Category: Kannada ಕನ್ನಡ
-
ವ್ಯವಹಾರ ಪ್ರತಿಕೃತಿ – ಬೇಡಿಕೆಯ ಏಕೀಕರಣB
ವ್ಯವಹಾರ ಪ್ರತಿಕೃತಿಗಳ ಚರ್ಚೆಯಲ್ಲಿ ಮುಂದುವರೆಯುತ್ತಾ ಇಂದಿನ ಅಂಕಣದಲ್ಲಿ ವ್ಯವಹಾರ ಪ್ರತಿಕೃತಿಗಳಲ್ಲೇ ಅತ್ಯಂತ ಸಾಮಾನ್ಯವಾದ ಪ್ರತಿಕ್ರಿತಿಯು ಬೇಡಿಕೆಯ ಏಕೀಕರಣದ ಬಗ್ಗೆ ತಿಳಿದುಕೊಳ್ಳೋಣ.ನಮಗೆ ಯಾವಾಗಾದರೂ ಸಮಯದ ಕೊರತೆಯಿದ್ದಲ್ಲಿ ನಮ್ಮ ಮನೆಯ ಬಳಿಯಲ್ಲಿರುವ ಅಂಗಡಿಗೆ ಹೋಗುವುದು ಸರ್ವೇಸಾಮಾನ್ಯ. ಆ ಅಂಗಡಿಗಳು ನಮಗೆ ಬೇಕಾದ ವಿವಿಧ ವಸ್ತುಗಳು ಮತ್ತು ಪ್ರಮಾಣದಲ್ಲಿ ಇಟ್ಟುಕೊಂಡಿರುತ್ತವೆ. ಇವರುಗಳು ಹೇಗೆ ಆಯವನ್ನು ಗಳಿಸುತ್ತಾರೆ ಎನ್ನುವುದೇ ಇಂದಿನ ಅಂಕಣದ ಚರ್ಚ ವಿಷಯ.ಈ ಅಂಗಡಿಗಳನ್ನು ಕೂಲಂಕುಶವಾಗಿ ಗಮನಿಸಿದಲ್ಲಿ ಅವುಗಳು ಹೇಗೆ ತಮ್ಮ ವ್ಯಾಪಾರವನ್ನು ಸಂಪಾದಿಸುತ್ತಾರೆ ಎನ್ನುವುದು ತಿಳಿಯುತ್ತದೆ. ಇಂತಹ ಅಂಗಡಿಗಳು ಸಾಮಾನ್ಯವಾಗಿ ಮನೆಗಳ ನೆರೆಹೊರೆಯಲ್ಲಿಯೇ ಇರುತ್ತವೆ. ಅವುಗಳು ಮಾರಾಟಕ್ಕೆಂದು ಇಡುವ ಪದಾರ್ಥಗಳಿಗೆ ಅಲ್ಲಿಯ ಸ್ಥಳೀಯ ಜನರೇ ಗಿರಾಕಿಗಳು. ಅಂಗಡಿಯಲ್ಲಿಡುವ ವಸ್ತುಗಳೋ ಅಲ್ಲಿಯ ಸ್ಥಳಿಯರ ಖರೀದಿಯನ್ನು ತಿಳಿದುಕೊಂಡು ಅವರಿಗೆ ಬೇಕಾಗಬಹುದಾದ ವಸ್ತುಗಳನ್ನು ಖರೀದಿಸುವಾಗ ಹೆಚ್ಚಿನ ಪ್ರಮಾಣದಲ್ಲಿ ಖರೀದಿಸುತ್ತಾರೆ. ಇದರಿಂದ ಅಂಗಡಿಯವರಿಗೆ ಆ ಸರಕುಗಳು ಕಡಿಮೆ ಮೊತ್ತದಲ್ಲಿ ಸಿಗುತ್ತದೆ.ಇಂತಹ ವ್ಯವಸ್ಥೆ ಇಂದಾಗಿ ಗ್ರಾಹಕರಿಗೆ ತಮ್ಮ ಮನೆಯ ಬಳಿಯಲ್ಲಿಯೇ ಅವರಿಗೆ ಬೇಕಾದ ವಸ್ತುಗಳು ಸಿಗುತ್ತದೆ ಎನ್ನುವ ಸಂತೋಷ ಒಂದೆಡೆ ಇದ್ದಲ್ಲಿ, ಅಂಗಡಿಯವರು ತಮ್ಮ ಲಾಭವನ್ನು ಪಡೆದೇ ಕೊಳ್ಳುತ್ತಾರೆ.ಈ ವ್ಯವಹಾರ ಪ್ರತಿಕೃತಿಯ ಒಂದು ಸಣ್ಣ ಬದಲಾವಣೆಯ ಮತ್ತೊಂದು ಪ್ರತಿಕೃತಿಯನ್ನು ನಾಳೆ ತಿಳಿದುಕೊಳ್ಳೋಣ. -
ವ್ಯವಹಾರ ಪ್ರತಿಕೃತಿ – ಅಂತರಜಾಲ ನಿವೇಶನ (website) ಹೊಂದಿದ ಸಂಸ್ಥೆಗಳು
ಈ ಹಿಂದಿನ ಅಂಕಣದಲ್ಲಿ , ನಿಷ್ಠವೃದ್ಧಿ ವ್ಯವಹಾರ ಪ್ರತಿಕೃತಿಯ ಬಗ್ಗೆ ತಿಳಿದು ಕೊಂಡೆವು, ಇಂದಿನ ಅಂಕಣ ದಲ್ಲಿ, ನಮ್ಮ ಸುತ್ತಲಿನ ಅಂಗಡಿ ಅಥವಾ ಸಂಸ್ಥೆಯು ಅಂತರಜಾಲತಂತ್ರಜ್ಞಾನದ ಲಾಭವನ್ನು ಪಡೆದು ಹೇಗೆ ಉನ್ನತಿಯನ್ನು ಪಡೆದು ಅದನ್ನೆ ಒಂದು ವ್ಯವಹಾರ ಪ್ರತಿಕೃತಿಯನ್ನಾಗಿ ಮಾಡಿದೆ ಎಂದು ತಿಳಿದು ಕೊಳ್ಳೋಣ.
ಈಗಾಗಲೇ ನಾವೆಲ್ಲ “ವಾಲ್ – ಮಾರ್ಟ್ ” ಎನ್ನುವ ಸಂಸ್ಥೆ ಬಗ್ಗೆ ಕೇಳಿರುತ್ತವೆ, ಅಮೇರಿಕಾದಲ್ಲಿ ಅಂಗಡಿಗಳ ಮೂಲಕ ವ್ಯವಹಾರದಲ್ಲಿ ಇದು ಅತ್ಯಂತ ದೊಡ್ಡ ಸಂಸ್ಥೆಯಾಗಿ ರೂಪಗೊಂಡಿದೆ, ಇದರದ್ದೇ ಇನ್ನೊಂದು ವ್ಯವಹಾರ ಪ್ರತಿಕೃತಿಯೂ ಇದೆ ಇನ್ನೊಮ್ಮೆ ಅದರಬಗ್ಗೆ ತಿಳಿದುಕೊಳ್ಳೋಣ, ಇಂದಿನ ಅಂಕಣದಲ್ಲಿ ಇದರ ವಿಸ್ತಾರದ ಲಾಭವನ್ನು ಅಂತರಜಾಲದ ಮೂಲಕವೂ ತನ್ನ ಗ್ರಾಹಕರಿಗೆ ಪಸರಿಸಲು, ಅದರ “ವೆಬ್ -ಸೈಟ್”ಅನ್ನು ಇರ್ಮ್ಮಿಸಿದೆ.
ವಾಲ್ – ಮಾರ್ಟ್ ಗ್ರಾಹಕರು ತಮ್ಮ ಮನೆಯಲ್ಲಿಯೇ ಕುಳಿತು ತಮಗೆ ಬೇಕಾದ ವಸ್ತುವನ್ನು ಖರಿದಿಸ ಬಹುದು ಅಥವಾ ನೇರವಾಗಿ ಅಂಗಡಿಗೆ ಹೋಗಿ ಖರಿದಿಸ ಬಹುದು. ಇದರಿಂದಾಗಿ ಯಾರಿಗೆ ಅಂಗಡಿಗೆ ಹೋಗಲು ಬಿಡುವಿಲ್ಲವೋ ಅವರು ಮನೆಯಲ್ಲಿಯೂ ಅಥವಾ ತಮ್ಮ ಕಛೇರಿಯಲ್ಲೋ ಕುಳಿತು ತಮ್ಮ ಬೇಡಿಕೆಯನ್ನು ತಿಳಿಸಿದಲ್ಲಿ ಅವರ ಮನೆಗೆ ಅದನ್ನು ತಲುಪಿಸುತ್ತಾರೆ. ಇದನ್ನೇ “ಬ್ರಿಕ್ ಅಂಡ್ ಕ್ಲಿಕ್” ಎಂದು ಕರೆಯುತ್ತಾರೆ.
ಅಂತರ್ಜಾಲವು ಹಿಂದಿದ್ದ ಭೌಗೊಳಿಕ ಪರಿಮಿತಿಗಳನ್ನೂ ದೂರಮಾಡಿ ಇಂದು, ವ್ಯವಹಾರಗಳಿಗೆ ಇಡೀ ವಿಶ್ವವನ್ನೇ ತನ್ನ ಕಾರ್ಯ ಕ್ಷೇತ್ರವನ್ನಾಗಿ ಮಾಡುವ ಸೌಕರ್ಯವನ್ನು ನೀಡಿದೆ. ಇಂದು ಯಾವುದೇ ಹೊಸ ವ್ಯವಹಾರವೇ ಆಗಲಿ ತನ್ನ ಪರ್ಯಾಯವನ್ನು ತಿಳಿಸುವಾಗ ಅದರ “ವೆಬ್ -ಸೈಟ್” ನ ಬಗ್ಗೆ ಹೇಳುವುದು ಇದಕ್ಕೆ ಸಾಕ್ಷಿಯೇ ಸರಿ.
ಆಂಗ್ಲ ಅಂಕಣ: http://somanagement.blogspot.com/2011/04/business-model-click-and-brick.html
-
ವ್ಯವಹಾರ ಪ್ರತಿಕೃತಿ – ನಿಷ್ಟಾವೃದ್ಧಿ
ವ್ಯವಹಾರ ಪ್ರತಿಕೃತಿಯ ಹಿಂದಿನ ಅಂಕಣದಲ್ಲಿ ಸೇವಾವೃತ್ತಿಯ ಕೈಗಾರಿಕೀಕರಣದ ಬಗ್ಗೆ ತಿಳಿದು ಕೊಂಡೆವು, ಇಂದಿನ ಅಂಕಣದಲ್ಲಿ ವ್ಯವಹಾರ ನಿಷ್ಟಾವೃದ್ಧಿ ಕುರಿತು ತಿಳಿದುಕೊಳ್ಳೋಣ.ಪ್ರತಿಯೊಂದು ವ್ಯವಹಾರವು, ಅದರ ಗ್ರಾಹಕರು ಅದರ ಉತ್ಪನ್ನಗಳಿಗೆ ಕಟ್ಟಾ ಹಿಂಬಾಲಕರಾಗಿರಬೇಕೆಂದು ಬಯಸುತ್ತದೆ; ಹೊಸ ಗ್ರಾಹಕರನ್ನು ತನ್ನೆಡೆಗೆ ಸೆಳೆಯುವುದು ಬಹು ಕಷ್ಟಕರವಾದ ಕಾರ್ಯವಾದುದರಿಂದ ಇರುವ ಗ್ರಾಹಕರನ್ನೇ ಪೋಷಿಸುವುದು ಸಹಾಯಕಾರಿಯಾಗಿರುವುದು ಮತ್ತು ಮಿತವ್ಯಯದ ಕ್ರಿಯೆಯೂ ಹೌದು. ಒಂದು ವೇಳೆ ಯಾವುದಾದರೂ ವ್ಯವಹಾರದ ವಿಕ್ರಯಕಾರರು, ಪೂರೈಕೆದಾರರು, ಲೇವಾದೇವಿಗಾರರು ಮುಂತಾದವರೆಲ್ಲ ಆ ವ್ಯವಹಾರಕ್ಕೆ ಅನುಯಾಯಿಗಳಗಿದ್ದಲಿ, ಅದಕ್ಕೆ ಬೇಕಾದ ಪ್ರೋಸ್ತಹ ಮತ್ತು ನಿಷ್ಠೆ ತೋರಿಸಿದಲ್ಲಿ ಆ ವ್ಯವಹಾರವು ಬೆಳೆಯುವುದು ಖಚಿತ.ಇಂತಹ ನಿಷ್ಟಪುರಕ ಪ್ರೋತ್ಸಾಹವು ಯಶಸ್ಸಿನ ಚಕ್ರವನ್ನೇ ಸೃಷ್ಟಿಸುತ್ತದೆ. ನಿಷ್ಠೆಯುಳ್ಳ ಕೆಲಸದವರಿಕೆ ಅವರ ಕೌಶಲ್ಯ ವೃದ್ಧಿಸುವ ತರಬೇತಿ ನೀಡಿದಲ್ಲಿ, ಅದರಿಂದ ಅವರ ಕಾರ್ಯ ಕ್ಷಮತೆ ಹೆಚ್ಚಿ ಅದರಿಂದ ಗ್ರಾಹಕರಿಗೆ ಸಂತೋಷ ಉಂಟಾಗಿ, ಅವರು ಇನ್ನೂ ಹೆಚ್ಚಿನ ವ್ಯವಹಾರ ಈ ಕಂಪನಿಯೊಂದಿಗೆ ಮಾಡಿದಲ್ಲಿ ಅದರ ಆದಾಯ ಹೆಚ್ಚಿಸುತ್ತದೆ. ಈ ಆದಾಯದಿಂದ ಇನ್ನು ಹೆಚ್ಚಿನ ಕೌಶಲ್ಯ ವೃದ್ಧಿಯ ತರಬೇತಿಗಳು ಮುಂತಾದವು ನಡೆಯುತ್ತಲೇ ಇರುತ್ತದೆ.ವ್ಯವಹಾರಗಳು ತನ್ನ ಗ್ರಾಹಕರಲ್ಲಿ ವ್ಯವಹಾರ ನಿಷ್ಠೆ ಮೂಡಿಸಿದಲ್ಲಿ ಅದರ ಧನಾತ್ಮಕ ಪ್ರಭಾವದ ಮಹಿಮೆಯ ಕುರಿತು ಹೆಚ್ಚು ವಿಶ್ಲೆಶಿಶಬೇಕಾಗಿಲ್ಲ. ಇದರ ಸಫಲ ಪರಿಣಾಮವನ್ನು ಇಂದು ಕಾಣುವ ಹಲವಾರು ವ್ಯವಹಾರೋದ್ಯಮಗಳು ತಮ್ಮ ದೇ ಯಾದ ನಿಷ್ಟವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದೇ ಸಾಕ್ಷಿ. -
ವ್ಯವಹಾರ ಪ್ರತಿಕೃತಿ – ಸೇವಾವೃತ್ತಿಯ ಕೈಗಾರಿಕೀಕರಣ
ಮಧ್ಯವರ್ತಿಗಳ ಕಡಿತದ ಕುರಿತ ಹಿಂದಿನ ಅಂಕಣದ ನಂತರ ಇಂದಿನ ಅಂಕಣದಲ್ಲಿ ಸೇವಾವೃತ್ತಿಯ ಕೈಗಾರಿಕೀಕರಣದ ಬಗ್ಗೆ ತಿಳಿದುಕೊಳ್ಳೋಣ.ಸಾಮಾನ್ಯವಾಗಿ ಯಾವುದಾದರು “ಹೋಟೆಲ್ ” ಗೆ ಹೋದಲ್ಲಿ ನಾವು “ಮೆನು”ವನ್ನು ಕೇಳುತ್ತೇವೆ. ಅವರ ಮೆನು ನಮಗೆ ಅವರು ಏನನ್ನೆಲ್ಲ ಸಿದ್ದಪಡಿಸಿರುತ್ತಾರೆ ಎಂದು ಸೂಚಿಸುತ್ತದೆ, ನಾವೇ ಏನನ್ನು ತಿನ್ನಲು ಇಷ್ಟ ಪಡುತ್ತೆವೋ ಅದು ಅವರೊಂದಿಗೆ ಇಲ್ಲದೆ ಇರಬಹುದು. ಅವರು ಮೆನುವನ್ನು ಸೀಮಿತಗೊಳಿಸಿರುವುದರಿಂದ ಹೊಟೆಲ್ ಗಳಿಗೆ ಅವರದೆಯಾದ ಲಾಭ ಇರುತ್ತದೆ. ಯಾರಾದರು ಬಂದು ಏನನ್ನಾದರೂ ಕೇಳಿದರೆ ಅದಕ್ಕೆ ತಕ್ಕಂತೆ ಪದಾರ್ಥಗಳಿಲ್ಲದಿದ್ದಲ್ಲಿ ವ್ಯವಸ್ಥೆ ಕೆಡುವ ಸಂಭವ ಇದೆ, ಇದನ್ನು ಅವರು ಮೆನು ಮೂಲಕ ನಿಯಂತ್ರಿಸುತ್ತಾರೆ.ಇಂತಹ ಸೇವಾವೃತ್ತಿಯ ಕೈಗಾರಿಕೀಕರಣದ ಬಹು ಉಚ್ಚ ಉದಾಹರಣೆ ಬಹು ಪ್ರಸಿದ್ದವಾದ “ಮ್ಯಾಕ್ ಡೋನಲ್ಡ್” ಹೋಟೆಲ್ ಗಳು. ಅಲ್ಲಿ ಇದುವ ಕೆಲಸಗಾರರಿಗೆ ಯಾವುದೇ ಪದಾರ್ಥವನ್ನು ತಯಾರಿಸುವಾಗ ಆ ಕ್ರಮದಲ್ಲಿ ಬರುವ ಪ್ರತಿಯೊಂದು ಕೆಲಸಕ್ಕೂ ಕಾರ್ಯ ನಿಗದಿ ಪಡಿಸಿದ್ದಾರೆ. ಅವರುಗಳು ನಮಗೆ ಸರ್ವ್ ಮಾಡುವಾಗ ನಗಬೇಕೆನ್ನುವುದು ಸಹ ಅವರ ಕ್ರಮದಲ್ಲಿದೆ!ಸೇವಾವೃತ್ತಿಯ ಕೈಗಾರಿಕೀಕರಣದಲ್ಲಿ ನಾವು ಮಾಡ ಬೇಕಾದ ದೊಡ್ಡ ನಿರ್ಧಾರವು – ಜನರ ತೃಪ್ತಿ ಮತ್ತು ವಿವಿಧತೆಯ ನಡುವಿನದ್ದು. -
ಬದಲಿ ಮತ್ತು ಪೂರಕ ಸರಕುಗಳು
ಕಳೆದ ವಾರದಲ್ಲಿ ನಾವು ಮಾರುಕಟ್ಟೆ ಮತ್ತು ಬೇಡಿಕೆ – ಪೂರೈಕೆಯ ಬಗ್ಗೆ ಜೊತೆಯಲ್ಲೇ ತಿಳಿದುಕೊಳ್ಳುತ್ತಿದ್ದೆವು. ನೈಜವಾಗಿ ಇವುಗಳನ್ನು ಉಪಯೋಗಿಸಬೇಕಾದರೆ ಇಂತಹ ಹಲವು ವಿಷಯಗಳನ್ನು ಏಕಕಾಲದಲ್ಲಿ ನೋಡಬೇಕಾಗುತ್ತದೆ – ಹಾಗಾಗಿ ನಮ್ಮ ಈ ಪ್ರಯತ್ನದಲ್ಲಿ ಮುಂದುವರೆಯುತ್ತಾ ಸರ್ವೇ ಸಾಮನ್ಯವಾಗಿ ಕಂಡು ಬರುವ ಬದಲಿ ಮತ್ತು ಪೂರಕ ಸರಕು ಸಾಮಗ್ರಿಗಳ ಬಗ್ಗೆ ತಿಳಿದು ಕೊಳ್ಳೋಣ.ಯಾವುದಾದರು ವಸ್ತುವಿನ ಬೆಲೆಯೂ ಹೆಚ್ಚಿದಾಗ ಅದರ ಬಳಕೆಯ ಪ್ರಮಾಣ ಕಡಿಮೆಯಾಗುವುದು ಸಹಜ. ಆದರೆ ಈ ಬೆಲೆಯೇರಿಕೆಯ ಪ್ರಭಾವ ಕೇವಲ ಅದರ ಮೇಲೆ ಮಾತ್ರ ಇರುವುದಿಲ್ಲ ಅದರೊಂಗಿಗೆ ಸಂಪರ್ಕ ದಲ್ಲಿ ಬರುವ ವಸ್ತುಗಳ ಮೇಲೂ ಇರುವುದು. ಈ ಪರಿಣಾಮವನ್ನು ಆಧರಿಸಿಯೇ ಆ ವಸ್ತುಗಳನ್ನು ವಿಷಯದಲ್ಲಿರುವ ವಸ್ತುವಿನ ಬದಲಿ ಅಥವಾ ಪೂರಕಯೆನ್ನಬಹುದು.ಯಾವ ವಸ್ತುವಿನ ಬೆಲೆ ಏರಿಕೆಯಾದುದರಿಂದ ಇನ್ನೊಂದು ವಸ್ತುವಿನ ಬೇಡಿಕೆಯ ಪ್ರಮಾಣವೂ ಕುಗ್ಗಿದರೆ, ಇವೆರಡನ್ನೂ ನಾವು ಪೂರಕ ಸರಕು ಸಾಮಗ್ರಿಗಳು ಎನ್ನುತ್ತೇವೆ. ಉದಾಹರಣೆಗೆ ಚಹಾ ಮತ್ತು ಸಕ್ಕರೆ ಅಥವಾ ವಾಹನಗಳು ಮತ್ತು ಪೆಟ್ರೋಲ್ಒಂದುವೇಳೆ ಯಾವುದಾರು ವಸ್ತುವಿನ ಬೆಲೆಯು ಏರಿದಲ್ಲಿ ಅದಕ್ಕೆ ಸಂಬಂದಪಟ್ಟ ಮತ್ತೊಂದು ವಸ್ತುವಿನ ಬೇಡಿಕೆಯು ಹೆಚ್ಚಿದಾಗ ಅಂತಹ ಎರಡು ವಸ್ತುಗಳಿಗೆ ನಾವು ಬದಲಿ ವಸ್ತುಗಳು ಅಥವಾ ಬದಲಿ ಸಾಮಗ್ರಿ ಎನ್ನುತ್ತೇವೆ. -
ಮುಖ ಬೆಲೆ ಮತ್ತು ನೈಜ ಬೆಲೆ
ನಾವು ಸರ್ವೇ ಸಾಮಾನ್ಯವಾಗಿ ಹಿರಿಯರಿಂದ ಕೇಳಿಬರುವ ಮಾತಿದು – “ನಾನು ಬೆಂಗಳೊರಿಗೆ ಬಂದಾಗ ಒಂದು ಊಟಕ್ಕೆ ೫೦ ಪೈಸೆ ಇತ್ತು ಇವತ್ತು ೩೦ ರೂಪಾಯಿ ಆಗಿದೆ” ಅವರು ಹೇಳುವ ಮಾತು ಎಷ್ಟು ಮಟ್ಟಕ್ಕೆ ನಿಜ? ನಿಜವಾಗ್ಲೂ ದುಬರಿಯಾಗಿದೆಯೇ ಅಥವಾ ಇಲ್ಲವೇ? ಇದರಲ್ಲಿ ಎಷ್ಟು ಮೊತ್ತ ಹಣದುಬ್ಬರದಿಂದಾಗಿದೆ, ಎಷ್ಟು ನಿಜವಾಗಲು ದುಬಾರಿಯಾಗಿದೆ ಎನ್ನುವುದು ತಿಳಿಯಬೇಕಾಗಿದೆ.ನಿಜವಾಗಿಯೂ ನಾವು ಇದೆರಡು ಬೆಲೆಗಳ ತುಲನೆ ಮಾಡಲಿಕ್ಕಾಗುವುದಿಲ್ಲ, ಆ ಸಮಯದಲ್ಲಿ ಆಗಿರಬಹುದಾದ ಹಣದುಬ್ಬರವನ್ನು ಲೆಕ್ಕಿಸಿ, ತದನಂತರ ಅದಕ್ಕೆ ಸರಿಪಡಿಸಬೇಕು. ಈ ಮೂಲದಲ್ಲಿದ್ದ ಬೆಲೆಯನ್ನು ಮುಖ ಬೆಲೆ ಎಂದು ಕರಿಯಬಹುದು; ಅದನ್ನು ನಾವು ಹಿಂದಿನ ಬೆಲೆಯೊಂದಿಗೆ ಹೊಲಿಸ ಬೇಕಾದರೆ, ಯಾವುದಾದರೂ ವರ್ಷವನ್ನು ಗುರುತು ಪಡಿಸಿ ಅ ವರ್ಷದಲ್ಲಿ ಇಂದಿನ ಈ ಮೊತ್ತ ಎಷ್ಟಿರಬಹುದು ಎಂದು ಲೆಕ್ಕಾಚಾರ ಹಾಕಿ, ಅ ಬೆಲೆಗಳನ್ನು ಹೋಲಿಸಬಹುದು. ಈ ರೀತಿ ಹಣದುಬ್ಬರಕ್ಕನುಗುಣವಾಗಿ ಸರಿಪಡಿಸಿದ ಬೆಲೆಗೆ ನಾವು ನೈಜ ಬೆಲೆ ಎನ್ನುತ್ತೇವೆ.ಇಂತಹ ಮುಖ ಬೆಲೆ ಮತ್ತು ನೈಜ ಬೆಲೆಯ ಬಗ್ಗೆ ಚರ್ಚೆಯನ್ನು ಸಾಮಾನ್ಯವಾಗಿ ಬೃಹತ್ ವಿಚಾರಗಳ ಬಗ್ಗೆ ತಿಳಿಸುವ ಅರ್ಥಶಾಸ್ತ್ರದ ವಿಧಿಯಲ್ಲಿ ಅಧ್ಯಯನ ಮಾಡುತ್ತೇವೆ; ಇಲ್ಲಿ ಕೇವಲ ತುಣುಕಿನಂತೆ ತಿಳಿದುಕೊಳ್ಳುತ್ತಿದ್ದೇವೆ. -
ಮಾರುಕಟ್ಟೆಯ ಪರಿಮಿತಿ
ಮಾರುಕಟ್ಟೆಯ ಲಕ್ಷಣ ನಿರೂಪಣೆ ಕುರಿತು ಈ ಹಿಂದಿನ ಅಂಕಣದಲ್ಲಿ ನಾವು ತಿಳಿದುಕೊಂಡೆವು. ಇಂದಿನ ಅಂಕಣದಲ್ಲಿ ಮಾರುಕಟ್ಟೆಯ ಪರಿಮಿತಿಯ ಬಗ್ಗೆ ತಿಳಿದುಕೊಳ್ಳೋಣ. ಯಾವುದೇ ವಸ್ತು ಅಥವಾ ವಿಚಾರಕ್ಕೆ ಸರಹದ್ದನ್ನು ನಿಗದಿಪಡಿಸದೇ ಇದ್ದಲ್ಲಿ ಅದನ್ನು ಅರ್ಥೈಸಿಕೊಳ್ಳುವುದು ಕಷ್ಟ ವಾಗುತ್ತದೆ, ಇದರಂತೆ ಮಾರುಕಟ್ಟೆಯ ಪರಿಮಿತಿಯನ್ನು ನಿಗದಿ ಪಡಿಸಲು ಎರಡು ವಿಷಯಗಳು ಬಹು ಮುಖ್ಯ – ಮಾರುಕಟ್ಟೆಯ ಭೌಗೋಳಿಕ ಪರಿಮಿತಿ ಮತ್ತು ಅದರಲ್ಲಿ ವ್ಯವಹಾರಕ್ಕೆ ಒಳಗಾಗುವ ವಸ್ತುಗಳು.ಮಾರುಕಟ್ಟೆಯ ನಿರೂಪಣೆಯಲ್ಲಿ ಇದೆರಡನ್ನು ನಿಶ್ಚಯಿಸದೇ ಇದ್ದಲ್ಲಿ ಗೊಂದಲಮಯ ಪ್ರಶ್ನೆಗಳು ಉದ್ಭವವಾಗುವುವು. – ಉದಾಹರಣೆಗೆ “ಪೆಟ್ರೋಲ್” ನ ಮಾರುಕಟ್ಟೆ ಎಂದರೆ, ಅದು ಕೇವಲ ಬೆಂಗಳೂರಿಗೆ ಸೀಮಿತವೋ ಅಥವಾ ಇಡಿ ಭಾರತಕ್ಕೆ ವಿಸ್ತರಿಸುತ್ತದೆಯೋ? ಯಾವ “ಒಕ್ಟೇನ್” ಸಂಖ್ಯೆಯಿರಬೇಕು? ಸೀಸ ಮಿಶ್ರಿತವಾಗಿರಬೇಕೋ ಅಥವಾ ಇರಕೂಡದೋ? “ಡೀಸಲ್”ಅನ್ನು ಇದರೊಂದಿಗೆ ಸೇರ್ಪಡಿಸಬೇಕೋ ಬೇಡವೋ? ಮುಂತಾದ ಹಲವು ಪ್ರಶ್ನೆಗಳು ಬರುವುದು ಸಹಜ. ಇವೆಲ್ಲದರ ಸರಿಯಾದ ಪರಿಹಾರಕ್ಕೆ ಮಾರುಕಟ್ಟೆಯ ಸರಹದ್ದು ಅಥವಾ ಪರಿಮಿತಿಯನ್ನು ನಿಗದಿ ಪಡಿಸಬೇಕು.ಮಾರುಕಟ್ಟೆಯ ಪರಿಮಿತಿಯನ್ನು ನಿಶ್ಚಯಿಸುವುದರಿಂದ ಎರಡು ನಿಚ್ಚಳ ಲಾಭವಾಗಲಿವೆ:- ಕಂಪನಿಯ ದೃಷ್ಟಿಕೋನದಿಂದ: ಮಾರುಕಟ್ಟೆಯಲ್ಲಿ ನಮ್ಮ ಇಂದಿನ ಮತ್ತು ಮುಂಬರುವ ಸ್ಪರ್ಧಿಗಳನ್ನು ಗುರುತಿಸುವುದು ಸುಲಭವಾಗುತ್ತದೆ. ನಮ್ಮ ಇಂದು ಮತ್ತು ಭವಿಷ್ಯದಲ್ಲಿ ತಯಾರಿಸುವ ವಸ್ತುಗಳ ಬೇಡಿಕೆಯನ್ನು ತಿಳಿದುಕೊಳ್ಳುವುದು ಮುಖ್ಯವಾಗುತ್ತದೆ; ಅದರ ಭೌಗೋಳಿಕ ಪರಿಮಿತಿ ಮತ್ತು ಅದಕ್ಕೆ ಬರಬಹುದಾದ ಸ್ಪರ್ಧೆಯನ್ನು ನಿಶ್ಚಯಿಸುವುದು ಸುಲಭವಾಗುತ್ತದೆ.
- ದೇಶದ ಅರ್ಥವ್ಯವಸ್ತೆಯ ದೃಷ್ಟಿಕೋನದಿಂದ: ಮಾರುಕಟ್ಟೆಯಲ್ಲಿ ಸಂಭವಿಸುವ ಕಂಪನಿಗಳ ಒಕ್ಕೂಟ ಮತ್ತು ಸೇರ್ಪಡೆಯನ್ನು ನಿಗ್ರಹಿಸುವುದು ಮುಖ್ಯ. ಇವುಗಳಿಂದ ಆಗುವ ದರ ಪರಿವರ್ತನೆ, ಮತ್ತು ಮುಂದೆ ಆಗಬಹುದಾದ ಪರಿಣಾಮಗಳನ್ನೆಲ್ಲ ಅವಲೋಕಿಸಿ ತಮ್ಮ ನಿರ್ಧಾರಗಳಿಂದ ಇವುಗಳಿಗೆ ಅನುಮತಿ ನೀಡಬಹುದು ಅಥವಾ ನಿಷೇಧಿಸಬಹುದು.
-
ವ್ಯವಹಾರಿಕ ಉನ್ನತಿ (ಓರ್ಗನೈಜೆಶ್ನಲ್ ಡೆವಲಪ್ಮೆಂಟ್)
ವ್ಯವಹಾರಗಳು ಸದಾಕಾಲ ಬದಲಾವಣೆಗಳನ್ನು ಕಾಣುತ್ತಲೇ ಇರುತ್ತವೆ. ಇಂದಿನ ಪರಿಸರ ನಾಳೆ ಇರುವುದೆಂದು ಯಾವುದೇ ಖಾತರಿ ಇಲ್ಲ. ಇಂದಿನ ಅವಿಷ್ಕಾರ ನಾಳೆ ಹಳೆಯದಾಗಬಹುದು, ಇಂದಿನ ಆದಾಯದ ಮೂಲ ನಾಳೆ ಇಲ್ಲದಿರಬಹುದು. ಇಂತಹ ಪರಿವರ್ತನೆಯ ಸಮಯದಲ್ಲಿ ವ್ಯವಹಾರಿಕ ಉನ್ನತಿಯ ಪರಿಣತರ ಕಾರ್ಯ ಮುಖ್ಯವಾಗುತ್ತದೆ.ವ್ಯವಹಾರಿಕ ಉನ್ನತಿಯು ತನ್ನ ಮೂಲವನ್ನು ಬಹು ವಿಷಯಗಳಿಂದ ಕಂಡುಕೊಂಡಿದ್ದು; ಅದು ಯಾವುದೇ ವ್ಯವಹಾರವನ್ನು ತನ್ನ ಪೂರ್ಣತೆಯಲ್ಲಿ ನೋಡುತ್ತದೆ. ವ್ಯವಹಾರದಾದ್ಯಂತ ಯಾವುದೇ ಸಕಾರಾತ್ಮಕ ಬದಲಾವಣೆಯನ್ನು ತರಬೇಕಾದಲ್ಲಿ ವ್ಯವಹಾರದ ಎಲ್ಲಾ ಅಂಗಗಳಿಂದಲೂ ಸಹಕಾರ ಬೇಕಾಗುತ್ತದೆ.ಇಂತಹ ಪರಿವರ್ತನಾ ಪ್ರಿಯವಾದ ವ್ಯವಹಾರಿಕ ಉನ್ನತಿಯ ಕಾರ್ಯ ಕ್ಷೇತ್ರವನ್ನು ಕೂಲಂಕುಷವಾಗಿ ತಿಳಿಯಬೇಕಾದಲ್ಲಿ ನಾವು ಸಾದಾಕಾಲ ವ್ಯವಹಾರವು ಕಾರ್ಯನಿರ್ವಹಿಸುತ್ತಿರುವ ಪರಿಸರದ ಬಗ್ಗೆಯೂ ಸರಿಯಾಗಿ ತಿಳಿದುಕೊಳ್ಳಬೇಕಾಗುತ್ತದೆ. ಈ ವ್ಯವಹಾರಿಕ ಉನ್ನತಿಯ ಕ್ಷೇತ್ರವನ್ನು ಇನ್ನಷ್ಟು ಸರಿಯಾಗಿ ಮುಂಬರುವ ಅಂಕಣಗಳಲ್ಲಿ ತಿಳಿದುಕೊಳ್ಳೋಣ. -
ವ್ಯವಹಾರ ಪ್ರತಿಕೃತಿ ಚರ್ಚೆ – ಮಧ್ಯವರ್ತಿಗಳ ಕಡಿತ (ಡಿಸ್-ಇಂಟರ್ಮೀಡಿಯೇಷನ್)
ವಿತರಣೆಯ ಈ ಹಿಂದಿನ ಅಂಕಣದಲ್ಲಿ ಅದರ ಮಹತ್ವವನ್ನು ತಿಳಿದುಕೊಂಡೆವು. ವಿತರಣೆಯ ಈ ಮಹತ್ವವನ್ನು ಕಂಡಾಗ, ಕಂಪನಿಗಳ ಸಪ್ಲೈ ಚೈನ್ ಮೇಲೆ ಅದು ಬೀರುವ ಪ್ರಭಾವವೂ ಹೆಚ್ಚಿರುತ್ತದೆ. ಹೀಗಿದ್ದಾಗ ತಯಾರಿಸಿದ ವಸ್ತುವನ್ನು ಖರೀದಿಸಲು ಬರುವ ಗ್ರಾಹಕರು ಹೆಚ್ಚು ಖರ್ಚು ಮಾಡಬೇಕಾಗುತ್ತದೆ. ಹೀಗಿದ್ದಲ್ಲಿ ಈ ವಿತರಣಾ ಪ್ರಕ್ರಿಯೆಯಲ್ಲಿ ಮಧ್ಯವರ್ತಿಗಳನ್ನು ಆದಷ್ಟು ಕಡಿಮೆ ಮಾಡಿದರೆ ಗ್ರಾಹಕರೂ ಕಡಿಮೆ ವ್ಯಯ ಮಾಡುವ ಹಾಗಾಗುತ್ತದೆ.ಡೆಲ್ – ಇಂತಹ ಮಧ್ಯವರ್ತಿಗಳನ್ನು ಹೊರಹಾಕಿ ಗ್ರಾಹಕರಿಗೆ ಕೇವಲ ಲಾಭವನ್ನಷ್ಟೇ ಮಾಡಿಕೊಡಲಿಲ್ಲ, ಅದರೊಂದಿಗೆ ಅವರಿಗೆ ಬೇಕಾಗುವ ಬಣ್ಣ, ರಚನೆ, ಮತ್ತು ವಿನ್ಯಾಸಗಳನ್ನು ನೀಡುವಲ್ಲಿ ಸಫಲವಾಗಿದೆ. ಇದರಿಂದ ಗ್ರಾಹಕರು ತೃಪ್ತಿಯನ್ನು ವ್ಯಕ್ತಪಡಿಸಿದ್ದಾರೆ.ಮಧ್ಯವರ್ತಿಗಳ ಕಡಿತಗೊಳಿಸಿರುವ ವ್ಯವಹಾರ ಪ್ರತಿಕೃತಿಗಳು ಹಲವಾರಿವೆ, ಇದನ್ನು ನಾವು ಅತ್ಯಂತ ನಿಗಾವಹಿಸಿ ಮಾಡತಕ್ಕದ್ದು ಇಲ್ಲದಿದ್ದಲ್ಲಿ ಮಧ್ಯವರ್ತಿಗಳು ತಿರುಗು ಬೀಳುವ ಸಂಭವ ಹೆಚ್ಚಿರುತ್ತದೆ. -
ಬೇಡಿಕೆ ಮತ್ತು ಪೂರೈಕೆ ಚರ್ಚೆ – ಈ ವರೆಗೆ
ನಾವು ಆರು ವಾರಗಳಿಂದ ಬೇಡಿಕೆ ಮತ್ತು ಪೂರೈಕೆ ಚರ್ಚೆಯನ್ನು ನಡೆಸುತ್ತಿದ್ದೇವೆ – ಇಲ್ಲಿಯವರೆಗಿನ ಚರ್ಚೆಯ ಮೇಲೆ ಹಿನ್ನೋಟ ಬೀರುವುದು ಅತ್ಯಗತ್ಯ ಎನಿಸಿತು; ಆದ್ದರಿಂದ ಈ ಅಂಕಣವನ್ನು ಬರೆಯುತ್ತಿದ್ದೇನೆ.ಬೇಡಿಕೆ ಮತ್ತು ಪೂರೈಕೆಯ ಚರ್ಚೆಯನ್ನು ಅವುಗಳ ಅರ್ಥವನ್ನು ತಿಳಿಯುವುದರೊಂದಿಗೆ ಪ್ರಾರಂಭಿಸಿ, ನಂತರ ಸಮಾನಾಂತರ ಬೆಲೆಯ ಅರ್ಥ ತಿಳಿದು ಇವುಗಳ ನಡುವಿನ ಸಂಬಂಧವನ್ನು ನಿಯಮಗಳನ್ನಾಗಿ ದಾಖಲಿಸುತ್ತಾ ಹೋದೆವು. ಇವುಗಳ ಸಾರಂಶವು ಈ ಕೆಳಗಿನಂತಿದೆ:ಈ ವರೆಗಿನ ಚರ್ಚೆಯಲ್ಲಿ ನಾವು ಹೊರಗಿನ ಮೂಲಗಳನ್ನು ತಕ್ಕ ಪ್ರಮಾಣಕ್ಕೆ ಲೆಕ್ಕಿಸಿಲ್ಲ; ಮುಂಬರುವ ಅಂಕಣಗಳಲ್ಲಿ ಇವುಗಳ ಕುರಿತು ಚರ್ಚಿಸೋಣ. ಅದಕ್ಕೂ ಮುಂಚೆ, ಈ ಮೇಲಿನ ನಿಯಮಗಳ ಉಪ ನಿಯಮವನ್ನು ತಿಳಿಯೋದು ಸೂಕ್ತ. ಮುಂದಿನ ಅಂಕಣದಲ್ಲಿ ಈ ಉಪನಿಯಮವನ್ನು ತಿಳಿದು ಮತ್ತು ಬಾಹ್ಯ ಪರಿಸರವನ್ನು ನಮ್ಮ ಚರ್ಚೆಗೆ ಸೇರಿಸೋಣ.