Category: Kannada ಕನ್ನಡ

  • ವ್ಯವಹಾರ ಪ್ರತಿಕೃತಿ – ಚಂದಾದಾರಿಕೆ

    ಈ ಮಾದರಿಯು ಪತ್ರಿಕೆಗಳ ಮತ್ತು ಪ್ರಕಾಶನಗಳ ಉದ್ಯಮದಲ್ಲಿ ಬಹಳ ಚಾಲ್ತಿಯಲ್ಲಿರುವಂತದು. ಇದನ್ನೇ ಕೊಂಚ ಬದಲಾಯಿಸಿಕೊಂಡು ಇತರ ಉದ್ಯಮಗಳಲ್ಲೂ ಅಳವಡಿಸಬಹುದು.
    ನಾವು ಸಾಮಾನ್ಯವಾಗಿ ವಿವಿಧ ರೀತಿಯ ಪತ್ರಿಕೆಗಳಿಗೆ ಚಂದಾದಾರರಾಗಿರುತ್ತೇವೆ. ಚಂದಾದಾರಿಕೆ ಎಂದರೆ ಏನು?
    ಇದರರ್ಥ ನಾನು ಪತ್ರಿಕೆಯಲ್ಲಿ ಬರುವುದನ್ನು ತುಂಬಾ ಇಷ್ಟಪಟ್ಟಿದ್ದು, ಅದನ್ನು ಕೊಂಡುಕೊಳ್ಳಲು ಮುಂಗಡ ಹಣಕೊಡಲು (ಮಾಸಿಕ/ವಾರ್ಷಿಕ) ನಾನು ಹಿಂಜರಿಯುವುದಿಲ್ಲವೆಂದು. ಜೊತೆಗೆ ಪತ್ರಿಕೆಯವರಿಗೆ ತಮ್ಮ ಪತ್ರಿಕೆಯು ಕೇವಲ ಚಂದಾದಾರನಿಂದಷ್ಟೇ ಅಲ್ಲದೆ ಅವರ ಕುಟುಂಬ, ಸ್ನೇಹಿತರಿಂದ ಕೂಡ ಓದಲ್ಪಡುವುದೆಂಬ ಖಾತ್ರಿ ಇರುತ್ತದೆ. ಈ ಚಂದಾದಾರಿಕೆ ಮಾದರಿಯು ಎರಡು ಅಂಶಗಳನ್ನು ಒಳಗೊಂಡಿದೆ – ಪ್ರಾಮಾಣಿಕತೆ ಮತ್ತು ಪ್ರೋತ್ಸಾಹ.
    ಈ ಮಾದರಿಯಲ್ಲಿ ಮುಖ್ಯವಾಗಿ ಗಮನಿಸ ಬೇಕಾದ ಅಂಶ ಓದುಗರಿಗೆ ಸಮರ್ಪಕವಾದ ವಿಚಾರಗಳನ್ನು ಪತ್ರಿಕೆಗಳಲ್ಲಿ ಇರುವಂತೆ ಮಾಡುವುದು. ಹಾಗಿಲ್ಲದಿದ್ದಲ್ಲಿ ಓದುಗರು ಚಂದಾದಾರಿಕೆಯನ್ನು ರದ್ದು ಮಾಡುವರು. ಈ ರೀತಿಯ ಉದ್ಯಮಗಳ ಆರ್ಥಿಕತೆ ಅವುಗಳು ಪತ್ರಿಕೆಗಳಿಗೆ ನಿಗದಿ ಪಡಿಸುವ ಬೆಲೆಗಳಿಂದ ವಿವರಿಸಬಹುದು, ಇನ್ನು ಕೆಲವು ಉದ್ಯಮಗಳು ಜಾಹೀರಾತುಗಳ ಮೂಲಕ ಸಂಪಾದನೆ ಮಾಡುವರು.
    ಈ ಮಾದರಿಯು ಉದ್ಯಮಗಳಿಗೆ ಶಿಕ್ಷಣ ಮತ್ತು ತರಬೇತಿಯನ್ನು ನೀಡಲೂ ಕೂಡ ಬಳಸಲಾಗುತ್ತಿದೆ. ಒಟ್ಟಾಗಿ ಈ ವ್ಯವಹಾರ ಪ್ರತಿಕೃತಿಯು ಉತ್ತಮ ಗುಣಮಟ್ಟದ ವಿಷಯಗಳನ್ನು ಗ್ರಾಹಕರು ತೆಗೆದುಕೊಳ್ಳುವುದರಲ್ಲಿ ನಿಂತಿದೆ.

    ಆಂಗ್ಲ ಅಂಕಣ:

    http://somanagement.blogspot.com/2011/05/business-model-subscription.html
  • ವ್ಯವಹಾರ ಪ್ರತಿಕೃತಿ – ಪ್ರತ್ಯೇಕತೆ

    ನಿಮ್ಮ ಸುತ್ತಮುತ್ತಲಿರುವ ವಿವಿಧ ಅಂಗಡಿಗಳನ್ನು ಗಮನಿಸಿದಾಗ ನೀವು ಅರಿಯುವುದೇನೆಂದರೆ ಹೆಚ್ಚಿನವುಗಳು ವಿವಿಧ ಬ್ರ್ಯಾಂಡ್ ನ ವಸ್ತುಗಳನ್ನು ತಮ್ಮ ಅಂಗಡಿಗಳಲ್ಲಿ ಮಾರಾಟಕ್ಕೆ ಇಟ್ಟಿರುವರು. ಇದರಿಂದಾಗಿ ಎಲ್ಲಾ ಬಗೆಯ ಗ್ರಾಹಕರನ್ನು ತಮ್ಮತ್ತ ಸೆಳೆಯಲು ಅವುಗಳು ಯಶಸ್ವಿಯಾಗುವುವು, ಆ ಮೂಲಕ ನಿಮ್ಮ ಉತ್ಪನ್ನಗಳು ಹೊರಗೆ ಕಾಣುವಂತೆ ಮಾಡುವುವು. ಆದರೆ ಪ್ರಸಿದ್ಧವಾದ ಬ್ರ್ಯಾಂಡ್ ಗಳು ಪ್ರತ್ಯೇಕವಾಗಿ ಹೊರನಿಂತು ತಮ್ಮದೆಯಾದ ಅಂಗಡಿ ಮಳಿಗೆಗಳನ್ನು ಹೊಂದಿರುತ್ತವೆ. ಇಂದಿನ ಈ ಬ್ಲಾಗ್ ಇದರ ಕುರಿತಾಗಿದೆ.
    ಬ್ರ್ಯಾಂಡ್ ಎನ್ನುವುದು ಒಂದು ಕಂಪನಿಯು ನಮ್ಮಲ್ಲಿ ಸದಾಕಾಲ ಮೂಡಿಸಲೆತ್ನಿಸುವ ಒಂದು ಅನುಭವ. ದೊಡ್ಡ ಬ್ರ್ಯಾಂಡ್ ಗಳು ತಮ್ಮದೇಯಾದ ಅನುಯಾಯಿಗಳನ್ನು ಹೊಂದಲು ಇಚ್ಛಿಸುತ್ತವೆ. ಪ್ರತ್ಯೇಕತೆ ಇದನ್ನು ಸಾಧಿಸಲಿರುವ ಮಾರ್ಗಗಳಲ್ಲಿ ಒಂದು. ಸಂಪೂರ್ಣ ಪ್ರತ್ಯೇಕವಾಗಿ ಒಂದು ಬ್ರ್ಯಾಂಡ್ ನ ಮಾರಟಕ್ಕೆ ಇರುವ ಮಳಿಗೆಗಳು ಸಾಮಾನ್ಯವಾಗಿ ತಮ್ಮದೇಯಾದ ಸಿದ್ಧಾಂತ ಮತ್ತು ಭಾವವನ್ನು ತಿಳಿಸಲು ರೂಪಿಸಲಾಗಿರುತ್ತವೆ. ಅಲ್ಲಿನ ಕರ್ಮಚಾರಿಗಳು ಬ್ರ್ಯಾಂಡ್ ನ ಉದ್ದೇಶವನ್ನು ವಿಷದಿಸಲೇ ಸೂಕ್ತವಾಗಿ ತರಬೇತಿಯನ್ನು ಪಡೆದಿರುತ್ತಾರೆ. ಈ ರೀತಿಯ ಅನುಭವ ಪಡೆಯುವ ಗ್ರಾಹಕ ಸ್ವಾಭಾವಿಕವಾಗಿ ಬ್ರ್ಯಾಂಡ್ ನ ಒಟ್ಟಿಗೆ ಒಂದು ಪ್ರಾಮಾಣಿಕ ಸಂಬಂಧಕ್ಕೆ ಅಂಟಿಕೊಳ್ಳುವರು. ಆ ಮೂಲಕ ಯಾವ ಬೆಲೆಯನ್ನಾದರೂ ತೆರುವಷ್ಟು ನಂಬಿಕೆಯನ್ನು ಹೊಂದಿರುವರು. ಈ ಮೂಲಕ ಬ್ರ್ಯಾಂಡ್ ನ ಅನುಯಾಯಿಗಳಲ್ಲಿ ಒಬ್ಬನಾಗುವನು. ಇಂದಿನ ಯುಗದಲ್ಲಿನ “ಆಪಲ್ ಇಂಕ್” ನ ಅನುಯಾಯಿಗಳು ಈ ಮಾದರಿಗೆ ಒಂದು ಉತ್ತಮ ಉದಾಹರಣೆ.
    ಈ ರೀತಿಯ ಪ್ರತ್ಯೇಕತೆಯು ಕಂಪನಿಗಳಿಗೆ ತಮ್ಮ ಗುತ್ತಿಗೆದಾರ ಮಳಿಗೆಗಳ ಮೇಲೆ ಹೆಚ್ಚಿನ ನಿಯಂತ್ರಣ ಹೊಂದಲು ಸಾಧ್ಯವಾಗುವುದು. ಇವಲ್ಲದೆ ಕಂಪನಿಗಳಿಗೆ ಹೊಸ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡಲು ಮತ್ತು ಆ ಮೂಲಕ ಆಗಬಹುದಾದ ಸ್ವ- ಭಕ್ಷಣ ದಂತಹ ದುರಂತಗಳನ್ನು ತಪ್ಪಿಸಲೂ ಕೂಡ ಸಾಧ್ಯವಾಗುವುದು. ಇದರಿಂದ ಬ್ರ್ಯಾಂಡ್ ನ ವರ್ಚಸ್ಸು ನೀರಸವಾಗುವುದಂತೂ ಖಂಡಿತವಾಗಿಯೂ ತಪ್ಪಿಸಲ್ಪಡುತ್ತದೆ.
    ಸೂಕ್ಷ್ಮವಾಗಿ ಗಮನಿಸಿದರೆ ಈ ಮಾದರಿಯು ಕಂಪನಿಗಳಿಗೆ ಕೃತಕ ಅಭಾವವನ್ನು ಸೃಷ್ಟಿಸಿ ಮಾರುಕಟ್ಟೆಯಲ್ಲಿ ತಮ್ಮದೇ ಬೆಲೆಯನ್ನು ನಿಗದಿ ಪಡಿಸಲೂ ಕೂಡ ಸಹಕಾರಿ.

    ಆಂಗ್ಲ ಅಂಕಣ:

    http://somanagement.blogspot.com/2011/05/business-model-exclusivity.html

  • ವ್ಯವಹಾರ ಪ್ರತಿಕೃತಿ – ಏಲಂ (ಹರಾಜು)

    ಉತ್ಪನ್ನವು ಮಾರಾಟವಾಗುವಂತಹ ಬೆಲೆಯನ್ನು ನಿಗದಿ ಪಡಿಸುವುದು ಯಾವುದೇ ಕಂಪನಿಗೆ ಒಂದು ಬಹು ಮುಖ್ಯವಾದ ಚಟುವಟಿಕೆಯಾಗಿರುತ್ತದೆ. ಉಳಿದೆಲ್ಲ ಅಂಶಗಳು ಸರಿಯಾಗಿರಬಹುದು, ಆದರೆ ಬೆಲೆಯನ್ನು ತಪ್ಪಾಗಿ ನಿಗದಿ ಪಡಿಸಿರಬಹುದು, ಆಗ ನಿಮ್ಮ ನಷ್ಟವನ್ನು ತಪ್ಪಿಸಲು ಸಾಧ್ಯವಿಲ್ಲ! ಅರ್ಥ ಶಾಸ್ತ್ರದ ಸುಂದರತೆ ಇರುವುದೇ ಅದು ಮಾಡುವ ಮತ್ತು ನಂಬುವ ಹೇಳಿಕೆಗಳಲ್ಲಿ, ಮಾರುಕಟ್ಟೆಯ ವ್ಯಾಖ್ಯಾನವೇ ಹೇಳುವಂತೆ ಮಾರುಕಟ್ಟೆಯ ಬೆಲೆಯನ್ನು ಮಾರುವವ ಮತ್ತು ಕೊಳ್ಳುವವ ರ ನಡುವಿನ ಮಾತುಕತೆಗಳಿಂದಲೇ ನಿರ್ಧಾರ ಮಾಡಬಹುದು. ಕೇವಲ ಉತ್ಪಾದನ ವೆಚ್ಚದಷ್ಟಿನ ಬೆಲೆಯು ಮಾರುವವ ಮತ್ತು ಕೊಳ್ಳುವವರಿಗೆ ಒಂದು ಉತ್ತಮ ವ್ಯವಹಾರ ಒಪ್ಪಂದವಾಗಿರಲಾರದು, ಆದರೆ ಮಾರುಕಟ್ಟೆಯ ಬೆಲೆ ಇದನ್ನು ಸಾಧಿಸುವುದು. ಏಲಂ ಅಥವಾ ಸಾಮಾನ್ಯ ಭಾಷೆಯಲ್ಲಿ ಹರಾಜು ಹಾಕುವುದು ಮಾರುಕಟ್ಟೆಯ ಸೊಬಗನ್ನು ಸವಿಯುವ ಒಂದು ವಿಧಾನ. ಏಲಂ ಪ್ರಕ್ರಿಯೆಯಲ್ಲಿಯೇ ಹಲವಾರು ವಿಧಿವಿಧಾನಗಳಿವೆ, ಅವುಗಳನ್ನು ಮುಂದೆ ನೋಡೋಣ.

    ಸಾಮಾನ್ಯವಾಗಿ ನಡೆಸುವ ಹಳೆಯ ಕಾಲದಿಂದ ನಡೆದು ಬಂದ ಹರಾಜು ಪ್ರಕ್ರಿಯೆಗೆ ತನ್ನದೇ ಆದ ಇತಿಮಿತಿಗಳಿವೆ. ಆದರೆ ಆನ್ ಲೈನ್ ಮಾದರಿಯ ಹರಾಜು ಪ್ರಕ್ರಿಯೆ ಹೆಚ್ಚು ಜನರನ್ನು ತನ್ನೆಡೆ ಸೆಳೆಯಬಲ್ಲದು. ಈ ಆನ್ ಲೈನ್ ಮಾದರಿಯ ಹರಾಜಿನ ಮುಖ್ಯವಾದ ಲಾಭವೆಂದರೆ ಭೌಗೋಲಿಕ ಸರಹದ್ದುಗಳನ್ನು ಮೀರಿದ ವ್ಯಾಪ್ತಿಗೆ ತಲುಪುವುದು, ಸಂಗ್ರಹಣೆ ಮತ್ತು ನಿರ್ವಹಣೆಯ ವೆಚ್ಚ ಕಡಿಮೆಗೊಳಿಸುವುದು, ವಿವಿಧ ವರ್ಗಗಳ ಜನತೆಯನ್ನು ತಲುಪುವುದು. ಆದರೆ ಇದರ ಮುಖ್ಯವಾದ ಕೊರತೆಯೆಂದರೆ ಕೊಳ್ಳುವ ಗ್ರಾಹಕನಿಗೆ ತಾನು ಕೊಳ್ಳುವ ಉತ್ಪನ್ನದ ಸಂಪೂರ್ಣ ಅನುಭವ ಸಿಗದಿರುವುದು.

    ಇ ಕಾಮರ್ಸ್ ನಲ್ಲಿ ಈ ಪ್ರಕ್ರಿಯೆಗೆ ಮೀಸಲಾಗಿ ಅಮೆಜಾನ್, ಇ ಬೇ ಇತ್ಯಾದಿ ಕಂಪನಿಗಳು ತಮ್ಮದೇ ಆದ ರೀತಿಯಲ್ಲಿ “ಮಾರುಕಟ್ಟೆ” ಯನ್ನು ನಡೆಸುತ್ತಿವೆ ಅಲ್ಲದೆ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿವೆ. ಈ ವ್ಯವಹಾರ ಪ್ರತಿಕೃತಿಯು ಹಲವಾರು ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳು ಅಳವಡಿಸಿ ಕೊಂಡಿದ್ದು ಗಣನೀಯ ಮಟ್ಟದಲ್ಲಿ ಯಶಸ್ಸನ್ನೂ ಕಂಡಿವೆ. ಇದರ ಬಗ್ಗೆ ಇನ್ನು ಆಳವಾಗಿ ಮುಂದೆ ತಿಳಿಯೋಣ.

    ಆಂಗ್ಲ ಅಂಕಣ:

    http://somanagement.blogspot.com/2011/05/business-model-auction.html

    Trustworthiness:
    Vendor reliability:
    Privacy:
    Child safety:
  • ವ್ಯವಹಾರ ಪ್ರತಿಕೃತಿ – ಮಿತ ಕ್ರಯ

    ವ್ಯವಹಾರದಲ್ಲಿ ಓಡಾಟ ಬಹು ಸಹಜವಾದ ಕೆಲಸ, ಸಮಯದ ಕೊರತೆ ಇದ್ದಾಗ ಅತ್ಯಂತ ವೇಗದಿಂದ ತಮ್ಮ ತಮ್ಮ ಸ್ಥಳಗಳಿಗೆ ಹೋಗ ಬೇಕಾದರೆ ವಿಮಾನದ ಬಳಕೆ ಕಡ್ದಾಯವಾಗುತ್ತದೆ. ಆದರೆ ವೈಮಾನಿಕ ಉದ್ಯಮದಲ್ಲಿ ವೆಚ್ಚ ಹೆಚ್ಚು, ಇದನ್ನು ತನ್ನ ಗ್ರಾಹಕರಿಗೆ ಕೈಗೆಟಕುವಂತೆ ಮಾಡಲು ಈ ಸಂಸ್ಥೆ ಗಳು ತಮ್ಮ ಕಾರ್ಯವನ್ನು ಅತ್ಯಂತ ದಕ್ಷತೆಯಿಂದ ನಿರ್ವಹಿಸಬೇಕಾಗುತ್ತದೆ.

    ಈ ಕಾರ್ಯ ದಕ್ಷತೆಯನ್ನು ಪಡೆಯಲು ಅವುಗಳು ತಮ್ಮ ಕಾರ್ಯವನ್ನು ಮಿತಕ್ರಯದ ಬೆಳಕಿನಲ್ಲಿ ನೋಡ ಬೇಕಾಗುತ್ತದೆ. ಇದನ್ನು ಸಿಧ್ಧಿಗೊಳಿಸಲು ವೈಮಾನಿಕ ಸಂಸ್ಥೆಗಳು ಅವುಗಳ ವಾಹಕ ವಿಮಾನಗಳನ್ನು ಏಕ ರೂಪಿಯಾಗಿಸುತ್ತವೆ, ಇದರಿಂದ ಅದರ ಪೋಷಣೆಯ ವೆಚ್ಚವು ಕಡಿಮೆಯಾಗುವುದು, ಅದರ ಕಾರ್ಯ ಕರ್ಮಿಗಳ ಕೌಶಲ್ಯದ ಮೇಲೆ ಹೆಚ್ಚು ನಿವೇಶನ ಹೋದ ಬೇಕೆಂದಿರುವುದಿಲ್ಲ ಇತ್ಯಾದಿ ಇತ್ಯಾದಿ. ಅಂತೆಯೇ ಈ ಸಂಸ್ಥೆಗಳು ತಮ್ಮ ಸೇವೆಯನ್ನು ಕೇವಲ ಸಂಪರ್ಕಕ್ಕೆಂದು ಮೀಸಲಿಟ್ಟು, ಗ್ರಾಹಕರ ಯಾವುದೇ ಹೆಚ್ಚಿನ ಬೇಡಿಕೆಗೆ ಶುಲ್ಕವನ್ನು ಪಡೆದು ಕೊಳ್ಳುತ್ತಾರೆ. ದುಬಾರಿ ವಿಮಾನದ ಸಂಸ್ಥೆಯನ್ನು ಹೊಲಿಸಿದಾಗ ಇದು ಅದರ ವಿರುದ್ಧ ದಿಕ್ಕಿನಲ್ಲಿರುವಂತ ವ್ಯವಹಾರ ಪ್ರತಿಕೃತಿ.

    ನಾವು ಈ ಅಂಕಣದಲ್ಲಿ ಕೇವಲ ವೈಮಾನಿಕ ಸಂಸ್ಥೆಗಳ ಬಗ್ಗೆ ಚರ್ಚಿಸಿದ್ದೇವೆ, ಆದರೆ ಈ ವ್ಯವಹಾರ ಪ್ರತಿಕೃತಿಯನ್ನು ಉಪಯೋಗಿಸ ಬಹುದಾದ ಸಂಸ್ಥೆಗಳು ಈ ಅಂಕಣದ ಹಿಂದಿನ ಮೂಲ ತತ್ವಗಳನ್ನು ಅನುಸರಿಸುತ್ತಾರೆ.

    ಆಂಗ್ಲ ಅಂಕಣ: http://somanagement.blogspot.com/2011/05/business-models-low-cost.html

  • ವ್ಯವಹಾರ ಪ್ರತಿಕೃತಿ – ಮೌಲ್ಯ ವರ್ಧಿತ ವಿತರಣೆ

    ಈ ಹಿಂದಿನ ಅಂಕಣದಲ್ಲಿ ದುಬಾರಿಬೆಲೆಯ ವ್ಯವಹಾರ ಪ್ರತಿಕೃತಿಯ ಬಗ್ಗೆ ತಿಳಿದೆವು, ಅದರಲ್ಲಿ ಕಂಪನಿಗಳು ಹೊಸತಾದ ಮತ್ತು ವಿಭಿನ್ನವಾದ ಒಂದು ವಿಚಾರವನ್ನು ತಮ್ಮ ಉತ್ಪಾದನೆಗಳಿಗೆ ಅಳವಡಿಸುವ ಮೂಲಕ ಹೆಚ್ಚಿನ ಬೆಲೆಯನ್ನು ವಿಧಿಸುವುದು ಸಾಧ್ಯವಾಗುವುದು. ಇಂದು ನಾವು ಮೌಲ್ಯ ವರ್ಧಿತ ವಿತರಣೆ ಒಂದು ಪ್ರತಿಕೃತಿಯಾಗಿ ಹೇಗೆ ಎಂದು ಅರಿಯೋಣ.
    ನಾವು ನಮ್ಮ ಸುತ್ತ ಮುತ್ತಲಿರುವ ಕೈಗಾರಿಕೆಗಳನ್ನು ಇತರ ಕಂಪನಿಗಳನ್ನು ಗಮನಿಸಿದಾಗ ನಮಗರಿವಾಗುವುದೇನಂದರೆ ಹೆಚ್ಚಿನವು ಕೇವಲ ಬಿಡಿ ಭಾಗಗಳನ್ನು ಮಾತ್ರ ತಯಾರಿಸುತ್ತಿವೆ. ಇನ್ನು ಕೆಲವು ಕಂಪನಿಗಳು ಇವೆಲ್ಲ ಬಿಡಿ ಭಾಗಗಳನ್ನು ಒಟ್ಟು ಜೋಡಿಸಿ ಗ್ರಾಹಕರಿಗೆ ಅಗತ್ಯವಾದ ಉತ್ಪನ್ನಗಳನ್ನು ನೀಡುತ್ತವೆ.
    ಹೆಚ್ಚಿನ ಉತ್ಪನ್ನಗಳ ಬಳಕೆದಾರರು ಉತ್ಪನ್ನದ ಉತ್ತಮ ಬಳಕೆ ಮತ್ತು ಅದರ ಉಪಯೋಗದ ಬಗ್ಗೆ ಆಸಕ್ತಿ ಹೊಂದಿರುವರು. ಈ ಉತ್ಪನ್ನಗಳ ಉತ್ಪಾದನೆ ಮತ್ತು ಅಭಿವೃದ್ಧಿಯ ಬಗೆಗೆ ಕೆಲವೇ ಕೆಲವು ಮಂದಿ ಮಾತ್ರ ಯೋಚಿಸುವರು. ಈ ರೀತಿಯ ಸಂದರ್ಭ ಇರುವಾಗ ಕಂಪನಿಗಳು ಉತ್ಪನ್ನದ ಮೂಲಕ ಸ್ವಲ್ಪ ಹೆಚ್ಚಿನ ಬೆಲೆಯನ್ನು ಪಡೆಯುವ ಅವಕಾಶವಿರುತ್ತದೆ. ಹೀಗಾಗಿ ಕಂಪನಿಗಳು ಉತ್ಪನ್ನದ ಮೂಲ ಉತ್ಪಾದನೆಯನ್ನು ಹೊರ ಗುತ್ತಿಗೆ ನೀಡಿ, ಉತ್ಪನ್ನದ ಬಳಕೆ ಹೆಚ್ಚಾಗಲು ವಿಧ ವಿಧದ ಉತ್ತಮ ಲಕ್ಷಣಗಳನ್ನು ಸೇರಿಸುವಲ್ಲಿ ತೊಡಗುವವರು.
    ಇಷ್ಟೆಲ್ಲಾ ಸೇರಿಸಿ ಉತ್ಪನ್ನವನ್ನು ಉತ್ತಮಗೊಳಿಸಿದರೂ ಮಾರುಕಟ್ಟೆಯಲ್ಲಿ ಉತ್ಪನ್ನದ ಏಳು ಬೀಳು ಗಳ ಅನುಭವಕ್ಕೆ ಕಡೆಯದಾಗಿ ಗ್ರಾಹಕರಿಗೆ ಮಾರುವ ವಿತರಕನ ಮೇಲೆ ಅವಲಂಬಿತವಾಗಿರುವುದು. ಕೇವಲ ಉತ್ಪನ್ನವಷ್ಟೇ ಅಲ್ಲದೆ ಆ ನಂತರದ ಸೇವೆಗಳು ಎಲ್ಲವೂ ಸೇರಿ ಉತ್ಪನ್ನದ ಮೌಲ್ಯವನ್ನು ಮಾರುಕಟ್ಟೆಯಲ್ಲಿ ನಿರ್ಧರಿಸುತ್ತದೆ. ಹೀಗಾಗಿ ಈ ವಿತರಕನು ಉತ್ಪನ್ನಕ್ಕೆ ಹೆಚ್ಚಿನ ಮೌಲ್ಯವನ್ನು ಗ್ರಾಹಕರಿಗೆ ನೀಡುವ ಉತ್ತಮ ಅನುಭವದ ಮೂಲಕ ಕೊಡುವನು. ಅದು ಉತ್ಪನ್ನಗಲಿಡುವ ಉಗ್ರಾಣ (ಸ್ಟೋರ್) ಆಗಿರಬಹುದು, ಗ್ರಾಹಕರೊಡನೆ ವ್ಯವಹರಿಸುವ ಪರಿಯಾಗಿರಬಹುದು ಒಟ್ಟಿನಲ್ಲಿ ಗ್ರಾಹಕರಿಗೆ ನೀಡುವ ಒಳ್ಳೆಯ ಅನುಭವ ಮತ್ತು ವಿಶ್ವಾಸ ವಿತರಕನಿಗೆ ಹೆಚ್ಚಿನ ಮೌಲ್ಯವನ್ನು ನೀಡುತ್ತದೆ, ಮತ್ತು ಈ ಮೂಲಕ ವಿತರಕರು ಹೆಚ್ಚಿನ ಹಣವನ್ನು ಗಳಿಸುವರು.
    ಆಂಗ್ಲ ಅಂಕಣ: http://somanagement.blogspot.com/2011/04/business-model-value-added-reseller.html
    Trustworthiness:
    Vendor reliability:
    Privacy:
    Child safety:
  • ವ್ಯವಹಾರ ಪ್ರತಿಕೃತಿ – ದುಬಾರಿ ಬೆಲೆಯ ವ್ಯಾಪಾರ

    ವ್ಯವಹಾರ ಪ್ರತಿಕೃತಿಯ ಬಗೆಗಿನ ನಮ್ಮ ವಿಚಾರ ವಿನಿಮಯಗಳಲ್ಲಿ ಇಂದು ನಾವು ಅತ್ಯಂತ ವೈಶಿಷ್ಟ್ಯವಾದ ಪ್ರತಿಕೃತಿಯ ಬಗ್ಗೆ ಅರಿಯೋಣ.
    ಅನೇಕ ಜನರು ಸಾಮಾನ್ಯ ಜನರಿಗಿಂತ ವೈಶಿಷ್ಟ್ಯವಾಗಿ ಮತ್ತು ವಿಭಿನ್ನರಾಗಿ ಬದುಕಬೇಕೆಂಬ ಇಚ್ಛೆಯನ್ನು ಹೊಂದಿರುತ್ತಾರೆ.ಆ ಮೂಲಕ ತಮ್ಮ ಘನಗಾರಿಕೆಯನ್ನು ಮತ್ತು ತಮ್ಮ ಸ್ಥಾನಮಾನವನ್ನು ಪ್ರದರ್ಶಿಸುತ್ತಾರೆ. ಈ ಅಂಶವೇ ನಾವಿಂದು ಚರ್ಚಿಸುತ್ತಿರುವ ವ್ಯವಹಾರ ಪ್ರತಿಕೃತಿಯ ಮೂಲ ಆಧಾರ.
    ನಮ್ಮಲ್ಲಿ ಹೆಚ್ಚಿನವರು “ಮರ್ಸಿಡೀಸ್” ಕಾರ್ ನ ಬಗ್ಗೆ ಕೇಳಿರುತ್ತೇವೆ. ಜಗತ್ತಿನ ಅತ್ಯಂತ ದುಬಾರಿಯಾದ ಕಾರಾಗಿದ್ದು ಕೇವಲ ಅತಿ ಶ್ರೀಮಂತ ವರ್ಗದವರಿಗೆ ಮಾತ್ರ ಖರೀದಿಸಲು ಸಾಧ್ಯವಾದುದಾಗಿದೆ. ಈ ಕಾರ್ ಗಳ ಯಾವ ವೈಶಿಷ್ಟ್ಯತೆ ಇವುಗಳನ್ನು ಇಷ್ಟು ದುಬಾರಿ ಗೊಳಿಸುತ್ತವೆ?
    ಮರ್ಸಿಡೀಸ್ ಕಾರುಗಳಿಗೆ ವಿಮಾನಗಳಿಗೆ ಬಳಸುವ ಬಿಡಿಬಾಗಗಳನ್ನು ಬಳಸುತ್ತಾರೆ ಎಂದು ಪ್ರತೀತಿ ಇದೆ. ಇದರಿಂದ ಯಾವುದೇ ರೀತಿಯ ಸ್ಥೂಲವಾದ ಮಹತ್ತರ ಲಾಭವಿಲ್ಲದಿದ್ದರೂ, ಈ ಅಂಶವು ವೈಶಿಷ್ಟ್ಯವಾಗಿ ಬದುಕಬೇಕೆಂಬ ಜನರ ಮಾನಸಿಕತೆಯ ಮೇಲೆ ಪರಿಣಾಮ ಬೀರುತ್ತದೆ.ಈ ರೀತಿ ಇಂತಹ ಜನರ ಉನ್ನತ ಮಟ್ಟದ ಜೀವನ ಶೈಲಿಯಿರಬೇಕೆಂಬ ಮಹದಾಸೆಗಳು ಹೆಚ್ಚಿನ ಬೆಲೆಯ ವಸ್ತುಗಳನ್ನು ಖರಿದಿಸುವಂತೆ ಮಾಡುವುದು. ಹಾಗಾಗಿ ಕಂಪನಿಗಳು “ಹೆಚ್ಚಿನ” ಬೆಲೆಯನ್ನು ವಿಧಿಸುವದರ ಮೂಲಕ ಕೆಲವೇ ಗ್ರಾಹಕರಿಂದ ಉತ್ತಮ ಲಾಭ ಪಡೆಯುವರು.
    ಆಂಗ್ಲ ಅಂಕಣ-
    http://somanagement.blogspot.com/2011/04/business-model-premium-business.html
  • ವ್ಯವಹಾರ ಪ್ರತಿಕೃತಿ – ಆನ್ ಲೈನ್ ಮಾಹಿತಿ ವಿನಿಮಯ

    ಈ ಹಿಂದಿನ ಅಂಕಣದಲ್ಲಿ ಸಾಮಾಜಿಕ ಸಂಪರ್ಕ ಜಾಲಗಳ ಬಗ್ಗೆ ಅರಿತೆವು. ಇಂದು ಆನ್ ಲೈನ್ ಮಾಹಿತಿ ವಿನಿಮಯ ಬಗ್ಗೆ ತಿಳಿಯೋಣ.
    ಈ ಹಿಂದಿನ ಅಂಕಣದಲ್ಲಿ ಮಾಹಿತಿಯ ವ್ಯಾವಹಾರಿಕ ಮಹತ್ವದ ಬಗ್ಗೆ ಅರಿತೆವು. ಬಹು ಮುಖ್ಯವಾದ ಮತ್ತು ಸೂಕ್ಷ್ಮವಾದ ಸಂವೇದನಾಶೀಲ ಮಾಹಿತಿಗಳು ವ್ಯವಹಾರಕ್ಕೆ ಬಹಳ ಉಪಯೋಗವನ್ನು ನೀಡುತ್ತದೆ ಜೊತೆಗೆ ಸಮಾಜದ ಬಗೆಗಿನ ಗಹನವಾದ ವಿಚಾರಗಳು ಈ ಮಾಹಿತಿಗಳ ಮೂಲಕ ತಿಳಿಯುವುದರಿಂದ ಅತ್ಯಂತ ಗುರುತರವಾದ ಮುನ್ನಡೆ ಒಬ್ಬನಿಗೆ ಸಿಗುವುದು. ಈ ಕಾರಣಗಳಿಂದಾಗಿಯೇ ಇಂದು ನಾವು ವಿವಿಧ ನ್ಯೂಸ್ ಚಾನೆಲ್ ಗಳು, ಸರ್ಕಾರದ ಯೋಜನೆಗಳ ಬಗ್ಗೆ, ಕಾನೂನುಗಳ ಬಗ್ಗೆ, ಅಲ್ಲದೆ ಜನರ ಮಾನಸಿಕ ಮಿಡಿತಗಳ ಬಗ್ಗೆ, ಇವೇ ಮುಂತಾದ ಮಾಹಿತಿಗಳನ್ನು ನೀಡುತ್ತವೆ, ಮತ್ತು ಇವು ಕೂಡ ನಮ್ಮ ಜೀವನದ ಮೇಲೆ ಪ್ರಭಾವ ಬೀರುತ್ತವೆ.
    ಬಹಳ ಹಿಂದಿನಿಂದಲೂ “ಇತಿಹಾಸ ಮರುಕಳಿಸುತ್ತದೆ” ಎಂಬುದನ್ನು ಹೇಳುತ್ತಾರೆ, ಈ ಪ್ರಕಾರವಾಗಿ ಇತಿಹಾಸದ ಬಗ್ಗೆ ಅರಿವಿರುವುದು ನಮಗೆ ಆತ್ಮವಿಶ್ವಾಸದಿಂದ ಮುನ್ನುಗ್ಗಲು ಸಹಕಾರಿಯಾಗುತ್ತದೆ.
    ಇಂತಹ ವ್ಯಾವಹಾರಿಕ ಉಪಯುಕ್ತವಾದ ಐತಿಹಾಸಿಕ ಮಾಹಿತಿ ಒಂದೆಡೆಯಲ್ಲಿಯೇ ಲಭಿಸಿದರೆ ಅಂತಹ ಮಾಹಿತಿ ಬಹಳ ಮೌಲ್ಯದ್ದಾಗಿರುವುದು. ಇಂತಹ ಮಾಹಿತಿಗಳ ಅತಿ ದೊಡ್ಡ ಭಂಡಾರಗಳಲ್ಲಿ “ಹಾರ್ವರ್ಡ್ ಬಿಸಿನೆಸ್ಸ್ ರೆವ್ಯುವ್ ಕೆಸಸ್” ಬಹು ಪ್ರಸಿದ್ಧವಾದುದು. ಈ ರೀತಿಯ ಜ್ಞಾನದಾಗರವು ವ್ಯವಹಾರಲ್ಲಿರುವ ವ್ಯಕ್ತಿಗಳಿಗೆ ಅತ್ಯಂತ ಅಗತ್ಯವಾದ ಸ್ಪರ್ಧಾತ್ಮಕ ಮುನ್ನಡೆಯನ್ನು ನೀಡುವುದರ ಮೂಲಕ ಮಿಲಿಯಗಟ್ಟಲೆ ಬೆಲೆಯುಲ್ಲವುಗಳಾಗಿರುತ್ತದೆ. ಇಂತಹ ಮೌಲ್ಯವುಳ್ಳ ಮಾಹಿತಿಗಳನ್ನು ಅಂತರ್ಜಾಲದಲ್ಲಿ ಬೆಲೆ ಕೊಟ್ಟು ಪಡೆಯಬೇಕೆಂದು ಮಾಡಿದಾಗ ಇದೊಂದು ಲಾಭದಾಯಕ ವ್ಯವಹಾರವಾಗುವುದಲ್ಲವೇ?
    ಸರಳ ಆದರೂ ಪ್ರಭಾವಶಾಲಿ!!
    ಆಂಗ್ಲ ಅಂಕಣ:
    http://somanagement.blogspot.com/2011/04/business-model-online-content.html
  • ವ್ಯವಹಾರ ಪ್ರತಿಕೃತಿ – ಸಂಪರ್ಕ ಜಾಲ

    ಈ ಹಿಂದಿನ ಅಂಕಣಗಳಲ್ಲಿ ನಾವು ಮಾಹಿತಿಯ ಲಭ್ಯತೆಯ ಅಸಮತೋಲನ ಮತ್ತು ಅದರಿಂದ ವ್ಯವಹಾರದ ಮೇಲಾಗುವ ಪರಿಣಾಮದ ಬಗ್ಗೆ ತಿಳಿದು ಕೊಂಡೆವು. ಗ್ರಾಹಕರ ಸಮೂಹದ ಮಾದರಿಯನ್ನು ಅರಿಯುವುದರ ವ್ಯಾವಹಾರಿಕ ಉಪಯೋಗವನ್ನು ಅಲ್ಲಗೆಳೆಯಲಾಗದು. ಇವತ್ತಿನ ಈ ಅಂಕಣ ಮಾಹಿತಿ ಕಲೆಹಾಕುವಿಕೆಯ ಬಗ್ಗೆಯಾಗಿದೆ.

    ಈಗಿನ ಅಂತರ್ಜಾಲ ಯುಗದಲ್ಲಿ ಸಾಮಾಜಿಕ ಸಂಪರ್ಕ ಜಾಲಗಳಾದ Facebook, Orkut, My space ಇತ್ಯಾದಿಗಳನ್ನು ನಮ್ಮಲ್ಲಿ ಹೆಚ್ಚಿನವರು ಉಪಯೋಗಿಸುತ್ತಿರುವರು. ಈ ಸಂಪರ್ಕ ಜಾಲಗಳು ಹೇಗೆ ವ್ಯವಹಾರಿಕೆ ಮೌಲ್ಯವನ್ನು ಪಡೆದು ಕೊಳ್ಳುತ್ತವೆ? ಅವುಗಳು ವ್ಯವಹಾರ ಜಗತ್ತಿಗೆ ಬೇಕಾದ ಮಾಹಿತಿಗಳ ಸಂಗ್ರಹದ ಮೂಲಕ ಮತ್ತು ಇತರ ಸಾಮರ್ಥ್ಯಗಳಿಂದ ಮೌಲ್ಯವನ್ನು ಪಡೆದುಕೊಂಡು ಹಣ ಸಂಪಾದಿಸುತ್ತಾರೆ.


    ಸಾಮಾಜಿಕ ಸಂಪರ್ಕ ಜಾಲಗಳು, ಜಾಹಿರಾತುಗಳು ಮತ್ತು ಪ್ರೋತ್ಸಾಹಿಕ ಮಾಹಿತಿಗಳನ್ನು ಬಿತ್ತರಿಸುವ ಮೂಲಕ ನೇರವಾಗಿ ಹಣ ಸಂಪಾದಿಸಬಹುದೆಂಬುದು ಸಹಜವಾಗಿ ನಾವು ವಿಚಾರಿಸಬಹುದಾದ ಅಂಶ. ಆದರೆ ಇವಲ್ಲದೆ ನಿಜವಾಗಿ ಈ ಸಂಪರ್ಕ ಜಾಲಗಳಿಗೆ ಮೌಲ್ಯ ಸಿಗುವುದು ಬೇರೆಯೇ ಕಾರಣದಿಂದ!


    ನಾವು ಈ ಸಂಪರ್ಕ ಜಾಲಗಳಲ್ಲಿರುವಾಗ ನಮಗೆ ಗೊತ್ತಿಲ್ಲದೆಯೋ ಅಥವಾ ಗೊತ್ತಿದ್ದೋ, ಉದ್ದೇಶವಿಲ್ಲದೆಯೋ ಅಥವಾ ಉದ್ದೇಶ ಪೂರ್ವಕವಾಗಿಯೋ ನಮ್ಮ ಬಗೆಗಿನ ವಿಚಾರಗಳನ್ನು ಹೊರಹಾಕುತ್ತೇವೆ. ನಮ್ಮ ಇಷ್ಟಗಳು, ನಮ್ಮ ಹವ್ಯಾಸಗಳ ಬಗ್ಗೆ, ನಮ್ಮ ಕನಸುಗಳ ಬಗ್ಗೆ, ನಮಗೆ ಆಗದ ವಿಚಾರಗಳ ಬಗ್ಗೆ ಹೀಗೆ ನಮ್ಮ ಬಗೆಗಿನ ಮಾಹಿತಿಗಳನ್ನು ಹೊರಹಾಕುತ್ತೇವೆ. ಈ ಮಾಹಿತಿಗಳು ವ್ಯವಹಾರ ಜಗತ್ತಿನಲ್ಲಿರುವ ಅನೇಕ ವ್ಯವಹಾರಗಳಿಗೆ ಅತ್ಯಂತ ಉಪಯುಕ್ತವಾದ ಗ್ರಾಹಕರ ನಡವಳಿಕೆಗಳ, ಇಷ್ಟ, ಇಷ್ಟವಿಲ್ಲದಿರುವಿಕೆ ಗಳ ಬಗೆಗಿನ ಮಾಹಿತಿಗಳಾಗಿರುತ್ತವೆ. ಆ ಮೂಲಕ ಗ್ರಾಹಕರ ಅಧ್ಯಯನವನ್ನು ಚೆನ್ನಾಗಿ ಮಾಡಬಹುದು.


    ಈ ದೃಷ್ಟಿಕೋನ ದಿಂದ ನೋಡಿದಲ್ಲಿ ಸಾಮಾಜಿಕ ಸಂಪರ್ಕ ಜಾಲಗಳು ವ್ಯವಹಾರಗಳಿಗೆ ಉಪಯುಕ್ತ ಮಾಹಿತಿಗಳನ್ನು ಒದಗಿಸಿದರೂ, ವಯಕ್ತಿಕ ದೃಷ್ಟಿಕೋನ ದಿಂದ ನಮ್ಮ ಬಗ್ಗೆ ಹೆಚ್ಚಿನ ಮಾಹಿತಿಗಳನ್ನು ಹೊರಹಾಕುವುದು ಸಮಾಜ ಘಾತುಕ ವ್ಯಕ್ತಿಗಳು ದುರ್ಮಾರ್ಗದಲ್ಲಿ ಬಳಸಿ ಹಾನಿ ಉಂಟುಮಾಡಲು ಸಾಕು. ಹೀಗಾಗಿ ಸೂಕ್ತ ರಕ್ಷಣೆ ಮತ್ತು ವಯಕ್ತಿಕತೆಯನ್ನು ಕಾಪಾಡುವುದು ಒಂದು ದೊಡ್ಡ ಸವಾಲಾಗಿದೆ, ಈ ಸಾಮಾಜಿಕ ಸಂಪರ್ಕ ಜಾಲಗಳಲ್ಲಿ. ಇವುಗಳನ್ನು ಸೂಕ್ತವಾಗಿ ನೀಡಿ ಬಳಕೆದಾರರಿಗೆ ಸಮಾಜ ಘಾತುಕ ವ್ಯಕ್ತಿಗಳಿಂದ ಮುಕ್ತವಾದ ಜಾಲವನ್ನು ನೀಡುವ ಸಂಪರ್ಕ ಜಾಲಗಳು ಇಂದು ಮುಂಚೂಣಿಯಲ್ಲಿವೆ. ಆ ಮೂಲಕ ಸಾಮಾಜಿಕ ಸಂಪರ್ಕ ಜಾಲಗಳ ವ್ಯವಹಾರಕ್ಕೂ ಉತ್ತಮ ಲಾಭವಾಗುತ್ತಿವೆ.

    ಆಂಗ್ಲ ಅಂಕಣ:http://somanagement.blogspot.com/2011/04/business-model-networks.html

  • ವ್ಯವಹಾರ ಪ್ರತಿಕೃತಿ – ಉತ್ಪನ್ನದ ಸೇವೀಕರಣ

    ಈ ಹಿಂದೆ ನಾವು ಸೇವಾವೃತ್ತಿಯ ಕೈಗಾರೀಕರಣದ ಬಗ್ಗೆ ಚರ್ಚಿಸುತ್ತ ಸೇವೆಯಬಗ್ಗೆ ಇರುವ ವ್ಯವಹಾರ ಪ್ರತಿಕೃತಿಗಳನ್ನು ಚರ್ಚಿಸಿದ್ದೇವೆ, ಇಂದಿನ ಅಂಕಣದಲ್ಲಿ ಉತ್ಪನ್ನದ ಸೇವೀಕರಣದ ಬಗ್ಗೆ ತಿಳಿದುಕೊಳ್ಳೋಣ.
    ಯಾವುದೇ ದೊಡ್ಡ ಮೊತ್ತದ ನಿವೇಶನ ಹೂಡಿ ಉತ್ಪನ್ನವನ್ನು ಖರೀದಿಸುವಾಗ ತುಂಬಾ ಯೋಚನೆಗಳು, ಪ್ರಶ್ನೆಗಳು ನಮ್ಮ ಮನಸಿನಲ್ಲಿ ಓಡಾಡುತ್ತಲಿರುತ್ತವೆ. ಇದರಲ್ಲಿ ಕೆಲವು ಹೀಗಿವೆ:
    • ಆ ಉತ್ಪನ್ನದ ಪೂರ್ಣ ಉಪಯೋಗವನ್ನು ತಿಳಿದುಕೊಳ್ಳಲು ಸಹಕಾರ ಬೇಕೆನ್ನಿಸುತ್ತದೆ
    • ಆ ಉತ್ಪನ್ನವನ್ನು ಖರೀದಿಯ ಮುಂಚೆ ಚೆನ್ನಾಗಿ ಪರಿಶೀಲಿಸಬೇಕಾಗುತ್ತದೆ
    • ನಿವೇಶನದ ಮೊತ್ತ ಹೆಚ್ಚಿದ್ದರಿಂದ ಅದನ್ನು ಒಂದೇ ಬರಿ ಹೂಡುವುದು ಕಷ್ಟ
    ಇಂತಹ ಉತ್ಪನ್ನಗಳ ಇನ್ನೊಂದು ಪ್ರಮುಖ ಸಮಸ್ಯೆ ಏನೆಂದರೆ ಇವುಗಳು ದಿನದ ಬಹು ಭಾಗ ನಿಶ್ಕ್ರಿಯವಾಗಿರುತ್ತದೆ. ಇಂತಹ ಸಂದರ್ಭದಲ್ಲಿ ವಸ್ತುವನ್ನು ಖರಿದಿಸಿದವರಿಗೆ ಬೇಜಾರಗುವುದು ಸಹಜ. ಇಂತಹ ಸಂದರ್ಭದಲ್ಲಿ ಈ ಉತ್ಪನ್ನದ ಸೇವಿಕರಣವು ಅತ್ಯಂತ ಲಾಭದಾಯಕ ವಾಗಿರುತ್ತದೆ.
    ನಾವು ನೋಡುವಂತಹ ರಸ್ತೆ ಕಾಮಗಾರಿ ಮುಂತಾದವುಗಳಲ್ಲಿ ಉಪಯೋಗಿಸುವ “ಕ್ರೇನ್” ಮುಂತಾದವುಗಳು ಇದೆ ವ್ಯವಹಾರ ಪ್ರತಿಕೃತಿಯ ಉದಾಹರಣೆಗಳು. ಇಂದಿನ ಸಾಫ್ಟ್ವೇರ್ ಕಂಪನಿಗಳಷ್ಟೇ ಅಲ್ಲದೆ, ಊರಿನಲ್ಲಿರುವ ರೈತರೂ ಸಹ ಟ್ರಾಕ್ಟರ್ ಇತ್ಯಾದಿ ಕೃಷಿ ಯಂತ್ರಗಳನ್ನು ಹೀಗೆ ಉಪಯೋಗಿಸುತ್ತಾರೆ.
    ನಾನು ಕಂಡ ವ್ಯವಹಾರ ಪ್ರತಿಕೃತಿಗಳಲ್ಲಿ ಅತ್ಯಂತ ಹೆಚ್ಚಿನ ಸಾಮಾಜಿಕ ಕಾಳಜಿಯುಳ್ಳ ಪ್ರತಿಕೃತಿಗಳಲ್ಲಿ ಇದಾಗಿದೆ.

  • ವ್ಯವಹಾರ ಪ್ರತಿಕೃತಿ – ವ್ಯವಹಾರಿಕ ಕೂಟ

    ಈ ಹಿಂದಿನ ಅಂಕಣದಲ್ಲಿ ನಾವು ಬೇಡಿಕೆ ಏಕೀಕರಣದ ಬಗ್ಗೆ ತಿಳಿದುಕೊಳ್ಳುತ್ತ, ಅದರ ಇನ್ನೊಂದು ವಿಧದ ಬಗ್ಗೆ ತಿಳಿದು ಕೊಳ್ಳುವುದಾಗಿ ಹೇಳಿದ್ದೆವು ಅದೇ ವ್ಯವಹಾರಿಕ ಕೂಟ.
    ವ್ಯವಹಾರಗಳು ಸಾಮಾನ್ಯವಾಗಿ ಕಾರ್ಯ ನಿರತರಾಗಿರುವಾಗ ಸಾಮೂಹಿಕವಾದ ಸವಾಲು ಅಥವಾ ಬಿಕ್ಕಟ್ಟುಗಳನ್ನು ಎದುರಿಸುತ್ತದೆ. ಈ ವ್ಯವಹಾರಗಳು ತಮ್ಮ ಮುಂದಿರುವ ತಮ್ಮದೇಯಾದ ಸಮಸ್ಯೆಯನ್ನು ಎದುರಿಸಲು ತಮ್ಮದೆಯಾದ ಜೋತೆಗಾರಿಕೆಯನ್ನು ರೂಪಿಸುತ್ತವೆ. ಇದರಿಂದಾಗಿ ಅವರು ತಾವು ಕಾರ್ಯ ಮಾಡುವ ಪರಿಸರದ ಮೇಲೆ ಸಾಕಷ್ಟು ಪ್ರಭಾವ ಬೀರುವ ಸಾಧ್ಯತೆಯಿರುತ್ತವೆ, ಇದರಿಂದ ಅವರು ತಮ್ಮ ವ್ಯವಹಾರ ಸುಸೂತ್ರ ವಾಗಿ ನಡೆಸ ಬಲ್ಲರು.
    ಈ ವ್ಯವಹಾರ ಪ್ರತಿಕೃತಿಯು ಒಗ್ಗಟ್ಟಿನಲ್ಲಿ ಬಲವಿದೆ ಎನ್ನುವ ನುಡಿಗಟ್ಟಿಗೆ ಪ್ರತ್ಯಕ್ಷ ಸಾಕ್ಷಿಯಾಗಿದೆ.