ್ನು ರೂಪಿಸುವವರಲ್ಲಿ ಇರುವುದೇನೆಂದರೆ ಕಾರ್ಯ ಕ್ಷಮತೆ ಮತ್ತು ಉತ್ತಮ ಯುಕ್ತಿಯ ಬಗೆಗಿರುವುದು. ಸರಳವಾಗಿ ಇದನ್ನು ನಿಮ್ಮನ್ನು ನೀವು ಇದು ನೀವು ಎಣಿಸಿದ್ದ ಗುರಿಯನ್ನು ತಲುಪುವುದೇ ಅಥವಾ ತಲುಪಲು ದಾರಿ ಮಾಡುವುದೇ ಎನ್ನುವುದರ ಮೂಲಕ ನಿವಾರಿಸಬಹುದು.

    ಕಂಪನಿಗಳು ಕಾರ್ಯ ಕ್ಷಮತೆಯನ್ನು ಸಾಧಿಸಲು ಹಲವಾರು ಆಂತರಿಕವಾಗಿ ಬಹಳ ವಿಧಾನಗಳನ್ನು ರೂಪಿಸುವರು, ಇವುಗಳು ಸಹಜವಾಗಿ ಉತ್ಪನ್ನದ ಬೆಲೆಯ ಮೇಲೆ ಪರಿಣಾಮ ಬೀರುವುವು. ಆದರೆ ಇದನ್ನೇ ವ್ಯಾವಹಾರಿಕ ಯುಕ್ತಿಯೆನ್ನುವುದು ಯುಕ್ತಿಯ ಅರ್ಥದ ವ್ಯಾಪ್ತಿಯನ್ನು ಮೊಟಕು ಗೊಳಿಸಿದಂತೆ ಆಗುತ್ತದೆ. ವ್ಯಾವಹಾರಿಕ ಯುಕ್ತಿಯೆನ್ನುವುದು ಒಂದು ಸಂಸ್ಥೆಯ ದೀರ್ಘಾವಧಿಯ ಗುರಿಗಳನ್ನು ಸಾಧಿಸಲು ರೂಪಿಸಬೇಕು.

    ಕಾರ್ಯ ಕ್ಷಮತೆಯು ಕಂಪನಿಯ ವ್ಯಾವಹಾರಿಕ ಯುಕ್ತಿಯ ಭಾಗವಾಗಬೇಕೆಂದೆನು ಇಲ್ಲ. ಕೆಲವೊಮ್ಮೆ ಅತ್ಯಂತ ದಕ್ಷ ಕಾರ್ಯ ಕ್ಷಮತೆಯನ್ನು ಸ್ಪರ್ಧಾತ್ಮಕ ಮಾರುಕಟ್ಟೆಯಲ್ಲಿ ಉಳಿಯಲು ಬದಿಗಿರಿಸಬೇಕಾದ ಅನಿವಾರ್ಯವೂ ಬರುವುದು.

    ಕಾರ್ಯ ಕ್ಷಮತೆಯ ಬಗ್ಗೆ ಮುಂದಿನ ದಿನಗಳಲ್ಲಿ ಸ್ಥೂಲವಾಗಿ ಕಾರ್ಯ ನಿರ್ವಹಣೆ ಯಾ ಅಧ್ಯಾಯದ ಅಡಿಯಲ್ಲಿ ತಿಳಿಯೋಣ. ಮುಂದಿನ ಅಂಕಣದಲ್ಲಿ ಒಂದು ಘಟನೆಯ ಮೂಲಕ ಕಾರ್ಯ ಕ್ಷಮತೆಯ ಮತ್ತು ವ್ಯಾವಹಾರಿಕ ಯುಕ್ತಿಯ ವ್ಯತ್ಯಾಸಗಳನ್ನು ಅರಿಯೋಣ.

  • Strategy – 5

    One specific confusion that most first timers to strategy have is that of operational efficiency or, even excellence and strategy of the organization. A simple clarification that comes handy here is to ask yourself if this the end or a means to the end- the goal you have set out to achieve.

    Companies do indulge in operational excellence to create internal efficiencies, this definitely affects the price of your product; but to say that this efficiency is itself strategy would be an understatement of the scope of strategy. Strategy is about the pursuit of the long term goal that the organization sets out for itself.

    Operation efficiency need not even be an essential component of the strategy the company pursues. Some times the optimal level in operations is foregone to probably ward of the competition or to threaten the competition of a price war.

    We will look to get a clear understanding of operational efficiency and the concepts present there in when we begin our discussion on operations management. We would in the next blog get to understand the difference between operational efficiency and strategy with the help of a small caselet.

  • ಯುಕ್ತಿ – ೪

    ಈ ಹಿಂದಿನ ವ್ಯವಹಾರ ಯುಕ್ತಿಯ ಅಂಕಣದಲ್ಲಿ, ನಾವು ಹೇಗೆ ಹೋಂಡ ಕಂಪನಿಯು ಯಶಸ್ವಿಯಾಗಿ ಮೋಟರ್ ಸೈಕಲ್ ಉದ್ಯಮದಲ್ಲಿ ಮಾರುಕಟ್ಟೆಯಲ್ಲಿ ಪಾರುಪತ್ಯ ಸ್ಥಾಪಿಸಿತು ಎನ್ನುವುದನ್ನು ಅರಿತೆವು. ಇದು ಯಶಸ್ಸಿನ ಭಾಗವಿರುವ ಕತೆಯಾದರೆ, ಯಶಸ್ವಿಯಾಗದೆ ಮಾರುಕಟ್ಟೆಯಲ್ಲಿ ಹಿಂದುಳಿದ ಕಂಪನಿಗಳಿಂದಲೂ ಕೂಡ ವ್ಯವಹಾರ ಯುಕ್ತಿಯ ಬಗ್ಗೆ ಅರಿಯಬಹುದು.
    ನಾವು ಇದಕ್ಕಾಗಿ ಇನ್ನೊಂದು ಆಟೋ ಮೊಬೈಲ್ ಕಂಪನಿಯಾದ ಯುಗೋ ಎಂಬ ಕಂಪನಿಯ ಬಗ್ಗೆ ಅರಿಯೋಣ. ಯುಗೋ ೧೯೮೦ ರ ದಶಕದ ಮಧ್ಯದಲ್ಲಿ ಅಮೆರಿಕವನ್ನು ಪ್ರವೇಶಿಸಿತು. ಅದು ತನ್ನನ್ನು ಮಾರುಕಟ್ಟೆಯಲ್ಲಿ ಮುಂಚೂಣಿಯಾಗಿ ಸ್ಥಾಪಿಸಲು ಕಡಿಮೆ ಬೆಲೆಯ ದಾರಿಯಿಂದ ಶುರು ಮಾಡಿತು. ಕಡಿಮೆ ಬೆಲೆಯ ಮೂಲಕ ಮಾರುಕಟ್ಟೆಯಲ್ಲಿ ಸುಲಭವಾಗಿ ಪಾರುಪತ್ಯವನ್ನು ಸ್ಥಾಪಿಸಬಹುದೆಂದು ನಂಬಿತು. ಆದರೆ ಅಮೇರಿಕಾದ ಗ್ರಾಹಕರು ತಮ್ಮ ಸುರಕ್ಷಿತವಾದ ಪ್ರಯಾಣವನ್ನು ತಮ್ಮ ಕಡಿಮೆ ಬೆಲೆಯಲ್ಲಿ ಸಿಗುವ ಆಟೋ ಮೊಬೈಲ್ ಗಳಲ್ಲಿ ಮುಖ್ಯವಾಗಿ ಬಯಸುವರು ಎಂಬುದನ್ನು ಯುಗೋ ಕಂಪನಿ ಪರಿಗಣಿಸಲಿಲ್ಲ. ಯುಗೋ ಕಂಪನಿಯ ಕಾರುಗಳು ಕಡಿಮೆ ಬೆಲೆಯದ್ದಾಗಿದರೂ ಸುರಕ್ಷತೆ ಮತ್ತು ಗುಣಮಟ್ಟದ ಸಾಧನೆಗಳನ್ನು ಇತರ ಕಾರುಗಳೊಂದಿಗೆ ಹೋಲಿಸಿದಾಗ ಉತ್ತಮವಾಗಿರಲಿಲ್ಲ. ಅಲ್ಲದೆ ಯುಗೋ ಕಾರ್ ಗಳು ಮಾರುಕಟ್ಟೆಗೆ ಬಂದಾಗ ಕಾರ್ ನ ಬೆಲೆ ಇತರ ಕಂಪನಿಯ ಉಪಯೋಗಿಸಿದ ಕಾರ್ ಗಳಿಗಿಂತ ಹೆಚ್ಚು ಬೆಲೆಯದ್ದಾಗಿತ್ತು. ಇತರ ಕಂಪನಿಯ ಬಳಸಿದ ಕಾರ್ ಗಳು ಸುರಕ್ಷತೆ ಮತ್ತು ಗುಣಮಟ್ಟದ ಸಾಧನೆಗಳಲ್ಲಿ ಯುಗೋ ಕ್ಕಿಂತ ಉತ್ತಮವಾಗಿತ್ತು. ಹೀಗಾಗಿ ಯುಗೋ ಕಾರ್ ಗಳು ಮಾರಾಟವಾಗಲೇ ಇಲ್ಲ.
    ಈ ಎರಡು ಕಂಪನಿಗಳ ಕತೆಗಳು (ಹೋಂಡ ಮತ್ತು ಯುಗೋ) ಒಂದು ಸತ್ಯವನ್ನು ವಿಷದಿಸುವುದೇನಂದರೆ ಕೇವಲ ಆರಂಭಿಕ ವಾದ ಕಾರ್ಯತಂತ್ರಗಳಿಂದ ಮಾತ್ರವೇ ಕಂಪನಿಯ ಮುನ್ನಡೆ ಸಾಧ್ಯವಾಗದು. ಬದಲಾವಣೆಗಳಿಗೆ ತಕ್ಕಂತೆ ಹೊಂದಿಕೊಂಡು ವ್ಯವಹಾರದ ಯುಕ್ತಿಯನ್ನು ಬದಲಿಸಿಕೊಳ್ಳುವುದು ಯಶಸ್ಸಿನ ಗುಟ್ಟು.
  • Strategy – 4

    In the earlier blog on Business Strategy, we had seen how Honda made successful attempt at leading the Motorcycle market in US. While this is the success side of the story; strategy gets effectively communicated when we also see why companies haven’t been successful in their pursuit.
    We take the case of another automobile company – Yugo to illustrate this point. Yugo entered the US automobile market in the mid 1980s. It had decided to position itself as the leader by under pricing all of its competition. It believed it could dominate the low-price automobile segment with this approach. One point that Yugo overlooked in its approach was that the US consumer’s valued their safety even while seeking to purchase an inexpensive automobiles. Although Yugo’s price was lower than any other new car in the US maker, its performance and safety were widely perceived to be unacceptable; when its cars actually hit the market, the price really didn’t cost less than many used cars in the US market – those having higher level of safety and performance. There needs to second guess that Yugo no longer sells its cars in the US.
    The two caselets mentioned here – that of Honda and Yugo; illustrate the fact that it’s not that your initial plan of approach that matters but the agility with which the company adapts to the different environment.
    Read in Kannada
  • ಯುಕ್ತಿ – ೩

    ಯುಕ್ತಿಗಳ ಬಗ್ಗೆ ಮುಂದುವರಿಸುತ್ತಾ ಇಂದು ನಾವು ಹೋಂಡ ಕಂಪನಿಯ ಬಗ್ಗೆ ನೋಡೋಣ.

    ಹೋಂಡ ಕಂಪನಿಯು ಮೊದಲ ಬಾರಿಗೆ ಅಮೇರಿಕದ ಮಾರುಕಟ್ಟೆಯನ್ನು ೧೯೬೦ ರ ಸಮಯದಲ್ಲಿ ಪ್ರವೇಶಿಸುವಾಗ ಅದು ಆ ಮೊದಲೇ ಮಾರುಕಟ್ಟೆಯಲ್ಲಿ ಮಜಬೂತಾದ ಸ್ಥಾನದಲ್ಲಿದ್ದ ಹಾರ್ಲೆ – ಡೇವಿಡ್ಸನ್, ಟ್ರೈಮ್ಪ್ ಇತ್ಯಾದಿ ಕಂಪನಿಗಳೊಂದಿಗೆ ಸ್ಪರ್ಧಿಸಬೇಕಾಗಿತ್ತು. ಹೋಂಡ ಅಮೇರಿಕಾದಲ್ಲಿ ಉತ್ತಮ ಶಕ್ತಿಶಾಲಿ ಮೋಟಾರ್ ಗಾಡಿ ಯನ್ನು ಮಾರಾಟ ಮಾಡಿ ಯಶಸ್ವಿಯಾಗ ಬಯಸಿತ್ತು. ಆದರೆ ಅಮೇರಿಕಾದ ಗ್ರಾಹಕರು ದೊಡ್ಡ ಗಾತ್ರದ ಮೋಟಾರ್ ಗಾಡಿಗಳನ್ನು ಹೋಂಡ ಕಂಪನಿಯಿಂದ ಕೊಳ್ಳಲು ಬಯಸದೆ ಮೊದಲೇ ಇದ್ದ ಕಂಪನಿಗಳಿಂದ ಕೊಳ್ಳುವುದನ್ನು ಮುಂದುವರಿಸುತ್ತಿದರು. ಅಮೇರಿಕಾದ ಜನರು ಹೋಂಡ ಕಂಪನಿಯಿಂದ ಸಣ್ಣ ಗಾತ್ರದ ಮೋಟಾರ್ ಸ್ಕೂಟರ್ ಗಳನ್ನು ಕೊಳ್ಳ ಬಯಸುತ್ತಿದ್ದರು.

    ಒಮ್ಮೆ ಹೋಂಡ ಕಂಪನಿ ಇದನ್ನು ಗ್ರಹಿಸಿದ ಮೇಲೆ ಕಂಪನಿಯಯುಕ್ತಿಯನ್ನು ಬದಲಾಯಿಸಿ ಮೋಟಾರ್ ಸ್ಕೂಟರ್ ಗಳನ್ನೂ ಮಾರಲು ಶುರು ಮಾಡಿತು. ಮೊದಲು ಸಣ್ಣ ಗಾತ್ರದ ಮೋಟಾರ್ ಸ್ಕೂಟರ್ ಗಳನ್ನು ಮಾರಿ ಮಾರುಕಟ್ಟೆಯನ್ನು ವಶ ಪಡಿಸಿಕೊಂಡು ಹೋಂಡ ನಂತರದಲ್ಲಿ ತನ್ನ ದೊಡ್ಡ ಗಾತ್ರದ ಮೋಟರ್ ಸೈಕಲ್ ಗಳನ್ನೂ ಮಾರುಕಟ್ಟೆಗೆ ಯಶಸ್ವಿಯಾಗಿ ತಂದಿತು. ಈ ಯುಕ್ತಿಯ ಮೂಲಕ ಹೋಂಡ ಕಂಪನಿ ಜಪಾನಿ ಕಂಪನಿಗಳ ಒಟ್ಟಿಗೆ ಸೇರಿಕೊಂಡು ಭಾಗಶಃ ಇತರ ಮೋಟರ್ ಸೈಕಲ್ ಕಂಪನಿಗಳನ್ನು ಹಿಮ್ಮೆಟ್ಟಿಸಿತು. ಹಾರ್ಲೆ – ಡೇವಿಡ್ಸನ್ ಒಂದೇ ಕಂಪನಿ ೧೯೬೦ ರಿಂದ ಸ್ಪರ್ಧೆಯನ್ನು ಇನ್ನು ಮುಂದುವರಿಸಿದೆ.

    ಈ ಒಂದು ಸಣ್ಣ ಇತಿಹಾಸದ ಮುಖ್ಯಾಂಶವೆಂದರೆ- ಕೆಲವೊಮ್ಮೆ ಮಾರುಕಟ್ಟೆಯ ಮತ್ತು ಉದ್ಯಮಗಳ ಸೂಕ್ಷ್ಮ ಆರ್ಥಿಕ ಗತಿಗಳು ಮತ್ತು ಅವುಗಳನ್ನು ದುರುಪಯೋಗ ಪಡಿಸಿಕೊಂಡು ತಮ್ಮ ಏಳ್ಗೆ ಸಾಧಿಸುವುದು ದೊಡ್ಡ ತಪ್ಪಾಗುವುದು. ಯಶಸ್ಸು ಅನ್ನುವುದು ಎಷ್ಟು ಶೀಘ್ರದಲ್ಲಿ ಬದಲಾವಣೆಗಳನ್ನು ಅರಿತು ಅಳವಡಿಸಿಕೊಳ್ಳುವೆವು ಅನ್ನುವುದರಲ್ಲಿ ನಿಂತಿದೆ.